'ಹೊಸ ಹುಡುಗರ ಜೊತೆಗೆ ಸೇರಿಕೊಂಡು ಹುಡುಗಾಟ, ಹುಡುಕಾಟದಲ್ಲಿ ಏಕ್ ಲವ್ ಯಾ ಚಿತ್ರ ಮಾಡಿದ್ದೇನೆ. ಪ್ರೇಮ್ ಲೇಬಲ್ ತೆಗೆದು, ಇದು ಹೊಸ ನಿರ್ದೇಶಕನ ಚಿತ್ರ ಅಂದುಕೊಂಡು ಏಕ್ ಲವ್ ಯಾ ನೋಡಿ' ಎಂದು ನಿರ್ದೇಶಕ ಜೋಗಿ ಪ್ರೇಮ್ ಹೇಳಿದ್ದಾರೆ.
'ಹೊಸ ಹುಡುಗರ ಜೊತೆಗೆ ಸೇರಿಕೊಂಡು ಹುಡುಗಾಟ, ಹುಡುಕಾಟದಲ್ಲಿ 'ಏಕ್ ಲವ್ ಯಾ' (Ek LOve Ya)ಚಿತ್ರ ಮಾಡಿದ್ದೇನೆ. ಪ್ರೇಮ್ ಲೇಬಲ್ ತೆಗೆದು, ಇದು ಹೊಸ ನಿರ್ದೇಶಕನ ಚಿತ್ರ ಅಂದುಕೊಂಡು ಏಕ್ ಲವ್ ಯಾ ನೋಡಿ' ಎಂದು ನಿರ್ದೇಶಕ ಜೋಗಿ ಪ್ರೇಮ್ (Jogi Prem) ಹೇಳಿದ್ದಾರೆ. ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಚಿತ್ರ ನಾಳೆ (ಫೆ.24) ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ನಡೆದ ಪ್ರೀ ರಿಲೀಸ್ ಈವೆಂಟ್‌ನಲ್ಲಿ ಪ್ರೇಮ್ ಮಾತನಾಡಿದರು. 'ಸಿನಿಮಾಟೋಗ್ರಾಫರ್ ಮಹೇನ್ ಸಿಂಹ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಈ ಚಿತ್ರದ ರಿಯಲ್ ಹೀರೋಗಳು. ರಕ್ಷಿತಾಸ್ ಫಿಲಂ ಫ್ಯಾಕ್ಟರಿಗಾಗಿ ಈ ಸಿನಿಮಾ ಮಾಡಿದ್ದೇನೆ' ಎಂದರು ಪ್ರೇಮ್.
ಗಾಂಧಿನಗರದಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಈ ಚಿತ್ರದಲ್ಲಿ ಪ್ರೇಮ್ ಭಾಮೈದ ರಾಣಾ (ಅಭಿಷೇಕ್) (Raanna) ನಾಯಕನಾಗಿ ನಟಿಸಿದ್ದಾರೆ. ರಕ್ಷಿತಾ Rakshita) ಅವರ ಸಹೋದರ ರಾಣಾ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ಈ ಸಿನಿಮಾದಲ್ಲಿ ನಾಯಕಿಯಾಗಿ ರೀಷ್ಮಾ ನಾಣಯ್ಯ (Rishma Nanayya) ಕೂಡ ಸಿನಿ ಜಗತ್ತಿಗೆ ಪ್ರವೇಶಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳ ಮೂಲಕ ಈ ಜೋಡಿ ಕ್ಯೂಟ್ ಪೇರ್ ಎನಿಸಿಕೊಂಡಿದೆ. ತೆರೆಮೇಲೆ ಯಾವರೀತಿ ಮೋಡಿ ಮಾಡಲಿದೆ ಎಂಬುದನ್ನು ಕಾದುನೋಡಬೇಕು. ನಟಿ ರಚಿತಾ ರಾಮ್ (Rachita Ram) ಅವರು ಈ ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Ek Love Ya Trailer: ಜೋಗಿ ಪ್ರೇಮ್ ದೃಶ್ಯ ವೈಭವದಲ್ಲಿ ಮಿಂಚಿದ ರಾಣಾ-ರಚಿತಾ-ರೀಷ್ಮಾ!
