ಕೋವಿಡ್‌ ಟೈಮ್‌ನಲ್ಲಿ ಮೇಘನಾ ಗಾಂವ್ಕರ್‌ ಅಮೆರಿಕಾದಲ್ಲಿ!

Kannadaprabha News   | Asianet News
Published : Oct 12, 2020, 09:50 AM IST
ಕೋವಿಡ್‌ ಟೈಮ್‌ನಲ್ಲಿ ಮೇಘನಾ ಗಾಂವ್ಕರ್‌ ಅಮೆರಿಕಾದಲ್ಲಿ!

ಸಾರಾಂಶ

‘ಅಮೆರಿಕಾದಲ್ಲಿ ಕೊರೋನಾ’ ಅಂತ ಜನ ಭಯಭೀತರಾಗಿದ್ರೆ, ಮೇಘನಾ ಗಾಂವ್ಕರ್‌ ಎಂಬ ಧೈರ್ಯವಂತೆ ವಾಷಿಂಗ್‌ಟನ್‌ ಡಿಸಿಯಲ್ಲಿರೋ ಮೇರಿಲ್ಯಾಂಡ್‌ನ ಮರದ ಕೆಳಗೆ ನಿಂತು ಹಾಯ್‌ ಅಂತಿದ್ದಾರೆ. ಇಲ್ಲಿನ ರಾಘವೇಂದ್ರ ಮಠಕ್ಕೂ ಭೇಟಿ ನೀಡಿದ್ದಾರೆ. ರಾಯರ ಫೋಟೋನ ಜಗ್ಗೇಶ್‌ಗೆ ಟ್ವೀಟ್‌ ಮಾಡಿದ್ದಾರೆ.

ಇದಕ್ಕೂ ಹಿಂದೆ ತಮ್ಮ ಪಾರ್ಸ್‌ಪೋರ್ಟ್‌ ಫೆäಟೋ ಟ್ವೀಟ್‌ ಮಾಡಿದ್ರು. ಜೊತೆಗೆ ‘ಅಂತೂ ಇಂತೂ 2020 ರಲ್ಲಿ ಪಾಸ್‌ಪೋರ್ಟ್‌ ಮೇಲೆ ಒಂದು ಸ್ಟಾಂಪ್‌ ಬಿತ್ತು’ ಅನ್ನೋ ಕನ್ನಡದ ಒಕ್ಕಣೆ ಇತ್ತು. ಏನಿದರ ಹಿಂದಿನ ಕಥೆ ಅಂತ ಮೇಘನಾಗೆ ಫೋನ್‌ ಹಚ್ಚಿದರೆ ಅವರು ಅಮೆರಿಕಾದಲ್ಲಿ ಸೂರ್ಯೋದಯ ನೋಡ್ತಾ ಇದ್ರು! ಯಾಕೆ, ಏನು, ಎತ್ತ ಅನ್ನೋದನ್ನು ಮೇಘನಾ ಹೇಳಿದ್ದು ಹೀಗೆ..

ಹಾರರ್ ಸಿನಿಮಾದಲ್ಲಿ ದೆವ್ವ ಆದ ಮೇಘನಾ ಗಾಂವ್ಕರ್!

ಡಿಸ್ಟರ್ಬೆನ್ಸ್‌ನಿಂದ ಆಚೆ ಬರಬೇಕಿತ್ತು

ಯುಎಸ್‌ಎನಲ್ಲಿ ನನ್ನ ತಂಗಿ ಮನೆ ಇದೆ. ಅವಳು ಫ್ಯಾಮಿಲಿಯನ್ನು ಬಹಳ ಮಿಸ್‌ ಮಾಡ್ತಿದ್ಲು. ಹಾಗಾಗಿ ನಾನು ಹೊರಟು ಬಂದೆ. ಜೊತೆಗೆ ನಾನೀಗ ಪಿಎಚ್‌ಡಿ ಮಾಡ್ತಿದ್ದೀನಿ. ಬಹಳ ಸ್ಟಡೀ ಮಾಡೋದಿದೆ. ಅದಕ್ಕೆ ತಕ್ಕಂಥಾ ಪ್ರಶಾಂತ ವಾತಾವರಣ ಇಲ್ಲಿದೆ. ಬೆಂಗ್ಳೂರಲ್ಲಿ ತುಂಬ ಡಿಸ್ಟರ್ಬೆನ್ಸ್‌ ಇತ್ತು. ಓದೋದು ಕಷ್ಟಆಗ್ತಿತ್ತು.

