New Year 2022: ಜನವರಿ 7ರಂದು ವಿಭಿನ್ನ ಶೀರ್ಷಿಕೆಯ ಚಿತ್ರ ಡಿಎನ್‌ಎ ತೆರೆಗೆ

Kannadaprabha News   | Asianet News
Published : Jan 03, 2022, 11:42 AM IST
New Year 2022: ಜನವರಿ 7ರಂದು ವಿಭಿನ್ನ ಶೀರ್ಷಿಕೆಯ ಚಿತ್ರ ಡಿಎನ್‌ಎ ತೆರೆಗೆ

ಸಾರಾಂಶ

ಹೊಸ ವರ್ಷದ ಮೊದಲ ವಾರದಲ್ಲಿ ಯಾವ ಸಿನಿಮಾ ತೆರೆಗೆ ಬರುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ಪ್ರೇಕ್ಷಕರಿಗೆ ‘ನಾನು ಬರುತ್ತಿದ್ದೇನೆ’ ಎಂದು ‘ಡಿಎನ್‌ಎ’ ಸಿನಿಮಾ ಕೈ ಎತ್ತಿದೆ. ಹೆಸರಿನಿಂದಲೇ ಗಮನ ಸೆಳೆದಿರುವ ಈ ಚಿತ್ರದ ನಿರ್ದೇಶಕರು ಪ್ರಕಾಶ್‌ರಾಜ್‌ ಮೇಹು ಅವರು. ಡಾ ರಾಜ್‌ಕುಮಾರ್‌ ಅವರ ಕುರಿತ ಅಂತರಂಗದ ಅಣ್ಣ ಹೆಸರಿನಲ್ಲಿ ಪುಸ್ತಕ ಬರೆದು ಗಮನ ಸೆಳೆದವರು ಪ್ರಕಾಶ್‌ರಾಜ್‌ ಮೇಹು.

ಹೊಸ ವರ್ಷದ ಮೊದಲ ವಾರದಲ್ಲಿ ಯಾವ ಸಿನಿಮಾ ತೆರೆಗೆ ಬರುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ಪ್ರೇಕ್ಷಕರಿಗೆ ‘ನಾನು ಬರುತ್ತಿದ್ದೇನೆ’ ಎಂದು ‘ಡಿಎನ್‌ಎ’ (DNA) ಸಿನಿಮಾ ಕೈ ಎತ್ತಿದೆ. ಹೆಸರಿನಿಂದಲೇ ಗಮನ ಸೆಳೆದಿರುವ ಈ ಚಿತ್ರದ ನಿರ್ದೇಶಕರು ಪ್ರಕಾಶ್‌ರಾಜ್‌ ಮೇಹು (PrakashRaj Mehu) ಅವರು. ಡಾ ರಾಜ್‌ಕುಮಾರ್‌ (Dr.Rajkumar) ಅವರ ಕುರಿತ ಅಂತರಂಗದ ಅಣ್ಣ ಹೆಸರಿನಲ್ಲಿ ಪುಸ್ತಕ ಬರೆದು ಗಮನ ಸೆಳೆದವರು ಪ್ರಕಾಶ್‌ರಾಜ್‌ ಮೇಹು. ಅಲ್ಲದೆ ವಜ್ರೇಶ್ವರಿ ಕಂಬೈನ್ಸ್‌ ನಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವದ ಮೇಲೆ ಸಿನಿಮಾ ನಿರ್ದೇಶನ ಮಾಡಿದ್ದಾರೆ. ‘ಡಿಎನ್‌ಎ’ ಇವರಿಗೆ ಮೊದಲ ನಿರ್ದೇಶನದ ಸಿನಿಮಾ. 

ಕಷ್ಟವಾದರೂ ಪ್ರೀತಿಯಿಂದ ಈ ಚಿತ್ರವನ್ನು ರೂಪಿಸಿದ್ದು, ಜ.7ರಂದು ಪ್ರೇಕ್ಷಕರ ಮುಂದೆ ತರುತ್ತಿರುವ ಸಂಭ್ರಮದಲ್ಲಿದ್ದಾರೆ ನಿರ್ದೇಶಕರು. ‘ಹೊಡಿ, ಬಡಿ, ಕಡಿ ಎನ್ನುವ ಅಬ್ಬರದ ಚಿತ್ರಗಳ ನಡುವೆ ತಣ್ಣನೆಯ ನದಿಯಂತೆ ಹರಿದು, ಜಲಪಾತವಾಗಿ ಭೋರ್ಗರೆವ ಭಾವಲಹರಿಯನ್ನು ಅನಾವರಣ ಮಾಡುವ ಕತೆ ಇಲ್ಲಿದೆ. ಹೀಗಾಗಿ ಈ ಸಿನಿಮಾ ಹೃದಯವಂತರಿಗೆ ಮಾತ್ರ. ಚಿತ್ರದ ಶೀರ್ಷಿಕೆ ಮೂಡಿಸಿರುವ ಕುತೂಹಲದಂತೆ ಇಡೀ ಸಿನಿಮಾ ಮೂಡಿ ಬಂದಿದೆ’ ಎನ್ನುತ್ತಾರೆ ನಿರ್ದೇಶಕ ಪ್ರಕಾಶ್‌ರಾಜ್‌ ಮೇಹು ಅವರು.

