ಮೋಡ ಕವಿದ ಆಗಸ ಇನ್ನೂ ಸರಿ ಹೋಗಿಲ್ಲ ಮೋಡದ ಮಧ್ಯೆ ಸೂರ್ಯನು ಇಣಿಕಿ ನೋಡುವ ಲಕ್ಷಣ ಕಾಣುತ್ತಿಲ್ಲ. ಇದರ ನಡುವೆ ನಮ್ಮ ಏಕ್ ಲವ್ ಯಾ ಚಿತ್ರದ ಹಾಡಿನ ಸಂಭ್ರಮಾಚರಣೆ ಮಾಡಲು ಮನಸಾಗುತ್ತಿಲ್ಲ.
ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (Puneeth Rajkumar) ನಿಧನರಾಗಿದ್ದು, ಇಡೀ ಭಾರತ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಕೋಟ್ಯಂತರ ಅಭಿಮಾನಿಗಳನ್ನು ಅವರು ಅಗಲಿದ್ದಾರೆ. ಇವರ ನಿಧನಕ್ಕೆ ಅಭಿಮಾನಿಗಳೂ ಸೇರಿದಂತೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿ ನೋವನ್ನು ಇಂದಿಗೂ ಹೊರಹಾಕುತ್ತಿದ್ದಾರೆ. ಇದೀಗ ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕ ಎಂದೇ ಹೆಸರು ವಾಸಿಯಾಗಿರುವ ಜೋಗಿ ಪ್ರೇಮ್ (Jogi Prem) 'ಏಕ್ ಲವ್ ಯಾ' (Ek LOve Ya) ಚಿತ್ರದ ಹಾಡಿನ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕಿದ್ದಾರೆ.
ಹೌದು! ಪುನೀತ್ ನಿಧನ ಚಿತ್ರರಂಗದ ತಾರೆಯರಿಗೆ ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ಅಪ್ಪು ನೆನೆದು ಜೋಗಿ ಪ್ರೇಮ್ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಭಾವುಕ ಪೋಸ್ಟ್‌ವೊಂದನ್ನು ಹಂಚಿಕೊಂಡು ತಮ್ಮ ಚಿತ್ರದ ಹಾಡನ್ನು ಮುಂದಿನ ದಿನದಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಈ ಬಗ್ಗೆ 'ಮೋಡ ಕವಿದ ಆಗಸ ಇನ್ನೂ ಸರಿ ಹೋಗಿಲ್ಲ ಮೋಡದ ಮಧ್ಯೆ ಸೂರ್ಯನು ಇಣಿಕಿ ನೋಡುವ ಲಕ್ಷಣ ಕಾಣುತ್ತಿಲ್ಲ. ಇದರ ನಡುವೆ ನಮ್ಮ ಏಕ್ ಲವ್ ಯಾ ಚಿತ್ರದ ಹಾಡಿನ ಸಂಭ್ರಮಾಚರಣೆ ಮಾಡಲು ಮನಸಾಗುತ್ತಿಲ್ಲ. ಆದ್ದರಿಂದ 4ನೇ ತಾರೀಖು ಬಿಡುಗಡೆಯಾಗಬೇಕಿದ್ದ ನಮ್ಮ ಚಿತ್ರದ ಹಾಡನ್ನು ಇದೇ ತಿಂಗಳು 12ನೇ ತಾರೀಖಿಗೆ ಮುಂದೂಡಲಾಗಿದೆ' ಎಂದು ಪೋಸ್ಟ್ ಮಾಡಿದ್ದು, ಪುನೀತ್ ನೆನೆದು 'ನಿಮಗೆಂದೂ ಸಾವಿಲ್ಲ ನೀವಿಲ್ಲದೇ ಏನೇನೂ ಇಲ್ಲ' ಎಂದು ಭಾವನಾತ್ಮಕವಾಗಿ ಜೋಗಿ ಪ್ರೇಮ್ ಬರೆದುಕೊಂಡಿದ್ದಾರೆ. ಪುನೀತ್‌ಗೆ 'ರಾಜ್ ದ ಶೋ ಮ್ಯಾನ್' (Raaj the Showman) ಚಿತ್ರವನ್ನು ಪ್ರೇಮ್ ನಿರ್ದೇಶಿಸಿದ್ದರು.
