Latest Videos

ಅತ್ತ ಪೊಲೀಸ್ ವಿಚಾರಣೆಯಲ್ಲಿ ನಟ ದರ್ಶನ್ ಹೈರಾಣು, ಇತ್ತ ನಿರ್ಮಾಪಕ ಉಮಾಪತಿ ಟೆಂಪಲ್ ರನ್!

By Chethan KumarFirst Published Jun 16, 2024, 8:38 PM IST
Highlights

ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನ ಬೆನ್ನಲ್ಲೇ ನಿರ್ಮಾಪಕ ಉಮಾಪತಿ ಗೌಡ ಹಳೇ ವಿಡಿಯೋಗಳು ಭಾರಿ ಸಂಚಲನ ಸೃಷ್ಟಿಸಿತ್ತು.ಈ ಬೆಳವಣಿಗೆ ನಡುವೆ ಉಮಾಪತಿ ಗೌಡ ಸದ್ಯ ದೇವರ ದರ್ಶನದಲ್ಲಿ ಬ್ಯೂಸಿಯಾಗಿದ್ದಾರೆ.
 

ಬೆಂಗಳೂರು(ಜೂ.16) ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನ ಬಳಿಕ ಹಲವು ಹಳೇ ವಿಡಿಯೋಗಳು ವೈರಲ್ ಆಗುತ್ತಿದೆ. ಖುದ್ದು ದರ್ಶನ್ ಅಭಿನಯದ ವಿಡಿಯೋಗಳು ಒಂದಡೆಯಾದರೆ, ದರ್ಶನ್ ವಿರುದ್ಧ ಜಟಾಪಟಿ ನಡೆಸಿದ್ದ ನಿರ್ಮಾಪಕ ಉಮಾಪತಿ ಶೇನಿವಾಸ್ ವಿಡಿಯೋಗಳು ಭಾರಿ ವೈರಲ್ ಆಗಿದೆ. ಈ ಬೆಳವಣಿಗೆ ನಡುವೆ ಉಮಾಪತಿ ಗೌಡ ಕುಟುಂಬದ ಜೊತೆ ದೇವಸ್ಥಾನ ದರ್ಶನ ಪಡೆಯುತ್ತಿದ್ದಾರೆ. ಧರ್ಮಸ್ಥಳದ ಮಂಜುನಾಥ ಸ್ವಾಮಿ ದರ್ಶನ ಪಡೆದು ಉಮಾಪತಿ ಗೌಡ, ದಕ್ಷಿಣ ಕನ್ನಡದ ಇತರ ಕೆಲ ದೇವಸ್ಥಾನಕ್ಕೂ ಭೇಟಿ ನೀಡಿದ್ದಾರೆ.

ಧರ್ಮಸ್ಥಳದಲ್ಲಿ ಮಂಜುನಾಥ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಉಮಾಪತಿ ಕುಟುಂಬ ಬಳಿಕ ಧರ್ಮಾಧಿಕಾರಿ ಡಾ.ಡಿ ವಿರೇಂದ್ರ ಹೆಗ್ಗಡೆ ಭೇಟಿಯಾಗಿದ್ದಾರೆ. ಕುಟುಂಬ ಜೊತೆ ಕೆಲ ದೇವಸ್ಥಾನಕ್ಕೆ ಭೇಟಿಯಾಗಿದ್ದಾರೆ. ಈ ವೇಳೆ ಮಾಧ್ಯಮಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

ಏನೇ ಕೇಳು, ಏನೇ ಹೇಳು ಕಣ್ಣೀರೇ ನನಗೀಗ, ಪೊಲೀಸ್ ಕಸ್ಟಡಿಯಲ್ಲಿ ನಟ ದರ್ಶನ್ ಜರ್ಝರಿತ!