Laka Laka Lamborghini: ಮಗಳಿಗಾಗಿ ಆಲ್ಬಂ ಸಾಂಗ್ ಮಾಡಿದ ಆರ್.ಕೇಶವ್

ಚಿತ್ರಕ್ಕೆ ಸೆನ್ಸಾರ್‌ ಮಂಡಳಿ 'ಯು' ಪ್ರಮಾಣ ಪತ ನೀಡಿದೆ. ಚಿತ್ರದಲ್ಲಿ ಅಚ್ಯುತ್‌ ಕುಮಾರ್‌ (Achyuth Kumar) ಪ್ರಮುಖ ಪಾತ್ರ ಮಾಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಅವರು, ಇದು ಸಂಬಂಧಗಳ ಕುರಿತು ಮಾಡಿದ ಸಿನಿಮಾ ಇದಾಗಿದ್ದು, ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂದರು. ಇದೊಂದು ಕೌಟುಂಬಿಕ ಸಿನಿಮಾವಾಗಿದ್ದು, ಇಡೀ ಕುಟುಂಬ ಜೊತೆಯಾಗಿ ಕುಳಿತು ನೋಡಬಹುದು ಎನ್ನುವುದು ನಿರ್ಮಾಪಕ ಮೈಲಾರಿ ಮಾತು.

ಮಾತೃಶ್ರೀ ಎಂಟರ್‌ಪ್ರೈಸಸ್‌ ಬ್ಯಾನರ್‌ ಮೂಲಕ ಮೈಲಾರಿ ಎಂ ನಿರ್ಮಾಣದ ಈ ಚಿತ್ರದಲ್ಲಿ ಅಚ್ಯುತ್‌ ಕುಮಾರ್‌, ರೋಜರ್‌ ನಾರಾಯಣ್‌, ಎಸ್ತರ್‌ ನರೋನ, ಯಮುನಾ, ಮಾ.ಕೃಷ್ಣ ಚೈತನ್ಯ, ಅನಿತಾ ಭಟ್‌, ನಿಹಾರಿಖ, ನೀನಾಸಂ ಶ್ವೇತಾ, ಶೋಭಾ ಮೈಸೂರು ಮುಂತಾದವರು ನಟಿಸಿದ್ದಾರೆ. ಜಯಂತ್‌ ಕಾಯ್ಕಿಣಿ, ಯೋಗರಾಜ್‌ ಭಟ್‌, ಡಾ ಕೆ ವೈ ನಾರಾಯಣಸ್ವಾಮಿ ಅವರು ಚಿತ್ರದಲ್ಲಿನ ಹಾಡುಗಳಿಗೆ ಸಾಹಿತ್ಯ ನೀಡಿರುವುದು ‘ಡಿಎನ್‌ಎ’ ಚಿತ್ರದ ಹೈಲೈಟ್‌ಗಳಲ್ಲಿ ಒಂದು. ಚಿತ್ರಕ್ಕೆ ಚೇತನ್‌ ಅವರ ಸಂಗೀತ ಸಂಯೋಜನೆ, ಶಿವರಾಜ್‌ ಮೇಹು ಸಂಕಲನ, ರವಿಕುಮಾರ್‌ ಸಾನಾ ಕ್ಯಾಮೆರಾ ಹಿಡಿದಿದ್ದಾರೆ.

Gajanana and Gang Trailer: ಫೆಬ್ರವರಿ 4ರಂದು‌ ಶ್ರೀ- ಅದಿತಿ ಪ್ರಭುದೇವ ಚಿತ್ರ ರಿಲೀಸ್

ಜಾತಿ, ಧರ್ಮಗಳ ಹೆಸರಿನಲ್ಲಿ ಮನುಷ್ಯರ ನಡುವೆ ಗೋಡೆಗಳನ್ನು ಕಟ್ಟಿಕೊಳ್ಳುತ್ತಿರುವ ಹೊತ್ತಿನಲ್ಲಿ ನಿಜವಾದ ಸಂಬಂಧ ಯಾವುದು, ಭಾವನಾತ್ಮಕ ನಂಟು ಎಲ್ಲಿದೆ, ಯಾವುದು ನಿಜ ಸಂಬಂಧ, ಯಾವುದು ಸುಳ್ಳು ಎಂಬಿತ್ಯಾದಿ ಅಂಶಗಳ ಸುತ್ತ ನಮ್ಮ ಸಿನಿಮಾ ಚರ್ಚಿಸುತ್ತದೆ. ಸಾಮಾಜಿಕ ಕಾಳಜಿಯ ನೆಲೆಗಟ್ಟು ಈ ಚಿತ್ರಕ್ಕಿದೆ.
-ಪ್ರಕಾಶ್‌ರಾಜ್‌ ಮೇಹು, ನಿರ್ದೇಶಕ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!