Laka Laka Lamborghini: ಮಗಳಿಗಾಗಿ ಆಲ್ಬಂ ಸಾಂಗ್ ಮಾಡಿದ ಆರ್.ಕೇಶವ್

By Suvarna News  |  First Published Jan 3, 2022, 11:18 AM IST

ಸ್ಯಾಂಡಲ್‌ವುಡ್‌ನ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಹಾಗೂ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಜೋಡಿಯಲ್ಲಿ ಮತ್ತೊಂದು ವಿಡಿಯೋ ಆಲ್ಬಂ ಅನಾವರಣಗೊಂಡಿದೆ. ಹಾಡಿನ ಹೆಸರು ‘ಲಕಲಕ ಲ್ಯಾಂಬೋರ್ಗಿನಿ.


ಸ್ಯಾಂಡಲ್‌ವುಡ್‌ನ (Sandalwood) ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ (Chandan Shetty) ಹಾಗೂ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ (Rachita ram) ಜೋಡಿಯಲ್ಲಿ ಮತ್ತೊಂದು ವಿಡಿಯೋ ಆಲ್ಬಂ ಅನಾವರಣಗೊಂಡಿದೆ. ಹಾಡಿನ ಹೆಸರು ‘ಲಕಲಕ ಲ್ಯಾಂಬೋರ್ಗಿನಿ’ (Laka Laka Lamborghini). ಹೊಸ ವರ್ಷದ ಅಂಗವಾಗಿ ಬಿಂದ್ಯಾ ಮೂವೀಸ್ (Bindya Movies) ಮೂಲಕ ಆರ್.ಕೇಶವ (R.Keshava) ಇದನ್ನು ನಿರ್ಮಿಸಿದ್ದಾರೆ. ಎಂದಿನಂತೆ ಚಂದನ್ ಶೆಟ್ಟಿ ಸಾಹಿತ್ಯ ಬರೆದು, ಸಂಗೀತ ನೀಡಿ, ಹಾಡುವುದರ ಜತೆಗೆ ಅಭಿನಯಿಸಿದ್ದಾರೆ ಕೂಡ. ಈ ಹಾಡಿಗೆ ಆ್ಯಕ್ಷನ್ ಕಟ್ ಹೇಳಿರುವುದು ನಿರ್ದೇಶಕ ನಂದಕಿಶೋರ್ (Nanda Kishor). 

ನಿರ್ಮಾಪಕ ಕೆ.ಮಂಜು (K.Manju) ಈ ಹಾಡನ್ನು ಬಿಡುಗಡೆ ಮಾಡಿ ತಂಡಕ್ಕೆ ಶುಭ ಕೋರಿದರು. 'ಕಳೆದ ನಾಲ್ಕು ವರ್ಷಗಳಿಂದ ಹೊಸ ವರ್ಷಕ್ಕಾಗಿಯೇ ನಾನು ಹೊಸ ವಿಡಿಯೋ ಆಲ್ಬಂ ಮಾಡುತ್ತೇನೆ. ಟಕೀಲ, ಬ್ಯಾಡ್ ಬಾಯ್, ತ್ರಿ ಪೆಗ್ ಇದೇ ರೀತಿ ಬಂದಿದ್ದು. ಈ ಹೊಸ ವರ್ಷಕ್ಕೆ ಲಕಲಕ ಲ್ಯಾಂಬೋರ್ಗಿನಿ ಬಂದಿದೆ' ಎಂದರು ಚಂದನ್ ಶೆಟ್ಟಿ. ಮೂಲತಃ ರೈತರಾಗಿರುವ ಆರ್.ಕೇಶವ್ ತಮ್ಮ ಪುತ್ರಿ ಬಿಂದ್ಯಾ ಹುಟ್ಟುಹಬ್ಬದ ನೆನಪಿಗೆ ಈ ಹಾಡನ್ನು ನಿರ್ಮಿಸಿದ್ದಾರೆ. ಈ ಹಾಡಿನಲ್ಲಿ ರಚಿತಾ ರಾಮ್, ಚಂದನ್‌ ಶೆಟ್ಟಿ ಜೊತೆಗೆ ಬೋಲ್ಡ್ ಲುಕ್‌ನಲ್ಲಿ ಸಖತ್​ ಆಗಿ ಡ್ಯಾನ್ಸ್ ಮಾಡಿದ್ದು, ನೋಡುಗರ ಎದೆಗೆ ಕಿಚ್ಚು ಹಚ್ಚಿದ್ದಾರೆ. 

Tap to resize

Latest Videos

Niveditha Gowda Love Story:ಬಿಗ್ ಬಾಸ್‌ ವೈಷ್ಣವಿ ಜೊತೆ ಲವ್ ಸ್ಟೋರಿ ಹಂಚಿಕೊಂಡ ನಿವಿ!

