'ಶಿವಾಜಿ ಸುರತ್ಕಲ್‌'ಗೆ ಕಾಪ್ ಆಗಿ ಎಂಟ್ರಿ ಕೊಟ್ಟ ಮೇಘನಾ

Suvarna News   | Asianet News
Published : Oct 25, 2021, 05:43 PM ISTUpdated : Oct 27, 2021, 12:10 PM IST
'ಶಿವಾಜಿ ಸುರತ್ಕಲ್‌'ಗೆ ಕಾಪ್ ಆಗಿ ಎಂಟ್ರಿ ಕೊಟ್ಟ ಮೇಘನಾ

ಸಾರಾಂಶ

'ಶಿವಾಜಿ ಸುರತ್ಕಲ್' ಮೊದಲ ಪಾರ್ಟ್​ಗೆ 'ದಿ ಕೇಸ್​ ಆಫ್​ ರಣಗಿರಿ ರಹಸ್ಯ' ಎಂಬ ಟ್ಯಾಗ್​ಲೈನ್​ ಇತ್ತು. ಈಗ ಎರಡನೇ ಪಾರ್ಟ್​ಗೆ 'ದಿ ಮಿಸ್ಟೀರಿಯಸ್​ ಕೇಸ್​ ಆಫ್​ ಮಾಯಾವಿ' ಎಂಬ ಟ್ಯಾಗ್​ಲೈನ್​ ಇದೆ. 

ರಮೇಶ್​ ಅರವಿಂದ್ ಅಭಿನಯದ 'ಶಿವಾಜಿ ಸುರತ್ಕಲ್' (Shivaji Surathkal) ಸಿನಿಮಾ 2020 ರಲ್ಲಿ ಬಿಡುಗಡೆಯಾಗಿ ಸಿನಿಮಂದಿಯಿಂದ  ಭರ್ಜರಿ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ರಮೇಶ್ ಅರವಿಂದ್ (Ramesh Aravind) ಈ ಚಿತ್ರದಲ್ಲಿ ಡಿಟೆಕ್ಟಿವ್ (Detective) ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಚಿತ್ರದ ಮುಂದುವರಿದ ಭಾಗವಾಗಿ 'ಶಿವಾಜಿ ಸುರತ್ಕಲ್ 2' (Shivaji Surathkal 2) ಚಿತ್ರವನ್ನು ತೆರೆಗೆ ತರುವುದಾಗಿ ಇತ್ತಿಚೆಗಷ್ಟೇ ಚಿತ್ರದ ಪೋಸ್ಟರನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು.
 


'ಶಿವಾಜಿ ಸುರತ್ಕಲ್‌' ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದ ರಮೇಶ್‌ ಅರವಿಂದ್‌ 'ಶಿವಾಜಿ ಸುರತ್ಕಲ್‌ 2' ಚಿತ್ರದಲ್ಲೂ ನಾಯಕನಾಗಿ ನಟಿಸುತ್ತಿದ್ದು, ರಮೇಶ್‌ ಅರವಿಂದ್‌ ಅವರೊಂದಿಗೆ ರಾಧಿಕಾ ನಾರಾಯಣ್‌ (Radhika Narayan), ರಾಘು ರಾಮನಕೊಪ್ಪ, ವಿದ್ಯಾಮೂರ್ತಿ ಸೇರಿದಂತೆ ಮೊದಲ ಪಾರ್ಟ್​ನಲ್ಲಿ ಇದ್ದ ಕಲಾವಿದರೇ ಈ ಚಿತ್ರತಂಡದಲ್ಲಿದೆ. ಇನ್ನು ಈ ಚಿತ್ರದಲ್ಲಿ ಇನ್ನಷ್ಟು ಹೊಸ ಪಾತ್ರಗಳು ಸೇರ್ಪಡೆಯಾಗಿದ್ದು, ಅದರಲ್ಲಿ ನಟಿ ಮೇಘನಾ ಗಾಂವ್ಕರ್‌ (Meghana Gaonkar) ಎಂಟ್ರಿ ಕೊಟ್ಟಿದ್ದಾರೆ.

