ಯಾವುದೇ ಕ್ಷಣ, ಪರಿಸ್ಥಿತಿಯಲ್ಲೂ ದರ್ಶನ್ ಸರ್ ಬಗ್ಗೆ ಹಗುರವಾಗಿ ಮಾತನಾಡೋದಿಲ್ಲ: ಎಪಿ ಅರ್ಜುನ್

By Shriram Bhat  |  First Published Jul 31, 2024, 10:37 PM IST

ಯಾಕೆ ಈ ತರದ್ದೆಲ್ಲಾ ಆಯ್ತು ಅವ್ರ ಜೀವನದಲ್ಲಿ ಅನ್ನೋದು ಯಾವುದೋ ಒಂದು ಕೆಟ್ಟ ಘಳಿಗೆ ಇರ್ಬಹುದು. ಯಾವುದೇ ಕ್ಷಣದಲ್ಲೂ, ಯಾವುದೇ ಪರಿಸ್ಥಿತಿಯಲ್ಲೂ,  ದರ್ಶನ್ ಸರ್ ಬಗ್ಗೆ ನಾನು ಹಗುರವಾಗಿ ಮಾತನಾಡುವುದಿಲ್ಲ.. ಅಷ್ಟೇ ನಾನು ಹೇಳುವುದು...


ಅಂಬಾರಿ, ಅದ್ದೂರಿ ಸಿನಿಮಾಗಳ ಖ್ಯಾತಿಯ ನಿರ್ದೇಶಕರಾದ ಎಪಿ ಅರ್ಜುನ್ (AP Arjun) ನಟ ದರ್ಶನ್ ಬಗ್ಗೆ ಮಾತನಾಡಿದ್ದಾರೆ. 'ನಾನು ನನ್ನ ಮೊದಲೆರಡು ಸಿನಿಮಾಗಳಲ್ಲಿ ಅಸಿಸ್ಟಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದು ಅವರದೇ ಸಿನಿಮಾ. 'ತಂಗಿಗಾಗಿ' ಅನ್ನೋ ಸಿನಿಮಾಗೆ ನಾನು ನಾಲ್ಕು ಸಾಂಗ್ ಬರೆದಿದೀನಿ. ಅದಕ್ಕೆ ಚಾನ್ಸ್ ನಂಗೆ ಕೊಡ್ಸಿದ್ದು ಅವ್ರೇ, ಜೊತೆಗೆ, ಫಸ್ಟ್ ಟೈಂ ಸಾಂಗ್‌ಗೆ ಅಂತ ದುಡ್ಡು ಕೊಡಿಸಿದ್ದೂ ಅವ್ರೇ.. ಅದಾದ್ಮೇಲೆ 'Mr. ಐರಾವತ' ಅನ್ನೋ ಸಿನಿಮಾಗೆ ನಿರ್ದೇಶನಕ್ಕೆ ಅವಕಾಶ ಕೊಟ್ಟಿದ್ದೂ ದರ್ಶನ್ ಸರ್. 

ಆದ್ರೆ, ಈ ಪರಿಸ್ಥಿತಿ ಬಗ್ಗೆ ನಾವ್ಯಾರೂ ಮಾತಾಡ್ವಂಥದ್ದು ಏನಿಲ್ಲ. ಯಾಕಂದ್ರೆ, ಕಾನೂನು ಅನ್ನೋದು ಎಲ್ಲಾನೂ ನಿರ್ಧಾರ ಮಾಡುತ್ತೆ.. ಅದನ್ನೂ ಮೀರಿ ಸರಿ-ತಪ್ಪುಗಳು ಏನೇ ಆಗಿದ್ರೂನೂ ಆದಷ್ಟು ಬೇಗ ಎಲ್ಲಾನೂ ಮುಗ್ಸಿ, ದರ್ಶನ್ ಸರ್ (Actor Darshan) ಹೊರಗಡೆ ಬರ್ಲಿ ಅನ್ನೋದು ನಮ್ಮೆಲ್ಲರ ಆಶಯ. ಯಾಕಂದ್ರೆ, ಯಾವುದೋ ಒಂದು ಕೆಟ್ಟ ಘಳಿಗೆಯಲ್ಲಿ ಏನೋ ಒಂದು ನಡೆದಿರ್ಬಹುದು, ಏನೇ ಆಗಿರ್ಬಹುದು, ಆದಷ್ಟು ಬೇಗ ಹೊರಗಡೆ ಬರ್ಲಿ ಅಂತ ಹೇಳ್ತೀನಿ.. 

