Meghana Raj shot ಮಗ ರಾಯನ್‌ನ ತುಂಬಾ ಮಿಸ್ ಮಾಡ್ಕೊಳ್ತೀನಿ, ವೀಡಿಯೋ ಕಾಲ್ ಮಾಡೋಕಾಗಲ್ಲ

Suvarna News   | Asianet News
Published : Feb 24, 2022, 01:39 PM IST
Meghana Raj shot ಮಗ ರಾಯನ್‌ನ ತುಂಬಾ ಮಿಸ್ ಮಾಡ್ಕೊಳ್ತೀನಿ, ವೀಡಿಯೋ ಕಾಲ್ ಮಾಡೋಕಾಗಲ್ಲ

ಸಾರಾಂಶ

ಡ್ಯಾನ್ಸಿಂಗ್ ಚಾಂಪಿಯನ್‌ಶಿಪ್‌ ಹೇಗಿದೆ? ಚಿತ್ರೀಕರಣ ಮಾಡುವಾಗ ಮಗ ಎಷ್ಟು ನೆನಪಾಗುತ್ತಾನೆಂದು ಮಾತನಾಡಿದ ಮೇಘನಾ ರಾಜ್. 

ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್‌ಶಿಪ್‌ (Dancing Championship) ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಮೇಘನಾ ರಾಜ್‌ (Meghana Raj) ತೀರ್ಪುಗಾರ್ತಿಯಾಗಿ ಮಿಂಚುತ್ತಿದ್ದಾರೆ. ಪ್ರತಿ ವಾರವೂ ಡಿಫರೆಂಟ್ ಅಗಿ ಅಲಂಕಾರ ಮಾಡಿಕೊಳ್ಳುವ ಮೇಘನಾ ವೀಕ್ಷಕರ ಮನೆ ಮಗಳಾಗಿದ್ದಾರೆ. ಮಗ ರಾಯನ್ ರಾಜ್‌ ಸರ್ಜಾ (Raayan Raj Sarja) ಇನ್ನೂ ಚಿಕ್ಕವನು ಆಗಿರುವ ಕಾರಣ ಹೇಗೆ ಟೈಮ್ ಮ್ಯಾನೇಜ್ ಮಾಡುತ್ತಾರೆ, ಅವನನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಾರೆಂದು ಮಾತನಾಡಿದ್ದಾರೆ. 

'ನಾನು ಡ್ಯಾನ್ಸಿಂಗ್‌ ಚಾಂಪಿಯನ್‌ಶಿಪ್‌ ನೋಡುವಾಗ ಅವನು ಡ್ಯಾನ್ಸ್‌ ಮಾಡ್ತಾ ಇರ್ತಾನೆ. ಅವನಿಗೆ ಹಾಡು ಕೇಳುವುದು, ನೋಡುವುದು ಅಂದ್ರೆ ತುಂಬಾನೇ ಇಷ್ಟ. ಟಿವಿಯಲ್ಲಿ ಅಥವಾ ಯುಟ್ಯೂಬ್‌ನಲ್ಲಿ (Youtube) ಯಾವುದಾದರೂ ಬರ್ತಿದ್ದರೆ ಅದನ್ನು ಕೇಳುತ್ತಾ ಡ್ಯಾನ್ಸ್ ಮಾಡುತ್ತಾನೆ. ಹಾಡು ಆ ಲೈಟ್‌ ನೋಡುತ್ತಾ ಟಿವಿ ಮುಂದೆ ನಿಂತು ಕೊಂಡಿರುತ್ತಾನೆ. ಅವೆಲ್ಲಾ ಏನು ಅಂತ ಅರ್ಥ ಮಾಡಿಕೊಳ್ಳುವಷ್ಟು ಬೆಳೆದಿಲ್ಲ. ತುಂಬಾ ಸಣ್ಣವನು. ಆದರೆ ತುಂಬಾನೇ ಎಂಜಾಯ್ ಮಾಡುತ್ತಾನೆ. ನನಗೆ ಟಿವಿ ನೋಡೋಕೆ ಬಿಡ್ತಾನೆ,' ಎಂದು ಮಗನಿಗೆ ಇರುವ ಡ್ಯಾನ್ಸ್ ಕ್ರೇಜ್ ಬಗ್ಗೆ ಖಾಸಗಿ ಸಂದರ್ಶನದಲ್ಲಿ ಮೇಘನಾ ಮಾತನಾಡಿದ್ದಾರೆ. 

