Latest Videos

ಕಿಚ್ಚ ಸುದೀಪ್ ಫಸ್ಟ್ ರಿಯಾಕ್ಷನ್ : ಬೀದಿ ಹೆಣವಾಗಿದ್ದ ರೇಣುಕಾಸ್ವಾಮಿಗೆ ನ್ಯಾಯ ಸಿಗಬೇಕು

By Sathish Kumar KHFirst Published Jun 16, 2024, 6:50 PM IST
Highlights

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಜೈಲು ಸೇರಿದ ನಂತರ ಮೊದಲ ಬಾರಿಗೆ ನಟ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದು, ಬೀದಿ ಹೆಣವಾಗಿದ್ದ ರೇಣುಕಾಸ್ವಾಮಿಗೆ ನ್ಯಾಯ ಸಿಗಬೇಕು ಎಂದು ಹೇಳಿದರು. 

ಬೆಂಗಳೂರು (ಜೂ.16): ಸರ್ಕಾರ, ಮಾಧ್ಯಮದವರು, ಪೊಲೀಸರು ಕರೆಕ್ಟಾಗಿ ಕೆಲಸ ಮಾಡುತ್ತಿದ್ದಾರೆಂದರೆ ಅದಕ್ಕೆ ನಾನೂ ಬೆಂಬಲಿಸುತ್ತೇನೆ. ಬಾಳಿ ಬದುಕಬೇಕಿದ್ದ ರೇಣುಕಾಸ್ವಾಮಿ ಬೀದಿ ಹೆಣವಾಗಿದ್ದಕ್ಕೆ, ಆತನ ಹೆಂಡತಿಗೆ, ಮುಂದೆ ಹುಟ್ಟಿ ಬರುವ ಮಗುವಿಗೆ ಹಾಗೂ ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕೆಂಬುದು ನಮ್ಮ ಅಭಿಪ್ರಾಯವಾಗಿದೆ ಎಂದು ನಟ ಹಾಗೂ ನಿರ್ದೇಶಕ ಕಿಚ್ಚ ಸುದೀಪ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ ದೊಡ್ಡ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು, ಮಾಧ್ಯಗಳು ಹಾಗೂ ಪೊಲೀಸರು ಸರಿಯಾಗಿ ಕೆಲಸ ಮಾಡುತ್ತಿದ್ದಾರೆ. ನಾನು ಯಾರ ಪರವಾಗಿಯೂ, ವಿರೋಧವಾಗಿಯೂ ನನ್ನ ಅಭಿಪ್ರಾಯ ವ್ಯಕ್ತಪಡಿಸಲ್ಲ. ಮುಖ್ಯಮಂತ್ರಿಗಳೇ ಹಠವಿಡಿದು ಕುಳಿತು ಈ ಕೇಸಿನಲ್ಲಿ ನ್ಯಾಯ ಕೊಡಿಸಲು ಮುಂದಾಗಿದ್ದಾರೆ. ಅದಕ್ಕೆ ನಾವೆಲ್ಲರೂ ಬೆಂಬಲಿಸಬೇಕಿದೆ. ಬಾಳಿ ಬದುಕಬೇಕಿದ್ದ ರೇಣುಕಾಸ್ವಾಮಿ ಬೀದಿ ಹೆಣವಾಗಿದ್ದಕ್ಕೆ, ಆತನ ಹೆಂಡತಿಗೆ, ಮುಂದೆ ಹುಟ್ಟಿ ಬರುವ ಮಗುವಿಗೆ ಹಾಗೂ ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕೆಂಬುದು ನಮ್ಮ ಅಭಿಪ್ರಾಯವಾಗಿದೆ ಎಂದು ಹೇಳಿದರು.

Renukaswamy Murder Case ಪವಿತ್ರಾ ಗೌಡ ಮನೆಯಲ್ಲಿ ಪೊಲೀಸರ ಶೋಧ, ಹಲ್ಲೆ ನಡೆಸಿದ ಚಪ್ಪಲಿ ವಶ!

ರಾಜ್ಯದಲ್ಲಿ ಮುಖ್ಯವಾಗಿ ಪೊಲೀಸರು ಹೇಗೆ ಕೆಲಸ ಮಾಡುತ್ತಿದ್ದಾರೆ, ಮೀಡಿಯಾಗಳು ಹೇಗೆ ತೋರಿಸುತ್ತಿವೆ ಹಾಗೂ ನ್ಯಾಯಾಧೀಶರು ಏನು ತೀರ್ಮಾನ ಕೊಡುತ್ತಾರೆ ಎಂಬುದರ ಬಗ್ಗೆ ಕೊಲೆಯಾದವನ ಮನೆಗೆ, ಕುಟುಂಬಸ್ಥರಿಗೆ ನ್ಯಾಯ ಸಿಗಬೇಕು. ಇಲ್ಲಿ ಆರೋಪಿ ಯಾರು? ಯಾತಕ್ಕಾಗಿ ಮಾಡಿದ್ದಾನೆ ಎಂಬ ಸತ್ಯ ಹೊರಬಂದು ಶಿಕ್ಷೆ ಆಗಬೇಕು ಎಂಬುದು ಎಲ್ಲರ ಅಪೇಕ್ಷೆಯಾಗಿದೆ. ಒಂದು ಜೀವ ಹುಟ್ಟಿತು, ಒಂದು ಜೀವ ಹೋಯಿತು ಎಂಬುದನ್ನು ನಾನು ಯಾವುದೇ ಸ್ಥಳವನ್ನು ಆಧರಿಸಿ ಪ್ರಾಮುಖ್ಯತೆ ನೀಡಲು ಸಾಧ್ಯವಿಲ್ಲ. ಚಿತ್ರದುರ್ಗ, ಶಿವಮೊಗ್ಗ ಯಾವುದೇ ಆಗಿರಲಿ ಕರ್ನಾಟಕದ ಪ್ರತಿಯೊಂದು ಗ್ರಾಮದಲ್ಲಿಯೂ ಅನ್ಯಾವಾದರೆ ಅದಕ್ಕೆ ನ್ಯಾಯ ಸಿಗಲಿ ಎಂಬುದೇ ನಮ್ಮ ವಾದವಾಗಿದೆ. 

