ಬ್ಯೂಟಿ ಸೀಕ್ರೆಟ್‌ ರಿವೀಲ್ ಮಾಡಿದ ನಟಿ Meghana Gaonkar; ಸರಳ ಟಿಪ್ಸ್‌ ಇದು!

By Suvarna NewsFirst Published Jan 27, 2022, 5:48 PM IST
Highlights

ಚಿತ್ರರಂಗದ ಮಿಲ್ಕ್‌ ಬ್ಯೂಟಿ ಮೊದಲ ಬಾರಿಗೆ ತಮ್ಮ ತ್ವಚೆಯ ರಹಸ್ಯ ರಿವೀಲ್ ಮಾಡಿದ್ದಾರೆ. 
 

2010ರಲ್ಲಿ 'ನಮ್ ಏರಿಯಾದಲ್ಲಿ ಒಂದು ದಿನ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಮೇಘನಾ ಗಾಂವ್ಕರ್, ಚಿತ್ರ ರಂಗದಲ್ಲಿರುವ ಏಕೈಕ ಮಿಲ್ಕ್‌ ಬ್ಯೂಟಿ ಅಂದ್ರೆ ತಪ್ಪಾಗದು. ಸುಮಾರು 7 ಸಿನಿಮಾ ಮಾಡಿರುವ ಈ ನಟಿ ಇದೀಗ ಯುಟ್ಯೂಬ್ ಪ್ರಪಂಚಕ್ಕೆ ಕಾಲಿಟ್ಟಿದ್ದಾರೆ. ಮನೆ ಹೇಗಿದೆ, ದಿನಚರಿ ಏನು, ಎಂದು ಹಂಚಿಕೊಳ್ಳುತ್ತಿದ್ದ ನಟಿಗೆ ಅಭಿಮಾನಿಗಳು ಹೊಸ ಬೇಡಿಕೆ ಮುಂದಿಟ್ಟರು. ಅದುವೇ ಸ್ಕಿನ್ ಕೇರ್. ಮೇಘನಾ ಅವರ ತ್ವಚೆ ಅಷ್ಟು ಕ್ಲಿಸ್ಟರ್ ಕ್ಲಿಯರ್ ಆಗಿದೆ. 

ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇರುವ ಮೇಘನಾ ತಮ್ಮ ಟ್ರ್ಯಾವಲ್ ಫೋಟೋ ಮತ್ತು ಟೀ ಪುಡಿ ಮತ್ತು ಎಲೆ ಕಲೆಕ್ಷನ್ ಬಗ್ಗೆ ಹಂಚಿಕೊಳ್ಳುತ್ತಾರೆ. ಆದರೆ ಎಂದಿಗೂ ಸ್ಕಿನ್, ಹೇರ್ ಅಥವಾ ಬ್ಯೂಟಿ ಬಗ್ಗೆ ರಿವೀಲ್ ಮಾಡಿರಲಿಲ್ಲ. ಅಭಿಮಾನಿಗಳ ಬೇಡಿಕೆ ಮೇಲೆ ಈಗ ಅದನ್ನೂ ಮಾಡಿದ್ದಾರೆ. 'ನಾನು ತುಂಬಾ ಸಿಂಪಲ್ ಮತ್ತು ಬೆಸ್ಟ್‌ ರೂಲ್‌ ಫಾಲೋ ಮಾಡುವುದು ಎಂದು ವಿಡಿಯೋ ಆರಂಭಿಸಿದ್ದಾರೆ..

1. ಫೇಸ್‌ವಾಷ್-  ತಮ್ಮ ತ್ವಚೆ ಹೇಗಿದೆ ಎಂದು ನಾವು ಮೊದಲು ಕಂಡು ಹಿಡಿಯಬೇಕು. ನಾನು ಸಾಕಷ್ಟು ಎಕ್ಸಪರಿಮೆಂಟ್ ಮಾಡಿರುವೆ. Oily ಮುಖ ಇದ್ದರೆ ಒಂದು ರೀತಿ ಫೇಸ್‌ವಾಷ್ ಬರುತ್ತದೆ, ಒಣ ತ್ವಚೆ ಇದ್ದರೆ ಬೇರೆ ರೀತಿ ಇರುತ್ತದೆ. ಹೀಗಾಗಿ ಸರಿಯಾದ ಫೇಸ್‌ವಾಶ್ ಆಯ್ಕೆ ಮಾಡಿಕೊಳ್ಳಿ.

