ಅಮ್ಮನ ಹುಟ್ಟುಹಬ್ಬಕ್ಕೆ ಸ್ಪೆಷಲ್ ಆಗಿ ವಿಶ್ ಮಾಡಿದ ಕಿಚ್ಚ ಸುದೀಪ್ ಪುತ್ರಿ ಸಾನ್ವಿ

By Pavna Das  |  First Published Jan 6, 2025, 3:50 PM IST

ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಪುತ್ರಿ ಸಾನ್ವಿ ಅಮ್ಮನ ಬರ್ತ್ ಡೇಗೆ ವಿಶೇಷವಾಗಿ ಶುಭ ಕೋರಿದ್ದಾರೆ. 
 


ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯಾ ಇಂದು ಅಂದರೆ ಜನವರಿ 6 ರಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ವಿಶೇಷ ದಿನದಂದು ಮಗಳು ಸಾನ್ವಿ ಸುದೀಪ್ (Sanvi Sudeep), ತುಂಬಾನೆ ಸ್ಪೆಷಲ್ ಆಗಿ ತಮ್ಮ ಅಮ್ಮನಿಗೆ ವಿಶ್ ಮಾಡಿದ್ದಾರೆ. ಅಮ್ಮನ ಜೊತೆಗಿನ ಮುದ್ದಾದ ಫೋಟೊವೊಂದನ್ನು ಸಾನ್ವಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ಅದರ ಜೊತೆಗೆ ಹುಟ್ಟುಹಬ್ಬದ ವಿಶ್ ಗಳನ್ನು ಸಹ ತಿಳಿಸಿದ್ದಾರೆ. 

ಸರಿಗಮಪ ವೇದಿಕೆಯಲ್ಲಿ ಫ್ಯಾಮಿಲಿ ಜೊತೆ ಕಿಚ್ಚ ….ಅಮ್ಮನ ಪ್ರತಿಮೆ ಕಂಡು ಕಣ್ಣೀರಿಟ್ಟ ಸುದೀಪ್!

Tap to resize

Latest Videos

ಸಾನ್ವಿ ಸುದೀಪ್ ಸುದೀಪ್ ಹಂಚಿಕೊಂಡಿರುವ ಫೋಟೊದಲ್ಲಿ ಅಮ್ಮ ಮತ್ತು ಮಗಳು ಇಬ್ಬರೂ ಕೂಡ ಬ್ಲ್ಯಾಕ್ ಆಂಡ್ ಬ್ಲ್ಯಾಕ್ ಡ್ರೆಸಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಪ್ರಿಯಾ ಮುದ್ದಾಗಿ ಸಾನ್ವಿ ಕೆನ್ನೆಗೆ ಮುದ್ದು ಮಾಡುತ್ತಿದ್ದು, ಸಾನ್ವಿ ನಾಟಿಯಾಗಿ ಬಾಯಿ ತೆರೆದುಕೊಂಡು ಸೆಲ್ಫಿ ತೆಗೆದುಕೊಂಡಿರುವ ಫೋಟೊ ಇದಾಗಿದ್ದು, ಈ ಪೋಸ್ಟ್ ಜೊತೆಗೆ ಸಾನ್ವಿ ‘Never seen a more beautiful woman than today’s birthday girl !! Happy birthday ma . I love you most’.  ಎಂದು ಬರೆದುಕೊಂಡಿದ್ದಾರೆ. ಅಂದರೆ ಇವತ್ತಿನ ಬರ್ತ್ ಡೇ ಗರ್ಲ್ ಗಿಂತ ತುಂಬಾ ಸುಂದರವಾಗಿ ಮಹಿಳೆಯರನ್ನು ನಾನು ಯಾವತ್ತೂ ನೋಡಿಯೇ ಇಲ್ಲ. ಹ್ಯಾಪಿ ಬರ್ತ್ ಡೇ ಮಾ. ಐ ಲವ್ ಯು ಮೋಸ್ಟ್ ಎಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅಭಿಮಾನಿಗಳು ತಮ್ಮ ಪ್ರೀತಿಯ ಅತ್ತಿಗೆಗೆ ಹುಟ್ಟುಹಬ್ಬದ ಶುಭಾಶಯ (birthday wishes) ಕೋರಿದ್ದಾರೆ. 

