ಅವ್ರು ಕೊಡೋ ಪೋಸ್, ನಾವೇ ಗ್ರೇಟು ಅನ್ನೋ ಫೀಲಿಂಗ್‌ಗೆ ಕೌಂಟರ್..;ಕೆಜಿಎಫ್ ಸ್ಟಾರ್ ಯಶ್!

Published : Jun 28, 2024, 08:28 PM ISTUpdated : Jun 30, 2024, 01:53 PM IST
ಅವ್ರು ಕೊಡೋ ಪೋಸ್, ನಾವೇ ಗ್ರೇಟು ಅನ್ನೋ ಫೀಲಿಂಗ್‌ಗೆ ಕೌಂಟರ್..;ಕೆಜಿಎಫ್ ಸ್ಟಾರ್ ಯಶ್!

ಸಾರಾಂಶ

ಸೋಲು ಎಂಬ ಪ್ರಶ್ನೆಗೆ ಅದು ನನಗೆ ಗೊತ್ತಿಲ್ಲ, ಏಕೆಂದರೆ ಆ ನೆಗೆಟಿವ್ ಸಂಗತೀನ ನಾನು ಸೈಡ್‌ಗೆ ಹಾಕಿದೀನಿ, ಅದು ಏನು ಅಂತ ಗೊತ್ತಿಲ್ಲ...

ಕೆಜಿಎಫ್ (KGF) ನಟ, ಕನ್ನಡದ ರಾಕಿಂಗ್ ಸ್ಟಾರ್ ಯಶ್ (Rocking Star Yash) ಮಾತನಾಡಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಆ್ಯಂಕರ್​ ಅನುಶ್ರೀ ಹಾಗೂ ನಟ ಯಶ್ ಅವರಿಬ್ಬರೂ ಒಂದು ವೇದಿಕೆಯ ಮೇಲೆ ಮಾತನಾಡಿರುವ ಹಳೆಯ ವೀಡಿಯೋ ಅದು. ಆದರೆ, ವೀಡಯೋ ಹಳೆಯದಾಗಿದ್ದರೂ ಅದು ಎಲ್ಲಾ ಕಾಲಕ್ಕೂ ಸಲ್ಲುವಂತಹ, ಎಲ್ಲರಿಗೂ ಸ್ಪೂರ್ತಿ ನೀಡುವಂಥ ವೀಡಿಯೋ ಎನ್ನಬಹುದು. ನಿಜವಾಗಿಯೂ ಆ ವೀಡಿಯೋದಲ್ಲಿ ನಟ ಯಶ್ ಮಾತನಾಡಿರುವ ರೀತಿ ಎಲ್ಲರಿಗೂ ಇಷ್ಟವಾಗುವಂತಿದೆ ಎನ್ನಬಹುದು. 

ನಟ ಯಶ್ ಅಲ್ಲಿ ಅದೇನು ಹೇಳಿದ್ದಾರೆ ಗೊತ್ತಾ? ಆ್ಯಂಕರ್​ ಅನುಶ್ರೀ ಅವರು ನಟ ಯಶ್ ಅವರಿಗೆ ಕೆಲವು ಪ್ರಶ್ನೆಗಳನ್ನುಕೇಳಿದ್ದಾರೆ. ಅದಕ್ಕೆ ರಾಕಿಂಗ್ ಸ್ಟಾರ್ ತಮಗೆ ಅನ್ನಿಸಿದಂತೆ ಉತ್ತರ ಕೊಟ್ಟಿದ್ದಾರೆ. ಅನುಶ್ರೀ ಕೇಳಿದ ಪ್ರತಿಯೊಂದು ಪ್ರಶ್ನೆಗೆ ಯಶ್ ಕೊಟ್ಟ ಉತ್ತರಕ್ಕೆ ಅಲ್ಲಿದ್ದ ಪ್ರೇಕ್ಷಕರು ಹುಚ್ಚೆದ್ದು ಕುಣಿದಿದ್ದಾರೆ, ಕೇಕೆ ಹಾಕಿದ್ದಾರೆ, ಯಶ್ ಮೆಂಟಾಲಿಟಿ, ಮೆಚ್ಯೂರಿಟಿಗೆ ಕಂಡು ಅಚ್ಚರಿ ಪಟ್ಟಿದ್ದಾರೆ, ತಲೆದೂಗಿದ್ದಾರೆ. 

ಜೈಲಿಂದ ಹೊರಬಂದ ಬಳಿಕ ಮತ್ತೆಂದೂ ಡ್ರಿಂಕ್ಸ್ ಮಾಡ್ಬೇಡ; ನಟ ದರ್ಶನ್‌ಗೆ ಅಗ್ನಿ ಶ್ರೀಧರ್ ಸಲಹೆ!

