ನಾಟಕಗಳಲ್ಲಿ ಅಭಿನಯಿಸುತ್ತ ಬೆಂಗಳೂರಿಗೆ ಬಂದ ಉಮಾಶ್ರೀ ನಟಿಯಾಗಿ ದಿನದಿನಕ್ಕೂ ಬೆಳೆದು ಪ್ರಸಿದ್ಧರಾದರು. ಸಿನಿಮಾಗಳಲ್ಲಿ ಕೂಡ ಪಾಲಿಗೆ ಬಂದ ಪಾತ್ರಗಳನ್ನು ಮಾಡಿಕೊಂಡು ಜನಮೆಚ್ಚುಗೆ ಪಡೆಯುತ್ತ, ದಿನದಿನಕ್ಕೂ ಖ್ಯಾತಿ ಉತ್ತುಂಗಕ್ಕೆ ಏರುತ್ತಲೇ ನಡೆದರು.
ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ನಟಿಯಲ್ಲೊಬ್ಬರು ಉಮಾಶ್ರೀ. ಎಂಥ ಪಾತ್ರವೇ ಇರಲಿ, ಉಮಾಶ್ರೀ ನಟನೆ ಹೇಗಿರುತ್ತದೆ ಎಂದರೆ ಬೇರೊಬ್ಬರಿಂದ ಅದು ಸಾಧ್ಯವೇ ಎಂದು ಸಂಶಯ ಮೂಡಿಸಿ ಮೂಗಿನ ಮೇಲೆ ಬೆರಳಿಡಿಸುವಷ್ಟು. ನಾಟಕವೇ ಇರಲಿ, ಸಿನಿಮಾ-ಸೀರಿಯಲ್‌ಗಳೇ ಇರಲಿ, ಉಮಾಶ್ರೀ ಇದ್ದಾರೆ ಎಂದರೆ ಅಲ್ಲೊಂದಿಷ್ಟು ಜನ ಅವರ ಅಭಿಮಾನಿಗಳು ಇದ್ದಾರೆ ಎಂದೇ ಅರ್ಥ. ಅಂಥ ಉಮಾಶ್ರೀ ಬಾಳಲ್ಲಿ ಅದೆಷ್ಟು ಗೋಳು ನೋಡಿದ್ದಾರೆ ಗೊತ್ತಾ?
ತುಮಕೂರು ಜಿಲ್ಲೆ, ತಿಪಟೂರಿನ ನೊಣವಿನಕೆರೆಯವರು ನಟಿ ಉಮಾಶ್ರೀ. ಅವರಿಗೆ ವಿಜಯಕುಮಾರ್ ಹಾಗೂ ಗಾಯತ್ರಿ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಈಗ ದೊಡ್ಡ ನಟಿ, ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ ಉಮಾಶ್ರೀ. ಆದರೆ, ಈ ಹಂತಕ್ಕೆ ಬರುವ ಮೊದಲು ಉಮಾಶ್ರೀ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಚಿಕ್ಕ ಮಗುವಾಗಿದ್ದಾಗಲೇ ತಾಯಿಯನ್ನು ಕಳೆದುಕೊಂಡು ದೊಡ್ಡಮ್ಮನ ಆಸರೆಯಲ್ಲಿ ಬೆಳದವರಂತೆ ಉಮಾಶ್ರೀ.
ನಾಟಕಗಳಲ್ಲಿ ಅಭಿನಯಿಸುತ್ತ ಬೆಂಗಳೂರಿಗೆ ಬಂದ ಉಮಾಶ್ರೀ ನಟಿಯಾಗಿ ದಿನದಿನಕ್ಕೂ ಬೆಳೆದು ಪ್ರಸಿದ್ಧರಾದರು. ಸಿನಿಮಾಗಳಲ್ಲಿ ಕೂಡ ಪಾಲಿಗೆ ಬಂದ ಪಾತ್ರಗಳನ್ನು ಮಾಡಿಕೊಂಡು ಜನಮೆಚ್ಚುಗೆ ಪಡೆಯುತ್ತ, ದಿನದಿನಕ್ಕೂ ಖ್ಯಾತಿ ಉತ್ತುಂಗಕ್ಕೆ ಏರುತ್ತಲೇ ನಡೆದರು. ಆದರೆ, ಚೆಂದದ ಹುಡಗನೊಬ್ಬನ ಬಣ್ಣದ ಮಾತಿಗೆ ಮರುಳಾಗಿ ಮದುವೆ ಆಗಿಬಿಟ್ಟರು ಎನ್ನಲಾಗಿದೆ. ಚೆಂದದ ಗಂಡನೊಟ್ಟಿಗೇ ಇದ್ದರೂ ಸುಖ ಸಂಸಾರ ಅವರಿಗೆ ಸಿಗಲಿಲ್ಲ.
