
ವರನಟ ಡಾ. ರಾಜ್‌ಕುಮಾರ್ ಹಾಗೂ ಅವರ ಮೂರೂ ಮಕ್ಕಳಿಗೂ ಹೃದಯ ಸಮಸ್ಯೆಯ ಹಿನ್ನೆಲೆ ಇದ್ದು, ಹೃದಯಾಘಾತದಿಂದಲೇ ಡಾ. ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಮೃತಪಟ್ಟಿದ್ದಾರೆ.
ಮತ್ತೊಂದು ಆಘಾತಕಾರಿ ಅಂಶವೆಂದರೆ, ಡಾ. ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಮೂವರಿಗೂ ವ್ಯಾಯಾಮ ಮಾಡುವಾಗಲೇ ಸಮಸ್ಯೆ ಕಾಣಿಸಿಕೊಂಡಿದೆ.
"
ಡಾ. ರಾಜ್ ಕುಟುಂಬದ ಆರೋಗ್ಯ ಹಿನ್ನೆಲೆ ಗಮನಿಸಿದರೆ 2006ರ ಏಪ್ರಿಲ್ 12ರಂದು ಡಾ. ರಾಜ್‌ಕುಮಾರ್ ಅವರು ಮನೆಯಲ್ಲೇ ತೀವ್ರ ಹೃದಯಾಘಾತ ಉಂಟಾಗಿ ನಿಧನ ಹೊಂದಿದ್ದರು.
ಇದಕ್ಕೂ ಮೊದಲು ಎರಡನೇ ಪುತ್ರ ರಾಘವೇಂದ್ರ ರಾಜ್‌ಕುಮಾರ್ ಅವರಿಗೆ 27ನೇ ವಯಸ್ಸಿನಲ್ಲೇ ಹೃದಯ ಸಮಸ್ಯೆ ಉಂಟಾಗಿ ಆ್ಯಂಜಿಯೋಪ್ಲಾಸ್ಟಿನಡೆಸಲಾಗಿತ್ತು. ಬಳಿಕ 2013ರಲ್ಲಿ ಬೆಳಗಿನ ವ್ಯಾಯಾಮದ (ಓಟ) ವೇಳೆ ನಿತ್ರಾಣರಾಗಿ ನೆಲಕ್ಕುರುಳಿದ್ದರು. ತಕ್ಷಣ ಆಸ್ಪತ್ರೆಗೆ ದಾಖಲಿಸಿದಾಗ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದು (ಬ್ರೈನ್ ಸ್ಟೊ್ರೕಕ್) ತಿಳಿದುಬಂದಿತ್ತು. ತಕ್ಷಣ ಕ್ಲಾಟ್ ತೆರವು ಮಾಡಲಾಗಿತ್ತು. ಬಳಿಕ ಉಂಟಾಗಿದ್ದ ನ್ಯೂನತೆಗಳನ್ನು 2021ರಲ್ಲಿ ಮತ್ತೊಮ್ಮೆ ಆಸ್ಪತ್ರೆಗೆ ಸೇರಿಸಿ ಪುನೀತ್‌ರಾಜ್‌ಕುಮಾರ್ ಅವರೇ ಸರಿಪಡಿಸುವಂತೆ ಮಾಡಿಸಿದ್ದರು.
ಇನ್ನು ಡಾ. ಶಿವರಾಜ್‌ಕುಮಾರ್ ಅವರು 2015ರಲ್ಲಿ ವ್ಯಾಯಾಮದ ಕಸರತ್ತು ನಡೆಸುವ ವೇಳೆ ಲಘು ಹೃದಯಾಘಾತ ಉಂಟಾಗಿತ್ತು. ತಕ್ಷಣ ಮಲ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆದಿದ್ದರಿಂದ ಗುಣಮುಖರಾದರು. ಇದೀಗ ಪುನೀತ್ ರಾಜ್‌ಕುಮಾರ್ ಅವರಿಗೆ ಹಠಾತ್ ತೀವ್ರ ಹೃದಯಾಘಾತ ಉಂಟಾಗಿ ಮೃತಪಟ್ಟಿದ್ದಾರೆ. ಪಾರ್ವತಮ್ಮ ರಾಜ್‌ಕುಮಾರ್ ಅವರಿಗೆ ಹೃದಯ ಸಮಸ್ಯೆ ಇರಲಿಲ್ಲ. ಸ್ತನ ಕ್ಯಾನ್ಸರ್ ಹಾಗೂ ಬಹು ಅಂಗಾಂಗ ವೈಫಲ್ಯದಿಂದ 2017ರಲ್ಲಿ ನಿಧನ ಹೊಂದಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.