ಲಾಕ್‌ಡೌನ್‌ ನಂತರ ಮೊದಲ ಶೂಟಿಂಗ್‌ ಸೆಟ್‌ ವಿಸಿಟ್‌; 22 ದಿನಗಳಲ್ಲಿ ಶೂಟಿಂಗ್‌ ಮುಗಿಸಿದ ಫ್ಯಾಂಟಸಿ!

Kannadaprabha News   | Asianet News
Published : Nov 10, 2020, 09:40 AM IST
ಲಾಕ್‌ಡೌನ್‌ ನಂತರ ಮೊದಲ ಶೂಟಿಂಗ್‌ ಸೆಟ್‌ ವಿಸಿಟ್‌; 22 ದಿನಗಳಲ್ಲಿ ಶೂಟಿಂಗ್‌ ಮುಗಿಸಿದ ಫ್ಯಾಂಟಸಿ!

ಸಾರಾಂಶ

ಲಾಕ್‌ಡೌನ್‌ ಸಡಿಲಗೊಂಡ ಮೇಲೆ ಶೂಟಿಂಗ್‌ ಮೈದಾನಕ್ಕಿಳಿದ ಚಿತ್ರತಂಡಗಳು ಹೇಗೆ ಶೂಟಿಂಗ್‌ ಮಾಡಿಕೊಳ್ಳುತ್ತಿವೆ, ಮತ್ತೆ ಎಂದಿನಂತೆ ಎಲ್ಲರಲ್ಲೂ ಆ ಚಿತ್ರೀಕರಣದ ಸಂಭ್ರಮ ಕಾಣುತ್ತಿದೆಯೇ ಎಂಬುದು ಎಲ್ಲರಿಗೂ ಇದ್ದ ಕುತೂಹಲ. ಹಾಗೆ ನೋಡಿದರೆ ಕಳೆದ ಏಳೆಂಟು ತಿಂಗಳುಗಳಿಂದ ಶೂಟಿಂಗ್‌ ಸೆಟ್‌ಗಳನ್ನು ಮಾಧ್ಯಮಗಳು ಕೂಡ ನೋಡಿಲ್ಲ. ಆದರೆ ಈ ಕೊರತೆಯನ್ನು ಮೊದಲು ನೀಗಿಸಿದ್ದು ‘ಫ್ಯಾಂಟಸಿ’ ಸಿನಿಮಾ.

ಲಾಕ್‌ಡೌನ್‌ ನಂತರ ಮೊದಲ ಶೂಟಿಂಗ್‌ ವಿಸಿಟ್‌ ಕಾರ್ಯಕ್ರಮ ಅದು. ಬೆಂಗಳೂರಿನ ನಗರ ಜಂಜಾಟಗಳಿಂದ ಕೊಂಚ ದೂರ ಇರುವ ರಾಕ್‌ಲೈನ್‌ ಸ್ಟುಡಿಯೋ. ಅಲ್ಲಿ ಲೆಕ್ಕ ಹಾಕಿದರೆ 40 ರಿಂದ 50 ಮಂದಿಯನ್ನು ಒಳಗೊಂಡ ಚಿತ್ರತಂಡ. ಲಾಕ್‌ಡೌನ್‌ ನಂತರ ಸತತವಾಗಿ 22 ದಿನಗಳ ಕಾಲ ಚಿತ್ರೀಕರಣ ಮಾಡಿ, ಕೊನೆಯ ದಿನದ ಶೂಟಿಂಗ್‌ ಹಾಗೂ ಕುಂಬಳಕಾಯಿ ಹೊಡೆಯುವ ಖುಷಿ ಚಿತ್ರತಂಡದವರಲ್ಲಿ ಎದ್ದು ಕಾಣುತ್ತಿತ್ತು. ಲೈಟ್‌, ಕ್ಯಾಮೆರಾ, ರೋಲಿಂಗ್‌, ಆ್ಯಕ್ಷನ್‌- ಕಟ್‌ ಎನ್ನುವ ಶೂಟಿಂಗ್‌ ಸೆಟ್‌ನ ಶಬ್ದಗಳನ್ನು ಮುಗಿಸಿ ಚಿತ್ರತಂಡ ಮಾಧ್ಯಮಗಳ ಮುಂದೆ ಹಾಜರಾಯಿತು.