'ಏಕ್ ಲವ್ ಯಾ' ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿದ್ದರೂ ಅದರಲ್ಲಿ 'ಮೀಟ್ ಮಾಡಣ, ಇಲ್ಲ ಡೇಟ್ ಮಾಡಣ' ಎನ್ನುವ ಸಾಂಗ್ ಎಲ್ಲಕ್ಕಿಂತ ಹೆಚ್ಚು ಜನಪ್ರಿಯವಾಗಿದೆ. ಅಂದಹಾಗೆ, ಈ ಹಾಡನ್ನು ಬರೆದವರು ವಿಜಯ್ ಈಶ್ವರ್. ಆರಂಭದಲ್ಲಿ ಈ ಹಾಡು ಬೇಡ ಎಂದು ಹಲವರು ಪ್ರೇಮ್‌ಗೆ ಸಲಹೆ ನೀಡಿದ್ದರಂತೆ. ಆದರೆ ಪ್ರೇಮ್ ಮಾತ್ರ ಈ ಸಾಂಗ್ ಬೇಕೇಬೇಕು ಎಂದು ಅರ್ಜುನ್ ಜನ್ಯ (Arjun Janya) ಅವರ ಬಳಿ ಹೊಸ ಟ್ಯೂನ್ ಮಾಡಿಸಿದ್ದರಂತೆ. ಐಶ್ವರ್ಯಾ ರಂಗರಾಜನ್ ಅವರ ಕಂಠದಲ್ಲಿ ಹೊರಬಂದಿರುವ ಈ ಹಾಡಿಗೆ ವಿಜಯ್ ಈಶ್ವರ್ ಸಾಹಿತ್ಯ ಬರೆದಿದ್ದಾರೆ. ಅಂದು ಎಲ್ಲರೂ ಬೇಡ ಎಂದಿದ್ದ ಹಾಡು ಇದೀಗ ಭರ್ಜರಿ ಹಿಟ್ ಆಗಿದೆ.
ಸಹೋದರನಿಗಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿರುವ ರಕ್ಷಿತಾ ಪ್ರೇಮ್ ಮಾತನಾಡಿ ರಾಣಾಗೆ 3 ವರ್ಷದ ಹಿಂದೆ ನಾನು ಹೀರೋ ಆಗಬೇಕು ಎಂಬ ಥಾಟ್ ಬಂತು. ಅಲ್ಲಿಂದ ಈ ಸಿನಿಮಾ ಜರ್ನಿ ಶುರುವಾಯ್ತು. ಈ ಹಾಡನ್ನು ನಮ್ಮ ಟೆಕ್ನೀಷಿಯನ್ಸ್ ಗೋಸ್ಕರವೇ ಮಾಡಿದ್ದು. ಚಿತ್ರ ಖಂಡಿತವಾಗಿ ಎಲ್ಲರಿಗೂ ಇಷ್ಟವಾಗುತ್ತೆ. ಗೆಲ್ಲುತ್ತೆ ಎಂಬ ಭರವಸೆಯಿದೆ. ಇದೇ 24ರ ಗುರುವಾರ ಬಿಡುಗಡೆಯಾಗುತ್ತಿದ್ದು ಎಲ್ಲರೂ ಸಪೋರ್ಟ್ ಮಾಡಿ ಎಂದು ಕೇಳಿಕೊಂಡರು. ಅಲ್ಲದೆ ತಂತ್ರಜ್ಞರೆಲ್ಲರನ್ನೂ ವೇದಿಕೆ ಮೇಲೆ ಕರೆದು ಎದೆ ಬಡಿತ ಹಾಡಿಗೆ ಸ್ಟೆಪ್ ಹಾಕಿದರು. ರಚಿತಾ ರಾಮ್, 'ನಮ್ ಪರ್ಫಾರ್ಮೆನ್ಸ್ ಇಷ್ಟ ಆಗದಿದ್ದಾಗ ಬಡ್ಡೀ ಮಗ್ನೇ, ನಿಂಗೀವತ್ತು ಎರಡ್ ಪೀಸ್ ಕಡ್ಮೆ ಕೊಡ್ತೀನಿ ಅಂತ ಪ್ರೇಮ್ ರೇಗುತ್ತಿದ್ದರು. ಅವರಿಂದ ಬೈಸಿಕೊಳ್ಳೋದೂ ಒಂಥರಾ ಮಜಾ' ಅಂದರು.
