
ಕೆಲವು ದಿನಗಳಿಂದ ಸಾಕಷ್ಟು ಸಿನಿಮಾ ಕತೆ ಕೇಳೋದು, ನಿರ್ದೇಶಕರು ಬಂದು ಮಾತಾಡಿಸೋದು ನಡೆಯುತ್ತಲೇ ಇತ್ತು. ‘ರಾಜ ರಾಣಿ’ ರಿಯಾಲಿಟಿ ಶೋನಲ್ಲಿ ನಿರ್ದೇಶಕ ಸುಜಯ್ ಶಾಸ್ತ್ರಿ ನಾಲ್ಕು ಲೈನಲ್ಲಿ ಈ ಸಿನಿಮಾದ ಕತೆ ಹೇಳಿದರು. ಬಹಳ ಇಂಪ್ರೆಸ್ ಆದೆ.
80 - 90ರ ದಶಕದ ಕಥೆ ಈ ಚಿತ್ರದ್ದು. ಈ ಸಿನಿಮಾಕ್ಕಾಗಿ ಸಂಪೂರ್ಣ ಗೆಟಪ್ ಚೇಂಜ್ ಮಾಡ್ಕೊಂಡಿದ್ದೀನಿ. ಚಿತ್ರದ ಆರಂಭದಿಂದ ಕೊನೆಯವರೆಗೂ ಇದೇ ರೆಟೊ್ರೀ ಸ್ಟೈಲ್‌ನಲ್ಲೇ ಕಾಣಿಸಿಕೊಳ್ಳುತ್ತೀನಿ. ಡಿಗ್ರಿ ಓದಿರುವ ಹುಡುಗನಾಗಿರುವ ಕಾರಣ ಹಳ್ಳಿ ಭಾಷೆ ಏನೂ ಇರಲ್ಲ. ಸಿಟಿ ಹುಡುಗನಾಗಿಯೇ ಕಾಣಿಸಿಕೊಂಡಿದ್ದೀನಿ.
ನನ್ನ ಹೊಸ ಗೆಟಪ್ ನೋಡಿದವರು ‘ಇದು ನಿಜಕ್ಕೂ ನೀವೇನಾ’ ಅಂತ ಉದ್ಗಾರ ತೆಗೀತಿರುತ್ತಾರೆ. ಇದ್ಯಾಕೆ ಹೀಗಿದ್ದೀರಿ ಅಂತ ಕುತೂಹಲದಿಂದ ವಿಚಾರಿಸ್ತಾರೆ. ಆ ಕುತೂಹಲವೇ ನನಗೂ ಬೇಕಿದ್ದಿದ್ದು. ನನ್ನ ರ್ಯಾಪ್‌ಗಳಲ್ಲಿ ಬಹಳ ಹೈಫೈ ಲುಕ್‌ನಲ್ಲೇ ಕಾಣಿಸಿಕೊಂಡಿದ್ದೇನೆ. ಸ್ವತಃ ನನಗೇ ಇದೊಂದು ಹೊಸ ಅನುಭವ.
ಕೆಲವೊಂದು ಜಾಗಗಳು ವಿಚಿತ್ರವಾಗಿರುತ್ತವೆ. ಆ ಜಾಗಗಳನ್ನು ಸೈಂಟಿಫಿಕ್ ಆಗಿ ನೋಡಿದ್ರೆ ಏನೂ ಗೊತ್ತಾಗಲ್ಲ. ಅಂಥಾ ಮಿಸ್ಟೀರಿಯಸ್ ಸಬ್ಜೆಕ್‌ಟ್ ಜೊತೆಗೆ ಫನ್ ಸಹ ಚಿತ್ರದಲ್ಲಿ ಅಡಕವಾಗಿದೆ.
ಫೆಬ್ರವರಿಯಿಂದ ಬೆಂಗಳೂರು ಗ್ರಾಮೀಣ ಭಾಗದಲ್ಲಿ ಶೂಟಿಂಗ್ ನಡೆಯುತ್ತೆ. ಇದಾದ ಬಳಿಕ ನನ್ನ ಪತ್ನಿ ನಿವೇದಿತಾ ಜೊತೆಗೆ ಪಾರ್ಟಿ ರ್ಯಾಪ್ ಮಾಡುವ ಐಡಿಯಾ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.