Mafia film Muhurtha:ಪ್ರಜ್ವಲ್‌ ದೇವರಾಜ್‌ ನಟನೆಯ ಮಾಫಿಯಾಗೆ ಮುಹೂರ್ತ

Kannadaprabha News   | Asianet News
Published : Dec 06, 2021, 09:32 AM ISTUpdated : Dec 06, 2021, 10:18 AM IST
Mafia film Muhurtha:ಪ್ರಜ್ವಲ್‌ ದೇವರಾಜ್‌ ನಟನೆಯ ಮಾಫಿಯಾಗೆ ಮುಹೂರ್ತ

ಸಾರಾಂಶ

ಪ್ರಜ್ವಲ್‌ ದೇವರಾಜ್‌ ನಟನೆಯ ‘ಮಾಫಿಯಾ’ ಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರಿನ ಬನಶಂಕರಿ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ನಡೆಯಿತು.

 ದುನಿಯಾ ವಿಜಯ್‌, ಪ್ರಿಯಾಂಕ ಉಪೇಂದ್ರ ಚಿತ್ರತಂಡಕ್ಕೆ ಶುಭ ಹಾರೈಸಿದರು. ‘ನಾನೂ ಪ್ರಜ್ವಲ್‌ ಜಿಮ್‌ಮೇಟ್ಸ್‌. ಪ್ರಜ್ವಲ್‌ ಮೊದಲಿಂದಲೂ ಸಿನಿಮಾ ಹೀರೋ ಎಂಬ ದುರಹಂಕಾರಗಳಿಲ್ಲದೇ ಎಲ್ಲರನ್ನೂ ಒಂದೇ ಥರ ನೋಡುವ ವ್ಯಕ್ತಿ. ಈ ಚಿತ್ರಕ್ಕೆ ಒಳ್ಳೆಯ ತಾರಾಗಣ, ಟೆಕ್ನಿಕಲ್‌ ಟೀಮ್‌ ಇದೆ. ಚಿತ್ರ ಚೆನ್ನಾಗಿ ಮೂಡಿ ಬರುವ ವಿಶ್ವಾಸವಿದೆ’ ಎಂದರು ವಿಜಯ್‌.

ಪ್ರಿಯಾಂಕಾ ಉಪೇಂದ್ರ, ‘ಈ ಚಿತ್ರದ ನಿರ್ದೇಶಕ ಲೋಹಿತ್‌ ಜೊತೆಗೆ ಮಮ್ಮಿ ಸೇರಿ ಎರಡು ಸಿನಿಮಾ ಮಾಡಿದ್ದೇನೆ. ಈ ಯುವ ನಿರ್ದೇಶಕ ಉತ್ತಮ ಪ್ರತಿಭಾವಂತ’ ಎಂದರು.

ನಾಯಕ ಪ್ರಜ್ವಲ್‌ ಮಾತನಾಡಿ, ‘ಈ ಚಿತ್ರದಲ್ಲಿ ತಂದೆ ದೇವರಾಜ್‌ ಅವರ ಜೊತೆಗೆ ನಟಿಸೋದು ಖುಷಿಯ ವಿಷಯ. ಪೊಲೀಸ್‌ ಇನ್ಸ್‌ಪೆಕ್ಟರ್‌ ಪಾತ್ರ. ಆತ ಸ್ನೇಹಿತನ ಕಾರಣದಿಂದ ಚಿಕ್ಕ ವಯಸ್ಸಿನಲ್ಲೇ ಪೊಲೀಸ್‌ ವೃತ್ತಿ ಬಗ್ಗೆ ಕುತೂಹಲ ಬೆಳೆಸಿಕೊಂಡಿರುತ್ತಾನೆ. ಮುಂದೆ ಪೊಲೀಸ್‌ ಆಫೀಸರ್‌ ಆದಾಗ ಏನೇನು ಮಾಡ್ತಾನೆ ಅನ್ನೋದು ಒನ್‌ಲೈನ್‌’ ಎಂದರು.

ನಿರ್ದೇಶಕ ಲೋಹಿತ್‌ ಅವರಿಗೆ ಈ ಸಿನಿಮಾ ಬಗ್ಗೆ ಎಕ್ಸೈಟ್‌ಮೆಂಟ್‌ ಇದೆಯಂತೆ. ಸಾಹಸ ನಿರ್ದೇಶಕ ಡ್ಯಾನಿ ಮಾಸ್ಟರ್‌ಗೆ ಇದು 666ನೇ ಚಿತ್ರ. ಸಲಗ ನಿರ್ದೇಶಕ ಕೆ ಪಿ ಶ್ರೀಕಾಂತ್‌, ನಾಯಕಿ ಅದಿತಿ ಪ್ರಭುದೇವ, ನಟ ಒರಟ ಪ್ರಶಾಂತ್‌, ನಿರ್ಮಾಪಕ ಕುಮಾರ್‌ ಉಪಸ್ಥಿತರಿದ್ದರು. ಚಿತ್ರದ ಶೂಟಿಂಗ್‌ ಡಿ 6ರಿಂದ ಬೆಂಗಳೂರಿನಲ್ಲಿ ನಡೆಯಲಿದೆ.

