ಕನ್ನಡದ 'ಕುಚಿಕು' ಹಾಡು ಬಿಡುಗಡೆ ಆಯ್ತು, ಫೆಬ್ರವರಿ 14ಕ್ಕೆ ಬರಲಿದೆ ಸಿನಿಮಾ!

Published : Jan 06, 2025, 07:16 PM IST
ಕನ್ನಡದ 'ಕುಚಿಕು' ಹಾಡು ಬಿಡುಗಡೆ ಆಯ್ತು, ಫೆಬ್ರವರಿ 14ಕ್ಕೆ ಬರಲಿದೆ ಸಿನಿಮಾ!

ಸಾರಾಂಶ

'ಕುಚಿಕು' ಚಿತ್ರದ ಟೀಸರ್, ಹಾಡುಗಳು ಬಿಡುಗಡೆಯಾಗಿವೆ. ಫೆಬ್ರವರಿ 14 ರಂದು ತೆರೆಕಾಣಲಿದೆ. ಸ್ನೇಹದ ಮಹತ್ವ ಸಾರುವ ಈ ಚಿತ್ರದಲ್ಲಿ ಅರ್ಜುನ್ ಚೋಹಾನ್, ಬಸವರಾಜ್ ಕುಮಾರ್, ಪ್ರಿಯದರ್ಶಿನಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ನಿರ್ದೇಶಕ ಮೈಸೂರು ರಾಜು ಸ್ನೇಹ ಮತ್ತು ಸೆಂಟಿಮೆಂಟ್‌ಗೆ ಒತ್ತು ನೀಡಿದ್ದಾರೆ. ನಿರ್ಮಾಪಕಿ ನಾಗರತ್ನಮ್ಮ ಹೊಸಬರಿಗೆ ಅವಕಾಶ ನೀಡಿದ್ದಾರೆ. ಚಿತ್ರತಂಡದ ಪ್ರಚಾರದ ಬಗ್ಗೆಯೂ ಚರ್ಚೆಯಾಯಿತು.

ಶ್ರೀ ಚಾಮುಂಡೇಶ್ವರಿ ಪಿಕ್ಚರ್ಸ್ ಲಾಂಛನದಲ್ಲಿ ನಾಗರತ್ನಮ್ಮ ಅವರು ನಿರ್ಮಿಸಿರುವ, ಮೈಸೂರು ರಾಜು ನಿರ್ದೇಶನದ 'ಕುಚಿಕು' ಚಿತ್ರದ ಟೀಸರ್ ಹಾಗೂ ಹಾಡುಗಳು ಬಿಡುಗಡೆಯಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷರಾದ ಎಂ.ಎನ್ ಕುಮಾರ್, ನಿರ್ಮಾಪಕ ಎಂ.ಡಿ. ಪಾರ್ಥಸಾರಥಿ, ನೃತ್ಯ ನಿರ್ದೇಶಕ ಜಗ್ಗು ಮಾಸ್ಟರ್ ಮುಂತಾದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸ್ನೇಹದ ಮಹತ್ವ ಸಾರುವ ಈ ಚಿತ್ರ  ಫೆಬ್ರವರಿ 14ರ ಪ್ರೇಮಿಗಳ ದಿನದಂದು ಬಿಡುಗಡೆಯಾಗುತ್ತಿದೆ. ಇದೇ ಸಂದರ್ಭದಲ್ಲಿ ಚಿತ್ರದಲ್ಲಿ ಖಳನಾಯಕನಾಗಿ ನಟಿಸಿರುವ ಶಿವಾಜಿ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. 

ಟೀಸರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ನಾನು 26ವರ್ಷಗಳಿಂದ ಡ್ಯಾನ್ಸರ್ ಹಾಗೂ ಡ್ಯಾನ್ಸ್ ಮಾಸ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಹಿಂದೆ "ನೃತ್ಯಂ" ಚಿತ್ರ ನಿರ್ದೇಶಿಸಿದ್ದೆ. ಇದು ಎರಡನೇ ಚಿತ್ರ. ಸ್ನೇಹದ ಮಹತ್ವ ಸಾರುವ ಕಥಾಹಂದರದ ಜೊತೆಗೆ ಸೆಂಟಿಮೆಂಟ್ ಸನ್ನಿವೇಶಗಳು ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಲಿದೆ. ಮೈಸೂರು ಸುತ್ತಮುತ್ತ ಚಿತ್ರೀಕರಣ ಮಾಡಿದ್ದೇವೆ. ಚಿತ್ರ ತೆರೆಗೆ ಬರಲು ಸಿದ್ದವಾಗಿದೆ ಎಂದು ತಿಳಿಸಿದರು.

