
ಮೂರು ದಿನಗಳಿಂದ ಹೋಮ್ ಕ್ವಾರಂಟೈನ್ ಆಗಿರುವ ನಟ ಚಿರಂಜೀವಿ, ಅನುಮಾನದಿಂದ ಮತ್ತೊಮ್ಮೆ ಕೊರೋನಾ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಮೂರು ವಿಧವಾದ ಪರೀಕ್ಷೆ ಮಾಡಿಸಿಕೊಂಡರೂ ಸೋಂಕಿಲ್ಲ ಎಂದು ತೋರಿಸಿದ್ದು, ನೆಗಟಿವ್ ರಿಪೋರ್ಟ್ ಬಂದಿದೆ. ಈ ವಿಚಾರದ ಬಗ್ಗೆ ನಟ ಟ್ಟೀಟ್ ಮಾಡಿದ್ದಾರೆ.
ಯುವ ರಾಜ್‌ಕುಮಾರ್‌ಗೆ ಭೇಷ್ ಎಂದ ಚಿರಂಜೀವಿ; ಟೀಸರ್‌ಗೆ ಫಿದಾ!
'ಒಂದು ತಂಡದ ವೈದ್ಯರು ನನಗೆ ಮೂರು ರೀತಿಯ ಕೊರೋನಾ ಪರೀಕ್ಷೆ ಮಾಡಿದರು. ಮೂರು ವರದಿಯಲ್ಲಿಯೂ ನನಗೆ ನೆಗೆಟಿವ್ ಎಂದು ತಿಳಿದು ಬಂತು. ಮೊದಲ ಸಲ ಮಾಡಿಸಿರುವ RTPCR ಕಿಟ್ ಪರೀಕ್ಷೆ ದೊಡ್ಡ ಫ್ರಾಡ್. ಇಂಥ ಪರಿಸ್ಥಿತಿಯಲ್ಲಿ ನನ್ನ ಆರೋಗ್ಯದ ಬಗ್ಗೆ ಹಾಗೂ ಕುಟುಂಬದ ಬಗ್ಗೆ ಕಾಳಜಿ ವಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು,' ಎಂದು ಚಿರಂಜೀವಿ ಬರೆದಿದ್ದಾರೆ.
ಚಿರಂಜೀವಿ ಬಹು ನಿರೀಕ್ಷಿತ ಸಿನಿಮಾ ಆಚಾರ್ಯ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಮೇಳೆ ಮಾಡಿಸಿದ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ತಿಳಿದು ಬಂದಿತ್ತು. ಈ ಕಾರಣ ಚಿತ್ರೀಕರಣವನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿತ್ತು. ಈಗ ಹೊಸದಾಗಿ ಬಂದಿರುವ ವರದಿ ನೆಗೆಟಿವ್ ಆಗಿದ್ದರೂ, ಯಾವುದೇ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂದು ತಂಡ ನಿರ್ಧರಿಸಿದೆ. ಮುಂದಿನ ವರ್ಷ ರಿಲೀಸ್ ಆಗಬೇಕಿರುವ ಸಿನಿಮಾ ಇದಾಗಿದ್ದು, ಸಣ್ಣ-ಪುಟ್ಟ ಸನ್ನಿವೇಶಗಳ ಶೂಟಿಂಗ್ ಬಾಕಿ ಉಳಿದಿದೆ ಎನ್ನಲಾಗಿದೆ.
ಮೆಗಾ ಸ್ಟಾರ್ ಚಿರಂಜೀವಿಗೆ ಕೊರೋನಾ ಪಾಸಿಟಿವ್
ಇನ್ನು ಮುಂದಿನ ತಿಂಗಳು ಚಿರಂಜೀವಿ ಸಹೋದರು ನಾಗಬಾಬು ಪುತ್ರಿ ನಿಹಾರಿಕ ಮದುವೆ ನಡೆಯಲಿದ್ದು, ಇಡೀ ಕುಟುಂಬ ಉದಯ್‌ಪುರ್‌ಗೆ ಪಯಣ ಮಾಡಬೇಕಿತ್ತು. ಕೊರೋನಾ ಸೊಂಕಿನ ಭಯ ಇನ್ನಿಲ್ಲದ ಕಾರಣ ಎಲ್ಲವೂ ಸುಸುತ್ರವಾಗಿ ನಡೆಯಲಿದೆ ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.