Tap to resize

Latest Videos

undefined

ಮುಂಬೈನಲ್ಲಿ ಹಫ್ತಾ ವಸೂಲಿಗೆ ಬಂದವನು ವಿಷ್ಣುವರ್ಧನ್ ಕಾಲಿಗೆ ಬಿದ್ದಿದ್ದು ಯಾಕೆ? ಏನಾಗಿತ್ತು ಅಲ್ಲಿ?
 
ಯಾಕೆ ಅಂದ್ರೆ, ನಾವು ಜೊತೆನಲ್ಲಿ ತುಂಬಾ ವರ್ಷಗಳು ಕೆಲಸ ಮಾಡಿದೀವಿ, ನಾನು ಅವ್ರ ಜೊತೆನಲ್ಲಿ ಕೂತ್ಕೊಂಡು ಊಟ ಮಾಡಿದೀನಿ, ತುಂಬಾ ಸಪೋರ್ಟ್ ಮಾಡಿದಂತಹ ವ್ಯಕ್ತಿ ಅವ್ರು. ಅವ್ರ ಬಗ್ಗೆ ತುಂಬಾ ಪ್ರೀತಿ ಇದೆ, ಗೌರವ ಇದೆ, ಯಾಕೆ ಅಂತಂದ್ರೆ ಅಣ್ಣಾ ಅಂತಾನೇ ಕರಿತಾ ಇದ್ದಿದ್ದು.. ಆ ಬೇಜಾರ್‌ನ ಜಾಸ್ತಿ ಏನೂ ಹೇಳೋಕಾಗಲ್ಲ.. ಬೇಗ ಬರ್ಲಿ ಅವರು ಹೊರಗಡೆ ಅನ್ನೋದಷ್ಟೇ ನನ್ನ ಆಶಯ ಅಂತ ಹೇಳ್ತೀನಿ.. ಅವಕಾಶ ಸಿಕ್ಕರೆ ಖಂಡಿತವಾಗಿಯೂ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ಭೇಟಿಯಾಗುತ್ತೇನೆ.. 

ಅವ್ರ ಬಗ್ಗೆ ಹೇಳ್ಬೇಕು ಅಂದ್ರೆ ತಂಬಾ ಒಳ್ಳೆಯ ವ್ಯಕ್ತಿ.. ನಾನು ಅವ್ರ ಜೊತೆ ಒಂದೂವರೆಯಿಂದ ಎರಡು ವರ್ಷ ಕೆಲಸ ಮಾಡಿದೀನಿ ಡೈರೆಕ್ಟರ್ ಆಗಿ. ತುಂಬಾ ಕಷ್ಟ ಅಂತ ಬಂದ್ರೆ ಸ್ಪಂದಿಸುವಂತಹ ವ್ಯಕ್ತಿ.. ಯಾಕೆ ಈ ತರದ್ದೆಲ್ಲಾ ಆಯ್ತು ಅವ್ರ ಜೀವನದಲ್ಲಿ ಅನ್ನೋದು ಯಾವುದೋ ಒಂದು ಕೆಟ್ಟ ಘಳಿಗೆ ಇರ್ಬಹುದು. ಯಾವತ್ತೂ ಅವ್ರಿಗೆ ಒಳ್ಳೇದಾಗ್ಲಿ ಅನ್ನೋ ಹಾರೈಕೆ, ಪ್ರಾರ್ಥನೆ ನಮ್ಮದಾಗಿರತ್ತೆ ಅಂತ ಹೇಳೋಕೆ ಇಷ್ಟಪಡ್ತೀನಿ.. ಯಾವುದೇ ಕ್ಷಣದಲ್ಲು, ಯಾವುದೇ ಪರಿಸ್ಥಿತಿಯಲ್ಲು… ದರ್ಶನ್ ಸರ್ ಬಗ್ಗೆ ನಾನು ಹಗುರವಾಗಿ ಮಾತನಾಡುವುದಿಲ್ಲ.. ಅಷ್ಟೇ ನಾನು ಹೇಳುವುದು.

ಟ್ರಾಪ್ ಆಗೋದು ಆಮೇಲೆ ಒದ್ದಾಡೋದು ನಂಗೆ ಆಗಿಬರಲ್ಲ: ಶಾಕಿಂಗ್ ಹೇಳಿಕೆ ಕೊಟ್ಟ ಯಶ್..!