ಜೋಗಿ ಪ್ರೇಮ್ Ek Love Ya ತಂದ ಪ್ರೇಮಕಾವ್ಯ!
ಚಿತ್ರದಲ್ಲಿ ಮುಖ್ಯ ಪಾತ್ರ ನಿರ್ವಹಿಸಿರುವ ಹಿರಿಯ ನಟ ಚರಣರಾಜ್ (Charanraj) ಮಾತನಾಡಿ ಈ ಚಿತ್ರದಲ್ಲಿ ನಾನು ಆಕ್ಟ್ ಮಾಡುತ್ತೇನೆ ಅಂದ್ಕೊಂಡೇ ಇರಲಿಲ್ಲ, ದಶಾವರ ಚಂದ್ರು ನನಗೆ ಒಮ್ಮೆ ಕಾಲ್ ಮಾಡಿ ಪ್ರೇಮ್ ಸರ್ ನಿಮ್ಮ ಬಳಿ ಮಾತಾನಾಡಬೇಕಂತೆ ಎಂದರು. ನನಗೆ ಪ್ರೇಮ್ ಮೇಲೆ ಒಂಚೂರು ಕೋಪವಿತ್ತು, ಯಾಕೆ ನನಗೆ ಕರೀತಿಲ್ಲ, ಅಥವಾ ನನಗೊಪ್ಪುವ ಪಾತ್ರ ಇಲ್ಲವೇನೋ ಎಂದುಕೊಳ್ತಿದ್ದೆ, ನಂತರ ಪ್ರೇಮ್ ಬಳಿ ಕಥೆ ಕೇಳದೇ ಒಪ್ಪಿಕೊಂಡೆ. ಅವರು ದಿನದ 24 ಗಂಟೆ ಶೂಟಿಂಗ್ ಮಾಡಿದರೂ ನಗು ನಗುತ್ತಲೇ ಇರುತ್ತಾರೆ. ಅವರ ರಕ್ತದಲ್ಲೇ ಸಿನಿಮಾ ಅನ್ನುವುದು ಜೊತೆಗಿದೆ. ಅಲ್ಲದೆ ಅವರ ತಾಯಿಯ ಆಶೀರ್ವಾದವೂ ಇದೆ. ಪ್ರೇಮ್ ನಮ್ಮ ಸಾಮರ್ಥ್ಯ ಎಷ್ಟಿದೆ ಎಂದು ತಿಳಿದುಕೊಂಡು ನಮ್ಮಿಂದ ಕೆಲಸ ತಗೋತಾರೆ ಎಂದು ಹೇಳಿದರು. ಕಲಾವಿದರಾದ ಚರಣ್‌ರಾಜ್, ಕಾಕ್ರೋಚ್ ಸುಧಿ, ಯಶ್ ಶೆಟ್ಟಿ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ, ಛಾಯಾಗ್ರಾಹಕ ಮಹೇನ್ ಸಿಂಹ ಹಾಗೂ ಚಿತ್ರತಂಡದವರು ಉಪಸ್ಥಿತರಿದ್ದರು.