'ಆ ದಿನಗಳು' ಖ್ಯಾತಿಯ ಅಗ್ನಿ ಶ್ರೀಧರ್ ಅವರು ಸಿನಿಮಾ ಉದ್ಯಮದಲ್ಲೂ ಸಕ್ರಿಯರಾಗಿದ್ದು, ನಟ ದರ್ಶನ್ ಘಟನೆ ಬಗ್ಗೆ ತೀವ್ರ ನೋವು ತೋಡಿಕೊಂಡಿದ್ದಾರೆ. 'ಕುಡಿತ ಮತ್ತು ಕೆಟ್ಟ ಹವ್ಯಾಸಗಳಿಗೆ ಬಿದ್ದು ನಟ ದರ್ಶನ್ ಈ ಸ್ಥಿತಿಗೆ ತಲುಪಿದ್ದಾರೆ'..
ಹಿರಿಯ ಬರಹಗಾರ ಅಗ್ನಿ ಶ್ರೀಧರ್ (Agni Shridhar) ಅವರು ಕನ್ನಡದ ಸ್ಟಾರ್ ನಟ ದರ್ಶನ್ ಬಗ್ಗೆ ಮಾತನಾಡಿದ್ದಾರೆ. ಅವರು ಮಾತನಾಡಿರುವ ವೀಡಿಯೋ ಕ್ಲಿಪ್ಪಿಂಗ್ ಒಂದು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗ್ತಿದೆ. ಅದ್ರಲ್ಲಿ ಅಗ್ನಿ ಶ್ರೀದರ್ ಅವ್ರು 'ಟಿವಿ ಹಾಕಿದ್ರು, ನೋಡ್ತೀನಿ, ನಟ ದರ್ಶನ್‌ನಿಂದ ಕೊಲೆ.. ನಂಗೆ ಸಿಟ್ಟು ಬರೋದಿಲ್ಲ, ಅಥವಾ ಇದೇನಪ್ಪಾ ಬಿಡು ಅಂತ ಅನ್ನಿಸೋದಿಲ್ಲ, ಸಂಕಟ ಆಗುತ್ತೆ.. ಯಾಕಂದ್ರೆ, ಡ್ರಿಂಕ್ಸ್ ಬಿಟ್ಬಿಡೋ ಅಂತ ಹೇಳಿದ್ದೆ.. ಆಗೊಮ್ಮೆ ಹೊಟೆಲ್ ಸಪ್ಲಾಯರ್ ಮೇಲೆ ಕೈ ಮಾಡಿ ಗಲಾಟೆ ಆಗಿತ್ತು. ಆ ಟೈಮ್‌ಗೆ ಸಿಕ್ಕಾಗ ಹೇಳಿದ್ದೆ, ಡ್ರಿಂಕ್ಸ್ ಬಿಟ್ಬಿಡೋ ಅಂತ!
ಹತ್ತು ದಿನ ಬಿಟ್ಟಿದ್ದ, ನಂಗೆ ಹಿರಿಯರೊಬ್ರು ಹೇಳಿದಾರೆ..ನಾನು ಕುಡಿಯಲ್ಲ ಅಂತ. ಬಹಳ ಹೆಮ್ಮೆ ಆಗಿತ್ತು ನನಗೆ.. ಜನಪ್ರಿಯತೆ ಗಳಿಸೋದು ಕಷ್ಟ ಅಲ್ಲ, ಇವತ್ತು ನಾವು ನಮ್ಮ ರಾಜಕಾರಣಿಗಳನ್ನು ನೋಡ್ತಾ ಇದೀವಿ. ಎಲ್ರೂ ಜನರ ಮೇಲೆ ಎಷ್ಟು ಹಿಡಿತ ಇಟ್ಕೊಂಡಿದಾರೆ.. ಆದ್ರೆ, 80% ರಾಜಕಾರಣಿಗಳ ಮೇಲೆ ಸ್ವಲ್ಪನಾದ್ರೂ ಸಾಮಾನ್ಯ ಜನರಿಗೆ ಗೌರವ ಇದ್ಯಾ? ಇದು ಪ್ಲಾನ್ಸ್ಡ್ ಮರ್ಡರ್ ಅಲ್ಲ, ಪೊಲೀಸರಿಗೂ ಗೊತ್ತಿದೆ. ಆದ್ರೆ, ಈ ಕಪ್ಪು ಕಲೆ ಇದ್ಯಲ್ಲಾ, ಜೀವನ ಪೂರ್ತಿ ಹೋಗುತ್ತಾ ಇದು?
