ಸೋನು ಗೌಡ ನೋಡ್ತಿದ್ರೆ ಸನ್ನಿ ಲಿಯೋನ್‌ ನೋಡ್ದಂಗೆ ಆಗುತ್ತೆ; ನೆಟ್ಟಿಗರಿಂದ ಮೆಚ್ಚುಗೆ

By Vaishnavi Chandrashekar  |  First Published Jan 27, 2024, 5:08 PM IST

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಯ್ತು ಸೋನು ಗೌಡ ಫೋಟೋ. ದತ್ತು ತೆಗೆದುಕೊಳ್ಳಲು ನೋ ಎಂದ ಪೋಷಕರು. 
 


ಟಿಕ್ ಟಾಕ್‌, ಡಬ್‌ಸ್ಮ್ಯಾಶ್‌, ರೀಲ್ಸ್‌ ಮತ್ತು ಯುಟ್ಯೂಬ್ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ಸೋನು ಗೌಡ ಇತ್ತೀಚಿಗೆ ಹೆಣ್ಣು ಮಗುವನ್ನು ದತ್ತು ತೆಗೆದುಕೊಳ್ಳಲು ಆಸ್ತಿ ತೋರಿಸಿದ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗುರಿ ಆಯ್ತು. ಅಲ್ಲದೆ ಪದೇ ಪದೇ ಆ ಪುಟ್ಟ ಹುಡುಗಿ ಜೊತೆ ವಿಡಿಯೋ ಮಾಡುತ್ತಿರುವುದಕ್ಕೆ ನೆಟ್ಟಿಗರು ಗರಂ ಕೂಡ ಆಗಿದ್ದರು. ಇಷ್ಟೆಲ್ಲಾ ನಡೆಯುತ್ತಿದ್ದರೂ ಯಾವುದಕ್ಕೂ ಕೇರ್ ಮಾಡದೆ ಸೋನು ಆ ಬಾಲಕಿ ಜೊತೆ ಫೋಟೋ ಮತ್ತು ವಿಡಿಯೋ ಅಪ್ಲೋಡ್ ಮಾಡುತ್ತಿದ್ದಾರೆ. ಇದಕ್ಕೆ ನೆಟ್ಟಗರು ಏನೆಂದು ಹೇಳಿದ್ದಾರೆ ಗೊತ್ತಾ? 

ಹೌದು! ಬಾಲಿವುಡ್ ಖ್ಯಾತ ನಟಿ ಸನ್ನಿ ಲಿಯೋನಿ ಜೀವನದಲ್ಲಿ ಸೆಟಲ್ ಅಗಿ ಮದುವೆ ಮಾಡಿಕೊಂಡು ಮೂರು ಮಕ್ಕಳನ್ನು ದತ್ತು ಪಡೆದರು. ಇಬ್ಬರು ಫಾರಿನ್‌ ಮಕ್ಕಳನ್ನು ದತ್ತು ತೆಗೆದುಕೊಂಡರೆ ಒಬ್ಬಳನ್ನು ಭಾರತದಲ್ಲಿ ದತ್ತು ತೆಗೆದುಕೊಂಡಿದ್ದಾರೆ. ಇಬ್ಬರು ಬೆಳ್ಳಗಿದ್ದಾರೆ ಒಬ್ಬಳು ಕಪ್ಪಿದ್ದಾಳೆ ಎಂದು ಅನೇಕರು ಟೀಕೆ ಮಾಡುತ್ತಾರೆ ಆದರೂ ಸನ್ನಿ ಕೇರ್ ಮಾಡದೆ ಮೂವರು ಮಕ್ಕಳಿಗೆ ಸಮವಾಗಿ ಪ್ರೀತಿ ಕೊಟ್ಟು ನೋಡಿಕೊಂಡಿದ್ದಾರೆ. ಈಗ ಸೋನು ಗೌಡ ಕೂಡ ಗಾರೆ ಕೆಲಸ ಮಾಡುವ ಹುಡುಗಿಯನ್ನು ದತ್ತು ತೆಗೆದುಕೊಳ್ಳಬೇಕು ಅನ್ನೋ ಆಸೆ ಹೇಳಿಕೊಂಡ ಕಾರಣ ನೆಟ್ಟಿಗರು ಸನ್ನಿ ಲಿಯೋನ್‌ಗೆ ಹೋಲಿಸುತ್ತಿದ್ದಾರೆ. ಯಾವ ಜಾತಿ ಭೇದ ಭಾವ ಇಲ್ಲದೆ ಪ್ರೀತಿ ಕೊಡುವುದನ್ನು ನೋಡಿ ಮೆಚ್ಚಿದ್ದಾರೆ. ಅಲ್ಲದೆ ಆಕೆ ಕಪ್ಪಿದ್ದಾಳೆ ಚೆನ್ನಾಗಿಲ್ಲ ಎಂದು ಸೋನು ಯಾವ ಕ್ಷಣದಲ್ಲೂ ಆಕೆಯನ್ನು ಬದಲಾಯಿಸುವ ಪ್ರಯತ್ನ ಮಾಡಿಲ್ಲ. 

