ಯೂಟ್ಯೂಬ್ ಚಾನೆಲ್‌ ಎಂಟ್ರಿಗೆ ಸಜ್ಜಾದ ಅವತಾರ ಪುರುಷ

Suvarna News   | Asianet News
Published : Oct 24, 2021, 06:18 PM ISTUpdated : Oct 24, 2021, 06:22 PM IST
ಯೂಟ್ಯೂಬ್ ಚಾನೆಲ್‌ ಎಂಟ್ರಿಗೆ ಸಜ್ಜಾದ ಅವತಾರ ಪುರುಷ

ಸಾರಾಂಶ

ಆನ್ ಸ್ಕ್ರೀನ್ ಮತ್ತು ಆಫ್ ಸ್ಕ್ರೀನ್ ಶರಣ್ ಹೇಗೆ ಇರುತ್ತಾರೆ ವಿಷಯದ ಜೊತೆಗೆ ಇನ್ನಷ್ಟು ಪರಿಚಯ ಮಾಡಿಕೊಡುವುದರ ಮೂಲಕ Actor Sharaan Official ಯೂಟ್ಯೂಬ್ ಚಾನೆಲ್‌ ಆರಂಭಿಸುತ್ತಿದ್ದೇನೆ ಎಂದು ಶರಣ್ ಹೇಳಿದ್ದಾರೆ.

ಕಾಮಿಡಿ ಕಿಂಗ್ ಅಧ್ಯಕ್ಷ ಶರಣ್ (Sharan) ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದು, ಅವರ ಅಭಿನಯದ 'ಅವತಾರ  ಪುರುಷ' (Avatar Purusha) ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಈ ನಡುವೆ ಶರಣ್ ತಮ್ಮದೇ ಆದಂತಹ ಯೂಟ್ಯೂಬ್‌ ಚಾನೆಲ್ (YouTube Channel) ಶುರು ಮಾಡುವ ವಿಷಯದ ಕುರಿತು ಮಾಹಿತಿಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 

ಈ ಬಗ್ಗೆ, 'ನಿಮ್ಮೆಲ್ಲರಿಗೆ ಮತ್ತಷ್ಟು ಹತ್ತಿರವಾಗಲು ನನ್ನದೊಂದು ಪುಟ್ಟ ಪ್ರಯತ್ನ. Actor Sharaan Official ಯೂಟ್ಯೂಬ್ ಚಾನೆಲ್.  ನಾಳೆ ಬೆಳಗ್ಗೆ 11ಕ್ಕೆ ಭೇಟಿ ಆಗೋಣ'. ಎಂದು ಪೋಸ್ಟ್ ಮಾಡುವ ಜೊತೆಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಶರಣ್‌ ಅಭಿನಯದ 'ಅವತಾರ ಪುರುಷ' ಟೀಸರ್‌ ಹೇಗಿದೆ ನೋಡಿ!

