ಭ್ರಮೆ ಮತ್ತು ವಾಸ್ತವ ಕುರಿತ ವಿಶಿಷ್ಟವಸ್ತುವನ್ನಿಟ್ಟುಕೊಂಡ ಸಿನಿಮಾ ‘ಫಿಸಿಕ್ಸ್ ಟೀಚರ್’ ಟ್ರೇಲರ್ ಬಿಡುಗಡೆಯಾಗಿದೆ. ಸುಮುಖ ನಿರ್ದೇಶನ ಮತ್ತು ನಟನೆಯ ಈ ಸಿನಿಮಾ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅಧಿಕೃತವಾಗಿ ಆಯ್ಕೆಯಾಗಿತ್ತು. ಹಿರಿಯ ನಟ ಶಶಿಕುಮಾರ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.
ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾ ಕುರಿತು ನಿರ್ದೇಶಕ ಸುಮುಖ, ‘ನಮ್ಮ ನಾಡಿನ ಮತ್ತು ವಿದೇಶಿ ಸಿನಿಮಾಗಳನ್ನು ನೋಡಿ ಬೆಳೆದವನು ನಾನು. ಬೇರೆ ಥರ ಒಂದೊಳ್ಳೆಯ ಕತೆ ಹೇಳಬೇಕು ಎನ್ನುವ ಆಸೆ ಇತ್ತು. ಆ ಆಸೆಯಿಂದು ಒಂದು ಹೊಳಹಿನ ರೂಪದಲ್ಲಿ ಹುಟ್ಟಿಕೊಂಡ ಸಿನಿಮಾ ಇದು. ಫೈಟ್, ಡಾನ್ಸ್ ಹೊರತಾಗಿ ಕಮರ್ಷಿಯಲ್ ಸಿನಿಮಾಗೆ ಬೇಕಾದ ಎಲ್ಲವೂ ಈ ಸಿನಿಮಾದಲ್ಲಿ ಇದೆ. ಸಸ್ಪೆನ್ಸ್ ಥ್ರಿಲ್ಲರ್ ಜಾನರ್‌ನ ಸಿನಿಮಾ. ಸ್ವಲ್ಪ ಬೇರೆ ಥರ ಇದೆ. ಯೋಚನೆಗೆ ಹಚ್ಚುವಂತೆ ಇದೆ’ ಎನ್ನುತ್ತಾರೆ.
ವೈರಲ್ ಫೋಟೋದಲ್ಲಿರುವ ವ್ಯಕ್ತಿ ಯಾರೆಂದು ರಿವೀಲ್ ಮಾಡಿದ ನಟಿ ರಮ್ಯಾ
ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಸಿದ್ಧ ಹಿರಿಯ ವಿಮರ್ಶಕ ಮನು ಚಕ್ರವರ್ತಿ, ‘ಕಾಲ-ದೇಶ ಕುರಿತ ವಸ್ತು ಇಟ್ಟುಕೊಂಡ ಸಿನಿಮಾಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಂದಿವೆ. ಆದರೆ ಭಾರತೀಯ ಚಿತ್ರರಂಗದಲ್ಲಿ ಅದರಲ್ಲೂ ಕನ್ನಡದಲ್ಲಿ ಇಂಥಾ ಸಾಹಸ ಯಾರೂ ಮಾಡಿಲ್ಲ. ಇಂಥದ್ದೊಂದು ಸಿನಿಮಾ ಮಾಡಲು ಧೀಮಂತಿಕೆ ಬೇಕು, ಧೈರ್ಯ ಬೇಕು, ಈ ಪ್ರಯತ್ನಕ್ಕೆ ಎಲ್ಲರ ಪ್ರೋತ್ಸಾಹ ಬೇಕು’ ಎಂದರು.
