ವಿಶೇಷವಾಗಿ ಹುಡುಗಿಯರಿಗೆಂದು ಬಿಡುಗಡೆಯಾದ 'ಎಣ್ಣೆಗೂ, ಹೆಣ್ಣಿಗೂ' ಹಾಡಿನಲ್ಲಿ ಚಿತ್ರದ ನಾಯಕ ರಾಣಾ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಯೆಣ್ಣೆ ಬಾಟಲ್ ಕೆಮಿಸ್ಟ್ರಿ ಅದ್ಭುತವಾಗಿ ಮೂಡಿಬಂದಿದ್ದು, ಬ್ಯೂಟಿಫುಲ್ ಸ್ಟೆಪ್ಸ್ ಹಾಕಿದ್ದಾರೆ.
ಜೋಗಿ ಪ್ರೇಮ್ (Jogi Prem) ನಿರ್ದೇಶನದಲ್ಲಿ ಹಾಗೂ ನಟಿ ರಕ್ಷಿತಾ (Rakshita) ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ರಾಣಾ (Raanna) ಅಭಿನಯದ 'ಏಕ್ ಲವ್ ಯಾ' (Ek LOve Ya) ಚಿತ್ರದ ಲವ್ ಬ್ರೇಕ್ ಅಪ್ ಸಾಂಗ್ 'ಎಣ್ಣೆಗೂ, ಹೆಣ್ಣಿಗೂ' (Yennegu Hennigu) ಲಿರಿಕಲ್ ಹಾಡು ಬಿಡುಗಡೆಯಾಗಿದೆ. ಹಾಡಿನ ಪ್ರಾರಂಭದಲ್ಲಿ 'ನಿಮ್ಮನು ನೋಡಿದ ಕಣ್ಣುಗಳೇ ಪುನೀತಾ. ನಿಮ್ಮ ಜೊತೆ ಕಳೆದ ಕ್ಷಣಗಳೇ ಆಸರೆಯ ಅಪ್ಪುಗೆ. ಕನ್ನಡಿಗರ ಮನೆಮನದಲ್ಲಿರೋ ಪವರ್ ನಿಮಗೆಂದೂ ಸಾವಿಲ್ಲ. ಎಂದೆಂದಿಗೂ ಅಮರ ರಾಜಕುಮಾರ ಎಂಬ ಬರಹದೊಂದಿಗೆ ಇತ್ತೀಚೆಗೆ ನಿಧನರಾದ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರನ್ನು ಜೋಗಿ ಪ್ರೇಮ್ ನೆನೆದಿದ್ದಾರೆ.
ವಿಶೇಷವಾಗಿ ಹುಡುಗಿಯರಿಗೆಂದು ಬಿಡುಗಡೆಯಾದ 'ಎಣ್ಣೆಗೂ, ಹೆಣ್ಣಿಗೂ' ಹಾಡಿನಲ್ಲಿ ಚಿತ್ರದ ನಾಯಕ ರಾಣಾ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಯೆಣ್ಣೆ ಬಾಟಲ್ ಕೆಮಿಸ್ಟ್ರಿ ಅದ್ಭುತವಾಗಿ ಮೂಡಿಬಂದಿದೆ. ಹಾಗೂ ಬೃಹತ್ ಸೆಟ್ ಮತ್ತು ಅದ್ಧೂರಿ ಮೇಕಿಂಗ್‌ನಿಂದಾಗಿ ಈ ಹಾಡು ಸಿನಿರಸಿಕರ ಗಮನ ಸೆಳೆಯುತ್ತಿದೆ. ಜೊತೆಗೆ ರಾಣಾ, ರಚಿತಾ ಬಾಟಲ್ ಹಿಡಿದು ಬ್ಯೂಟಿಫುಲ್ ಸ್ಟೆಪ್ಸ್ ಹಾಕಿದ್ದಾರೆ. ಈ ಹಾಡಿಗೆ ನಿರ್ದೇಶಕ ಜೋಗಿ ಪ್ರೇಮ್ ಅವರೇ ಸಾಹಿತ್ಯ ರಚಿಸಿದ್ದು, ತೆಲುಗು ಗಾಯಕಿ ಮಂಗ್ಲಿ (Mangli) ಹಾಗೂ ಕೈಲಾಶ್ ಕೇರ್ (Kailash Kher) ದನಿಯಲ್ಲಿ ಈ ಹಾಡು ಮೂಡಿಬಂದಿದೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾ ಸಂಗೀತ ನೀಡಿದ್ದು, ಸಿನಿರಸಿಕರು ಹಾಡಿಗೆ ಫಿದಾ ಆಗಿದ್ದಾರೆ.