'ಚಿತ್ರೀಕರಣದ ಸಮಯದಲ್ಲಿ ನಾನು ಅವನನ್ನು ತುಂಬಾನೇ ಮಿಸ್ ಮಾಡ್ಕೊಳ್ತೀನಿ. ಪ್ರತಿ 15-20 ನಿಮಿಷಕ್ಕೂ ಒಮ್ಮೆ ಫೋನ್ ಮಾಡಿ ಅಮ್ಮನ ಕೇಳ್ತೀನಿ, ಏನ್ ಮಾಡ್ತಿದ್ದಾನೆ ನನ್ನ ಕೇಳ್ತಿದ್ದಾನಾ? ಅದೊಂದು ಇನ್‌ಸೆಕ್ಯೂರಿಟಿ (Insecurity) ಬರುತ್ತೆ. ಅಮ್ಮ ಅಪ್ಪ ಜಾಸ್ತಿ ಟೈಮ್ ಸ್ಪೆಂಡ್ ಮಾಡ್ತಾರೆ ಅಂತ. ನನಗೆ ಮಾಡೋಕೆ ಆಗುತ್ತಿಲ್ಲ ಅಂತ. ಅವೆಲ್ಲಾ ಜೀವನವನ್ನು ಬ್ಯಾಲೆನ್ಸ್‌ ಮಾಡುವ ರೀತಿ. ಅವನಿಗೋಸ್ಕರನೇ ಕೆಲಸ ಮಾಡುತ್ತಿರುವೆ. ಕೆಲಸ ಸಕ್ಸಸ್‌ ಕೊಟ್ಟ ಮೇಲೆ ನಾವು ಮಾಡಿರುವ ಪುಟ್ಟ ಪುಟ್ಟ ಸ್ಯಾಕ್ರಿಫೈಸ್‌ಗೆ ಬೆಲೆ ಇದೆ ಅನಿಸುತ್ತದೆ. ತುಂಬಾನೇ ಮಿಸ್ ಮಾಡ್ಕೊಳ್ತೀನಿ ಅವನನ್ನು. ಆದರೆ ವಿಡಿಯೋ ಕಾಲ್ ಮಾಡೋಕೆ ಆಗಲ್ಲ. ಮಾಡಿದ್ರೆ ಅಮ್ಮ ಬೇಕು, ಅಮ್ಮ ಬೇಕು ಅಂತ ಹಠ ಮಾಡ್ತಾನೆ ಮನೆಯಲ್ಲಿ.' ಎಂದು ಮೇಘನಾ ಹೇಳಿದ್ದಾರೆ.

Meghana Rajನ ಭೇಟಿ ಮಾಡಿದ ಮಲಯಾಳಂ ನಟಿ Ahaana Krishna!

'ವೃತ್ತಿ ಜೀವನದಲ್ಲಿ ನೆಕ್ಸ್ಟ್ ಏನ್ ಅಂತ ನಾನು ಏನು ಪ್ಲ್ಯಾನ್ ಮಾಡಿರಲಿಲ್ಲ. ಮದರ್‌ವುಡ್‌ನಲ್ಲಿ (Motherhood) ನಮಗೆ ಮಗನೇ ಪ್ರಯಾರಿಟಿ ಅಗ್ತಾನೆ. ಆಗ ಸಮಯದಲ್ಲಿ ಮಗು ಬಿಟ್ಟು, ಬೇರೆ ಏನೂ ಯೋಚನೆ ಮಾಡುವ ಪರಿಸ್ಥಿತಿಯಲ್ಲಿ ನಾವು ಇರುವುದಿಲ್ಲ. ಇವೆಲ್ಲಾ ಲಾಂಗ್ ಶೂಟಿಂಗ್‌ ಸಮಯ, ಇದು ಮಾಡೋಕೆ ಆಗುತ್ತಾ ಅಂತ ಯೋಚನೆ ಇತ್ತು. ಈ ಹಿಂದೆ ತೀರ್ಪುಗಾರರು ತುಂಬಾನೇ ಸೀನಿಯರ್ಸ್‌ ಇದ್ದರು. ಎಲ್ಲರೂ ಗೊತ್ತಿರುವವರು. ವಿಜಯ್ ರಾಘವೇಂದ್ರ (Vijay Raghavendra) ಮತ್ತು ಮಯೂರಿ (Dancer Mayuri) ಅವರು ಅಗಲೇ ರಿಯಾಲಿಟಿ ಶೋ (Reality Show)ಗಳಲ್ಲಿ ಜಡ್ಜ್ ಆಗಿ ಕಾರ್ಯ ನಿರ್ವಹಿಸಿರುವ ಅನುಭವ ಇರುವವರು. ಕನ್‌ನ್ಫ್ಯೂಷನ್ ಇತ್ತು. ಖುಷಿನೂ ಇತ್ತು. ಹೊಸತನ ಇದೆ ಅಂತ. ವೀಕ್ಷಕರು ನೀವು ಬನ್ನಿ ನೀವು ಮಾತನಾಡುವುದು ನನಗೆ ಇಷ್ಟ ಆಯ್ತು, ಅಂತಿದ್ರು ಅದಕ್ಕೆ ಬಂದೆ,' ಎಂದಿದ್ದಾರೆ ಮೇಘನಾ ರಾಜ್.