ನಟಿ, ನಿರೂಪಕಿ ಅನುಶ್ರೀ ಪ್ರಶ್ನೆ ಕೇಳುತ್ತ ಹೋಗಿದ್ದಾರೆ. ನಟ ಯಶ್ ಉತ್ತರಿಸುತ್ತ ಹೋಗಿದ್ದಾರೆ. ಅನುಶ್ರೀ ಅವರು 'ಗೆಲುವು' ಅಂತ ಕೇಳಲು ನಟ ಯಶ್- ಗೆಲುವು ಅನ್ನೋದು ಸಿಕ್ಕೇ ಸಿಗುತ್ತೆ, ಎಲ್ಲರಿಗೂ ಗೆಲುವು ಅನ್ನೋದ್ನ ಪಡಿಬೇಕು ಅನ್ನೋ ಆಸೆ ಇದ್ದೇ ಇರುತ್ತೆ. ಆದ್ರೆ, ಆ ಗೆಲುವನ್ನು ಪಡೆಯೋಕೆ ಬೇಕಾದಂಥ ಪೂರ್ವ ಸಿದ್ಧತೆ ಹಾಗೂ ಕೆಲಸ, ಪರಿಶ್ರಮ ಪಡೋಕೆ ಎಲ್ಲರೂ ರೆಡಿ ಇರ್ಬೇಕು. ಇದ್ನ ತಿಳ್ಕೊಂಡು ಅದ್ರ ಹಿಂದೆ ಹೋದ್ರೆ ಗೆಲುವು ತಾನಾಗಿಯೇ ಸಿಗುತ್ತೆ ಅನ್ನೋದು ನನ್ ನಂಬಿಕೆ. 

ಲೇಟ್‌ ಆಗಿ ಗುಟ್ಟು ರಟ್ಟಾಗಿದೆ, ಯಾರೂ ಮಾಡದ ದಾಖಲೆ ನಟ ವಿಷ್ಣುವರ್ಧನ್ ಹೆಸರಲ್ಲಿದೆ..!

ಸೋಲು ಎಂಬ ಪ್ರಶ್ನೆಗೆ ಅದು ನನಗೆ ಗೊತ್ತಿಲ್ಲ, ಏಕೆಂದರೆ ಆ ನೆಗೆಟಿವ್ ಸಂಗತೀನ ನಾನು ಸೈಡ್‌ಗೆ ಹಾಕಿದೀನಿ, ಅದು ಏನು ಅಂತ ಗೊತ್ತಿಲ್ಲ. ಕಾಂಪಿಟೀಶನ್ ಎಂಬ ಪ್ರಶ್ನೆಗೆ ಉತ್ತರ ಅದು ಇರ್ಬೇಕು, ಅದು ಇಲ್ಲ ಅಂದ್ರೆ ಲೈಫಲ್ಲಿ ಏನೂ ಮಾಡೋಕೆ ಆಗಲ್ಲ. ನಾನು ನನ್ ಲೈಫಲ್ಲಿ ತುಂಬಾ ರೆಸ್ಪೆಕ್ಟ್ ಮಾಡೋದು ನನ್ ಕಾಂಪಿಟೀಟರ್ಸ್‌. ಯಾಕಂದ್ರೆ, ಅವ್ರು ನಮ್ಮೊಳಗೆ ಇರೋ ಬೆಸ್ಟ್‌ ಅನ್ನು ಹೊರಗೆ ತರ್ತಾರೆ. ಯಾಕೆ ಅಂದ್ರೆ, ಅವ್ರು ಕೊಡೋ ಫೋಸು, ನಾವು ಗ್ರೇಟು ಅನ್ನೋ ಫೀಲಿಂಗ್‌ಗೆ ನಾವು ಕೋಡೋ ಕೌಂಟರ್‌ಗಳಿಂದ ಇನ್ನೂ ಸ್ವಲ್ಪ ಹೆಚ್ಚು ಒಳ್ಳೇದು ಹೊರಗಡೆ ಬರುತ್ತೆ. ಅದರಿಂದ ಅವ್ರನ್ನ ಗೌರವಿಸ್ಬೇಕು. ಐ ಲವ್ ದೆಮ್' ಎಂದಿದ್ದಾರೆ ನಟ ಯಶ್. 