ಉಪೇಂದ್ರ ತಲೆಗೆ 'ಉಲ್ಟಾ ಐಡಿಯಾ' ಬಂದಿದೆ, ಆ ಸಿನಿಮಾ 'ದಡ್ಡರಿಗಾಗಿ ಮಾತ್ರ' ಇರಬಹುದೇ?

ಇದು ನನ್ನ ಅಭಿನಯದ ಮೂರನೇ ಚಿತ್ರ. ಹೆಸರೆ ತಿಳಿಸುವಂತೆ ಸ್ನೇಹಿತರ ಕುರಿತಾದ ಚಿತ್ರದಲ್ಲಿ ನಾನು ಒಬ್ಬ ಸ್ನೇಹಿತ ಎಂದು ನಾಯಕ ಅರ್ಜುನ್ ಚೌಹಾನ್ ತಿಳಿಸಿದರು. ಗುಲ್ಬರ್ಗ ಮೂಲದವನಾದ ನಾನು ಮೂಲತಃ ರಂಗಭೂಮಿ ಕಲಾವಿದ. ಈ‌ ಚಿತ್ರದಲ್ಲಿ ನಾನು ಹಾಗೂ ಅರ್ಜುನ್ 'ಕುಚಿಕು'ಗಳಾಗಿ‌ ನಟಿಸಿದ್ದೇವೆ ಎನ್ನುತ್ತಾರೆ ಮತ್ತೊಬ್ಬ ನಾಯಕ ಬಸವರಾಜ್ ಕುಮಾರ್.

ಈ ಚಿತ್ರದಲ್ಲಿ ನಾಯಕ ಮತ್ತು ವಿಲನ್ ನಡುವೆ. ಒಂದು ಫೈಟಿಂಗ್ ಸಂದರ್ಭದಲ್ಲಿ ನಾಯಕನಟ ಶೂಟಿಂಗ್ ಸ್ಥಳದಲ್ಲಿ ಅಪ್ಪು ಸರ್ ರವರ ಪೋಸ್ಟರ್ ಅನ್ನು ನೋಡಿ ಜೋಷಿನಿಂದ ವಿಲನ್ ಗೆ ತಳಿಸಿರುತ್ತಾನೆ. ಈ ಚಿತ್ರದಲ್ಲಿರುವ ಬಹುತೇಕರು ಮೈಸೂರಿನವರು. ನಾನು ಕೂಡ ಮೈಸೂರಿನವನು. ಈ ಚಿತ್ರದಲ್ಲಿ ವಿಲನ್ ಪಾತ್ರ ನಿರ್ವಹಿಸಿದ್ದೇನೆ. ಈ ಚಿತ್ರದಲ್ಲಿ ಅಭಿನಯಿಸಿದ ನಂತರ. KD ಸಿನಿಮಾ ಹಾಗೂ ಆರ್ ಚಂದ್ರು ರವರ ಫಾದರ್ ಸಿನಿಮಾ ಮತ್ತು ಕುಂಟೆಬಿಲ್ಲೆ, A1 ಸಿನಿಮಾ, ಮಂಡಲ್ ಪಂಚಾಯಿತಿ ಮುಂತಾದ ಚಿತ್ರಗಳಲ್ಲಿ ನನಗೆ ನಟಿಸಲು ಅವಕಾಶ ಸಿಕ್ಕಿದೆ ಎಂದರು ನಟ ವಿಲನ್ ಶಿವಾಜಿ. 

ಜೀನಿಯಸ್ ಡೈರೆಕ್ಟರ್ ಉಪೇಂದ್ರ ಹೇಳಿರೋ ಈ ಮಾತನ್ನು ಯಾರೂ ಮರೆಯಬೇಡಿ!

ನಮ್ಮ ಚಿತ್ರದ ನಿರ್ಮಾಪಕಿ ನಾಗರತ್ನಮ್ಮ ಅವರು ದೊಡ್ಡ ಮನಸ್ಸು ಮಾಡಿ ಹೊಸಬರ ಮೇಲೆ ಬಂಡವಾಳವನ್ನು ಹೂಡಿರುತ್ತಾರೆ ಮತ್ತು ಒಂದು ಚಲನಚಿತ್ರ ತಯಾರಾಗಬೇಕಾದರೆ ನಿರ್ಮಾಪಕರ ಹಿಂದೆ ಬೆನ್ನೆಲುಬಾಗಿ ನಿಂತಿರುವ ಕುಟುಂಬ ವರ್ಗದ ಎಲ್ಲಾ ಮಹಿಳೆಯರು ಅನ್ನಪೂರ್ಣೇಶ್ವರಿಯರು ಎಂದು ಹೇಳುತ್ತಾ ಅವರಿಗೆ ಸಾಷ್ಟಾಂಗ ನಮಸ್ಕಾರಗಳನ್ನು ತಿಳಿಸಿದ ಶಿವಾಜಿ ರವರು, ಒಂದು ಚಿತ್ರ ಗೆಲ್ಲಬೇಕು ಅಂದರೆ ನಿರ್ದೇಶಕ, ನಿರ್ಮಾಪಕರ ಜೊತೆಗೆ ಚಲನಚಿತ್ರದಲ್ಲಿ ಅಭಿನಯಿಸಿರುವ ಎಲ್ಲಾ ಕಲಾವಿದರು ಕೂಡ ಪ್ರಚಾರದಲ್ಲಿ ತೊಡಗಬೇಕು. 