'ನನ್ನ ಮಗಳು ಬಿಂದ್ಯಾ ಳನ್ನು ಹುಟ್ಟುಹಬ್ಬಕ್ಕೆ ಏನು ಬೇಕು ಎಂದು ಕೇಳಿದಾಗ, ಚಂದನ್ ಶೆಟ್ಟಿ ಜತೆ ಡ್ಯಾನ್ಸ್ ಮಾಡಬೇಕು ಎಂದು ಆಸೆಪಟ್ಟಳು. ನಂತರ ಕೆ. ಮಂಜು ಅವರ ಮುಂದೆ ಹೇಳಿದೆ. ಅವರ ಮೂಲಕ ಎಲ್ಲರನ್ನು ಸಂಪರ್ಕಿಸಿದೆ. ಈ ಹಾಡು ನಿರ್ಮಾಣವಾಗಲು ನನ್ನ ಮಗಳು ಬಿಂದ್ಯಾ ಕಾರಣ. ಚಂದನ್ ಶೆಟ್ಟಿ , ರಚಿತಾರಾಮ್ ಜತೆ ನನ್ನ ಮಗಳು ಬಿಂದ್ಯಾ  ಕೂಡ ಈ ಹಾಡಿನಲ್ಲಿ ಅಭಿನಯಿಸಿದ್ದಾಳೆ' ಎಂದು ಖುಷಿಯಿಂದ ಹೇಳಿಕೊಂಡರು ನಿರ್ಮಾಪಕ ಕೇಶವ್. 'ಈ ಹಾಡು ಜುಲೈ ತಿಂಗಳಲ್ಲಿ ಆರಂಭವಾಗಬೇಕಿತ್ತು. ದುಬೈನಲ್ಲಿ ಚಿತ್ರೀಕರಣ ಮಾಡುವ ಇರಾದೆಯೂ ಇತ್ತು. ಆದರೆ ಕೊರೊನಾ ಇದಕ್ಕೆಲ್ಲ ಅಡ್ಡಿಯಾಯಿತು. ಕಾಕತಾಳೀಯ ಎಂಬಂತೆ ಹೊಸ ವರ್ಷಕ್ಕೆ ಈ ಹಾಡು ಬಿಡುಗಡೆಯಾಗಿದೆ. ಈ ಹಾಡು ಆಗಲು ಕಾರಣಕರ್ತರಾದ ಎಲ್ಲರಿಗ ಥ್ಯಾಂಕ್ಸ್‌’ ಎಂದು ಚಂದನ್ ಶೆಟ್ಟಿ ಹೇಳಿದರು. 

ಅವಸರದಲ್ಲಿ ಜಿಲೇಬಿ ತಿನ್ನಲು ಹೋಗಿ ಚಂದನ್‌ ಶೆಟ್ಟಿ ಬೆರಳು ಕಚ್ಚಿದ ನಿವೇದಿತಾ ಗೌಡ!

ನಾನು ಎಷ್ಟೋ ಚಿತ್ರಗಳಿಗೆ ಸಹ ನಿರ್ದೇಶಕನಾಗಿ, ನಿರ್ದೇಶಕನಾಗಿ ಕೆಲಸ ಮಾಡಿದ್ದೀನಿ. ಆಲ್ಬಂ ಸಾಂಗ್‌ ಇದೇ ಮೊದಲು ನಿರ್ದೇಶನ ಮಾಡಿದ್ದೀನಿ. ಮಕ್ಕಳು ಹುಟ್ಟುಹಬ್ಬಕ್ಕೆ ಚಾಕ್‌ಲೇಟ್‌, ಬಿಸ್ಕತ್ತು ಮುಂತಾದವುಗಳನ್ನು ಕೇಳುತ್ತಾರೆ. ಆದರೆ ಈ ಹುಡುಗಿ ಅವರ ಅಪ್ಪನ ಬಳಿ ಆಲ್ಬಂ ಸಾಂಗ್‌ ಮಾಡಲು ಕೇಳಿ, ನೂರು ಜನಕ್ಕೆ ಅನ್ನ ನೀಡಿದ್ದಾಳೆ. ಚಿಕ್ಕ ವಯಸ್ಸಿನಲ್ಲಿ ಇಂತಹ ಗುಣ ಇರುವುದು ನಿಜಕ್ಕೂ ಶ್ಲಾಘನೀಯ ಎಂದರು ನಿರ್ದೇಶಕ ನಂದ ಕಿಶೋರ್‌. ಶೇಖರ್​ ಚಂದ್ರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್​ ಸಂಕಲನ, ಮುರಳಿ ಮಾಸ್ಟರ್​ ನೃತ್ಯ ನಿರ್ದೇಶನ, ಮೋಹನ್​ ಬಿ. ಕೆರೆ ಕಲಾ ನಿರ್ದೇಶನ ಈ ಹಾಡಿಗಿದೆ. ‘ಲಕ ಲಕ ಲ್ಯಾಂಬೋರ್ಗಿನಿ’ ವಿಡಿಯೋ ಆಲ್ಬಂ ಅನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ನೋಡಬಹುದು.
 

click me!