
ವೈಶಾಖದ ದಿನಗಳು, ಮಹಾಲಕ್ಷ್ಮಿ (Mahalakshmi) ಸಿನಿಮಾ ಸೇರಿದಂತೆ ಅನೇಕ ಕನ್ನಡ ಸಿನಿಮಾಗಳನ್ನು ನಿರ್ದೇಶನ ಮಾಡಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ನಿರ್ದೇಶಕ ಕಟ್ಟೆ ರಾಮಚಂದ್ರ (Katte Ramachandra) ಅವರು ಇಂದು ಇಹಲೋಕ ತ್ಯಜಿಸಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಕಟ್ಟೆ ರಾಮಚಂದ್ರ ಅವರಿಗೆ 75ವರ್ಷ, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಚಾಮರಾಜಪೇಟೆಯಲ್ಲಿರುವ ರುಧ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಕಟ್ಟೆ ರಾಮಚಂದ್ರ ಅವರು ಡಾ. ವಿಷ್ಣುವರ್ಧನ (Dr Vishnuvardhan) ಕುಟುಂಬಕ್ಕೆ ತುಂಬಾನೇ ಆತ್ಮೀಯರಾಗಿದ್ದರು. ದಾದಾ ಅವರ ಅನೇಕ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಅರಿವು (Arivu) ಹಾಗೂ ವೈಶಾಖದ ದಿನಗಳು ಸಿನಿಮಾಗಳಿಂದ ಪ್ರಖ್ಯಾತಿ ಪಡೆದುಕೊಂಡಿದ್ದರು. ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ಎಂಬ ಹೆಗ್ಗಳಿಕೆಯಿದೆ.
ಭಾನುವಾರವಷ್ಟೇ ಕಟ್ಟೆ ರಾಮಚಂದ್ರ ಅವರ ಮಡದಿ ಕೊನೆಯುಸಿರೆಳೆದಿದ್ದರು. ಪತ್ನಿ ತೀರಿಕೊಂಡ 5 ದಿನಕ್ಕೆ ರಾಮಚಂದ್ರ ಅವರು ಅಗಲಿರುವುದಕ್ಕೆ ಕೇಳಿ ಎಲ್ಲರು ಶಾಕ್ ಆಗಿದ್ದಾರೆ.
ಪ್ರದೀಪ್ ರಾಜ್:
ನಿರ್ದೇಶಕ ಪ್ರದೀಪ್ ರಾಜ್ ಜನವರಿ 20ರಂದು ಅಗಲಿದ್ದರು. ಹಲವು ತಿಂಗಳಿನಿಂದ ಅರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಕೊರೋನಾ ವೈರಸ್‌ಗೆ (Covid19) ಬಲಿಯಾಗಿದ್ದಾರೆ. ಪಾಂಡಿಚೇರಿಯ (Puducherry) ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿರುವ ಪ್ರದೀಪ್ ಅವರ ಅಂತ್ಯಕ್ರಿಯೆಯನ್ನು ಪಾಂಡಿಚೇರಿಯಲ್ಲಿಯೇ ಮಾಡಲಾಗಿತ್ತು.
ಸ್ಕ್ರಿಪ್ಟ್ ರೈಟರ್ ಹರ್ಷ ನಿಧನ:
ಕಾಮಿಡಿ ಕಿಲಾಡಿಗಳು ಶೋನಲ್ಲಿ ಸ್ಕ್ರಿಪ್ಟ್ ರೈಟರ್ (Script Writer) ಆಗಿ ಕೆಲಸ ಮಾಡುತ್ತಿದ್ದ ಹರ್ಷ (Harsha) ಜನವರಿ 7ರಂದುಕೊನೆ ಉಸಿರೆಳೆದಿದ್ದರು.ಹರ್ಷ ಮೂಲತಃ ತುಮಕೂರಿನವರು (Tumakuru). ಎಂಬಿಎ (MBA) ಶಿಕ್ಷಣ ಪಡೆದು ಬೆಂಗಳೂರಿನ (Bengaluru) ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸಿನಿಮಾ ಕ್ಷೇತ್ರದ ಕಡೆ ಹೆಚ್ಚು ಆಸಕ್ತಿ ಇದ್ದ ಕಾರಣ ಸ್ಕ್ರಿಪ್ಟ್ ರೈಟರ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಕೆವಿ ರಾಜು ನಿಧನ:
ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಕೆವಿ ರಾಜು ಅವರು ಡಿಸೆಂಬರ್ ತಿಂಗಳಿನಲ್ಲಿ ನಿಧನರಾಗಿದ್ದರು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ(Bengaluru) ಬಸವೇಶ್ವರ ನಗರದ ತಮ್ಮ ನಿವಾಸದಲ್ಲೇ ಚಿಕಿತ್ಸೆ(Treatment) ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿ ಆಗದೆ ಬೆಳಗ್ಗೆ 8 ಗಂಟೆಗೆ ಕೊನೆಯುಸಿರೆಳೆದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.