
ಕನ್ನಡ ಚಿತ್ರರಂಗಕ್ಕೆ ಡಿಫರೆಂಟ್ ಆಗಿರುವ ಲವ್ ಸ್ಟೋರಿ ಕೊಟ್ಟಿದ್ದು ತಾಜ್ ಮಹಲ್ (Taj Mahal) ಸಿನಿಮಾ. ಆರ್ ಚಂದ್ರು ( R.Chandru) ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿ ಅಜಯ್ ರಾವ್ (Ajay Rao) ಮತ್ತು ಪೂಜಾ ಗಾಂಧಿ (Pooja Gandhi) ಜೋಡಿಯಾಗಿದ್ದರು, ಇದೀಗ ಬರುತ್ತಿರುವ ತಾಜ್ ಮಹಲ್ ಸಿನಿಮಾವನ್ನು ದೇವರಾಜ್ ಕುಮಾರ್ (Devaraj Kumar) ಆಕ್ಷನ್ ಕಟ್ ಹೇಳಿದ್ದಾರೆ. ನಿರ್ದೇಶಕನೇ ನಾಯಕನಾಗಿರುವ ಈ ಚಿತ್ರಕ್ಕೆ ಸಮೃದ್ಧಿ ಶುಕ್ಲಾ ಜೋಡಿಯಾಗಿದ್ದಾರೆ.
ಆರ್ ಚಂದ್ರ ನಿರ್ದೇಶನ ಮಾಡಿರುವ ತಾಜ್ ಮಹಲ್ ಚಿತ್ರಕ್ಕೂ ಮತ್ತು ದೇವರಾಜ್ ಕುಮಾರ್ ನಿರ್ದೇಶನ ಮಾಡಿರುವ ತಾಜ್ ಮಹಾಲ್ 2 ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಟ್ರೈಲರ್ ರಿಲೀಸ್ ಸಮಯದಲ್ಲಿ ಚಿತ್ರತಂಡ ಸ್ಪಷ್ಟನೆ ನೀಡಿದೆ. ಈ ಎರಡು ತಾಜ್ ಮಹಾಲ್ ಸಿನಿಮಾ ನೈಜ ಘಟನೆ ಆಧಾರಿತ ಎನ್ನಲಾಗಿದೆ.
'ನಿರ್ದೇಶಕ ದೇವರಾಜ್ ಬ್ರಶ್ ಹಿಡ್ಕೊಂಡು ಬಂದ್ರು ನಾನು ಬ್ರಶ್ ಹಿಡ್ಕೊಂಡು ಬಂದೆ. ಆದರೆ ಅವರದ್ದು ಮೇಕಪ್ ಬ್ರಶ್, ನನ್ನದು ಪೇಟಿಂಗ್ ಬ್ರಶ್. ನಾನು ಗೋಡೆ ಮೇಲೆ ಪೇಂಟ್ ಮಾಡ್ತೀನಿ ಇವ್ರು ಮುಖದ ಮೇಲೆ ಪೇಂಟ್ ಮಾಡ್ತಾರೆ. ಇಬ್ಬರು ಒಂದೇ ವೇದಿಕೆ ಮೇಲೆ ಇರುವುದಕ್ಕೆ ಸಂತೋಷ ಅಗುತ್ತಿದೆ. ತುಂಬಾ ವರ್ಷಗಳ ಹಿಂದೆ ಎಲ್ಲೋ ಮೂಲೆಯಲ್ಲಿ ನಿಂತಿರುತ್ತಿದ್ದೆವು ನಾವು ಯಾವತ್ತಾದರೂ ಈ ರೀತಿ ವೇದಿಕೆ ಮೇಲೆ ಬರ್ತೀವಾ ಅಂತ ಯೋಚನೆ ಮಾಡ್ತಿದ್ವಿ. ಈಗ ಖುಷಿ ಆಗುತ್ತದೆ ಮುಂದೆ ಒಂದು ಸೀಟಿಗೆ ವೇದಿಕೆ ಮೇಲೆ ಜಾಗ ಇದೆ' ಎಂದು ಕಾಕ್ರೋಜ್ ಸುಧಿ (Cockroach Sudhi) ಮಾತನಾಡಿದ್ದಾರೆ.