 

ಕೋವಿಡ್‌ ಭಯದಲ್ಲಿ ಫ್ಲೈಟ್‌ ಫುಲ್‌ ಜನ

ನಾನೊಬ್ಳೇ ಬೆಂಗಳೂರಿಂದ ಅಮೆರಿಕಾಗೆ ಬಂದೆ. ಸುಮಾರು ಒಂಭತ್ತೂವರೆ ಗಂಟೆಗೂ ಹೆಚ್ಚು ಮಾಸ್ಕ್‌ ಹಾಕ್ಕೊಂಡೇ ಇದ್ದದ್ದು ಹೊಸ ಅನುಭವ. ಜೀವಮಾನದಲ್ಲಿ ಯಾವತ್ತೂ ಇಷ್ಟುಹೊತ್ತು ಮಾಸ್ಕ್‌ ಹಾಕ್ಕೊಂಡಿದ್ದಿಲ್ಲ. ಸುಮಾರು ಹೊತ್ತು ಒದ್ದಾಡಿದೆ, ಆಮೇಲೆ ಅಡ್ಜೆಸ್ಟ್‌ ಆಯ್ತು. ಮತ್ತೊಂದು ವಿಷಯ ಅಂದರೆ ಜನ ಕೋವಿಡ್‌ ಬಗ್ಗೆ ಅಂಥಾ ಭಯದಲ್ಲಿದ್ದ ಹಾಗೆ ಕಾಣಲಿಲ್ಲ. ಏರ್‌ಪೋರ್ಟ್‌ನಲ್ಲಿ ಎಂದಿನ ರಶ್‌ ಇತ್ತು. ಆದರೆ ಎಲ್ಲರೂ ಮಾಸ್ಕ್‌ ಹಾಕ್ಕೊಂಡಿದ್ರು ಅನ್ನೋದಷ್ಟೇ ವ್ಯತ್ಯಾಸ. ನಮ್ಮ ಫ್ಲೈಟ್‌ ಅಂತೂ ಫುಲ್‌ ಆಗಿತ್ತು. ಇನ್ನೊಂದು ತಿಂಗಳಮಟ್ಟಿಗಂತೂ ಅಮೆರಿಕಾದಿಂದ ಹೊರಡೋ ಯೋಚನೆ ಇಲ್ಲ. ಆಮೇಲೆ ಗೊತ್ತಿಲ್ಲ.

ರ್‍ಯಾಂಪ್‌ ವಾಕ್‌ನಲ್ಲಿ ಸೊಂಟ ಬಳುಕಿಸಿದ ಚಾರ್ಮಿನಾರ್ ಬೆಡಗಿ 

ಶೂಟಿಂಗ್‌ ಕತೆ

ನಮ್ಮ ‘ಕರ್ವ 3’ ಟೀಂ ನವ್ರು ಒಂದು ನಿರ್ಧಾರಕ್ಕೆ ಬಂದಿದ್ದೀವಿ. ಥಿಯೇಟರ್‌ಗಳಲ್ಲಿ ಸಿನಿಮಾ ಪ್ರದರ್ಶನ ಶುರುವಾದ ಮೇಲೆ ಅದಕ್ಕೆ ಜನರ ಪ್ರತಿಕ್ರಿಯೆ ನೋಡ್ಕೊಂಡು ಶೂಟಿಂಗ್‌ಗೆ ಹೊರಡೋದು ಅಂತ. ಏಕೆಂದರೆ ಅಷ್ಟುಖರ್ಚು ಮಾಡಿ, ಸಿನಿಮಾ ಥಿಯೇಟರ್‌ನಲ್ಲಿ ಓಡಲಿಲ್ಲ ಅಂದರೆ ಅದು ಬಹಳ ದೊಡ್ಡ ನಷ್ಟ. ಅದಕ್ಕಿಂತಲೂ ಅಷ್ಟುಕಷ್ಟಪಟ್ಟು ಮಾಡಿದ ಸಿನಿಮಾ ಜನರನ್ನು ತಲುಪಿಲ್ಲ ಅಂದರೆ ನಮ್ಮ ಪ್ರಯತ್ನಗಳೆಲ್ಲ ನೀರಲ್ಲಿ ಹೋಮ ಮಾಡಿದ ಹಾಗಾಗುತ್ತೆ. ಹೀಗಾಗಿ ಸದ್ಯಕ್ಕೆ ಕಾದು ನೋಡುವ ತಂತ್ರಕ್ಕೆ ಬದ್ಧವಾಗಿದ್ದೇವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