ಕನ್ನಡ ಚಿತ್ರರಂಗದಲ್ಲಿ ‘ರಂಗಿತರಂಗ’ ಚಿತ್ರ ಮಾಡಿದ ಸಾಧನೆ ದೊಡ್ಡದು. 2015 ಜುಲೈ 3ರಂದು ಬಿಡುಗಡೆಯಾಗಿದ್ದ ಈ ಸಿನಿಮಾ ಅಂದು ಟಾಕ್ ಆಫ್ ದಿ ಸ್ಟೇಟ್ ಎಂಬಂತಿತ್ತು. ರಂಗಿತರಂಗ ಬಿಡುಗಡೆಯಾಗಿ 10 ವರ್ಷಕ್ಕೆ ಸಮೀಪವಾಗಿದೆ.
ಬಹುಭಾಷಾ ನಟ ಸಾಯಿಕುಮಾರ್ ಶಿವಮೊಗ್ಗ ತೀರ್ಥಹಳ್ಳಿಯಲ್ಲಿರುವ ಕುವೆಂಪು ಸ್ಮಾರಕ 'ಕವಿ ಶೈಲ'ಕ್ಕೆ ಭೇಟಿ ನೀಡಿದ್ದಾರೆ. 'ಕವಿ ಶೈಲದ ಅನುಭವವನ್ನು ಕೇವಲ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ' ಎಂಬ ಅಭಿಪ್ರಾಯವನ್ನು ಭೇಟಿ ಬಳಿಕ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ. ನಟ ಸಾಯಿಕುಮಾರ್ ಅವರ ಈ ಪೋಸ್ಟ್ ಈಗ ವೈರಲ್ ಆಗುತ್ತಿದೆ.
ಕನ್ನಡ ಸೇರಿದಂತೆ ತೆಲುಗು, ತಮಿಳು ಸಿನಿಮಾಗಳಲ್ಲಿ ಕೂಡ ನಟ ಸಾಯಿಕುಮಾರ್ ಕಾಣಿಸಿಕೊಂಡಿದ್ದಾರೆ. ಅಗ್ನಿ, ರಂಗಿತರಂಗ ಸೇರಿದಂತೆ ಕನ್ನಡದಲ್ಲಿ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಸಾಯಿಕುಮಾರ್, ತಮ್ಮ ಖಡಕ್ ಧ್ವನಿ ಹಾಗೂ ವಿಭಿನ್ನ ಮ್ಯಾನರಿಸಂಗೆ ಹೆಸರಾದವರು. ಹೆಚ್ಚಾಗಿ ಪೊಲೀಸ್ ಕಥೆಗಳ ಸಿನಿಮಾಗಳು ಮತ್ತು ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ನಟ ಸಾಯಿಕುಮಾರ್ ತೆಲಗಿನಲ್ಲಿ ಕೂಡ ಸ್ಟಾರ್ ನಟರು.
undefined
ಎಂಗೇಜ್ಮೆಂಟ್ ಆಗಿರುವ ಗರ್ಲ್, ಸಾಯಲು ಹೊರಟಿರುವ ಬಾಯ್ ಮಧ್ಯೆ ಯಾಕೆ ಹುಟ್ಕೊಂಡ್ತು ಲವ್..!
ಇತ್ತೀಚೆಗೆ ಕನ್ನಡ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರದ ನಟ ಸಾಯಿಕುಮಾರ್ ಇದೀಗ ಮತ್ತೆ ರಂಗಿ ತರಂಗ ನಾಯಕ ನಟ ನಿರೂಪ್ ಭಂಡಾರಿ ಜತೆಯಲ್ಲಿ ಹೊಸದೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಚಿನ್ ವಾಲಿ ನಿರ್ದೇಶನದ ಈ ಚಿತ್ರವು ಫೆಬ್ರವರಿಯಲ್ಲಿ (ಫೆಬ್ರವರಿ 2024) ಶೂಟಿಂಗ್ ಶುರುಮಾಡಲಿದೆಯಂತೆ. ಇತ್ತೀಚೆಗಷ್ಟೇ ಘೋಷಣೆಯಾಗಿರುವ ಈ ಚಿತ್ರದ ಬಗ್ಗೆ ಈಗ ಬಹಳಷ್ಟು ನಿರೀಕ್ಷೆ ಮೂಡಿದೆ. ಕಾರಣ, 2015ರಲ್ಲಿ ಬಿಡುಗಡೆಯಾಗಿದ್ದ ರಂಗಿತರಂಗ' ಚಿತ್ರವು ಸೂಪರ್ ಹಿಟ್ ಆಗಿತ್ತು.