ಉಗ್ರರ ಗುಂಡಿಗೆ ಅಪ್ಪ ಬಲಿಯಾಗಿ ಹುತಾತ್ಮರಾದರು, ನಂಗೀಗ ಅಮ್ಮನೇ ಎಲ್ಲವೂ: ನಟಿ ರುಕ್ಮಿಣಿ ವಸಂತ್
ಖಂಡಿತ ಹೋಗೋದಿಲ್ಲ. ನಿಮ್ಮ ಮೇಲೆ ಹಿಡಿತ ತಗೊಳ್ಳೋಕೆ ಏನ್ ಮಾಡ್ಬೇಕೋ ಅದನ್ನ ಮಾಡಿ. ಹೊರಗಡೆ ಬಂದಾಗ ದರ್ಶನ್, ನಾನು ಬೇರೆಯವ್ರ ಬಗ್ಗೆ ಏನೂ ಹೇಳಲ್ಲ, ಆದ್ರೆ, ನೀನು ಬದುಕಿರೋ ವರೆಗೂ ಕುಡಿಬೇಡ.. ನಿನ್ನ ಪರಿಶ್ರಮ ಹಾಗು ಅದೃಷ್ಟ ನಿನ್ನನ್ನು ಅತ್ಯಂತ ಜನಪ್ರಿಯ ಕಲಾವಿದನನ್ನಾಗಿ ಮಾಡ್ತು, ಆದ್ರೆ ನಿನ್ನ ಹವ್ಯಾಸ ನಿನ್ನನ್ನ ಕೊಲೆಗಾರ ಅಂತ ಹೇಳಿಸಿಕೊಳ್ಳುವ ಹಾಗೆ ಮಾಡ್ತು..' ಅಂತ ಹೇಳಿದ್ದಾರೆ ಅಗ್ನಿ ಶ್ರೀಧರ್.
ಇದೇನ್ ಮಾತು ಗುರೂ.. ನಿನ್ನೆಗಿಂತ ಇಂದು, ಇಂದಿಗಿಂತ ನಾಳೆ ಚೆನ್ನಾಗಿರಿ; ರಾಕಿಂಗ್ ಸ್ಟಾರ್ ಯಶ್!
ಒಟ್ಟಿನಲ್ಲಿ, 'ಆ ದಿನಗಳು' ಖ್ಯಾತಿಯ ಅಗ್ನಿ ಶ್ರೀಧರ್ ಅವರು ಸಿನಿಮಾ ಉದ್ಯಮದಲ್ಲೂ ಸಕ್ರಿಯರಾಗಿದ್ದು, ನಟ ದರ್ಶನ್ ಘಟನೆ ಬಗ್ಗೆ ತೀವ್ರ ನೋವು ತೋಡಿಕೊಂಡಿದ್ದಾರೆ. 'ಕುಡಿತ ಮತ್ತು ಕೆಟ್ಟ ಹವ್ಯಾಸಗಳಿಗೆ ಬಿದ್ದು ನಟ ದರ್ಶನ್ ಈ ಸ್ಥಿತಿಗೆ ತಲುಪಿದ್ದಾರೆ' ಎಂದು ಸೂಚ್ಯವಾಗಿ ಹೇಳಿದ್ದಾರೆ. ಅವುಗಳನ್ನು ಬಿಟ್ಟು ಮತ್ತೆ ಮೊದಲಿನ ದರ್ಶನ್ ಆಗು ಎಂದು ಸಲಹೆ ನೀಡಿದ್ದಾರೆ, ಹರಸಿದ್ದಾರೆ, ಹಾರೈಸಿದ್ದಾರೆ. 'ತಪ್ಪು ನಡೆದಿದ್ದರೆ ಯಾರೇ ಆಗಲೀ ಶಿಕ್ಷೆ ಅನುಭವಿಸಲೇಬೇಕು. ಆದರೆ, ಹೊರಗೆ ಬಂದ ಮೇಲೆ ಮತ್ತೆ ಕೆಟ್ಟ ಹವ್ಯಾಸ ಬೇಡ' ಎಂದಿದ್ದಾರೆ.
ಲೇಟ್ ಆಗಿ ಗುಟ್ಟು ರಟ್ಟಾಗಿದೆ, ಯಾರೂ ಮಾಡದ ದಾಖಲೆ ನಟ ವಿಷ್ಣುವರ್ಧನ್ ಹೆಸರಲ್ಲಿದೆ..!