ಆದರೆ ಇತ್ತೀಚಿನ ದಿನಗಳಲ್ಲಿ ಕೆಲವರು ಪ್ರಚಾರಕ್ಕೆ ಬರುವುದಿಲ್ಲ. ನಿರ್ದೇಶಕ ನಿರ್ಮಾಪಕರು ಕೇಳಿದರೆ ನಮಗೆ ಶೂಟಿಂಗ್ ಇದೆ ಎಂದು ನೆಪ  ಹೇಳುತ್ತಾರೆ ಮತ್ತು ಬಲವಂತ ಮಾಡಿ ಕರೆದರೆ. ನಮಗೆ ಹೋಗುವ ಬರುವ ಖರ್ಚುಗಳು ಸಂಭಾವನೆ ಕೊಡಬೇಕೆಂದು ಕೇಳುತ್ತಾರೆ. ಈ ರೀತಿ ಆದರೆ, ಚಲನಚಿತ್ರ ನಿರ್ಮಾಪಕ, ನಿರ್ದೇಶಕರಿಗೆ ತುಂಬಾ ನೋವಾಗುತ್ತದೆ ಎಂದು ಶಿವಾಜಿ ಎಂ ಎನ್ ಕುಮಾರ್ ಅವರ ಬಳಿ ವೇದಿಕೆ ಮೇಲೆ ಹೇಳಿಕೊಂಡರು.  

ಆ ಸಂದರ್ಭದಲ್ಲಿ ಎಂ ಎನ್ ಕುಮಾರ್ ಅವರು ಮಾತನಾಡಿ, ಚಿತ್ರೀಕರಣದ ಮೊದಲು ನಿರ್ದೇಶಕರು, ನಿರ್ಮಾಪಕರು, ಕಲಾವಿದರೊಂದಿಗೆ ಪ್ರಚಾರದ ಸಮಯದಲ್ಲಿ ಬರಬೇಕೆಂದು ಅಗ್ರಿಮೆಂಟ್ ಕರಾರು ಮಾಡಿಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು. ಅಂತ ಸಂದರ್ಭದಲ್ಲಿ ಪ್ರಚಾರಕ್ಕೆ ಕಲಾವಿದರು ಬರಲಿಲ್ಲವೆಂದರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ. ದೂರನ್ನು ಕೊಡಬಹುದು ಎಂದು ಸಲಹೆ ಸಹ ಕೊಟ್ಟಿರುತ್ತಾರೆ.

ವಿಭಿನ್ನ ಪ್ರೆಸೆಂಟೇಶನ್ ಕೊಟ್ಟು 'UI'ನಲ್ಲಿ ಗೆದ್ದ ಗ್ರೇಟ್ ಡೈರೆಕ್ಟರ್ ಉಪೇಂದ್ರ!

ಸಿನಿಮಾ ಮೇಲಿನ ಪ್ರೀತಿಯಿಂದ ಕಷ್ಟಪಟ್ಟು ಈ ಚಿತ್ರ ನಿರ್ಮಾಣ ಮಾಡಿರುವುದಾಗಿ ನಿರ್ಮಾಪಕಿ ನಾಗರತ್ನಮ್ಮ ಹೇಳಿದರು. ಚಿತ್ರದಲ್ಲಿ ಐದು ಸುಮಧುರ ಹಾಡುಗಳಿರುವುದಾಗಿ ಸಂಗೀತ ನಿರ್ದೇಶಕ ಎ.ಟಿ.ರವೀಶ್ ತಿಳಿಸಿದರು. ತಮ್ಮ ಪಾತ್ರದ ಕುರಿತು ನಾಯಕಿ ಪ್ರಿಯದರ್ಶಿನಿ ಮಾತನಾಡಿದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Actress Amulya: ಮುದ್ದು ಮಕ್ಕಳು, ಗಂಡನ ಜೊತೆ ಪೋಸ್ ಕೊಟ್ಟ ಗೋಲ್ಡನ್ ಗರ್ಲ್
Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?