ನೊಂದು ಬೆಂದ ಜಗತ್ತನ್ನು ನಗಿಸಿ ಹಗುರಾಗಿಸುವ ಉದ್ದೇಶದಿಂದ ನ.26ರಂದು ಹಾಸ್ಯ ಪ್ರಧಾನ ಸಿನಿಮಾ ‘ಗೋವಿಂದ ಗೋವಿಂದ’ ಥಿಯೇಟರ್‌ಗಳಿಗೆ ಬಲಗಾಲಿಟ್ಟು ಆಗಮಿಸುತ್ತಿದೆ. ತಿಲಕ್ ಚೊಚ್ಚಲ ನಿರ್ದೇಶನದ ಈ ಚಿತ್ರಕ್ಕೆ ಸುಮಂತ್ ಶೈಲೇಂದ್ರ, ಭಾವನಾ, ರೂಪೇಶ್ ಶೆಟ್ಟಿ, ಕವಿತಾ ಪ್ರಧಾನ ಪಾತ್ರಧಾರಿಗಳು. ಹಗುರಗೊಳಿಸುವ ಚಿತ್ರಕ್ಕೆ ನಿರ್ಮಾಪಕರು ಮಾತ್ರ ತೂಕದವರು. ಹಿರಿಯ ನಿರ್ಮಾಪಕ ಶೈಲೇಂದ್ರ ಬಾಬು, ಹಿರಿಯ ನಿರ್ದೇಶಕ ರವಿ ಗರಣಿ ಮತ್ತು ಮಧುಗಿರಿಯ ಶಾಂತಲಾ ಚಿತ್ರಮಂದಿರದ ಮಾಲೀಕರಾದ ಕಿಶೋರ್ ಮಧುಗಿರಿ. ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ತಿಲಕ್, ‘ಮೊದಲ ಬಾರಿಗೆ ನಿರ್ದೇಶನ ಮಾಡಿದ್ದೇನೆ, ಒಪ್ಪಿಸಿಕೊಳ್ಳಿ’ ಎಂದರು. ರವಿ ಗರಣಿಯವರು ಸ್ವಲ್ಪ ಹೆಚ್ಚು ಉತ್ಸಾಹದಿಂದ ಇದ್ದರು. ‘ನಮ್ಮದು ಒಳ್ಳೆಯ ಸಿನಿಮಾ, ಹೆಚ್ಚು ಜನರಿಗೆ ನಮ್ಮ ಸಿನಿಮಾ ವಿಚಾರ ತಲುಪಿಸಬೇಕು’ ಎಂದು ಹೇಳಿದರು. ಅವರ ಮಾತಲ್ಲಿದ್ದ ಚಿತ್ರದ ಬಗೆಗಿನ ಕಳಕಳಿಯನ್ನು ನೋಡಿ ಎಲ್ಲರೂ ತಲೆದೂಗಿದರು. ಶೈಲೇಂದ್ರಬಾಬು, ‘ನಮ್ಮ ಸಿನಿಮಾದಲ್ಲಿ ಫಸ್ಟ್‌ನೈಟ್ ಇಲ್ಲ. ಕಾಂಟ್ರವರ್ಸಿ ಇಲ್ಲ. ಒಳ್ಳೆಯ ಕತೆ ಇರುವ ಸುಂದರ ಸಿನಿಮಾ’ ಎಂದರು.
ನಾಯಕ ನಟ ಸುಮಂತ್ ಶೈಲೇಂದ್ರ, ‘ನನ್ನ ಪ್ರತೀ ಸಿನಿಮಾ ಬಿಡುಗಡೆಯಾಗುವಾಗಲೂ ಜೊತೆಗೊಂದು ದೊಡ್ಡ ಸಿನಿಮಾ ರಿಲೀಸ್ ಆಗುತ್ತದೆ. ಆದರೂ ಜನ ನನ್ನ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಈ ಸಲವೂ ಪ್ರೇಕ್ಷಕರು ಸಿನಿಮಾ ನೋಡಿ ಗೆಲ್ಲಿಸುತ್ತಾರೆ ಎಂಬ ನಂಬಿಕೆ ಇದೆ’ ಎಂದು ಹೇಳಿದರು. ನಟ ರೂಪೇಶ್ ಶೆಟ್ಟಿ, ‘ಇದು ಒತ್ತಡ ಮರೆಸುವ ಸಿನೆಮಾ. ಕುಟುಂಬ ಸಮೇತರಾಗಿ ನೋಡಿ ಆನಂದಿಸಬಹುದು’ ಎಂದರು. ನಿರ್ಮಾಪಕ ಕಿಶೋರ್ ಮಧುಗಿರಿ, ‘30 ವರ್ಷದಿಂದ ವಿತರಣೆ ವಲಯದಲ್ಲಿದ್ದೇನೆ. ಮೊದಲ ಬಾರಿಗೆ ಸಿನೆಮಾ ನಿರ್ಮಾಣ ಮಾಡಿದ್ದೇನೆ’ ಎಂದರು.
