ನಟ, ನಿರ್ದೇಶಕ ರಕ್ಷಿತ್ ಶೆಟ್ಟಿಗೆ ಕಾಪಿ ರೈಟ್ಸ್ ಉಲ್ಲಂಘನೆ ಆರೋಪದಲ್ಲಿ ದೆಹಲಿ ಹೈಕೋರ್ಟ್ 20 ಲಕ್ಷ ರೂಪಾಯಿ ಠೇವಣಿ ಇಡುವಂತೆ ಸೂಚಿಸಿದೆ. 'ಬ್ಯಾಚುಲರ್ ಪಾರ್ಟಿ' ಸಿನಿಮಾದಲ್ಲಿ ಹಾಡುಗಳನ್ನು ಅನಧಿಕೃತವಾಗಿ ಬಳಸಿಕೊಂಡ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರು (ಆ.17): ನಟ,ನಿರ್ದೇಶಕ ರಕ್ಷಿತ್ ಶೆಟ್ಟಿಗೆ 20 ಲಕ್ಷ ರೂಪಾಯಿ ಠೇವಣಿ ಇಡುವಂತೆ ದೆಹಲಿ ಹೈಕೋರ್ಟ್ ನಿರ್ದೇಶನ ನೀಡಿದೆ. ಕಾಪಿ ರೈಟ್ಸ್ ಉಲ್ಲಂಘನೆ ಆರೋಪದಲ್ಲಿ ರಕ್ಷಿತ್ ಶೆಟ್ಟಿ ಸಿಲುಕಿದ್ದು, ಎಂಆರ್.ಟಿ ಮ್ಯೂಸಿಕ್ ಸಂಸ್ಥೆ ದೆಹಲಿ ಹೈಕೋರ್ಟ್ ಮೆಟ್ಟಿಲು ಏರಿತ್ತು. ಆದರೆ ರಕ್ಷಿತ್ ಶೆಟ್ಟಿ ದೆಹಲಿ ಕೋರ್ಟ್ ಗೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ರಕ್ಷಿತ್ ಶೆಟ್ಟಿ ಮತ್ತು ಪರಂವಾ ಸ್ಟುಡಿಯೋಗೆ ಕಾಪಿ ರೈಟ್ ಉಲ್ಲಂಘನೆಗಾಗಿ 20 ಲಕ್ಷ ಠೇವಣಿ ಇಡಲು ಮತ್ತು ಇನ್ಸ್ಟಾದಲ್ಲಿ ಶೇರ್ ಮಾಡಿರೋ ಹಾಡು ತಗೆಯುವಂತೆ ಆದೇಶ ಹೊರಡಿಸಿದೆ.
ರಕ್ಷಿತ್ ಶೆಟ್ಟಿ ವಿರುದ್ಧ ನ್ಯಾಯ ಎಲ್ಲಿದೆ ಸಾಂಗ್ ಕಾಪಿ ರೈಟ್ಸ್ ಉಲ್ಲಂಘನೆಯ ಆರೋಪ ಇದ್ದು, ಬ್ಯಾಚುಲರ್ಸ್ ಪಾರ್ಟಿ ಸಿನಿಮಾಗಾಗಿ ನ್ಯಾಯ ಎಲ್ಲಿದೆ ಸಾಂಗ್ ಅನಧಿಕೃತವಾಗಿ ಬಳಕೆ ಮಾಡಿದ್ದಾರೆಂಬ ದೂರಿದೆ. ರಕ್ಷಿತ್ ಶೆಟ್ಟಿ ಒಡೆತನದ ಪರಂವಾ ಸ್ಟುಡಿಯೋಸ್ ನಿರ್ಮಾಣ ಮಾಡಿರುವ ‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲಿ ‘ನ್ಯಾಯ ಎಲ್ಲಿದೆ’, ‘ಒಮ್ಮೆ ನಿನ್ನನ್ನು..’ ಹಾಡುಗಳನ್ನು ಅನುಮತಿ ಪಡೆಯದೆ ,ಕಾನೂನು ಬಾಹಿರವಾಗಿ ಬಳಕೆ ಮಾಡಿಕೊಂಡಿದ್ದಾರೆಂದು ಆರೋಪಿಸಿ ಕೇಸ್ ದಾಖಲಾಗಿತ್ತು.
ಗಿಚ್ಚಿಗಿಲಿ ಗಿಲಿ ಧನರಾಜ್ ಆಚಾರ್ ಸ್ಟ್ರಗಲ್ ಸ್ಟೋರಿ, ಊಟಕ್ಕೂ ಪರದಾಡುವಾಗ ಹಣಕ್ಕಾಗಿ ಕಳ್ಳರ ದಾಳಿ!
ಈ ಸಂಬಂಧ MRT ಮ್ಯೂಸಿಕ್ ಸಂಸ್ಥೆಯ ನವೀನ್ ಕುಮಾರ್ ದೂರು ನೀಡಿದ್ದರು. ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಆಗಿತ್ತು. ಕಾಪಿ ರೈಟ್ಸ್ ಆ್ಯಕ್ಸ್ ಸೆ. 63 ರಡಿ ಅನುಮತಿ ಇಲ್ಲದೇ ಹಾಡು ಬಳಕೆ ಮಾಡಿದ ಆರೋಪದಲ್ಲಿ ನಟ ರಕ್ಷಿತ್ ಶೆಟ್ಟಿ ವಿರುದ್ಧ ಕೇಸ್ ದಾಖಲು ಮಾಡಲಾಗಿತ್ತು. ನಟ ರಕ್ಷಿತ್ ಠಾಣೆಗೆ ವಿಚಾರಣೆಗೆ ಕೂಡ ಹಾಜರಾಗಿದ್ದರು.