'ಅಪ್ಪು ನಿಮಗೆಂದೂ ಸಾವಿಲ್ಲ ನೀವಿಲ್ಲದೇ ಏನೇನೂ ಇಲ್ಲ': ನಿರ್ದೇಶಕ ಜೋಗಿ ಪ್ರೇಮ್
ಈ ಬಗ್ಗೆ 'ಏಕ್ ಲವ್ ಯಾ' ಚಿತ್ರದ ನಿರ್ದೇಶಕ ಜೋಗಿ ಪ್ರೇಮ್, ಲವ್ ಬ್ರೇಕಪ್‌ನ ಬರೀ ಹುಡುಗರು ಸೆಲೆಬ್ರೆಟ್ ಮಾಡುತ್ತಿದ್ದರು, ಈಗ ಹುಡುಗಿಯರು ಸೆಲೆಬ್ರೆಟ್ ಮಾಡಲೀ ಅಂತ 'ಎಣ್ಣೆಗೂ, ಹೆಣ್ಣಿಗೂ' ಸಾಂಗ್ ರಿಲೀಸ್ ಮಾಡಿದೀವಿ, ಕೇಳಿ, ನೋಡಿ ಆನಂದಿಸಿ ಎಂದಿನ ಹಾಗೇ ಪ್ರೀತಿಸಿ ಪ್ರೋತ್ಸಾಹಿಸಿ. 'ಲವ್ವು ಸೆಕ್ಸಲ್ಲೇ ಮುಗುದೋಯ್ತಲ್ಲೋ?' ಎಂದು ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಪೋಸ್ಟ್ ಮಾಡಿದ್ದಾರೆ. ಇನ್ನು ಈ ಹಾಡನ್ನು ಮೊದಲೇ ಬಿಡುಗಡೆ ಮಾಡಬೇಕಿತ್ತು. ಆದರೆ ಪುನೀತ್ ಅಗಲಿಕೆಯಿಂದ ಮುಂದಿನ ದಿನದಲ್ಲಿ ಚಿತ್ರದ ಹಾಡನ್ನು ಬಿಡುಗಡೆ ಮಾಡುವುದಾಗಿ ಪ್ರೇಮ್ ಹೇಳಿದ್ದರು ಜೊತೆಗೆ ಭಾವುಕ ಬರಹವನ್ನು ಹಂಚಿಕೊಂಡಿದ್ದರು.
'ಮೋಡ ಕವಿದ ಆಗಸ ಇನ್ನೂ ಸರಿ ಹೋಗಿಲ್ಲ ಮೋಡದ ಮಧ್ಯೆ ಸೂರ್ಯನು ಇಣಿಕಿ ನೋಡುವ ಲಕ್ಷಣ ಕಾಣುತ್ತಿಲ್ಲ. ಇದರ ನಡುವೆ ನಮ್ಮ ಏಕ್ ಲವ್ ಯಾ ಚಿತ್ರದ ಹಾಡಿನ ಸಂಭ್ರಮಾಚರಣೆ ಮಾಡಲು ಮನಸಾಗುತ್ತಿಲ್ಲ. ಆದ್ದರಿಂದ 4ನೇ ತಾರೀಖು ಬಿಡುಗಡೆಯಾಗಬೇಕಿದ್ದ ನಮ್ಮ ಚಿತ್ರದ ಹಾಡನ್ನು ಇದೇ ತಿಂಗಳು 12ನೇ ತಾರೀಖಿಗೆ ಮುಂದೂಡಲಾಗಿದೆ' ಎಂದು ಪೋಸ್ಟ್ ಮಾಡಿದ್ದು, ಪುನೀತ್ ನೆನೆದು 'ನಿಮಗೆಂದೂ ಸಾವಿಲ್ಲ ನೀವಿಲ್ಲದೇ ಏನೇನೂ ಇಲ್ಲ' ಎಂದು ಭಾವನಾತ್ಮಕವಾಗಿ ಜೋಗಿ ಪ್ರೇಮ್ ಬರೆದುಕೊಂಡಿದ್ದರು.
'ಏಕ್ ಲವ್ ಯಾ' ಬಿಡುಗಡೆ ದಿನಾಂಕ ತಿಳಿಸಿದ ಜೋಗಿ ಪ್ರೇಮ್!
ಇನ್ನು 'ಏಕ್ ಲವ್ ಯಾ' ಚಿತ್ರದ ನಾಯಕ ಅಭಿಷೇಕ್ (ರಾಣಾ) (Abhishek) ರಕ್ಷಿತಾ ಸಹೋದರ. ಹಾಗಾಗಿ ಅಕ್ಕ-ಭಾವನ ಸಿನಿಮಾ ಬ್ಯಾನರ್‌ನಲ್ಲಿ ಲಾಂಚ್ ಆಗುತ್ತಿರುವ 'ಅಭಿರಾಣಾ' ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಭಾಮೈದುನ ಸಿನಿಮಾಗೆ ಪ್ರೇಮ್ ವಿಭಿನ್ನ ಕಥೆ ಹೆಣೆದಿದ್ದಾರೆ. ಈ ಚಿತ್ರದಲ್ಲಿ ರಾಣಾಗೆ ಜೋಡಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಹಾಗೂ ಇನ್ನೊಂದು ಮುಖ್ಯ ಪಾತ್ರದಲ್ಲಿ ಹೊಸ ನಟಿ ಗ್ರೀಷ್ಮಾ ನಾಣಯ್ಯ (Grishma Nanayya) ಅಭಿನಯಿಸಿದ್ದಾರೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ (Arjun Janya) ಸಂಗೀತ ಈ ಚಿತ್ರಕ್ಕಿದೆ.