ಫೈಟರ್‌ ನೇಹಾ ಸಕ್ಸೇನಾ ಸ್ಟೈಲೇ ಡಿಫರೆಂಟು!

Suvarna News   | Asianet News
Published : Feb 02, 2020, 12:54 PM IST
ಫೈಟರ್‌ ನೇಹಾ ಸಕ್ಸೇನಾ ಸ್ಟೈಲೇ ಡಿಫರೆಂಟು!

ಸಾರಾಂಶ

ನೇಹಾ ಸಕ್ಸೇನಾ ಅಭಿನಯದ ‘ಓಜಸ್‌’ ಚಿತ್ರಕ್ಕೆ ಕೊನೆಗೂ ಬಿಡುಗಡೆಯ ಭಾಗ್ಯ ದೊರೆತಿದೆ. ಸುಮಾರು ಮೂರು ವರ್ಷಗಳ ಅಜ್ಞಾತವಾಸ ಮುಗಿಸಿ, ಈ ಚಿತ್ರ ಫೆ.7ಕ್ಕೆ ಚಿತ್ರ ತೆರೆಗೆ ಬರುತ್ತಿದೆ. ಹೊಸಬರ ಚಿತ್ರವಾದರೂ, ಇದು ಹಲವು ಕಾರಣಕ್ಕೆ ಸಾಕಷ್ಟುನಿರೀಕ್ಷೆ ಹುಟ್ಟಿಸಿದ ಸಿನಿಮಾ. ಚಿತ್ರದ ಶೀರ್ಷಿಕೆಯೇ ಇಲ್ಲಿ ವಿಭಿನ್ನ. ಓಜಸ್‌ ಅಂದ್ರೆ ಬೆಳಕು.

ದೀಪ ತಾನು ಉರಿದು ಜಗತ್ತಿಗೆ ಬೆಳಕು ನೀಡುವ ಹಾಗೆ ಬಡತನದ ಬೇಗೆಯಲ್ಲಿ ಬೆಳೆದು ಬಂದ ಹೆಣ್ಣೊಬ್ಬಳು ತಾನು ಬೆಳೆದು ಇತರರಿಗೂ ಹೇಗೆ ಬೇಕಾದಳು ಎನ್ನುವುದು ಈ ಚಿತ್ರದ ಒನ್‌ಲೈನ್‌ ಕತೆ. ಹಾಗೆಯೇ ಇದೊಂದು ಮಹಿಳಾ ಪ್ರದಾನ ಚಿತ್ರ. ನಟಿ ನೇಹಾ ಸಕ್ಸೇನಾ ಇದರ ಕೇಂದ್ರ ಬಿಂದು. ಅವರಿಲ್ಲಿ ಜಿಲ್ಲಾಧಿಕಾರಿ ಪಾತ್ರ ನಿರ್ವಹಿಸಿದ್ದಾರೆ.

ರಜನಿಕಾಂತ್‌ ಮನೆ ಬಾಗಿಲಿಗೆ ವಿತರಕರು; ಬಾಕ್ಸಾಫೀಸ್‌ನಲ್ಲಿ ಗಳಿಸಿದ ಹಣ ರಜನಿ ಸಂಭಾವನೆಗಿಂತಲೂ ಕಡಿಮೆ!

‘ಒಂದಷ್ಟುಗ್ಯಾಪ್‌ ನಂತರ ಮತ್ತೆ ಕನ್ನಡದ ಪ್ರೇಕ್ಷಕರ ಮುಂದೆ ಬರುತ್ತಿದ್ದೇನೆ. ಚಿತ್ರ ತೆರೆಗೆ ಬರುವುದು ಸ್ವಲ್ಪ ತಡವಾಗಿದೆ. ಲೇಟಾದ್ರು ಲೇಟೆಸ್ಟ್‌ ಆಗಿಯೇ ಬರುತ್ತಿದ್ದೇವೆ ಎನ್ನುವ ಖುಷಿಯಿದೆ. ಒಂದು ಒಳ್ಳೆಯ ಪಾತ್ರವನ್ನೇ ನಾನಿಲ್ಲಿ ನಿರ್ವಹಿಸಿದ್ದೇನೆ. ಬಡತನದಲ್ಲಿ ಹುಟ್ಟಿದ ಹೆಣ್ಣೊಬ್ಬಳು ಕಡುಕಷ್ಟದಲ್ಲಿ ಓದಿ, ಉನ್ನತ ವ್ಯಾಸಂಗ ಮುಗಿಸಿ ಜಿಲ್ಲಾಧಿಕಾರಿ ಆಗುತ್ತಾಳೆ. ಆ ಅಧಿಕಾರದ ಮೂಲಕ ಸಮಾಜಕ್ಕೆ ಬೆಳಕಾಗುತ್ತಾಳೆ ಎನ್ನುವುದು ನನ್ನ ಪಾತ್ರ. ಈ ಪಾತ್ರ ಸಿಕ್ಕಿದ್ದೆ ನನ್ನ ಭಾಗ್ಯ. ಹಾಗೆಯೇ ಒಳ್ಳೆಯ ಸಂದೇಶ ಚಿತ್ರದಲ್ಲಿದೆ. ಇಂದಿನ ಯುವ ತಲೆಮಾರಿಗೆ ಈ ಚಿತ್ರ ಮತ್ತು ನನ್ನ ಪಾತ್ರ ತುಂಬಾ ಕನೆಕ್ಟ್ ಆಗಲಿದೆ’ ಎನ್ನುವ ವಿಶ್ವಾಸದ ಮಾತುಗಳ ಮೂಲಕ ಚಿತ್ರದ ಬಗ್ಗೆ ಕುತೂಹಲ ಮೂಡಿಸಿದರು ನೇಹಾ ಸಕ್ಸೇನಾ.