ವೀರಂ ಹಾಡಿಗೆ ಪ್ರಜ್ವಲ್‌ ವಿಗ್‌ ಹಾಕಿ ನಟನೆ

ಪ್ರಜ್ವಲ್‌ ದೇವರಾಜ್‌ ಮಾಫಿಯಾ ಚಿತ್ರಕ್ಕೋಸ್ಕರ ಹೇರ್‌ ಕಟ್‌ ಮಾಡಿದ್ದಾರೆ. ಆದರೆ ವೀರಂ ಚಿತ್ರದಲ್ಲಿರುವುದು ಅವರ ಹಳೆಯ ಹೇರ್‌ ಸ್ಟೈಲ್‌. ಈ ಚಿತ್ರದ ಒಂದು ಹಾಡಿನ ಚಿತ್ರೀಕರಣ ಬಾಕಿ ಇದೆ. ಅದರಲ್ಲಿ ಅನಿವಾರ್ಯವಾಗಿ ವಿಗ್‌ ಹಾಕಿ ನಟಿಸೋದಾಗಿ ಪ್ರಜ್ವಲ್‌ ಹೇಳಿದ್ದಾರೆ. ಮಾಫಿಯಾ ಬಳಿಕ ತೆಲುಗಿನ ಖ್ಯಾತ ನಿರ್ದೇಶಕ ಸುಕುಮಾರ್‌ ಗರಡಿಯಲ್ಲಿ ಪಳಗಿದ ಹರೀಶ್‌ ಜಕ್ಕ ಅವರ ಸೈನ್ಸ್‌ ಫಿಕ್ಷನ್‌ ಪ್ರಾಜೆಕ್ಟ್ ಅನ್ನು ಪ್ರಜ್ವಲ್‌ ಕೈಗೆತ್ತಿಕೊಳ್ಳಲಿದ್ದಾರೆ.

6ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಪ್ರಜ್ವಲ್ ದೇವರಾಜ್ ದಂಪತಿ

ಕಳೆದ ಎರಡು ವರ್ಷಗಳಿಂದಲೂ ಪ್ರಜ್ವಲ್​ ದೇವರಾಜ್​ ಅವರು ಉದ್ದ ಕೂದಲು ಬಿಟ್ಟಿದ್ದರು. ಆದರೆ ಈಗ 'ಮಾಫಿಯಾ' ಚಿತ್ರಕ್ಕಾಗಿ ಅವರು ಗೆಟಪ್​ ಚೇಂಜ್​ ಆಗಿದೆ. ಅದರ ಮೊದಲ ಹಂತವಾಗಿ ಹೊಸ ಹೇರ್‌ ಸ್ಟೈಲ್‌ ಮಾಡಿಕೊಂಡಿದ್ದು, ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ವಿಶೇಷ ಎಂದರೆ ತಮ್ಮ ಕೂದಲನ್ನು ಕ್ಯಾನ್ಸರ್‌ನಿಂದ ಕೂದಲು ಕಳೆದುಕೊಂಡ ರೋಗಿಗಳಿಗೆ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಮುಖ್ಯವಾಗಿ  ಕ್ಯಾನ್ಸರ್​ ರೋಗಕ್ಕೆ ಚಿಕಿತ್ಸೆ ಪಡೆಯುವವರ ಕೂದಲು ಉದುರುತ್ತದೆ. ಅಂತವರಿಗೆ ಸಹಾಯ ಆಗಲಿ ಎಂದು ಅನೇಕರು ಕೂದಲು ದಾನ ಮಾಡುತ್ತಾರೆ. ಈ ಹಿಂದೆ ನಟ ಧ್ರುವ ಸರ್ಜಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕೂದಲು ದಾನ ಮಾಡಿದ ಉದಾಹರಣೆ ಕೂಡ ಇದೆ.

ಪ್ರಜ್ವಲ್ ದೇವರಾಜ್‌ ಹೊಸ ಚಿತ್ರದಲ್ಲಿ ಬಾಲಿವುಡ್ ನಟ ಗೋವಿಂದ?

'ಮಾಫಿಯಾ' ಸಿನಿಮಾವನ್ನು  'ಅಂಬಿ ನಿಂಗ್ ವಯಸ್ಸಾಯ್ತೋ' ಖ್ಯಾತಿಯ ಗುರುದತ್ ಗಾಣಿಗ ನಿರ್ದೇಶನ ಮಾಡಬೇಕಿತ್ತು. ಕಾರಣಾಂತರಗಳಿಂದ 'ಮಮ್ಮಿ', 'ದೇವಕಿ' ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿರುವ ನಿರ್ದೇಶಕ ಲೋಹಿತ್ (Lohith) ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಬಗ್ಗೆ, ಚಿತ್ರದ ಒನ್‌ಲೈನ್ ಕಥೆಯನ್ನು ಉಳಿಸಿಕೊಂಡು, ಚಿತ್ರಕಥೆಯನ್ನು ಬದಲಾವಣೆ ಮಾಡಿಕೊಳ್ಳುವೆ. ನನ್ನ ಶೈಲಿಯಲ್ಲಿ ಸಿನಿಮಾದ ಮೇಕಿಂಗ್ ಇರಲಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಹೊಂದಿದೆ. ಅದನ್ನು ಬಹಳ ರೋಚಕವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಲಿದ್ದೇನೆ. ಚಿತ್ರದ ಮುಹೂರ್ತ ಸಮಾರಂಭ ಡಿಸೆಂಬರ್ 2ರಂದು ನಡೆಯಲಿದ್ದು, ಡಿ.6ರಿಂದ ಚಿತ್ರೀಕರಣ ಆರಂಭಿಸಲು ತಯಾರಿ ಮಾಡಿಕೊಂಡಿದ್ದೇನೆ. ಬೆಂಗಳೂರು, ಮೈಸೂರು ಮತ್ತು ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ ಲೋಹಿತ್ ತಿಳಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?