ಆಂಟಿ ಅನ್ನಬೇಡಿ, ನಾನಿನ್ನೂ ಚಿಕ್ಕೋಳು: ಪ್ರಿಯಾಂಕ 

ಪವನ್‌ ನಿರ್ದೇಶಿಸಿ, ನಿರ್ಮಿಸುತ್ತಿರುವ ಚಿತ್ರ. ಅಗ್ನಿಸಾಕ್ಷಿಯ ಖಳನಾಯಕಿ ಕಂ ಬಿಗ್‌ಬಾಸ್‌ ಸ್ಪರ್ಧಿ ಆಗಿದ್ದ ಪ್ರಿಯಾಂಕ, ಅಭಿಲಾಷ್‌, ಬಾಲರಾಜ್‌ವಾಡಿ, ಉಮೇಶ್‌ ಹೆಗಡೆ ಮುಂತಾದವರು ನಟಿಸುತ್ತಿದ್ದು, ಪಿಕೆಎಚ್‌ ದಾಸ್‌ ಕ್ಯಾಮೆರಾ ಹಿಡಿದಿದ್ದಾರೆ. ‘ಲಾಕ್‌ಡೌನ್‌ ಇದ್ದಾಗ ಎಲ್ಲೂ ಆಚೆ ಹೋಗದೆ ಚಿತ್ರಕ್ಕೆ ಬೇಕಾದ ಪ್ರಿ ಪ್ರೊಡಕ್ಷನ್‌ ಕೆಲಸಗಳನ್ನು ಸಂಪೂರ್ಣವಾಗಿ ಮುಗಿಸಿಕೊಂಡೆ. ಲಾಡ್‌ಡೌನ್‌ ಮುಗಿಯುತ್ತಿದಂತೆಯೇ ಅಂದುಕೊಂಡಂತೆ ಒಂದೇ ಹಂತದಲ್ಲಿ 22 ದಿನಗಳ ಕಾಲ ಶೂಟಿಂಗ್‌ ಮುಗಿಸಿದ್ದೇವೆ. ಶೇ.90 ಭಾಗ ಒಳಾಂಗಣ ಹಾಗೂ ಉಳಿದ 10 ಭಾಗ ಹೊರಾಂಗಣ ಚಿತ್ರೀಕರಣ ಮಾಡಿದ್ದೇವೆ. ಇದೊಂದು ಸೈಕಾಲಜಿಕಲ್‌ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ’ ಎಂಬುದು ಪವನ್‌ ಅವರ ಮಾತು ಆಗಿತ್ತು. ‘ಕ್ಷತ್ರೀಯ’, ‘ಸಂಹಾರ’ ಹಾಗೂ ‘ಅಮ್ಮ ಐ ಲವ್‌ ಯೂ’ ಚಿತ್ರಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದವರು ಪವನ್‌. ಇದು ಅವರ ಮೊದಲ ಸ್ವತಂತ್ರ್ಯ ನಿರ್ದೇಶನ ಹಾಗೂ ನಿರ್ಮಾಣದ ಸಿನಿಮಾ.

ನಟ ಅರ್ಜುನ್ ರಾಮಪಾಲ್‌ ಮನೆ, ಕಚೇರಿ ಮೇಲೆ ದಾಳಿ! 

ಚಿತ್ರದ ಪ್ರಮುಖ ಪಾತ್ರದಾರಿ ಬಾಲರಾಜವಾಡಿ ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತು ಹೇಳಿಕೊಂಡರು. ‘ಲಾಕ್‌ಡೌನ್‌ ನಂತರ ಇಷ್ಟುಬೇಗ ಶೂಟಿಂಗ್‌ ಮುಗಿಸಿದ ಖುಷಿ ಇದೆ. ಯಾವುದೇ ತೊಂದರೆ ಆಗಿಲ್ಲ. ವಿಶೇಷವಾದ ಚಿತ್ರದಲ್ಲಿ ವಿಭಿನ್ನವಾದ ಪಾತ್ರ ಮಾಡುತ್ತಿದ್ದೇನೆ’ ಎಂದರು. ಸದ್ಯ ಈ ಚಿತ್ರತಂಡದಲ್ಲಿರುವ ಹಿರಿಯ ವ್ಯಕ್ತಿ ಎಂದರೆ ಛಾಯಾಗ್ರಾಹಕ ಪಿಕೆಎಚ್‌ ದಾಸ್‌ ಅವರು. ಅವರು ಮಾತಿಗಿಂತ ಕೆಲಸ ಮುಖ್ಯ ಎನ್ನುವಂತೆ ಕಂಡರು. ಅಭಿಲಾಷ್‌ ಚಿತ್ರದ ಬಾಲ ನಟ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?