ಕರ್ನಾಟಕ ಚಲನಚಿತ್ರ ನಿರ್ದೇಶಕ ಸಂಘದ ಅಧ್ಯಕ್ಷರಾದ ಡಾ.ವಿ ನಾಗೇಂದ್ರ ಪ್ರಸಾದ್, ನಿರ್ದೇಶಕ ನಾಗೇಂದ್ರ ಮಾಗಡಿ, ಜಿಮ್ ರವಿ, ವಿಕಾಸ್ ಪುಷ್ಪಗಿರಿ, ತಬಲ ನಾಣಿ, ಕಾಕ್ರೋಜ್ ಸುಧಿ, ರಾಜ್ ಉದಯ್ ಸೇರಿದಂತೆ ಅನೇಕ ಕಲಾವಿದರು ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 'ನಾನು ನೈಜಘಟನೆ ಆಧರಿಸಿ ಈ ಚಿತ್ರ ನಿರ್ದೇಶಿಸಿದ್ದೇನೆ. ಈ ಹಿಂದೆ ಮೂರು ಚಿತ್ರಗಳನ್ನು ನಿರ್ದೇಶನ ಮಾಡಿದ್ದೇನೆ. ಆದರೆ ನಾಯಕನಾಗಬೇಕೆಂಬ ಕನಸು ಹಾಗೆ ಇತ್ತು. ನಿರ್ಮಾಪಕರು ಈ ಚಿತ್ರದ ಮೂಲಕ ನನ್ನನ್ನು ನಾಯಕನಾಗಿ ಮಾಡಿದ್ದರು. ನಾನು ಜೀವನಪೂರ್ತಿ ಅವರಿಗೆ ಋಣಿ. ಟ್ರೈಲರ್ ಬಿಡುಗಡೆ ಮಾಡಿಕೊಟ್ಟ ಗಣ್ಯರಿಗೆ ನನ್ನ ಧನ್ಯವಾದಗಳು. ಚಿತ್ರ ಏಪ್ರಿಲ್‌ನಲ್ಲಿ ತೆರೆಗೆ ತರುತ್ತೇವೆ' ಎಂದು ನಿರ್ದೇಶಕ ಕಮ್ ನಾಯಕ ದೇವರಾಜ್ ಕುಮಾರ್ ಮಾತನಾಡಿದ್ದಾರೆ.
'ಚಿತ್ರದಲ್ಲಿ ನಾನು ನಾಯಕನ ಸೋದರ ಮಾವ. ಆತ ನನ್ನ ಸಾಕುಮಗ. ಮದುವೆ ಆಗದವರಿಗೆ ಮದುವೆ ಮಾಡಿಸುವುದೇ ನನ್ನ ಕಾಯಕ. ಎಷ್ಟೋ ಮದುವೆ ಮಾಡಿಸಿದವನಿಗೆ ತನ್ನ ಮಗನ ಮದುವೆ ಮಾಡಿಸಲು ಆಗಿರುವುದಿಲ್ಲ' ಎದು ತಬಲ ನಾಣಿ (Tabala Nani) ಮಾತನಾಡಿದ್ದಾರೆ.
ದೇವರಾಜ್ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಮೀನಸ್ ಮೂರ್ತಿ ಅವರ ಛಾಯಗ್ರಹಣವಿದೆ ಹಾಗೇ ಮನ್ವರ್ಷಿ ನವಲಗುಂಡ ಸಂಭಾಷಣೆ ಹಾಗೂ ಹಾಡುಗಳನ್ನು ಬರೆದಿದ್ದಾರೆ. ದೇವರಾಜ್‌ಕುಮಾರ್ ಅವರಿಗೆ ನಾಯಕಿಯಾಗಿ ಸಮೃದ್ಧಿ ನಟಿಸಿದ್ದಾರೆ. ಜಿಮ್ ರವಿ, ಶೋಭರಾಜ್, ಶಿವರಾಮಣ್ಣ, ತಬಲಾ ನಾಣಿ, ಕಡ್ಡಿಪುಡಿ ಚಂದ್ರು,ರಾಜ್ ಉದಯ್ ಮತ್ತು ಕಾಕ್ರೋಜ್ ಸುಧಿ ನಟಿಸಿದ್ದಾರೆ.
'ಇದು ನನ್ನ ಕೊನೆ ಚಿತ್ರ. ನಾನು ವಿಲನ್ ಆಗಿ ಮಾಡಿದ್ದೀನಿ. ದೇವರಾಜ್ ಅವರು ನನಗೆ ಆತ್ಮೀಯ ಸ್ನೇಹಿತರು. ನಿರ್ದೇಶನ ಮತ್ತು ನಟನೆಯ ತುಂಬಾ ಶ್ರದ್ಧೆಯಿಂದ ಪ್ರೀತಿಯಿಂದ ಸಿನಿಮಾ ಮಾಡಿದ್ದಾರೆ. ಚಿತ್ರದ ನಿರ್ಮಾಪಕರು ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ ವೇದಿಕೆ ಮೇಲೆ ಕೂಡ ಬರಲ್ಲ. ಸುನಾಮಿ ಬಂದ್ರೆ ಬದುಕಬಹುದು ಬೆಂಕಿಯಲ್ಲಿ ಈಜು ಹೊಡಿಬಹುದು ಆದರೆ ಸಿನಿಮಾ ಮಾಡಿದ್ರೆ ಎಷ್ಟು ಕಷ್ಟ ಅಂತ ನಮ್ಮಿಬ್ಬರಿಗೆ ಮಾತ್ರ ಗೊತ್ತು. ರೂಪಾಯಿ ರೂಪಾಯಿ ಸೇರಿಸಿ ಸಿನಿಮಾ ಮಾಡಿದ್ದೀವಿ. ಯಾವ ಕಲಾವಿದರಿಗೂ ತೊಂದರೆ ಆಗಿಲ್ಲ ಏನು ಪೇಮೆಂಟ್ ಮಾತುಕತೆ ಆಗಿತ್ತು ಅದನ್ನು ಕ್ಲಿಯರ್ ಮಾಡಿದ್ದಾರೆ.' ಎಂದು ಜಿಮ್ ರವಿ (Gym Ravi) ಮಾತನಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.