2. ಸನ್‌ಕ್ರೀಮ್ -  ಇದು ನನಗೆ ತುಂಬಾನೇ ಇಷ್ಟ. ಇದು ಅಷ್ಟು ಮುಖ್ಯ. ಮನೆಯಿಂದ ಹೊರಗಡೆ ಹೋಗುತ್ತಿಲ್ಲ ಅಂದ್ರೆ ಸನ್‌ಕ್ರೀಮ್ ಬಳಸಬೇಕು.

3. ನೀರು - ನನ್ನ ವೈದ್ಯರು ಕೂಡ ನನಗೆ ಕೊಟ್ಟಿರುವ ಮೊದಲ ಟಿಪ್ ನೀರು ಕುಡಿಯುವುದು. ನಾನು ಕಡಿಮೆ ಕುಡಿಯುವೆ. ನಾನು ಇದನ್ನು ಮೊದಲು ಫಾಲೋ ಮಾಡಬೇಕು. 

ಹಾರರ್ ಸಿನಿಮಾದಲ್ಲಿ ದೆವ್ವ ಆದ ಮೇಘನಾ ಗಾಂವ್ಕರ್!

4. ಯೋಗ - ಪ್ರತಿ ದಿನ 1 5ರಿಂದ 20 ನಿಮಿಷ ಯೋಗ ಮಾಡಬೇಕು. ಇದು ತುಂಬಾನೇ ನ್ಯಾಚುರಲ್. ವರ್ಕೌಟ್ ಆದರೂ ಮಾಡಿ, ವಾಕಿಂಗ್ ಆದರೂ ಮಾಡಿ. ನಾವು ಎಷ್ಟು ಬೇವರುತ್ತೀವಿಯೋ, ನಮ್ಮ ತ್ವಚೆ ಅಷ್ಟು ಗ್ಲೋ ಆಗುತ್ತದೆ. ನನ್ನ ಸ್ನೇಹಿತರು ಸದಾ ಪ್ರಶ್ನೆ ಮಾಡುತ್ತಾರೆ, ನಾನು ಏನೂ ಮಾಡುವುದಿಲ್ಲ, ಅದೆಲ್ಲಾ ವರ್ಕೌಟ್ ಪ್ರಭಾವ.

5. Oil pulling - ತುಂಬಾ ಜನರಿಗೆ ಈ ವಿಚಾರದ ಬಗ್ಗೆ ಗೊತ್ತಿದೆ. ಇದು ಏನೆಂದರೆ ಬೆಳಗ್ಗೆ ಎದ್ದ ತಕ್ಷಣ ಒಂದು ಸ್ಪೂನ್ ತೆಂಗಿನ ಎಣ್ಣಿ ಗಟ್ಟಿ ಆಗಿರುತ್ತದೆ ಅಲ್ವಾ...ಅದನ್ನು ಬಾಯಿಗೆ ಹಾಕಿಕೊಂಡು ಕ್ಲೀನ್ ಮಾಡಿ. ನೀರು ಹಾಕೊಂಡು ಬಾಯಿ ಹೇಗೆ ತೊಳೆದುಕೊಳ್ಳುತ್ತೀರೋ ಹಾಗೆ ಇದನ್ನು ಮಾಡಬೇಕು. ಆದರೆ ನೀರು ಬಳಸಬಾರದು. ಹಲ್ಲು ತಿಕ್ಕುವ ಮೊದಲು ಇದನ್ನು ಮಾಡಬೇಕು. ಇದನ್ನು ಎಲ್ಲಾ ನನ್ನ ಸಿನಿ ಸ್ನೇಹಿತರೂ ಮಾಡುತ್ತಾರೆ. ಇದು ತ್ವಚೆಗೆ ಮಾತ್ರವಲ್ಲ, ಇಡೀ ದೇಹದ ಆರೋಗ್ಯಕ್ಕೆ ಒಳ್ಳೆಯದು. 