Rayaan First Words: ರಾಯನ್ ರಾಜ್ ಸರ್ಜಾ ಸಿಂಹದ ರೀತಿ ಹೇಗೆ ಘರ್ಜಿಸುತ್ತಾನೆ ನೋಡಿ!

'ಅಮ್ಮ ಆರ್ಟಿಸ್ಟ್‌ ಆಗಿರುವುದರಿಂದ ಅವರಿಗೆ ಈ ಡ್ರೆಸ್‌, ಮೇಕಪ್‌ ಮತ್ತು ಹೇರ್‌ಸ್ಟೈಲ್‌ (hairstyle) ಬಗ್ಗೆ ಜಾಸ್ತಿ ಆಸಕ್ತಿ ಇದೆ. ವಯಸ್ಸು ಆಗ್ತಾ ಆಗ್ತಾ ಅದರ ಬಗ್ಗೆ ಇನ್ನೂ ಜಾಸ್ತಿ ಆಸಕ್ತಿ ಬರುತ್ತೆ. ಮಗಳು ಕೂಡ ಆರ್ಟಿಸ್ಟ್‌. ಅವಳು ಪ್ರತಿವಾರ ಟಿವಿನಲ್ಲಿ ಬರ್ತಾಳೆ ಅಂದ್ರೆ ಅವರಿಗೆ ಇನ್ನೂ ಕಾಳಜಿ ಹೆಚ್ಚಾಗುತ್ತೆ. ಮಗಳು ಈ ತರ ಕಾಣಿಸಬೇಕು ಆ ತರ ಬಟ್ಟೆ ಹಾಕಬೇಕು ಅಂತ. ಪ್ರತಿವಾರ ನಾನು ಏನ್ ಹಾಕೊಳ್ತೀನಿ ಅಂತ ಅವರು ಎಲ್ಲಾ ಚೆಕ್ ಮಾಡ್ತಾನೆ. ಮನೆಯಲ್ಲಿ ಅಮ್ಮ ಮಹಾಲಕ್ಷ್ಮಿ. ಅವರು ಖುಷಿಯಾಗಿದ್ರೆ ಎಲ್ಲರೂ ಖುಷಿಯಾಗಿರುತ್ತಾರೆ. ಮಗಳು ಏನ್ ಹಾಕೋಬೇಕು ಅನ್ನೋದು ಚೆನ್ನಾಗಿ ಹೇಳುತ್ತಾರೆ. ನನ್ನ ಅಮ್ಮ ಬೆಸ್ಟ್‌ ಕ್ರಿಟಿಕ್ ಮತ್ತು ಬೆಸ್ಟ್‌ ಸ್ಟೈಲಿಸ್ಟ್‌ ಅಂದ್ರೆ ತಪ್ಪಾಗಲ್ಲ,' ಎಂದು ಮೇಘನಾ ರಾಜ್ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆಂಧ್ರಪ್ರದೇಶದ X MLA Gummadi Narsaiah ಮನೆಗೆ ಹೋದಾಗ ನನ್ನ ತಂದೆ ಬಳಿಗೆ ಹೋದಂತಾಯ್ತು: Shiva Rajkumar
ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್