ಖ್ಯಾತ ಸಂಗೀತ ನಿರ್ದೇಶಕ ರಾಜನ್‌ ವಿಧಿವಶ

By Kannadaprabha News  |  First Published Oct 12, 2020, 8:28 AM IST

ಕನ್ನಡ, ತೆಲುಗು ಸೇರಿದಂತೆ ವಿವಿಧ ಭಾಷೆಗಳ ನೂರಾರು ಚಿತ್ರಗಳಿಗೆ ಸಂಗೀತ ನೀಡಿದ್ದ ಖ್ಯಾತ ಸಂಗೀತ ನಿರ್ದೇಶಕ ರಾಜನ್‌ (87) ಅವರು ವಯೋಸಹಜ ಕಾಯಿಲೆಯಿಂದ ಭಾನುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. 


ತನ್ಮೂಲಕ ಅವರು ತಮ್ಮ ಕುಟುಂಬ ಸದಸ್ಯರು ಹಾಗೂ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಅವರ ಅಗಲಿಕೆಗೆ ಚಿತ್ರರಂಗದ ಕಲಾವಿದರು ಹಾಗೂ ಅಭಿಮಾನಿ ಬಳಗ ಅವರ ಕುಟುಂಬ ವರ್ಗಕ್ಕೆ ಸಂತಾಪ ಸೂಚಿಸಿದ್ದಾರೆ.

"

Latest Videos

undefined

ಸ್ಯಾಂಡಲ್‌ವುಡ್‌ನಲ್ಲಿ ಖ್ಯಾತ ಸಂಗೀತ ನಿರ್ದೇಶಕ ಸೋದರರೆಂದೇ ರಾಜನ್‌ ಹಾಗೂ ನಾಗೇಂದ್ರ ಅವರು ಪ್ರಖ್ಯಾತರಾಗಿದ್ದರು. 2000ನೇ ಇಸವಿಯಲ್ಲೇ ರಾಜನ್‌ ಅವರ ಸೋದರ ನಾಗೇಂದ್ರ ಅವರು ಅಸುನೀಗಿದ್ದರು. ಇದೀಗ ರಾಜನ್‌ ಅವರು ಕೂಡ ಇಹಲೋಕ ಯಾತ್ರೆ ಮುಗಿಸಿದ್ದಾರೆ.

ಡಾ. ರಾಜ್ ಅಭಿನಯದ ಗಂಧದಗುಡಿ ನಿರ್ದೇಶಕ ವಿಜಯ್ ರೆಡ್ಡಿ ಇನ್ನಿಲ್ಲ

ಕನ್ನಡ ಚಿತ್ರರಂಗದ 200ಕ್ಕೂ ಹೆಚ್ಚು ಸಿನಿಮಾಗಳಿಗಷ್ಟೇ ಅಲ್ಲದೆ ತಮಿಳು, ತೆಲುಗು, ಮಲಯಾಳಂ, ಹಿಂದಿ, ತುಳು ಹಾಗೂ ಶ್ರೀಲಂಕಾದ ಸಿಂಹಳಿ ಭಾಷೆ ಸೇರಿದಂತೆ ಒಟ್ಟು 375ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನಿರ್ದೇಶನ ನೀಡಿದ ಹೆಗ್ಗಳಿಕೆ ರಾಜನ್‌ ಅವರದ್ದು. ಇತ್ತೀಚೆಗಷ್ಟೇ ಅನಾರೋಗ್ಯ ಕಾರಣದಿಂದಾಗಿ ನಿಧನರಾದ ಖ್ಯಾತ ಹಾಡುಗಾರ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರನ್ನು ಕನ್ನಡ ಚಿತ್ರರಂಗಕ್ಕೆ ಕರೆತರುವಲ್ಲಿ ರಾಜನ್‌ ನಾಗೇಂದ್ರ ಅವರ ಪಾತ್ರ ಹಿರಿದಾದುದು. ಇದೇ ಕಾರಣಕ್ಕೆ ಹಲವು ಕಾರ್ಯಕ್ರಮಗಳ ವೇದಿಕೆಗಳಲ್ಲಿ ಎಸ್‌ಪಿಬಿ ಅವರು, ರಾಜನ್‌ ಅವರನ್ನು ತಮ್ಮ ಸ್ವಂತ ಸೋದರ ಎಂದೇ ಸಭಿಕರಿಗೆ ಪರಿಚಯಿಸುತ್ತಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಕನ್ನಡದ ಲಕ್ಷ್ಮಿ ಎಂಬ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ರಾಜನ್‌ ನಾಗೇಂದ್ರ ಅವರು ಪದಾರ್ಪಣೆ ಮಾಡಿದರು. ಆ ನಂತರ ಸಂಚಲ ಕುಮಾರಿ, ರಾಜಲಕ್ಷ್ಮಿ, ಮುತ್ತೈದೆ ಭಾಗ್ಯ ಸೇರಿದಂತೆ ಹಲವು ಖ್ಯಾತ ಸಿನಿಮಾಗಳಿಗೆ ಸಂಗೀತ ನಿರ್ದೇಶನ ನೀಡಿದ್ದಾರೆ. ಆದರೆ, ವರನಟ ಡಾ. ರಾಜಕುಮಾರ್‌ ಅಭಿನಯದ ಗಂಧದ ಗುಡಿ ಸಿನಿಮಾ ಇವರನ್ನು ಕನ್ನಡ ಚಿತ್ರರಂಗದಲ್ಲಿ ಹೊಸ ಹೆಸರು ಮತ್ತು ಜನಪ್ರಿಯತೆಯನ್ನು ಗಳಿಸಿಕೊಟ್ಟಿತು.

ಖ್ಯಾತ ನಿರ್ದೇಶಕ ನಾಗೇಶ್ ಬಾಬ ನಿಧನ 

ಆ ನಂತರದ ದಿನಗಳಲ್ಲಿ ದೇವರಗುಡಿ, ಭಾಗ್ಯವಂತರು, 2 ಕನಸು, ನಾ ನಿನ್ನ ಮರೆಯಲಾರೆ, ನಾ ನಿನ್ನ ಬಿಡಲಾರೆ, ಹೊಂಬಿಸಿಲು, ಪಾವನ ಗಂಗಾ, ಗಿರಿ ಕನ್ಯೆ ಹೀಗೆ ಹಲವಾರು ಸಿನಿಮಾಗಳಿಗೂ ಸಂಗೀತ ನಿರ್ದೇಶನ ನೀಡಿದರು. 1970-80ರ ದಶಕದಲ್ಲಿ ತೆರೆಯ ಮೇಲೆ ಡಾ. ರಾಜಕುಮಾರ್‌, ತೆರೆಯ ಹಿಂದೆ ಸಾಹಿತಿ ಚಿ. ಉದಯ ಶಂಕರ್‌ ಹಾಗೂ ಸಂಗೀತ ನಿರ್ದೇಶಕರಾಗಿ ರಾಜನ್‌ ನಾಗೇಂದ್ರ ಜೋಡಿಯಿದ್ದರೆ, ಅದೊಂದು ಹಿಟ್‌ ಸಿನಿಮಾ ಎಂಬಷ್ಟರ ಮಟ್ಟಿಗೆ ನಾಣ್ಣುಡಿಯಿತ್ತು.

click me!