ಟಾಪಿಕ್ ರೆಸ್ಟೋರಂಟ್ ಉದ್ಘಾಟನೆ ದಿನ, ಆವತ್ತು ಮಾಧ್ಯಮದ ಪ್ರಶ್ನೆಗೆ ನಾನು ಹಾಗೆ ಉತ್ತರ ಕೊಟ್ಟಿದ್ದಕ್ಕೆ ಒಂದು ಕಾರಣ ಇದೆ. ಆವತ್ತು ಈ ಬೆಳವಣಿಗೆ ಬಗ್ಗೆ ಸದ್ಯಕ್ಕೆ ಈಗ ಮಾತನಾಡೋದಿಲ್ಲ ಅಂತ ಹೇಳಿದ್ದೆ. ಆದ್ರೆ, ಅದು ತುಂಬಾನೇ ವೈರಲ್ ಆಗಿದೆ. ಆವತ್ತಿನ ನನ್ನ ಪರಿಸ್ಥಿತಿಯಲ್ಲಿ ನಾನು ಎಲ್ಲರ ಜೊತೆ ನಗ್ತಾ ನಗ್ತಾ ಇದ್ದು, ನಗ್ತಾನೇ ಮಾತಾಡ್ಕೊಂಡು ಯಾರೇ ಬಂದ್ರೂ ವೆಲ್‌ಕಮ್ ಮಾಡ್ತಾನೇ ಇರ್ಬೇಕು.. ಆವತ್ತು ಅದಾಗಿದ್ದು ನನ್ನ ಆವತ್ತಿನ ಪರಿಸ್ಥಿತಿಯಲ್ಲಿ ಅಷ್ಟೇ.

ಆ ಟೈಮ್‌ನಲ್ಲಿ ಯಾರೋ ಒಂದಿಬ್ರು ಬಂದು ಈ ಬೆಳವಣಿಗೆ ಬಗ್ಗೆ ಏನ್ ಹೇಳ್ತಿರಾ ಅಂದಾಗ, ಇದು ಆ ಬೆಳವಣಿಗೆ ಬಗ್ಗೆ ಮಾತಾಡೋ ಟೈಮ್ ಅಲ್ಲ ಅಂತ ಹೇಳಿದೀನಿ ಅಷ್ಟೇ.. ಆದರೆ, ಅದು ತಪ್ಪು ಅರ್ಥದಲ್ಲಿ ಬಹಳಷ್ಟು ವೈರಲ್ ಆಯ್ತು.. ಬಂದವ್ರ ಜೊತೆ ಮಾತಾಡ್ತಾ ಇದ್ನಲ್ಲಾ ಯಾವ್ದೋ ವಿಷ್ಯಕ್ಕೆ ಸಂಬಂಧಪಟ್ಟು, ಅದಕ್ಕೇ ಆಗ ನಕ್ಕಿದ್ದೇನೆಯೇ ಹೊರತೂ ದರ್ಶನ್ ಸರ್ ಬಗ್ಗೆ ಅಲ್ಲ. ನಾನು ಅವ್ರ ಜೊತೆ ಕೆಲಸ ಮಾಡಿದೀನಿ, ಅವ್ರ ಅನ್ನ ತಿಂದಿದೀನಿ.. 

ಹಂಸಲೇಖಾ-ರವಿಚಂದ್ರನ್ ಕಿತ್ತಾಟಕ್ಕೆ ಮೂಲ ಕಾರಣ ಬಿಚ್ಚಿಟ್ಟ ಲಹರಿ ವೇಲು: ಹೀಗೂ ಉಂಟೇ ಗುರೂ...!

ಎಲ್ಲಕ್ಕಿಂತ ಹೆಚ್ಚಾಗಿ ನಾನು ಅವ್ರ ಫ್ಯಾನ್. ನಾನು ಅವ್ರ ಜೊತೆ ಕೆಲಸ ಮಾಡೋದಕ್ಕಿಂತ ಮೊದ್ಲು ನಾನು ಅವ್ರ ಫ್ಯಾನ್ ಅಗಿದ್ದವ್ನು. 
ಅವ್ರ ಜೊತೆ ಕೆಲಸ ಮಾಡಿದ್ಮೇಲೂ ಫ್ಯಾನೇ, ಆದ್ರೆ ಅದಕ್ಕಿಂತ ಹೆಚ್ಚು ಅವ್ರ ಮೇಲೆ ಪ್ರೀತಿ, ವಿಶ್ವಾಸ ಗೌರವ ಎಲ್ಲಾನೂ ಇದೆ. ಯಾವತ್ತಿದ್ರೂ ನಂಗೆ ದರ್ಶನ್ ಸರ್ ಮೇಲೆ ಗೌರವ, ಅಭಿಮಾನ, ಪ್ರೀತಿ ಹಾಗೂ ವಿಶ್ವಾಸ ಯಾವುದೂ ಸ್ವಲ್ಪವೂ ಕಮ್ಮಿ ಆಗೋದಿಲ್ಲ' ಎಂದಿದ್ದಾರೆ ಅದ್ದೂರಿ ಖ್ಯಾತಿಯ ನಿರ್ದೇಶಕ ಎಪಿ ಅರ್ಜುನ್. 

click me!