'ತೆರೆಯ ಮೇಲೆ ಮತ್ತು ತೆರೆಯ ಹಿಂದಿನ ಶರಣ್ ಹೇಗೆ ಇರುತ್ತಾರೆ ಅನ್ನುವುದನ್ನ ಬೇಸ್ಡ್ ಆಗಿ ಇಟ್ಟುಕೊಂಡು, ಇನ್ನಷ್ಟು ನಿಮ್ಮ ಹತ್ತಿರ ಆಗೋದಿಕ್ಕೆ ನನ್ನದೇ ಆದಂತಹ ಯೂಟ್ಯೂಬ್ ಚಾನೆಲ್ ಶುರು ಮಾಡುತ್ತಿದ್ದೀನಿ. ಈ ಚಾನೆಲ್ ಮುಖಾಂತರ ಆನ್ ಸ್ಕ್ರೀನ್ ಶರಣ್ ಮತ್ತು ಆಫ್ ಸ್ಕ್ರೀನ್ ಶರಣ್ ಹೇಗೆ ಇರುತ್ತಾರೆ ಎನ್ನುವ ವಿಷಯದ ಜೊತೆಗೆ ನನ್ನನ್ನು ಇನ್ನಷ್ಟು ಪರಿಚಯ ಮಾಡಿಕೊಡುವುದರ ಮೂಲಕ ನಿಮ್ಮ ಹತ್ತಿರ ಆಗುವಂತ ಚಿಕ್ಕ ಪ್ರಯತ್ನ. ಈ ಹಿಂದೆ ನನ್ನೆಲ್ಲಾ ಈ ತರಹದ ಪ್ರಯತ್ನಗಳಿಗೆ ನನ್ನ ಜೊತೆಯಲ್ಲಿದ್ದಿರಿ. ನಾಳೆ ಬೆಳಗ್ಗೆ ೧೧ ಗಂಟೆಗೆ ನನ್ನದೇ ಆದಂತಹ Actor Sharaan Official ಯೂಟ್ಯೂಬ್ ಚಾನೆಲ್ ಮುಖಾಂತರ ನಿಮ್ಮ ಮುಂದೆ ಎಲ್ಲಾ ವಿಚಾರಗಳನ್ನು ಹಂಚಿಕೊಳ್ಳುತ್ತಿನಿ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಆಶಿರ್ವಾದ ಹೀಗೆ ಇರಲಿ' ಎಂದು  ಶರಣ್ ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.
 


ಇನ್ನು ಶರಣ್ ಸಿಂಪಲ್ ಸುನಿ (Simple Suni) ನಿರ್ದೇಶನದ 'ಅವತಾರ ಪುರುಷ' ಚಿತ್ರದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಮತ್ತು ಹೊಸ ಅವತಾರದಲ್ಲಿ ಕಾಣಬಹುದಾಗಿದೆ. ಸಸ್ಪೆನ್ಸ್ ಥ್ರಿಲ್ಲಿಂಗ್ ಇರುವ ಚಿತ್ರದಲ್ಲಿ ಸಿಕ್ಕಾಪಟ್ಟೆ ಶಾಕ್‌ನೊಂದಿಗೆ ಭಯಮೂಡಿಸುವಂತಹ ಬ್ಲ್ಯಾಕ್ ಮ್ಯಾಜಿಕ್ (Black Maagic) ಚಿತ್ರಕಥೆಯಿದೆ. ಚಿತ್ರವು ಎರಡು ಭಾಗಗಳಲ್ಲಿ ತೆರೆಗೆ ಬರಲಿದ್ದು, ಪುಷ್ಕರ್ ಫಿಲಂಸ್ ಬ್ಯಾನರ್‌ನಡಿ ಪುಷ್ಕರ್ ಮಲ್ಲಿಕಾರ್ಜುನಯ್ಯ (Pushkar Mallikarjunaiah) ನಿರ್ಮಿಸಿದ್ದಾರೆ. 

ಮಸ್ತ್ ಡ್ಯಾನ್ಸ್ ಮಾಡಿದ ಮ್ಯಾಜಿಕಲ್ ಡ್ಯಾನ್ಸರ್ ಶರಣ್!

ಚಿತ್ರದಲ್ಲಿ ಶರಣ್‌ಗ ಜೋಡಿಯಾಗಿ ಆಶಿಕಾ ರಂಗನಾಥ್ (Ashika Ranganath) ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದ್ದು, ವಿಲಿಯಮ್ ಡೇವಿಡ್ ಛಾಯಾಗ್ರಹಣವಿದೆ. ರಾಮಾಜೋಯಿಸರಾಗಿ ಸಾಯಿಕುಮಾರ್‌ ಮಂತ್ರವಾದಿ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಸೇರಿದಂತೆ ಸುಧಾರಾಣಿ, ಸಾಧುಕೋಕಿಲ, ಭವ್ಯ, ಅಯ್ಯಪ್ಪ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ನವೆಂಬರ್ ಕೊನೆಯಲ್ಲಿ ಚಿತ್ರ ತೆರೆಗೆ ಬರಲಿದೆ.

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?