ಸೂಪರ್ ಹಿಟ್ ಕನ್ನಡ ಅಮೆರಿಕಾ ಅಮೆರಿಕಾ ಸಿನಿಮಾದ ಹಿಂದಿರುವ ಕಷ್ಟಗಳನ್ನು ಬಿಚ್ಚಿಟ್ಟ ನಾಗತಿಹಳ್ಳಿ ಚಂದ್ರಶೇಖರ್.......
ಒಂದು ವರ್ಷಗಳ ಕಾಲ ಕನ್ನಡ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡು ಸೂಪರ್ ಹಿಟ್ ಅಮೆರಿಕಾ ಅಮೆರಿಕಾ ಚಿತ್ರದ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರಗಳನ್ನು ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್ ರಿವೀಲ್ ಮಾಡಿದ್ದಾರೆ. ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಮತ್ತು ಹೇಮಾ ನಟಿಸಿದ್ದಾರೆ. ಈ ಕಥೆ ಹುಟ್ಟಿದ್ದು ಹೇಗೆ? ಈ ಪಾತ್ರಕ್ಕೆ ಮೊದಲು ಆಯ್ಕೆ ಆಗಿದ್ದವರು ಯಾರು ಎಂದು ಹಂಚಿಕೊಂಡಿದ್ದಾರೆ.
'90 ದಶಕದಲ್ಲಿ ನಾನು ಅಮೆರಿಕಾಗೆ ಹೋದಾಗ ವಿಮಾನ ನಿಲ್ದಾಣದಲ್ಲಿ ನಡೆದ ಒಂದು ಅವಮಾನ ಅ ಕಥೆ ಬರೆಯಲು ಪ್ರೇರಣೆಯಾಯಿತ್ತು ಎನ್ನಬಹುದು. ಅದೇ ಮೊದಲ ಬಿಂದು ಅನಿಸುತ್ತದೆ. ನನ್ನ ಆಪ್ತನೊಬ್ಬ ನೀನು ಅಮೆರಿಕಾಗೆ ಬರಬೇಕು, ಅಲ್ಲಿ ಎಲ್ಲಾ ಸುತ್ತಿ ನೋಡಬೇಕು ಎಂದು ಪದೇ ಪದೇ ಹೇಳುತ್ತಿದ್ದ. ಆತನ ಮಾತು ನಂಬಿ ಹೋಗಿದ್ದೆ. ಅಲ್ಲಿ ಹೋದರೆ ಅತ ನನ್ನ ಫೋನ್ ತೆಗೆಯಲಿಲ್ಲ. ಮಧ್ಯರಾತ್ರಿ ಎಲ್ಲಿಗೆ ಹೋಗಬೇಕು ಎಂದು ಗೊತ್ತಾಗದಂತಹ ಸ್ಥಿತಿ ಬಂದಿತ್ತು. ಆ ಘಟನೆಯಿಂದ ಅಮೆರಿಕಾ ಬಗ್ಗೆ ತಿಳಿಯಲು ಸಿನಿಮಾ ಮಾಡಲು ಹಠಕ್ಕೆ ಬಿದ್ದೆ' ಎಂದು ನಾಗತಿಹಳ್ಳಿ ಚಂದ್ರಶೇಖರ್ ರವರು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.
ಆ ಮತ್ತು ಳ ಪದದ ಉಚ್ಚಾರಣೆ ಬಾರದ ಮೇಕಪ್‌ಮ್ಯಾನ್ ಕಾಲೆಳೆದ 'ರಕ್ತಕಣ್ಣೀರು' ನಟಿ; ಆಂಟಿ ತುಂಬಾ ತುಂಟಿ ಎಂದ ನೆಟ್ಟಿರಗು!
'ರಮೇಶ್ ಅರವಿಂದ ಆಗ ತಮಿಳು ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದರು. ಚಿತ್ರದ ಶಶಾಂಕ್ ಪಾತ್ರ ಪ್ರಕಾಶ್ ರೈ ಮಾಡಬೇಕಿತ್ತು ಆದರೆ ಕಾರಣಾಂತರಗಳಿಂದ ತಪ್ಪಿ ಹೋಯಿತ್ತು. ಸೂರ್ಯ, ಚಂದ್ರ, ಭೂಮಿ ಎನ್ನುವ ಮೂರು ಪ್ರತಿಮೆಗಳು ಹಾಗೂ ಯಾವ ಮೋಹನ ಮುರಳಿ ಕರೆಯಿತ್ತು ಎನ್ನುವ ಹಾಡು ನನ್ನನ್ನು ತುಂಬಾ ಕಾಡುತ್ತಿತ್ತು. ಎಲ್ಲವನ್ನು ಸೇರಿಸಿ ನಾನು ಅಮೆರಿಕಾ ಅಮೆರಿಕಾ ಕಥೆ ಮಾಡಿದೆ. ಶಶಾಂಕ್ ಪಾತ್ರದಲ್ಲಿ ಪ್ರಶಾಕ್ ರೈ ನಟಿಸಲು ಸಾಧ್ಯವಾಗದೇ ಇದ್ದಾಗ ಸುದೀಪ್ ಹೆಸರು ಬಂತು. ಅಕ್ಷಯ್ ಮಾಡಿದ ಆ ಪಾತ್ರ ಸುದೀಪ್ ಮಾಡಬೇಕಿತ್ತು. ಕಾರಣಾಂತರಗಳಿಂದ ಇಬ್ಬರು ನಟಿಸಲು ಸಾಧ್ಯವಾಗಲಿಲ್ಲ. ಏನಾಯಿಯೋ ಅದು ಒಳ್ಳೆಯದ್ದಕ್ಕೆ ಯಾಕೆಂದರೆ ಇಬ್ಬರೂ ಅಗ ದೊಡ್ಡದಾಗಿ ಬೆಳೆದಿದ್ದಾರೆ ಹಾಗಾಗಿ ನಮ್ಮ ಚಿತ್ರ ಬಿಟ್ಟಿದ್ದರಿಂದ ಅವರಿಗೆ ನಷ್ಟ ಅಂತ ಏನೂ ಆಗಲಿಲ್ಲ. ಆ ಸಂದರ್ಭ ಆ ರೀತಿ ಇತ್ತು' ಎಂದು ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ದರ್ಶನ್ ಅಭಿಮಾನಿಗಳ ಟೀಕೆಗೆ ಖಡಕ್ ಉತ್ತರ ಕೊಟ್ಟ ದುನಿಯಾ ವಿಜಯ್; ನಿಜಕ್ಕೂ ಏನ್ ಆಯ್ತು?