ರಾಜ್ಯದಲ್ಲಿ ಚಿತ್ರರಂಗಕ್ಕೆ ನ್ಯಾಯ ಸಿಗಬೇಕು. ಚಿಕ್ಕ ಚಿಕ್ಕ ವಿಚಾರಗಳಿಗೂ ಚಿತ್ರರಂಗದ ಮೇಲೆ ಏನಾದರೂ ಒಂದು ಬರುತ್ತದೆ. ಜನ ಬರಲಿಲ್ಲವೆಂದರೂ ಚಿತ್ರರಂಗ, ಹೋರಾಟಕ್ಕೆ ಬರಲಿಲ್ಲ ಎಂದರೂ ಚಿತ್ರರಂಗ ಎಂಬುದರ ಮೇಲೆ ಆರೋಪ ಮಾಡುತ್ತಿರುವುದಕ್ಕೆ ಒಂದು ಕ್ಲೀನ್ ಚಿಟ್ ಸಿಗಬೇಕು. ಚಿತ್ರರಂಗದಲ್ಲಿ ಎಲ್ಲ ಬಗೆಯ ಕಲಾವಿದರು ಇದ್ದಾರೆ. ಕೊಲೆಯಾದ ವ್ಯಕ್ತಿಯ ಕುಟುಂಬಕ್ಕೆ ನ್ಯಾಯ ಸಿಕ್ಕರೆ ಚಿತ್ರರಂಗವೂ ಸಂತಸ ಪಡುತ್ತದೆ. 

ನಟ ದರ್ಶನ್ ಫೋಟೋಗೆ ಚಪ್ಪಲಿ, ಬೂಟಿನಿಂದ ಹೊಡೆದ ಕರವೇ ಕಾರ್ಯಕರ್ತರು

ಯಾರನ್ನೂ ಸುಖಾ ಸುಮ್ಮನೇ ಬ್ಯಾನ್ ಮಾಡೋಕಾಗಲ್ಲ:  ನಾವ್ಯಾರೂ ಕಾನೂನು ಅಲ್ಲ. ಚಿತ್ರರಂಗದಿಂದ ಒಬ್ಬರನ್ನು ಸುಖಾಸುಮ್ಮನೇ ಬ್ಯಾನ್ ಮಾಡೋಕೆ ಆಗೊಲ್ಲ. ಈ ಕೇಸಿನಿಂದ ಹೊರಗೆ ಬಂದರೆ ಬ್ಯಾನ್ ಎನ್ನುವ ಪದವೇ ಬರುವುದಿಲ್ಲ. ಕೆಲವು ಹಿರಿಯರು ಕುಳಿತುಕೊಂಡು ತೀರ್ಮಾನ ಮಾಡುತ್ತಾರೆ. ಕೆಲವು ದಿನಗಳ ಹಿಂದೆ ನನ್ನ ಮೇಲೆಯೂ ಬ್ಯಾನ್ ಮಾಡಬೇಕು ಎಂಬ ಆಗ್ರಹ ಕೇಳಿಬಂದಿತ್ತು. ಈಗ ಬ್ಯಾನ್ ವಿಚಾರವನ್ನು ಕೈಬಿಡಿ. ಇದೆಲ್ಲವೂ ಸೆಕೆಂಡರಿ ಆದ್ಯತೆಯಾಗಿದೆ. ಚಿತ್ರರಂಗದಲ್ಲಿ ಯಾವ ತೀರ್ಮಾನ ಕೈಗೊಳ್ತೀರಿ ಎಂದು ಕೇಳಿದಾಗ, ನಾವೆಲ್ಲರೂ ನಿಲುವು ಕೈಗೊಂಡು ನಗೆಪಾಟಲಿಗೀಡಾಗಿದ್ದೇನೆ. ಯಾರೋ ಒಬ್ಬರು ಹಲ್ಲೆ ಮಾಡಿದ್ದಾರೆಂದು ಬೇರೊಬ್ಬರ ಮೇಲೆ ಆರೋಪ ಮಾಡಿರುತ್ತಾರೆ. ಆಗ ನಾವು ಅವರ ಬಗ್ಗೆ ನಿಲುವು ಕೈಗೊಂಡ ನಂತರ ಹೊಡೆದಾಡಿಕೊಂಡ ಇಬ್ಬರೂ ಒಂದಾಗುವ ಮೂಲಕ ನಿಲುವು ಕೈಗೊಂಡವರನ್ನು ಜೋಕರ್ಸ್ ಮಾಡಿದ್ದಾರೆ. ಹೀಗಾಗಿ, ಯಾವುದೇ ನಿಲುವು ಬಗ್ಗೆ ಕೇಳಬೇಡಿ ಎಂದು ಹೇಳಿದರು.

click me!