
ದಟ್ಟಗಳ್ಳಿಯ ಸೋಮನಾಥ ನಗರದ ಸ್ವಗೃಹದಲ್ಲಿ ರಮೇಶ್ ತಂದೆ ಸುಬ್ರಹ್ಮಣ್ಯ ಕೊನೆಯುಸಿರೆಳೆದರು. 40 ವರ್ಷಗಳ ಕಾಲ ಸರ್ಕಾರಿ ನೌಕರರಾಗಿ ಕಾರ್ಯ ನಿರ್ವಹಿಸಿದ್ದ ಅವರು ಕಲಾಪೋಷಕರಾಗಿದ್ದರು.
ಎಸ್‌ಪಿಬಿ ಧ್ವನಿ, ಸ್ವರ, ಆಲಾಪ, ಸಜ್ಜನಿಕೆ, ಬದುಕಿನ ಕ್ರಮ ಒಂದಿಡೀ ತಲೆಮಾರಿಗೇ ಮಾದರಿ:ಮಂಡ್ಯ ರಮೇಶ್
ಅವರು ಇಬ್ಬರು ಪುತ್ರರು, ಒಬ್ಬ ಪುತ್ರಿ, ಅಳಿಯ, ಸೊಸೆ, ಮೊಮ್ಮಕ್ಕಳನ್ನು ಅಗಲಿದ್ದಾರೆ. ನಟನಾ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ನಿವೃತ್ತಿ ಬಳಿಕ ಧಾರ್ಮಿಕ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮಂಡ್ಯದ ಬಡಗನಾಡು ಸಂಸ್ಥೆ, ಶಂಕರಮಠ, ಸಾಹಿತ್ಯ ಪರಿಷತ್ತು ಮುಂತಾದ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಮೃತರ ಅಂತ್ಯಕ್ರಿಯೆಯು ಚಾಮುಂಡಿಬೆಟ್ಟದ ತಪ್ಪಲಿನ ಮುಕ್ತಿಧಾಮದಲ್ಲಿ ನಡೆಯಿತು.
ತಂದೆಯ ಅಗಲಿಕೆ ಬಗ್ಗೆ ಮಂಡ್ಯ ರಮೇಶ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. 'ಎನ್. ಸುಬ್ರಹ್ಮಣ್ಯಂ, ತೊಂಬತ್ತು ವರ್ಷದ ತುಂಬು ಜೀವನ. ನವೆಂಬರ್ 13ರಂದು ಕುಟುಂಬದವರು ಹಾಗೂ ಬಂಧು ಬಾಂಧವರನ್ನು ಅಗಲಿದ್ದಾರೆ. ಸಂಜೆ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ಮುಕ್ತಿಧಾಮದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ,' ಎಂದು ಬರೆದಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.