ಮೆಟ್ಟು ಮೇಲ್ಗಡೆ ಇಟ್ಟು ಇಳೀರಿ, ಗಂಗಮ್ಮ ತಾಯಿಗ್ ಹಿಂಗೆಲ್ಲಾ ಮಾಡ್ಬಾರ್ದು; ಶಾಕ್ ಆಗಿದ್ರಂತೆ ಡಾ ರಾಜ್‌!

By Shriram Bhat  |  First Published Jun 16, 2024, 8:07 PM IST

ಇಂದು ಡಾ ರಾಜ್‌ಕುಮಾರ್ ಅವರು ನಮ್ಮೊಂದಿಗಿಲ್ಲ. ಆದರೆ, ಅವರ ಸರಳತನ, ವಿನಯವಂತಿಕೆ ಹಾಗೂ ಅವರು ಹಾಕಿ ಕೊಟ್ಟ ದಾರಿ ನಮ್ಮ ಜೊತೆಗಿದೆ. ರಂಗಭೂಮಿಯಿಂದ ಸಿನಿಮಾ ನಟನೆಗೆ ಬಂದು..


ಡಾ ರಾಜ್‌ಕುಮಾರ್ (Dr Rajkumar) ಹಾಗು ತಿಪಟೂರು ರಾಮಸ್ವಾಮಿ (Thipaturu Ramaswamy) ಅವರಿಬ್ಬರ ಸ್ನೇಹ ತುಂಬಾ ಚೆನ್ನಾಗಿತ್ತು. ಅವರಿಬ್ಬರೂ ಎಲ್ಲೋ ಹೋಗುತ್ತಿರುವಾಗ ಡಾ ರಾಜ್‌ಕುಮಾರ್ ಅವರಿಗೆ ಕುರಿ ಕಾಯುತ್ತಿರುವ ಹುಡುಗನೊಬ್ಬ ಗುರು ಆಗಿರುವ ಸಂದರ್ಭ ಬಂದಿದೆ. ಡಾ ರಾಜ್‌ಕುಮಾರ್ ಅವರಿಗೆ ತುಂಬಾ ಬಾಯಾರಿಕೆ ಆಗಿತ್ತಂತೆ. ದಾರಿಯಲ್ಲಿ ಇದ್ದ ಬಾವಿಯನ್ನು ಕಂಡು ಹೋಗುತ್ತಿದ್ದ ರಾಜ್‌ಕುಮಾರ್ ಅವರು ಕಾರು ನಿಲ್ಲಿಸಿ ಆ ಬಾವಿಯ ಬಳಿಗೆ ಹೋಗುತ್ತಾರೆ. ಆಗ ಇದ್ದಕ್ಕಿದ್ದಂತೆ ಆ ಕುರಿಕಾಯುವ ಹುಡುಗ ಡಾ ರಾಜ್‌ಕುಮಾರ್ ಅವರಿಗೆ ಬೈಯಲು ಶುರು ಮಾಡಿದನಂತೆ.

ಕುರಿ ಕಾಯುವ ಹುಡುಗ ಒಂದೇ ಸವನೆ ಬೈಯಲು ಶುರು ಮಾಡಲು, ಡಾ ರಾಜ್‌ಕುಮಾರ್ ಅವರು ಅವಾಕ್ಕಾದರಂತೆ. 'ನಿಮಗೇನೂ ಮೈಮೇಲೆ ಜ್ಞಾನವಿಲ್ವಾ? ಮೆಟ್ಟು (ಚಪ್ಪಲಿ) ಹಾಕ್ಕೊಂಡೇ ಬಾವಿ ಹತ್ತಿರ ಹೋಗ್ತಾ ಇದೀರ? ಯಾರಾದ್ರೂ ಮೆಟ್ಟು ಹಾಕ್ಕೊಂಡು ಬಾವಿ ಒಳಗೆ ಇಳಿತಾರಾ? ದೂರ, ಮೆಟ್ಟು ಮೇಲ್ಗಡೆ ಇಟ್ಟು, ಬಾವಿ ಒಳಗೆ ಹೋಗಿ ನೀರು ಕುಡಿರಿ' ಅಂದನಂತೆ. ಗಂಗಮ್ಮ ತಾಯಿಗ್ ಹಿಂಗೆಲ್ಲಾ ಮಾಡ್ಬಾರ್ದು' ಅಂದನಂತೆ. 