ಸಂಗೀತಾ ಶೃಂಗೇರಿಯೇ ಬಿಗ್ ಬಾಸ್ ಕಪ್ ಗೆಲ್ಲೋದು; ಹಲವರ ಈ ಮಾತಿಗೆ ಏನಿದೆ ಹಿಂಟ್..!?
ಕಾರಣ, ನಟಿ ಉಮಾಶ್ರೀ ಅವರಿಗೆ ಗಂಡ ದಿನಾಲೂ ಕುಡಿದು ಬಂದು ಹೊಡೆಯುತ್ತಿದ್ದ ಎನ್ನಲಾಗಿದೆ. ಗಂಡನೊಟ್ಟಿಗೆ ಒಂದು ದಿನವೂ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಲೇ ಇಲ್ಲವಂತೆ. ಅಷ್ಟರಲ್ಲಾಗಲೇ ಎರಡು ತಿಂಗಳ ಬಸುರಿಯಾಗಿದ್ದ ಉಮಾಶ್ರೀಯವರನ್ನು ಬಿಟ್ಟುಹೋದ ಗಂಡ, ಬೇರೊಂದು ಹೆಂಗಸಿನ ಸಂಬಂಧ ಬೆಳೆಸಿ ಅವಳೊಟ್ಟಿಗೆ ಸಂಸಾರ ಶುರುವಿಟ್ಟುಕೊಂಡರಂತೆ. ಬಳಿಕ, ಉಮಾಶ್ರೀ ಒಬ್ಬಂಟಿಯಾಗಿ ಮಕ್ಕಳನ್ನುಸಾಕಿ, ಬೆಳಸಿ ಇಂದು ಈ ಹಂತದವರೆಗೆ ಬೆಳೆದು ನಿಂತಿದ್ದಾರೆ.
ಕೆಜಿಎಫ್-RRR-ಪುಷ್ಪಾ ಮೂವೀಸ್ ಈವೆಂಟ್ ಸಂಸ್ಥೆ 'ಶ್ರೇಯಸ್ ಮೀಡಿಯಾ ಬಲಗಾಲಿಟ್ಟು ಬೆಂಗಳೂರಿಗೆ ಬಂತು..!
ಲೆಜೆಂಡ್ ಕಲಾವಿದೆ ಪಟ್ಟವನ್ನು ಕೂಡ ಗಳಿಸಿರುವ ಉಮಾಶ್ರೀ 'ಶ್ರೇಷ್ಠ ನಟಿ' ನ್ಯಾಷನಲ್ ಅವಾರ್ಡ್ ಕೂಡ ಸಂದಿದೆ. ಶ್ರೇಷ್ಠ ಪೋಷಕ ನಟಿ ಪ್ರಶಸ್ತಿಯನ್ನು ಕೂಡ ನಟಿ ಉಮಾಶ್ರೀ ತಪ್ಪದಾಗಿಸಿಕೊಂಡಿದ್ದಾರೆ. ಆದರೆ, ಮದುವೆ ಮಾಡಿಕೊಂಡರೂ ಸಂಸಾರ ಮಾಡಲಾಗದ, ಮಕ್ಕಳಿದ್ದರೂ ಅಪ್ಪನಿಲ್ಲದೇ ಕಷ್ಟಪಟ್ಟು ಸಾಕಿದ ಉಮಾಶ್ರೀ ಗಟ್ಟಿತನ ನಿಜವಾಗಿಯೂ ಮಾದರಿ ಎನ್ನಬಹುದು. ಈಗಲೂ ಬಣ್ಣದ ಬದುಕಿನಲ್ಲಿ ಸಕ್ರಿಯರಾಗಿರುವ ನಟಿ ಉಮಾಶ್ರೀ ಇನ್ನೂ ಸಾಕಷ್ಟು ಎತ್ತರಕ್ಕೆ ಏರಬಲ್ಲರು. ಅವರಿಗೆ ಕಲೆ ಸಿದ್ಧಿಸಿದೆ, ಎಲ್ಲ ಯೋಗ್ಯತೆಗಳೂ ಇವೆ.
ಪುಟ್ಟಣ್ಣರ ಪತ್ನಿಯಾಗಿದ್ದ ನಟಿ ಆರತಿ ಅಮೆರಿಕಾದಲ್ಲಿ ಏನ್ಮಾಡ್ತಿದಾರೆ; ಕೋಲಾರಕ್ಕೆ ಯಾಕೆ ಬರ್ತಾರೆ!?