ಸಿಂಪಲ್ ಸುನಿ (Simple Suni) ನಿರ್ದೇಶನದ ಈ ಸಿನಿಮಾ ಹೀಗೆ ಇದ್ದಕ್ಕಿದ್ದಂತೆ ಬಿಡುಗಡೆ ಮುಂದೂಡಿಕೊಂಡಿದ್ದು ಯಾಕೆ ಎಂಬುದು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ((Pushkara Mallikarjunaiah)) ಅವರೇ ಹೇಳುತ್ತಾರೆ ಕೇಳಿ.
- ಡಿಸೆಂಬರ್ 10ಕ್ಕೆ (December 10th) ಸಿನಿಮಾ ಬಿಡುಗಡೆ ಮಾಡುವುದಕ್ಕೆ ಎಲ್ಲ ತಯಾರಿಗಳನ್ನು ಮಾಡಿಕೊಂಡಿದ್ವಿ. ಆದರೆ, ಒಮಿಕ್ರಾನ್ (omicron) ತಳಿಯ ಕೊರೋನಾ ಭಯ ಶುರುವಾಗಿದೆ. ಇದರಿಂದ ಜನ ಮತ್ತೆ ಚಿತ್ರಮಂದಿರಗಳಿಗೆ ಬರಲು ಹಿಂದೆ ಮುಂದೆ ನೋಡುತ್ತಿದ್ದಾರೆ.
- ಅಲ್ಲದೆ ಕೊರೋನಾ (Covid19) ರೂಪಾಂತರ ತಳಿ ಹರಡುವ ಭೀತಿಯ ಹಿನ್ನೆಲೆಯಲ್ಲಿ ಸರ್ಕಾರ ಕೂಡ ಕೆಲ ಟಫ್ ರೂಲ್‌ಸ್ಗಳನ್ನು ಜಾರಿ ಮಾಡಿದೆ. ಈ ಪೈಕಿ ಚಿತ್ರಮಂದಿರಗಳು ಹಾಗೂ ಮಾಲ್‌ಗಳ (Malls) ಪ್ರವೇಶಕ್ಕೆ ಕೊರೋನಾ ಲಸಿಕೆ ಕಡ್ಡಾಯ ಮಾಡಲಾಗಿದೆ. ಅದರಲ್ಲೂ ಎರಡು ಡೋಸ್ ವ್ಯಾಕ್ಸಿನ್ (2nd Dose Vaccine) ಹಾಕಿಸಿಕೊಂಡವರಿಗೆ ಮಾತ್ರ ಥಿಯೇಟರ್ ಪ್ರವೇಶಕ್ಕೆ ಅವಕಾಶ ಇದೆ.
- ರಾಜ್ಯ ಸರ್ಕಾರ ಜನರ ಆರೋಗ್ಯದ (Health) ದೃಷ್ಟಿಯಿಂದ ಈ ಹೊಸ ರೂಲ್‌ಸ್ಗಳನ್ನು ಜಾರಿ ಮಾಡಿದೆ. ಈ ಹೊತ್ತಿನಲ್ಲಿ ನಾವು ಸಿನಿಮಾ ಬಿಡುಗಡೆ ಮಾಡುವುದು ಎಷ್ಟು ಸೂಕ್ತ ಅನಿಸಿದ್ದು, ಸದ್ಯಕ್ಕೆ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದೇವೆ.
- ಜನರ ಆರೋಗ್ಯ ಮುಖ್ಯ ಎನ್ನುವ ನಿಲುವು ಕೂಡ ನಮ್ಮದು. ಇನ್ನೂ ಫ್ಯಾಮಿಲಿ ಪ್ರೇಕ್ಷಕರ (Family Entertainment film) ಸಿನಿಮಾ ನಮ್ಮದು. ಆದರೆ, ಬಹುತೇಕರು ಕೊರೋನಾ ಲಸಿಕೆ ಎರಡು ಡೋಸ್ ಹಾಕಿಸಿಕೊಂಡಿಲ್ಲ. ಕೊರೋನಾ ಪರೀಕ್ಷೆ ಕೂಡ ಮಾಡಿಸಿಕೊಂಡಿಲ್ಲ. ಇಂಥ ಸಂಕಷ್ಟದ ಸ್ಥಿತಿಯಲ್ಲಿ ಕೋಟಿ ಕೋಟಿ ಹಾಕಿ ನಿರ್ಮಿಸಿರುವ ಸಿನಿಮಾ ಬಿಡುಗಡೆ ಮಾಡುವುದು ಹೇಗೆ?
- ಒಂದು ದೊಡ್ಡ ಚಿತ್ರಕ್ಕೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗದಂತೆ ಬಿಡುಗಡೆ ಮಾಡಬೇಕು ಎನ್ನುವ ಉದ್ದೇಶದಿಂದ ಒಮಿಕ್ರಾನ್ ತಳಿಯ ಕೊರೋನಾ ಭಯದ ಹಿನ್ನೆಲೆಯಲ್ಲಿ ಚಿತ್ರವನ್ನು ಈಗ ಬಿಡುಗಡೆ ಮಾಡುತ್ತಿಲ್ಲ.
- ಎರಡು ವರ್ಷಗಳಿಗೂ ಹೆಚ್ಚು ಕಾಲ ಕಾದಿದ್ದೇವೆ. ಇನ್ನೊಂದಿಷ್ಟು ದಿನ ಕಾದರೆ ಏನೂ ಆಗಲ್ಲ. ಅಲ್ಲದೆ ನಮ್ಮ ಚಿತ್ರದ ಕತೆ ಮೇಲೆ ನಂಬಿಕೆ ಇದೆ. ನಮ್ಮ ನಿರೀಕ್ಷೆಯಂತೆ ಸಿನಿಮಾ ಮೂಡಿ ಬಂದಿದೆ. ಹೀಗಾಗಿ ಯಾವಾಗ ಚಿತ್ರಮಂದಿರಕ್ಕೆ ಬಂದರೂ ಪ್ರೇಕ್ಷಕರು (Film Lovers) ಚಿತ್ರವನ್ನು ನೋಡಿ ಗೆಲ್ಲಿಸುತ್ತಾರೆ. ಈ ಕಾರಣಕ್ಕೆ ಒಳ್ಳೆಯ ಸಮಯದಲ್ಲಿ ಚಿತ್ರವನ್ನು ಬಿಡುಗಡೆ ಮಾಡಬೇಕಿದೆ.
- ಯಾವಾಗ ಸಿನಿಮಾ ಬಿಡುಗಡೆ ಎಂಬುದನ್ನು ಸದ್ಯದಲ್ಲೇ ಹೇಳುತ್ತೇವೆ. ಸದ್ಯಕ್ಕೆ ಚಿತ್ರಕ್ಕೆ ಎಲ್ಲ ರೀತಿಯ ಕೆಲಸಗಳನ್ನು ಮುಗಿಸಿದ್ದು, ಅವತಾರಪುರುಷ-2 ಕೆಲಸಗಳನ್ನು ಪೂರ್ಣಗೊಳಿಸುತ್ತಿದ್ದೇವೆ. ಎರಡು ಭಾಗಗಳಲ್ಲಿ ಬರಲಿರುವ ಈ ಚಿತ್ರವನ್ನು ಅದ್ದೂರಿಯಾಗಿ ಬಿಡುಗಡೆ ಮಾಡುವುದಕ್ಕೆ ಮತ್ತಷ್ಟು ಸಮಯ ಸಿಕ್ಕಿದೆ ಎಂದುಕೊಳ್ಳುತ್ತೇನೆ.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.