ನಾನು ನಿವಿ ವರ್ಷದಿಂದ ಬೇರೆ ಇದ್ವಿ, ಪರ್ಸನಲ್ ವಿಷ್ಯಕ್ಕೆ ಪಬ್ಲಿಕ್‌ನಲ್ಲಿ ಉತ್ತರ ಕೊಡ್ಬೇಕಾಯ್ತು; ಚಂದನ್ ಶೆಟ್ಟಿ

ಇನ್ನು ಆ್ಯಂಕರ್​ ಅನುಶ್ರೀ ಬಗ್ಗೆ ಏನನ್ನೂ ಹೇಳಬೇಕಾಗಿಲ್ಲ. ಅವರೊಂದು ಸೂಪರ್ 'ಮಾತಿನ ಬೊಂಬೆ' ಇದ್ದಂತೆ ಎಂಬುದು ಬಹಳಷ್ಟು ಜನರು ಹೇಳುವ ಮಾತು. ಸ್ಯಾಂಡಲ್‌ವುಡ್ ಹಾಗು ಕಿರುತೆರೆಯ ಹಲವಾರು ಕಲಾವಿದರನ್ನು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಅನುಶ್ರೀ ಸಂದರ್ಶನ ಮಾಡುತ್ತಾರೆ. ಅಲ್ಲಿ ಹಲವರನ್ನು ಕಾಲೆಳೆದು ನಕ್ಕುನಗಿಸುತ್ತಾರೆ, ಅವರಿಕೆ ಪ್ರಶ್ನೆ ಕೇಳಿ ಉತ್ತರ ಪಡೆದು ಅದನ್ನೆಲ್ಲ ಜಗತ್ತಿನ ತುಂಬಾ ಹರಿದಾಡಲು ಬಿಟ್ಟು ಎಂಜಾಯ್ ಮಾಡುತ್ತಾರೆ, ಅದು ಅನುಶ್ರೀ ಕೆಲಸವೋ ಹವ್ಯಾಸವೋ ಗೊತ್ತಿಲ್ಲ, ಒಟ್ಟಿನಲ್ಲಿ ಅದು ಆಗುತ್ತೆ. 

ಎತ್ತಿ ಆಡಿಸಿದ ಇದೇ ಕೈಗಳಿಂದ ನಟಿ ಅಮೂಲ್ಯ ಬಾಡಿ ಟಚ್ ಮಾಡಲಾರೆ; ನಟ ದರ್ಶನ್!

ಅಂದಹಾಗೆ, ಕನ್ನಡದ ನಟ ಯಶ್ ಅವರು ಸದ್ಯ ಬಾಲಿವುಡ್‌ನ ರಾಮಾಯಣ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಜತೆಗೆ, ಈ ಸಿನಿಮಾದ ನಿರ್ಮಾಣದಲ್ಲಿ ಯಶ್ ಪಾಲುದಾರಿಕೆ ಕೂಡ ಹೊಂದಿದ್ದಾರೆ. ಅಷ್ಟೇ ಅಲ್ಲ, ಮತ್ತೊಂದು ಪ್ಯಾನ್ ವರ್ಲ್ಡ್‌ ಸಿನಿಮಾ 'ಟಾಕ್ಸಿಕ್‌'ನಲ್ಲೂ ನಟ ಯಶ್ ನಟಿಸುತ್ತಿದ್ದಾರೆ. ಗೀತೂ ಮೋಹನ್‌ ದಾಸ್ ನಿರ್ದೇಶನದ ಟಾಕ್ಸಿಕ್ ಚಿತ್ರದಲ್ಲಿ ಯಶ್ ಎದುರು ನಾಯಕಿಯಾಗಿ ಸಾಯಿ ಪಲ್ಲವಿ ಹೆಸರು ಕೇಳಿ ಬರುತ್ತಿದೆ. ಆದರೆ, ರಾಮಾಯಣ ಚಿತ್ರದಲ್ಲಿ, ರಾಮನಾಗಿ ನಟಿಸುತ್ತಿರುವ ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಅವರಿಗೆ ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ.

'ಎಲ್ಲರ ಮನೆ ದೋಸೆನೂ'ನಲ್ಲಿ ದರ್ಶನ್ ಜೊತೆಗಿದ್ದೆ, ನಾಚಿಕೆ ಸ್ವಭಾವದ ವ್ಯಕ್ತಿ ಅವ್ರು: ಭಾವನಾ ರಾಮಣ್ಣ ಗರಂ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12 Winner: 6 ತಿಂಗಳ ಹಿಂದೆ ಕಾಸಿಲ್ಲ- ಗಿಲ್ಲಿ ನಟನಿಗೆ ಈಗ ಹಣದ ಹೊಳೆ; ಕಿಚ್ಚ ಸುದೀಪ್‌ ಕೊಟ್ಟಿದ್ದೆಷ್ಟು?
ಭಾರತದ Bigg Boss ಇತಿಹಾಸದಲ್ಲೇ ದಾಖಲೆ ಸೃಷ್ಟಿಸಿದ ನಟ ಕಿಚ್ಚ ಸುದೀಪ್​- ಏನಿದು ರೆಕಾರ್ಡ್​?