ಶಿವಾಜಿ ಸುರತ್ಕಲ್‌ ಭಾಗ 3 ಕೂಡ ಬರಬಹುದು: ಆಕಾಶ್‌ ಶ್ರೀವತ್ಸ

ಹೌದು! ಗ್ಲ್ಯಾಮರ್ ಪಾತ್ರಗಳಲ್ಲಿ ಹೆಚ್ಚಾಗಿ ಅಭಿನಯಿಸುತ್ತಿದ್ದ ನಟಿ ಮೇಘನಾ ಗಾಂವ್ಕರ್‌ 'ಶಿವಾಜಿ ಸುರತ್ಕಲ್​ 2' ಚಿತ್ರದಲ್ಲಿ ಪೊಲೀಸ್​ ಅಧಿಕಾರಿಯಾಗಿ (Police Officer) ನಟಿಸಲಿದ್ದಾರೆ. ಡಿಸಿಪಿ ದೀಪಾ ಕಾಮತ್ ಎಂಬ ಪಾತ್ರವನ್ನು ಮೇಘನಾ ಗಾಂವ್ಕರ್​ ನಿಭಾಯಿಸಲಿದ್ದು, ಬೆಂಗಳೂರು ಸೆಂಟ್ರಲ್ ಕ್ರೈಂ ಬ್ರಾಂಚ್ ಡಿಸಿಪಿಯಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ. ಹಾಗೂ ಕೆಲವೇ ದಿನದಲ್ಲಿ ಮುಹೂರ್ತ ಮಾಡಿ ಚಿತ್ರೀಕರಣ ಆರಂಭಿಸಬೇಕು ಎಂದು ಚಿತ್ರತಂಡ ಪ್ಲ್ಯಾನ್​ ಮಾಡಿಕೊಂಡಿದೆ.
 


 

'ಶಿವಾಜಿ ಸುರತ್ಕಲ್​ 2' ರಮೇಶ್ ಅರವಿಂದ್ ನಟನೆಯ 103ನೇ ಚಿತ್ರ ಇದಾಗಿದ್ದು, ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ಆಕಾಶ್ ಶ್ರಿವತ್ಸ ಅವರು ನಿರ್ದೇಶನ ಮಾಡುತ್ತಿದ್ದಾರೆ. ರೇಖಾ ಕೆ.ಎನ್. ಮತ್ತು ಅನುಪ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಚಿತ್ರದ ಪ್ರೀ-ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. ಇನ್ನು 'ಶಿವಾಜಿ ಸುರತ್ಕಲ್' ಮೊದಲ ಪಾರ್ಟ್​ಗೆ 'ದಿ ಕೇಸ್​ ಆಫ್​ ರಣಗಿರಿ ರಹಸ್ಯ' (The Case of Ranagiri Rahasya) ಎಂಬ ಟ್ಯಾಗ್​ಲೈನ್​ ಇತ್ತು. ಈಗ ಎರಡನೇ ಪಾರ್ಟ್​ಗೆ 'ದಿ ಮಿಸ್ಟೀರಿಯಸ್​ ಕೇಸ್​ ಆಫ್​ ಮಾಯಾವಿ' (the Mysterious Case of Mayavi) ಎಂಬ ಟ್ಯಾಗ್​ಲೈನ್​ ಇದೆ. ಹಲವು ಗೆಟಪ್​ಗಳಲ್ಲಿ ರಮೇಶ್​ ಅರವಿಂದ್​ ಕಾಣಿಸಿಕೊಳ್ಳಲಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವಿಲನ್ ಶೇಡ್​​ನಲ್ಲೂ ಪ್ಲೇ ಬಾಯ್ ಲುಕ್.. ಡೆವಿಲ್ ದರ್ಶನ್‌ರನ್ನ ಕಣ್ತುಂಬಿಕೊಂಡ 3 ಮಿಲಿಯನ್‌ ಮಂದಿ!
'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!