ನಟ ದರ್ಶನ್ ಬಂಧನದ ಬಳಿಕ ಉಮಾಪತಿ ನೀಡಿದ್ದ ಹಲವು ಹೇಳಿಕೆಗೆ ವೈರಲ್ ಆಗಿತ್ತು. ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ನಿರ್ಮಾಪಕರಾಗಿರುವ ಉಮಾಪತಿ ಗೌಡ, ಚಿತ್ರ ಹಾಗೂ ಕೆಲ ವಿಚಾರಕ್ಕೆ ಮನಸ್ತಾಪವಾಗಿತ್ತು. ಪರಿಣಾಮ ನಟ ಹಾಗೂ ನಿರ್ಮಾಪಕ ಬಹಿರಂಗ ವೇದಿಕೆಗಳಲ್ಲಿ ವಾಗ್ದಾಳಿ ನಡೆಸಿದ್ದರು. ವೇದಿಕೆ ಮೇಲೆ ದರ್ಶನ್, ನಿರ್ಮಾಪಕ ಉಮಾಪತಿಗೆ ತಗಡು ಎಂದು ವಾಗ್ದಾಳಿ ನಡೆಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಉಮಾಪತಿ ಗೌಡ ಈಗ ತಗಡು, ಮುಂದೆ ಒಂದು ದಿನ ಚಿನ್ನದ ತಗಡಾಗುತ್ತೇನೆ. ಜೀವನ ಒಂದೇ ರೀತಿ ಇರಲ್ಲ. ಮೇಲಕ್ಕೆರಿದವರೂ ಕೆಳಕ್ಕೆ ಇಳಿಯಲೇಬೇಕು ಎಂದು ಮಾರ್ಮಿಕವಾಗಿ ನುಡಿದಿದ್ದರು.

ಇತ್ತ ಪೊಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ಸತತ ವಿಚಾರಣೆ ಎದುರಿಸುತ್ತಿದ್ದಾರೆ. ದರ್ಶನ್ ಹಾಗೂ ಆತನ ಗ್ಯಾಂಗ್ ಪೊಲೀಸರ ವಿಚಾರಣೆಗೆ ಹೈರಾಣಾಗಿದೆ. ಇಂದು ಪವಿತ್ರಾ ಗೌಡ ಕರೆದುಕೊಂಡು ಆಕೆಯ ಮನೆಗೆ ತೆರಳಿದ ಪೊಲೀಸರು ಸಂಪೂರ್ಣ ಮನೆ ಶೋಧಿಸಿದ್ದಾರೆ. ಸತತ 2 ಗಂಟೆಗಳ ಕಾಲ ಪೊಲೀಸರು ಮನೆ ಶೋಧ ಕಾರ್ಯ ನಡೆಸಿ ಕೆಲ ಮಹತ್ವದ ಸಾಕ್ಷ್ಯ ಕಲೆ ಹಾಕಿದ್ದರು. ಪ್ರಮುಖವಾಗಿ ರೇಣುಕಾಸ್ವಾಮಿ ಹತ್ಯೆಗೂ ಮೊದಲು ಪವಿತ್ರಾ ಗೌಡ ಚಪಲ್ಲಿಯಲ್ಲಿ ಕಪಾಳಕ್ಕೆ ಹೊಡೆದಿದ್ದರು. ಈ ವೇಳೆ ಬಳಸಿದ್ದ ಚಪ್ಪಲಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.  ಹತ್ಯೆ ದಿನ ಪವಿತ್ರಾ ಗೌಡ ಧರಿಸಿದ್ದ ಬಟ್ಟೆ, ಶಾಲು ಸೇರಿದಂತೆ ಹಲವು ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 

ನಟ ದರ್ಶನ್ ಹಾಗೂ ಆತನ ಗ್ಯಾಂಗ್ ವಿರುದ್ದ ಹಲವು ಪ್ರಬಲ ಸಾಕ್ಷ್ಯಗಳು ಲಭ್ಯವಾಗಿರುವ ಕಾರಣ ಈ ಪ್ರಕರಣ ರಾಜ್ಯದ ಇತಿಹಾಸದಲ್ಲಿ ಹೊಸ ಅಧ್ಯಾಯ ಸೃಷ್ಟಿಸುವ ಸಾಧ್ಯತೆ ಇದೆ.  

ಹುಟ್ಟೂರು ಪೊನ್ನಂಪೇಟೆಯಲ್ಲಿ ನಟ ದರ್ಶನ್ ಕ್ರೌರ್ಯ, ಹೋಂ ಸ್ಟೇಯಲ್ಲಿ ಕೆಲಸದಾಕೆಗೆ ಸಿಗರೇಟ್‌ನಿಂದ ಸುಟ್ಟು ಹಲ್ಲೆ!


 

click me!