ದುರಂತ ಅಂತ್ಯದ 'ಲವ್ ಮಾಕ್ಟೇಲ್' ಮೊದಲ ಭಾಗದಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡ ನಿಧಿಮಾ ಪಾತ್ರ ಅಂತ್ಯವಾಗಿತ್ತು.ಇದೀಗ ಎರಡನೇ ಭಾಗದಲ್ಲಿ ಮಿಲನಾ ಯಾವ ಪಾತ್ರದಲ್ಲಿ ನಟಿಸುತ್ತಾರೆ ಎನ್ನುವ ಸುಳಿವನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ.
'ಲವ್ ಮಾಕ್ಟೇಲ್' (Love Mocktail) ಚಿತ್ರದ ಯಶಸ್ಸಿನ ನಂತರ ಡಾರ್ಲಿಂಗ್ ಕೃಷ್ಣ (Darling Krishna) ಮತ್ತೊಂದು ಭಾಗದೊಂದಿಗೆ 'ಲವ್ ಮಾಕ್ಟೇಲ್ 2'(Love Mocktail 2) ಚಿತ್ರ ಮಾಡುವುದಾಗಿ ಘೋಷಣೆ ಮಾಡಿ, ಚಿತ್ರದ ಫಸ್ಟ್‌ಲುಕ್, ಪೋಸ್ಟರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಿದ್ದರು. ಇದರಿಂದ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲ ಮೂಡಿದ್ದು, ಚಿತ್ರ ಯಾವಾಗ ತೆರೆಗೆ ಬರುತ್ತದೆ ಎಂದು ಕಾಯುತ್ತಿದ್ದರು. ಇದೀಗ ಚಿತ್ರದ ನಾಯಕ ಡಾರ್ಲಿಂಗ್ ಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಬಗ್ಗೆ ಖುಷಿಯ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.
ಹೌದು! 'ಲವ್ ಮಾಕ್ಟೇಲ್ 2' ಸೆನ್ಸಾರ್ (Censor) ಪರೀಕ್ಷೆಯಲ್ಲಿ ಪಾಸ್ ಆಗಿದ್ದು, ಸೆನ್ಸಾರ್ ಮಂಡಳಿಯವರು ಚಿತ್ರಕ್ಕೆ 'ಯು' (U Certificate) ಪ್ರಮಾಣ ಪತ್ರ ನೀಡಿದ್ದಾರೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೃಷ್ಣ ಪೋಸ್ಟ್ ಮಾಡಿದ್ದಾರೆ. ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ಅವರೇ ಆಕ್ಷನ್ ಕಟ್ ಹೇಳಿದ್ದು, ನಾಯಕಿಯರಾಗಿ ಮಿಲನಾ ನಾಗರಾಜ್ (Milana Nagaraj) ಮತ್ತು ರಾಚೆಲ್ (Rachel) ನಟಿಸಿದ್ದಾರೆ. ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಬಂಡವಾಳ ಹೂಡಿದ್ದಾರೆ.
ಲವ್ ಮಾಕ್ಟೇಲ್ 2 ಚಿತ್ರಕ್ಕೆ ರಾಚೆಲ್ ಡೇವಿಡ್ ನಾಯಕಿ!
ದುರಂತ ಅಂತ್ಯದ 'ಲವ್ ಮಾಕ್ಟೇಲ್' ಚಿತ್ರವನ್ನು ಪ್ರೇಕ್ಷಕರು ಚಿತ್ರಮಂದಿರದಲ್ಲಿ ನೋಡದೇ ಇದ್ದರೂ, ಒಟಿಟಿಯಲ್ಲಿ ನೋಡಿ ಮೆಚ್ಚಿದ್ದರು. ಅದರಲ್ಲಿಯೂ ಕೊರೋನಾ ವೈರಸ್ ಹಾವಳಿಯಿಂದಾಗಿ ಲಾಕ್‌ಡೌನ್ ಆದ ಬಳಿಕವೂ ಈ ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಇನ್ನು 'ಲವ್ ಮಾಕ್ಟೇಲ್' ಮೊದಲ ಭಾಗದಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡ ನಿಧಿಮಾ ಪಾತ್ರ ಅಂತ್ಯವಾಗಿತ್ತು. ಆದರೆ 'ಹೆಂಗೆ ನಾವು' ಎಂದು ಹೇಳುತ್ತಿದ್ದ ರಚನಾ ಪಾತ್ರ ಹಾಗೂ ಫಸ್ಟ್ ಲವ್ ಬ್ರೇಕಪ್ ಮಾಡಿಕೊಂಡ ಜೋ ಎರಡನೇ ಭಾಗದಲ್ಲಿ ಇರುತ್ತರಾ ಎಂದು ಕಾದು ನೋಡಬೇಕಿದೆ. ಮೊದಲ ಭಾಗಕ್ಕೆ ರಘು ದೀಕ್ಷಿತ್ ಸಂಗೀತ ನೀಡಿದ್ದರು. ಆದರೆ ಎರಡನೇ ಭಾಗಕ್ಕೆ ರಘು ದೀಕ್ಷಿತ್ ಬದಲಿಗೆ ನಕುಲ್ ಅಭಯಂಕರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳಿಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಿರ್ದೇಶಕನಾಗಿ ರಘು ದೀಕ್ಷಿತ್ ಬೇಕು, ನಿರ್ಮಾಪಕನಾಗಿ ಬೇಡ: ಡಾರ್ಲಿಂಗ್ ಕೃಷ್ಣ
'ಲವ್ ಮಾಕ್ಟೇಲ್ 2' ಆಡಿಯೋ ರೈಟ್ಸ್‌ಗೆ ಸಂಬಂಧಪಟ್ಟಂತೆ ಡಾರ್ಲಿಂಗ್ ಕೃಷ್ಣ ಹಾಗೂ ಸಂಗೀತ ನಿರ್ದೇಶಕ ರಘು ದೀಕ್ಷಿತ್ ನಡುವೆ ಮನಸ್ತಾಪ ಮೂಡಿದ್ದು, ಚಿತ್ರದ ಆಡಿಯೋ ರೈಟ್ಸ್‌ಗೆ 32 ಲಕ್ಷ ರೂ ಆಫರ್ ಬಂದಿದೆ. ಇದಕ್ಕೆ 20 ಲಕ್ಷ ರೂಪಾಯಿ ಕೊಡಿ ಅಂತ ರಘು ಅವರು ಹೇಳಿದ್ದರು. ನಾನು ಓಕೆ ಅಂದು ಆಡಿಯೋ ರೈಟ್ಸ್ ನಾನು ಇಟ್ಟುಕೊಳ್ತೀನಿ ಅಂದೆ. ಅದಕ್ಕೆ ರಘು ಆಡಿಯೋ ರೈಟ್ಸ್ ಕೂಡಾ ನನಗೆ ಬೇಕು ಎಂದರು. ಪ್ರತಿಯೊಬ್ಬರಿಗೂ ಒಂದು ಸಂಭಾವನೆ ಇರುತ್ತದೆ. ಆದರೆ ಆಡಿಯೋ ರೈಟ್ಸ್ ಕೂಡ ಬೇಕು ಅಂದ್ರೆ ಹೇಗೆ? ಸಂಗೀತ ನಿರ್ದೇಶಕನಾಗಿ ರಘು ದೀಕ್ಷಿತ್ ಬೇಕು ಆದರೆ ನಿರ್ಮಾಪಕನಾಗಿ ಬೇಡ ಎಂದು ಕೃಷ್ಣ ಇತ್ತಿಚೆಗಷ್ಟೇ ತಿಳಿಸಿದ್ದರು.