ಸಂಕಟಹರಣ ವೆಂಕಟರಮಣ ಗೋವಿಂದ ಗೋವಿಂದ;ಕಾಮಿಡಿ ಸಿನಿಮಾ ಏ.16ಕ್ಕೆ ರಿಲೀಸ್!
ನಟಿ ಕವಿತಾ, ಕಲಾವಿದರಾದ ಪವನ್, ವಿಜಯ್ ಚೆಂಡೂರ್, ಕಾರ್ಯಕಾರಿ ನಿರ್ಮಾಪಕ ಜನಾರ್ದನ್ ಚಿತ್ರದ ಕುರಿತು ವಿಶ್ವಾಸ ವ್ಯಕ್ತಪಡಿಸಿದರು. ಸಂಗೀತ ನಿರ್ದೇಶಕ ಹಿತನ್ ಹಾಸನ್, ‘ಈ ಸಿನೆಮಾ ನೋಡುತ್ತಾ ನಿರಾಳರಾಗಬಹುದು’ ಎಂದು ಭರವಸೆ ನೀಡಿದರು.
'ದಿಲ್‌ವಾಲಾ' (Dilwala) ಸಿನಿಮಾ ಸೇರಿದಂತೆ ಯಂಗ್ ಆಂಡ್ ಎನರ್ಜಿಟಿಕ್ ಆ್ಯಕ್ಷನ್ ಸಿನಿಮಾಗಳ ಮೂಲಕವೇ ಚಿತ್ರರಂಗಕ್ಕೆ ಬಂದ ಸುಮಂತ್ ಶೈಲೇಂದ್ರ (Sumanth Shailendra), ಈಗ ರೊಮ್ಯಾಂಟಿಕ್ ಥ್ರಿಲ್ಲರ್ 'ಗೋವಿಂದ ಗೋವಿಂದ' (Govinda Govinda) ಚಿತ್ರದ ಮೂಲಕ ಮತ್ತೆ ಬೆಳ್ಳಿತೆರೆ ಮೇಲೆ ಬರುತ್ತಿದ್ದಾರೆ. 'ಗೋವಿಂದ ಗೋವಿಂದ' ಇದೇ ತಿಂಗಳ 26ಕ್ಕೆ ರಾಜ್ಯಾದ್ಯಂತ ತೆರೆ ಕಾಣಲಿದೆ. 'ಹುಂಡಿ ನಮ್ದು, ಕಾಸು ನಿಮ್ದು' ಈ ಸಿನಿಮಾದ ಟ್ಯಾಗ್‌ಲೈನ್. ಚಿತ್ರದಲ್ಲಿ ಸುಮಂತ್ ಕಾಲೇಜ್ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕವಿತಾ ಗೌಡ (Kavitha Gowda) ಹಾಗೂ ಭಾವನಾ ಮೆನನ್ (Bhavana Menon) ನಾಯಕಿಯರು. ಚಿತ್ರಕ್ಕೆ ಸೆನ್ಸಾರ್‌ನಿಂದ (Censor) ಯಾವುದೇ ಕಟ್ ಹಾಗೂ ಮ್ಯೂಟ್ ಇಲ್ಲದೆ ಯು ಪ್ರಮಾಣಪತ್ರ (U Certificate) ಸಿಕ್ಕಿದೆ.
'ಗೋವಿಂದ ಗೋವಿಂದ' ಒಂದೊಳ್ಳೆಯ ಚಿತ್ರ. ನಾನು ಚಿತ್ರರಂಗದಲ್ಲಿ ಮೂರು ದಶಕಗಳಿಂದ ಇದ್ದೇನೆ. ಒಂದು ಸಂಪೂರ್ಣ ಹಾಸ್ಯ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದೇನೆ. ತುಂಬಾ ಗ್ಯಾಪ್ ನಂತರ ನನ್ನ ನಟನೆಯ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಹಾಸ್ಯಕ್ಕೆ ಕೊರತೆ ಇಲ್ಲ. ಹೀಗಾಗಿ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆಂಬ ನಂಬಿಕೆ ಇದೆ. ಹಾಗೂ ಮೊದಲ ಬಾರಿಗೆ ಒಂದು ಸಿನಿಮಾವನ್ನು ಬೇರೆ ಭಾಷೆಗಳಿಗೆ ಡಬ್ ಮಾಡಿ, ಒಟ್ಟಿಗೆ ಬಿಡುಗಡೆ ಮಾಡುತ್ತಿದ್ದೇನೆ. ಏಕಕಾಲದಲ್ಲಿ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ತೆರೆಗೆ ಬರುತ್ತಿದೆ ಎನ್ನುತ್ತಾರೆ ಶೈಲೇಂದ್ರ ಬಾಬು.