ಸಮುಖ ತಂದೆ ಶಶಿಕುಮಾರ್ ಮತ್ತು ತಾಯಿ ನಂದಿತಾ ಯಾದವ್ ಅವರು ಮಗನ ಕುರಿತು ಹೆಮ್ಮೆ ವ್ಯಕ್ತಪಡಿಸಿದರು. ರಾಜೇಶ್ ನಟರಂಗ, ನಾಯಕಿ ಪಾತ್ರಧಾರಿ ಪ್ರೇರಣಾ ಕಂಬಂ, ಚಿತ್ರಕತೆ ಬರೆದಿರುವ ಸ್ಕಂದ ಸುಬ್ರಮಣ್ಯ, ಮಹಾಂತೇಶ್, ಕಾರ್ನಿಕಾ, ಅಕ್ಷಯ್ ಹಾಜರಿದ್ದರು. ಕುತೂಹಲಿಗಳು ಒಮ್ಮೆ ಟ್ರೇಲರ್ ನೋಡಿಕೊಳ್ಳಿ.
ದಿನೇಶ್ ಬಾಬು(Dinesh Babu) ನಿರ್ದೇಶನದ ಕಸ್ತೂರಿ ಮಹಲ್(Kasturi Mahal) ಸಿನಿಮಾ ಇದೇ ಸಿನಿ ಶುಕ್ರವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಟೀಸರ್, ಟ್ರೇಲರ್, ಹಾಡುಗಳು ಕಸ್ತೂರಿ ಮಹಲ್ ಬಗೆಗಿನ ಕುತೂಹಲವನ್ನು ಹೆಚ್ಚಿಸಿವೆ. ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ(Shanvi Srivastava) ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು ಅವ್ರ ಪಾತ್ರ ಕೂಡ ಇಂಟ್ರಸ್ಟಿಂಗ್ ಆಗಿದೆ ಅನ್ನೋದು ಜಾಹೀರಾಗಿದೆ.
ಒಳ ಉಡುಪು ಹಾಕದೆ ಪೋಸ್ ನೀಡಿದ ನಟಿ; ಉರ್ಫಿಯ ಮತ್ತೊಂದು ಅವತಾರ ನೋಡಿ ಕಂಗಾಲಾದ ನೆಟ್ಟಿಗರು
ದಿನೇಶ್ ಬಾಬು ಸಿನಿಮಾ ಎಂದ ಮೇಲೆ ಒಂದಿಷ್ಟು ನಿರೀಕ್ಷೆ ಅದರ ಸುತ್ತ ಹುಟ್ಟಿಕೊಳ್ಳೋದು ಸಹಜ. ಅದಕ್ಕೆ ಕಾರಣ ಅವರು ಚಿತ್ರರಂಗಕ್ಕೆ ನೀಡಿರೋ ಸೂಪರ್ ಹಿಟ್ ಸಿನಿಮಾಗಳು. ಅವರ ಸಿನಿಮಾ ನೋಡಿದವರಿಗೆ, ನಿರ್ದೇಶನದ ತಾಕತ್ತು ಅರಿತವರಿಗೆ ಅವ್ರ ಚಿತ್ರದ ಸ್ಪೆಷಾಲಿಟಿ ಬಗ್ಗೆ ಬಿಡಿಸಿ ಹೇಳಬೇಕಿಲ್ಲ. ಇದೀಗ ಅವ್ರ ಬತ್ತಳಿಕೆಯಿಂದ 50ನೇ ಸಿನಿಮಾ ಕಸ್ತೂರಿ ಮಹಲ್ ಮೂಡಿ ಬಂದಿದೆ. ಕಥೆ, ಚಿತ್ರಕಥೆ, ಸಂಭಾಷಣೆ ಸಮೇತ ನಿರ್ದೇಶನ ಮಾಡಿ ಪ್ರೇಕ್ಷಕರ ಮುಂದೆ ಇದೇ ಶುಕ್ರವಾರ ತರ್ತಿದ್ದಾರೆ.