Tap to resize

Latest Videos

ಗಾರೆ ಕೆಲಸದ ಹುಡುಗಿಯನ್ನು ದತ್ತು ತೆಗೆದುಕೊಳ್ಳಲು ಮುಂದಾದ ಟಿಕ್‌ಟಾಕ್ ಸೋನು ಗೌಡ?

ಆ ಪುಟ್ಟ ಹುಡುಗಿ ಹೆಸರು ಸೇವಂತಿ. ಸೋನು ಗೌಡ ಮನೆ ಬಳಿ ಕಟ್ಟುತ್ತಿರುವ ಮನೆಯ ಹತ್ತಿರವೇ ಇವರ ಟೆಂಟ್ ಇರುವುದು. ಕೆಲವು ದಿನಗಳಲ್ಲಿ ಈ ಹುಡುಗಿ ತಮ್ಮ ಊರಿಗೆ ಹಿಂತಿರುಗುತ್ತಾರೆ, ಹೀಗಾಗಿ ನಿನಗೆ ಏನೆಲ್ಲಾ ಆಸೆ ಇದೆ ಎಂದು ಕೇಳಿದ್ದಾಗ ದೊಡ್ಡ ಲಿಸ್ಟ್‌ ಕೊಡುತ್ತಾಳೆ. ಇದನ್ನು ನೋಡಿ ಅಯ್ಯೋ ಇಷ್ಟೋಂದಾ ಅಂತ ತಪ್ಪು ತಿಳಿದುಕೊಳ್ಳದೆ ಖುಷಿಯಿಂದ ಸೋನು ಸಹಾಯ ಮಾಡುತ್ತಾಳೆ. ಬಟ್ಟೆ, ಚಪ್ಪಲಿ ಮತ್ತು ಮೇಕಪ್ ಕೊಡಿಸುತ್ತಾಳೆ. ಸೇವಂತಿಗೆ ಮೇಕಪ್ ಮಾಡಿಕೊಳ್ಳುವುದು ಇಷ್ಟ.. ಮೇಕಪ್ ಮಾಡುತ್ತಾರೆ, ಕೂದಲು ಸ್ಟ್ರೇಟ್ ಮಾಡಿಕೊಳ್ಳುವುದು ಇಷ್ಟ ಅದನ್ನೂ ಮಾಡುತ್ತಾರೆ. ಹೀಗೆ ಆಕೆ ಇಷ್ಟ ಪಡುವ ಊಟ ಮತ್ತು ತಿಂಡಿ ಪ್ರತಿಯೊಂದು ಕೊಡಿಸಿ ಮಾಡುತ್ತಾವ ಸೋನು ನೋಡಿ ನೆಟ್ಟಿಗರು ಮೆಚ್ಚಿದ್ದಾರೆ. ಪ್ರತಿ ಸಲ ನೆಗೆಟಿವ್ ಆಗಿ ಟ್ರೋಲ್ ಆಗುವ ಸೋನು ಈ ಸಲ ಪಾಟಿಸಿವ್ ಆಗಿ ಟ್ರೋಲ್ ಆಗುತ್ತಿದ್ದಾರೆ. 

ನೀಲಿ ಸೀರೆಯುಟ್ಟು ಚಾಮುಂಡಿ ಬೆಟ್ಟದಲ್ಲಿ ಪೋಸ್ ಕೊಟ್ಟ ಸೋನು ಗೌಡ: ನಿಮ್ದು ಮಗುವಿನಂತ ಮನಸ್ಸು ಎಂದ ಫ್ಯಾನ್ಸ್‌!

click me!