ಡಿಪ್ರೆಷನ್‌ನಲ್ಲಿ 'ಕಿರಾತಕ' ನಟಿ, ಬಿಗ್ ಬಾಸ್‌ ಸ್ಪರ್ಧಿ? ಏನಿದು ಟ್ಟೀಟ್!

ನಟ ಯತಿರಾಜ್‌ ಈ ಚಿತ್ರದ ಪ್ರಮುಖ ವಿಲನ್‌. ಜಿಲ್ಲಾಧಿಕಾರಿಯನ್ನೇ ಎದುರು ಹಾಕಿಕೊಂಡು ಹಗೆ ಸಾಧಿಸುವುದು ಅವರ ಪಾತ್ರ. ಒಂದೇ ಮಾತಿನಲ್ಲಿ ಅವರ ಪಾತ್ರದ ಬಗ್ಗೆ ಹೇಳುವುದಾದರೆ ಕ್ರೂರಿಯೊಬ್ಬನ ಕರಾಳ ಮುಖ ಅವರ ಪಾತ್ರದಲ್ಲಿ ಅನಾವರಣ ಆಗಲಿದೆಯಂತೆ. ಒಂದ್ರೀತಿ ಅದು ರಾವಣನ ರೂಪ. ಯಾವುದೇ ಹಿಂಸೆ ಇಲ್ಲದೆ ಅಂತಹ ರಾವಣ ವ್ಯಕ್ತಿತ್ವವನ್ನು ಜಿಲ್ಲಾಧಿಕಾರಿ ನೇಹಾ ಸಕ್ಸೇನಾ ಹೇಗೆ ರಾಮನನ್ನಾಗಿ ಬದಲಾಯಿಸುತ್ತಾರೆನ್ನುವುದು ತುಂಬಾ ಮನೋಜ್ಞವಾಗಿ ಬಂದಿದೆ ಎನ್ನುವ ಯತಿರಾಜ್‌, ಸಿನಿಮಾ ಅಂದ್ರೆ ಉಪದೇಶವಲ್ಲ, ಬೋಧನೆ ಅಲ್ಲ, ಬದಲಿಗೆ ಅದು ಬರೀ ಮನರಂಜನೆ ಎನ್ನುವ ದಿನದಲ್ಲೂ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬೇಕೆನ್ನುವ ಉದ್ದೇಶದೊಂದಿಗೆ ಮಹಿಳಾ ಪ್ರದಾನ ಚಿತ್ರ ಮಾಡಿ ತೆರೆಗೆ ತರುತ್ತಿರುವ ನಿರ್ಮಾಪಕ ರಜತ್‌ ರಘುನಾಥ್‌ ಹಾಗೂ ಎಡ್ವರ್ಡ್‌ ಡಿಸೋಜಾ ಅವರ ಕಾಳಜಿಯನ್ನು ಮುಕ್ತ ಕಂಠದಿಂದ ಪ್ರಶಂಸಿದರು. ಹಿರಿಯ ನಟಿ ಭವ್ಯಾ, ದುಬೈ ಬಾಬು, ಡಿಂಗ್ರಿ ನಾಗರಾಜ್‌, ರಮಾನಂದ್‌, ಹನುಮಂತ ರಾಯಪ್ಪ ಸೇರಿದಂತೆ ಹಲವರು ಚಿತ್ರದ ತಾರಾಗಣದಲ್ಲಿದ್ದಾರೆ. ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದು ಸಿಜೆ ವರ್ಧನ್‌. ಉಳಿದಂತೆ ಕಾರ್ತಿಕ್‌ ವೆಂಕಟೇಶ್‌ ಸಂಗೀತ, ಚಂದ್ರು ಸೊಂಡೆಕೊಪ್ಪ ಛಾಯಾಗ್ರಹಣ ಈ ಚಿತ್ರಕ್ಕಿದೆ. ಸುಮಾರು 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಚಿತ್ರ ತೆರೆ ಕಾಣುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?