ನಾನು ಕೈ ಬಿಟ್ಟಾಗ ದೇವರು ಕೈ ಹಿಡಿದಿದ್ದಾನೆ, ಇದು ದೈವ ಪ್ರೇರಣೆ; ಗುಟ್ಟು ಹೇಳ್ಬಿಟ್ರಾ ವಿದ್ಯಾ ಬಾಲನ್!
ಕನ್ನಡ ಚಿತ್ರರಂಗದಲ್ಲಿ ‘ರಂಗಿತರಂಗ’ ಚಿತ್ರ ಮಾಡಿದ ಸಾಧನೆ ದೊಡ್ಡದು. 2015 ಜುಲೈ 3ರಂದು ಬಿಡುಗಡೆಯಾಗಿದ್ದ ಈ ಸಿನಿಮಾ ಅಂದು ಟಾಕ್ ಆಫ್ ದಿ ಸ್ಟೇಟ್ ಎಂಬಂತಿತ್ತು. ರಂಗಿತರಂಗ ಬಿಡುಗಡೆಯಾಗಿ 10 ವರ್ಷಕ್ಕೆ ಸಮೀಪವಾಗಿದೆ. ಬಾಹುಬಲಿಯಂತಹ ದೊಡ್ಡ ಸಿನಿಮಾದ ಎದುರು ಗೆದ್ದು ಬೀಗಿದ್ದ ಈ ಸಿನಿಮಾದಲ್ಲಿ, ನಾಯಕನಾಗಿ ಅಮೋಘವಾಗಿ ನಟಿಸಿದ್ದ ನಿರೂಪ್ ಭಂಡಾರಿ ಎದುರು ಖಳನಾಯಕನಾಗಿ ಸಾಯಿಕುಮಾರ್ ಅತ್ಯದ್ಭುತ ಪ್ರದರ್ಶನ ತೋರಿಸಿದ್ದರು.
ಜನುಮದ ಜೋಡಿ 'ಕನಕ' ಯಾಕೆ ಕೈ ಸುಟ್ಕೊಂಡ್ರು; ಎಲ್ಲಿದಾರೆ ಶಿಲ್ಪಾ, ಏನ್ಮಾಡ್ತಿದಾರೆ..?!
ಸಾಯಿಕುಮಾರ್ ಅವರು ನಿರೂಪ್ ಅವರ ತಂದೆ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಈ ಚಿತ್ರದ ಶೀರ್ಷಿಕೆ ಮತ್ತು ಪರ್ಸ್ಟ್ ಲುಕ್ ಫೆಬ್ರವರಿ 6ಕ್ಕೆ ಅನಾವರಣಗೊಳ್ಳುತ್ತಿದೆ. ಈ ಸುದ್ದಿ ಸ್ಯಾಂಡಲ್‌ವುಡ್ ಅಂಗಳದಲ್ಲಿ ಮತ್ತೆ ಮಿಂಚಿನ ಸಂಚಲನ ಮಾಡಲಿರುವುದಂತೂ ಪಕ್ಕಾ ಎನ್ನಬಹುದು. ಏಕೆಂದರೆ, ಅಂದು ರಂಗಿ ತರಂಗ ಮಾಡಿದ್ದ ಮೋಡಿಯನ್ನು ಯಾರು ಕೂಡ ಯಾವತ್ತೂ ಮರೆಯಲಾರರು.