ಬಿದ್ದರೆ ಅವಳೇ ಎದ್ದೇಳಬೇಕು, ಏನ್ ಅಗ್ಬೇಕು ಅಂತಿದ್ದಾಳೆ ಕರೆಕ್ಟ್‌ ಆಗಿ ಆಗಬೇಕು: ಮಗಳ ಬಗ್ಗೆ ಕಿಚ್ಚ ಸುದೀಪ್

ಇತ್ತೀಚೆಗಷ್ಟೇ ಕಿಚ್ಚ ಸುದೀಪ್ (Kiccha Sudeep Family) ಮುದ್ದಾದ ಫ್ಯಾಮಿಲಿ , ಸರಿಗಮಪ ವೇದಿಕೆ ಮೇಲೆ ಮೊದಲ ಬಾರಿಗೆ ಜೊತೆಯಾಗಿ ಕಾಣಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಸಾನ್ವಿ ಅಪ್ಪ ಸುದೀಪ್ ನ ಹಾಡನ್ನು ಹಾಡಿ ಅಪ್ಪನಿಗೆ ಸರ್ಪ್ರೈಸ್ ನೀಡಿದ್ದರು. ಇನ್ನು ಸುದೀಪ್ ಸಹ ತಮ್ಮ ಮಗಳಿಗಾಗಿ ಆಕೆಗೆ ಇಷ್ಟವಾದ ವಿಕ್ರಾಂತ್ ರೋಣ (Vikrant Rona) ಸಿನಿಮಾದ ನನ್ನ ಬಾಳಿನಲ್ಲಿ ನೀನು ಇರುವೆ ಹಾಡನ್ನು ಹಾಡಿದ್ದರು, ಅಪ್ಪನ ಹಾಡು ಕೇಳಿ ಸಾನ್ವಿ ಕಣ್ಣಂಚ್ಚೂ ಕೂಡ ಒದ್ದೆಯಾಗಿತ್ತು. 

ನನ್ನ ಮಗಳಿಗೆ ನೇಚರ್ ಪ್ಲಾನ್ ಮಾಡಿರುತ್ತೆ, ನಾನು ಜಸ್ಟ್ ಸಪೋರ್ಟ್ ಮಾಡ್ತೀನಿ: ಕಿಚ್ಚ ಸುದೀಪ್

ಇನ್ನು ಸರಿಗಮಪ ಕಾರ್ಯಕ್ರಮಕ್ಕೆ (Saregamapa) ಬಂದಿದ್ದ ಸಾನ್ವಿ ಸುದೀಪ್, ಇಂಗ್ಲಿಷ್ ಮಾತನಾಡಿದುದರ ಬಗ್ಗೆ, ಕನ್ನಡ ಕಡಿಮೆ ಮಾತನಾಡಿದ್ದಕ್ಕೆ ಹಾಗೂ ಡ್ರೆಸ್ಸಿಂಗ್ ಬಗ್ಗೆ ಜನ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು. ಸುದೀಪ್ ಅಷ್ಟು ಚೆನ್ನಾಗಿ ಕನ್ನಡ ಮಾತನಾಡುವಾಗ ಮಗಳು ಒಂದಕ್ಷರವನ್ನು ಸಹ ಸರಿಯಾಗಿ ಕನ್ನಡದಲ್ಲಿ ಮಾತನಾಡಿಲ್ಲ ಎಂದು ದೂರಿದ್ದರು. ಈ ಟ್ರೋಲ್ ಗಳಿಗೆ ಸಾನ್ವಿ ಉತ್ತರ ಕೊಟ್ಟಿಲ್ಲ. ಭಾಷೆ ವಿಚಾರ ಬಿಟ್ಟರೆ, ಸರಿಗಮಪ ವೇದಿಕೆಯಲ್ಲಿ ಅಪ್ಪ - ಮಗಳ ಬಾಂಧವ್ಯ, ಪ್ರೀತಿ ಎಲ್ಲವೂ ಎದ್ದು ಕಾಣಿಸಿದ್ದು, ಜೊತೆಗೆ ವೀಕ್ಷಕರನ್ನೂ ಸಹ ಭಾವುಕ ಮಾಡಿದ್ದಂತೂ ನಿಜಾ. 
 

 

click me!