ಜೋಗಿ ಪ್ರೇಮ್ ಇತ್ತೀಚೆಗಷ್ಟೇ, 'ಎಲ್ಲರಿಗೂ ನಮಸ್ಕಾರ... ಇದೇ ಅಕ್ಟೋಬರ್ 22ರಂದು ನನ್ನ ಹುಟ್ಟುಹಬ್ಬವಿದೆ. ಪ್ರತಿ ಬಾರಿ ನನ್ನ ಅನ್ನದಾತರು, ಸ್ನೇಹಿತರು ಹಾಗೂ ನನ್ನ ಬಂಧು, ಬಳಗದವರು ಪ್ರತಿಯೊಬ್ಬರು ಬಂದು ನನಗೆ ಶುಭಾಶಯ ತಿಳಿಸಿ ಹೋಗುತ್ತಿದ್ದರು. ಆದರೆ ಈ ಬಾರಿ ನಾನು ಮನೆಯಲ್ಲಿ ಇರುವುದಿಲ್ಲ. ಕಾರಣ 'ಏಕ್ ಲವ್ ಯಾ' ಸಿನಿಮಾದ ಕೆಲಸಗಳು ನಡೆಯುತ್ತಿದೆ. ಹಾಗಾಗಿ ದಯವಿಟ್ಟು ಯಾರೂ ಕೂಡ ಮನೆಯ ಬಳಿ ಬಂದು ಕಾಯಬೇಡಿ. ಎಲ್ಲೆ ಇದ್ದರೂ ದೂರದಿಂದಲೇ ನನಗೆ ಆಶೀರ್ವಾದ ಮಾಡಿ ಎಂದು ನಿಮ್ಮಲ್ಲಿ ಪ್ರೀತಿಯಿಂದ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದರು.
ರಾಣಾ 'ಏಕ್ ಲವ್ ಯಾ' ನಟನೆಗೆ ಪುನೀತ್ ಮೆಚ್ಚುಗೆ!
ದೀಪಾವಳಿ (Diwali) ಹಬ್ಬದ ದಿನ ಚಿತ್ರದ ಸಿನಿಮಾದ ಮೂರನೇ ಹಾಡನ್ನು ಬಿಡುಗಡೆಗೊಳಿಸುತ್ತಿದ್ದೇವೆ. ಈಗಾಗಲೇ ಎರಡು ಹಾಡನ್ನು ಹಿಟ್ ಮಾಡಿಕೊಟ್ಟಿದ್ದೀರಾ. ಈಗ ಮತ್ತೊಂದು ಲವ್ ಬ್ರೇಕ್ ಅಪ್ ಸಾಂಗ್ ರಿಲೀಸ್ ಆಗುತ್ತಿದೆ. ಈ ಹಾಡನ್ನು ವಿಶೇಷವಾಗಿ ಹುಡುಗಿಯರಿಗೆಂದು ಬಿಡುಗಡೆ ಮಾಡಲಾಗುತ್ತಿದೆ. ಹಾಡನ್ನು ಕೇಳಿ, ನೋಡಿ, ಬೆಂಬಲಿಸಿ ಮತ್ತು ಜನವರಿ 21ಕ್ಕೆ 'ಏಕ್ ಲವ್ ಯಾ' ಸಿನಿಮಾ ಎಲ್ಲೆಡೆ ಬಿಡುಗಡೆಗೊಳಿಸಲಾಗುತ್ತಿದೆ. ನಿಮ್ಮ ಪ್ರೀತಿ ವಿಶ್ವಾಸ ಸದಾ ನನ್ನ ಮೇಲೆ ಹೀಗೆ ಇರಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದರು.
ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ: ಜೋಗಿ ಪ್ರೇಮ್
ಇನ್ನು 'ಏಕ್ ಲವ್ ಯಾ' ಚಿತ್ರದ ನಾಯಕ ಅಭಿಷೇಕ್ (ರಾಣಾ) (Abhishek) ರಕ್ಷಿತಾ ಸಹೋದರ. ಹಾಗಾಗಿ ಅಕ್ಕ-ಭಾವನ ಸಿನಿಮಾ ಬ್ಯಾನರ್‌ನಲ್ಲಿ ಲಾಂಚ್ ಆಗುತ್ತಿರುವ 'ಅಭಿರಾಣಾ' ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಭಾಮೈದುನ ಸಿನಿಮಾಗೆ ಪ್ರೇಮ್ ವಿಭಿನ್ನ ಕಥೆ ಹೆಣೆದಿದ್ದಾರೆ. ಈ ಚಿತ್ರದಲ್ಲಿ ರಾಣಾಗೆ ಜೋಡಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಹಾಗೂ ಇನ್ನೊಂದು ಮುಖ್ಯ ಪಾತ್ರದಲ್ಲಿ ಹೊಸ ನಟಿ ಗ್ರೀಷ್ಮಾ ನಾಣಯ್ಯ (Grishma Nanayya) ಅಭಿನಯಿಸಿದ್ದಾರೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ (Arjun Janya) ಸಂಗೀತ ಈ ಚಿತ್ರಕ್ಕಿದೆ.