Tap to resize

Latest Videos

ಹತ್ತು ಎಕರೆ ಬೇಕಾ, ಜನಕ್ಕೆ ಉಪಯೋಗ ಆಗುತ್ತಾ, ನಾನೇ ಕೊಡ್ತೀನಿ; ರಾಕಿಂಗ್ ಸ್ಟಾರ್ ಯಶ್!

ಡಾ ರಾಜ್‌ಕುಮಾರ್ ಜೊತೆಯಲ್ಲಿದ್ದ ರಾಮಸ್ವಾಮಿಯವರು ನೀನು ಬೈದಿರೋದು ಡಾ ರಾಜ್‌ಕುಮಾರ್ ಅವ್ರಿಗೆ ಅಂತ ಹೇಳೋಕೆ ಹೋದರಂತೆ. ಆದ್ರೆ, ಅಣ್ಣಾವ್ರು ಅವ್ರನ್ನ ತಡೆದು ಬೇಡ ಅಂದರಂತೆ. ಜೊತೆಗೆ, ಆ ಕುರಿ ಕಾಯುವ ಹುಡಗನಿಗೆ 'ತಪ್ಪಾಯ್ತು ಕಂದಾ' ಎಂದು ಹೇಳಿದ್ದರಂತೆ. ಅಷ್ಟೇ ಅಲ್ಲ, ಜತೆಗಿದ್ದ ರಾಮಸ್ವಾಮಿ ಅವರಿಗೆ 'ಆ ಕುರಿ ಕಾಯೋ ಹುಡುಗ ನಂಗೆ ಗುರು ಆಗ್ಬಿಟ್ಟ' ಅಂತ ಹೇಳಿದ್ರಂತೆ. ಅಷ್ಟೇ ಅಲ್ಲ, ಆಗಾಗ ಆ ಘಟನೆ ನೆನಪಿಸಿಕೊಂಡು ಸಿಕ್ಕವರೆದುರು ಆ ಕುರಿಕಾಯುವ ಹುಡುಗ ತಮಗೆ ಗುರುವಾಗಿದ್ದರ ಬಗ್ಗೆ ಹೇಳುತ್ತಿದ್ದರಂತೆ. 

ಅಮ್ಮನಿಗೆ ಅಪ್ಪಂದಿರ ದಿನದ ಶುಭಾಶಯ ತಿಳಿಸಿದ ಪವಿತ್ರಾ ಗೌಡ ಮಗಳು

ಅಂದಹಾಗೆ, ಇಂದು ಡಾ ರಾಜ್‌ಕುಮಾರ್ ಅವರು ನಮ್ಮೊಂದಿಗಿಲ್ಲ. ಆದರೆ, ಅವರ ಸರಳತನ, ವಿನಯವಂತಿಕೆ ಹಾಗೂ ಅವರು ಹಾಕಿ ಕೊಟ್ಟ ದಾರಿ ನಮ್ಮ ಜೊತೆಗಿದೆ. ರಂಗಭೂಮಿಯಿಂದ ಸಿನಿಮಾ ನಟನೆಗೆ ಬಂದು ಅವರು ಎರಡು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಕನ್ನಡದ ಮೇರು ನಟ ಎನಿಸಿಕೊಂಡಿದ್ದೇ ಒಂದು ಅಚ್ಚರಿ. ಅವರು ಮಾಡಿದ ಸಿನಿಮಾಗಳೂ ಅಷ್ಟೇ, ಸಾಕಷ್ಟು ಜನರ ಜೀವನವನ್ನು ಒಳ್ಳೇ ದಾರಿಯಲ್ಲಿ ಸಾಗುವಂತೆ ಮಾಡಿದ್ದವು. ಬಂಗಾರದ ಮನುಷ್ಯ ಚಿತ್ರವು ಅದಕ್ಕೊಂದು ಅತ್ಯುತ್ತಮ ಉದಾಹರಣೆ. 

ಈ ಎರಡೇ ಸಂಗತಿಗಳು ನೀವೇನು ಎಂಬುದನ್ನು ಜಗತ್ತಿಗೆ ಹೇಳುತ್ತವೆ; ನಟ ದಳಪತಿ ವಿಜಯ್

click me!