6. ಫೇಸ್‌ ಪ್ಯಾಕ್ - ಮಾರ್ಕೆಟ್‌ನಲ್ಲಿ ತುಂಬಾನೇ ಪ್ರೊಡಕ್ಟ್‌ಗಳು ಬಂದಿವೆ. ಆದರೆ ನಾನು ಮನೆಯಲ್ಲಿ ಮಾಡಿಕೊಂಡಿರುವ ಪ್ಯಾಕ್ ಬಳಸುತ್ತೇನೆ. ಕಡ್ಲೆ ಹಿಟ್ಟು, ಅರಿಶಿಣ, ಹಾಲು ಮಿಸ್ಕ್‌ ಮಾಡಿಕೊಂಡು ಹಚ್ಚಿಕೊಳ್ಳಿ. ಬಾದಾಮಿ ಇದ್ದರೆ, ಅದನ್ನೂ ಕೂಡ ಪುಡಿ ಮಾಡಿಕೊಂಡು ಮುಖಕ್ಕೆ ಹಚ್ಚಿ. ರೋಸ್ ವಾಟರ್ ಇದ್ದರೂ ಬಳಸಿ. 20 ನಿಮಿಷ ಆದ ಮೇಲೆ ಸೂಪರ್ ಆಗಿರುತ್ತದೆ. ನಮ್ಮ ಸ್ಕಿನ್ ಮತ್ತು ಆರೋಗ್ಯ ಕೇರ್ ಮಾಡುವುದಕ್ಕೆ ನಮ್ಮ ಮನೆಯಲ್ಲಿಯೇ ಸಾಕಷ್ಟು ರೆಮಿಡಿಗಳು ಇರುತ್ತದೆ. 

'ಒಂದೇ ದಿನದಲ್ಲಿಯೇ ನಿಮ್ಮ ಸ್ಕಿನ್ ಸೂಪರ್ ಆಗಿ ಕಾಣಿಸಿಕೊಳ್ಳುವಿಲ್ಲ. ದಿನ ತುಂಬಾನೇ ಕೇರ್ ಮಾಡಬೇಕು'

7. ಸಣ್ಣ ಕ್ರೀಮ್ ಅಥವಾ ಕಾಜಲ್ ಇರಲಿ. ಎಲ್ಲವೂ ಮೇಕಪ್ ತೆಗೆದು ಮಲಗಬೇಕು. ಮುಖವನ್ನು ದಿನಾ ಫ್ರೆಶ್ ಆಗಿ ವಾಶ್ ಮಾಡಿಕೊಳ್ಳಿ. 

8. ತಪ್ಪದೇ mositurise ಬಳಸಿ. ಸ್ಕಿನ್ ಹೈಡ್ರೇಟ್ ಆಗಿರಬೇಕು. ಡ್ರೈ ಆಗಲು ಬಿಡಬೇಡಿ. ಎಲ್ಲದಕ್ಕಿಂದ ಮೊದಲು ಸದಾ ನಗುತ್ತಿರಬೇಕು. ನೀವು ಎಷ್ಟು ಸಂತೋಷದಿಂದ ಇರುತ್ತೀರೋ, ಅದು ನಿಮ್ಮ ಮುಖದ ಮೇಲೆ ತೋರಿಸುತ್ತದೆ.

ಮೇಘನಾ ಗಾಂವ್ಕರ್‌ ಇನ್ನರ್ ಬ್ಯೂಟಿಯನ್ನು ತುಂಬಾನೇ ನಂಬುತ್ತಾರಂತೆ.

 

click me!