Makara Sankranti: ಅಮ್ಮನ ತೋಟದಲ್ಲಿ ಸಂಕ್ರಾಂತಿ ಆಚರಿಸಿದ ನಿರ್ದೇಶಕ ಜೋಗಿ ಪ್ರೇಮ್

By Suvarna News  |  First Published Jan 16, 2022, 11:57 PM IST

ಮಕರ ಸಂಕ್ರಾಂತಿ ಹಬ್ಬದ ಸಡಗರ ಸಂಭ್ರಮ ಸ್ಯಾಂಡಲ್‌ವುಡ್‌ನಲ್ಲಿ ಜೋರಾಗಿದೆ. ಈ ಹಬ್ಬವನ್ನು ಕನ್ನಡ ಚಿತ್ರರಂಗದ ಸ್ಟಾರ್ ಡೈರೆಕ್ಟರ್ ಎಂದೇ ಖ್ಯಾತಿ ಪಡೆದಿರುವ ಜೋಗಿ ಪ್ರೇಮ್ ತಮ್ಮ ತೋಟದ ಮನೆಯಲ್ಲಿ ಆಚರಿಸಿದ್ದಾರೆ.


ಸೂರ್ಯ ಜಗತ್ತಿನ ಶಕ್ತಿ. ಎಲ್ಲದ್ದಕ್ಕೂ ಮೂಲ ಸೂರ್ಯ ದೇವ. ಹೀಗೆ ಎಲ್ಲದರಲ್ಲೂ ಪ್ರಮುಖ ಸ್ಥಾನ ಪಡೆದಿರುವ ಸೂರ್ಯ ಮಕರ ರಾಶಿಗೆ ಪ್ರವೇಶಿಸುವ ಹಬ್ಬವೇ ಮಕರ ಸಂಕ್ರಾಂತಿ (Makara Sankranti). ಭಾರತದಲ್ಲಿ ಆಚರಿಸಲ್ಪಡುವ ಬಹುದೊಡ್ಡ ಹಬ್ಬಗಳಲ್ಲಿ ಮಕರ ಸಂಕ್ರಾಂತಿ ಕೂಡಾ ಒಂದು. ಭಾರತದ ವಿವಿಧ ಭಾಗಗಳಲ್ಲಿ ಬೇರೆ ಬೇರೆ ಹೆಸರುಗಳೊಂದಿಗೆ ಮಕರ ಸಂಕ್ರಾಂತಿ ಆಚರಿಸಲ್ಪಡುತ್ತದೆ. ಈ ಮಕರ ಸಂಕ್ರಾಂತಿ ಹಬ್ಬದ ಸಡಗರ ಸಂಭ್ರಮ ಸ್ಯಾಂಡಲ್‌ವುಡ್‌ನಲ್ಲಿ (Sandalwood) ಜೋರಾಗಿದೆ. ಈ ಹಬ್ಬವನ್ನು ಕನ್ನಡ ಚಿತ್ರರಂಗದ ಸ್ಟಾರ್ ಡೈರೆಕ್ಟರ್ ಎಂದೇ ಖ್ಯಾತಿ ಪಡೆದಿರುವ ಜೋಗಿ ಪ್ರೇಮ್ (Jogi Prem) ತಮ್ಮ ತೋಟದ ಮನೆಯಲ್ಲಿ ಆಚರಿಸಿದ್ದಾರೆ.

ಹೌದು! ನಿರ್ದೇಶಕ ಜೋಗಿ ಪ್ರೇಮ್ ಅವರು ದನಗಳ ಮೈ ತೊಳೆದು ಶೃಂಗಾರ ಮಾಡುತ್ತಿರುವ ಫೋಟೋ, ವೀಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಂಡಿದ್ದಾರೆ. ಜೋಗಿ ಪ್ರೇಮ್ ಕುಟುಂಬಸ್ಥರ ಸರಳತೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಜೋಗಿ ಪ್ರೇಮ್ ತಮ್ಮ ತಾಯಿಯವರ ತೋಟಕ್ಕೆ ಕುಟುಂಬದವರು ಹಾಗೂ 'ಏಕ್ ಲವ್ ಯಾ' (Ek Love Ya) ಚಿತ್ರ ತಂಡದ ಜೊತೆ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ. ತಮ್ಮ ಜಮೀನಿನಲ್ಲಿರುವ ದನಗಳ ಮೈತೊಳೆದು, ಹೂವಿನ ಹಾರಗಳನ್ನು ಹಾಕಿ ಅವುಗಳಿಗೆ ತಿನ್ನಲು ಹುಲ್ಲನ್ನು ಹಾಕಿರುವ ಫೋಟೋಗಳನ್ನು ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. 

Tap to resize

Latest Videos

Ek Love Ya: ಎಣ್ಣೆ, ಹೆಣ್ಣು, ಲವ್ ಸೆಕ್ಸಲ್ಲೇ ಮುಗಿದೋಯ್ತಲ್ಲಾ ಹಾಡು ರಿಲೀಸ್

ಜೊತೆಗೆ ತಮ್ಮ ಮಗನಿಗೆ ಪೇಟವನ್ನು ಕಟ್ಟುತ್ತಿರುವ ಮತ್ತೊಂದು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಈ ಆಚರಣೆಗೆ ಪ್ರೇಮ್‌ಗೆ, ಅವರ ಪತ್ನಿ ರಕ್ಷಿತಾ ಪ್ರೇಮ್ (Rakshita Prem) ಹಾಗೂ 'ಏಕ್ ಲವ್ ಯಾ' ಚಿತ್ರತಂಡ ಸಾಥ್ ಕೊಟ್ಟಿದ್ದಾರೆ. ಸಂಕ್ರಾಂತಿ ದಿನದಂದು ಹಸುಗಳಿಗೆ ಕಿಚ್ಚು ಹಾಯಿಸುವ ವೀಡಿಯೋವನ್ನು ಜೋಗಿ ಪ್ರೇಮ್ ಶೇರ್ ಮಾಡಿಕೊಂಡು ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯವನ್ನು ಕೋರಿದ್ದಾರೆ. ವಿಶೇಷವಾಗಿ ಈ ಫೋಟೋ ಹಾಗೂ ವೀಡಿಯೋಗೆ ನೆಟ್ಟಿಗರು ಕಾಮೆಂಟ್ ಮಾಡಿ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ನಿಮ್ಮ ನುಡಿ-ಸಂಪ್ರದಾಯವನ್ನು ನೋಡಿದರೆ ಖುಷಿಯಾಗುತ್ತದೆ ಹಾಗೂ ನಿಮ್ಮನ್ನು ನೋಡಿದರೇ ಸಂತೋಷವಾಗುತ್ತದೆ ಎಂದೆಲ್ಲಾ ನೆಟ್ಟಿಗರು ತರಹೇವಾರಿ ಪ್ರತಿಕ್ರಿಯೆಯನ್ನು ಕೊಟ್ಟಿದ್ದಾರೆ.



ಸದ್ಯ ಜೋಗಿ ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಚಿತ್ರದ ಪ್ರಚಾರದಲ್ಲಿ (Promotin) ಪ್ರೇಮ್ ಬ್ಯುಸಿಯಾಗಿದ್ದಾರೆ. ಎಲ್ಲವೂ ಅಂದುಕೊಂಡತೆ ಆಗಿದ್ದರೆ ಜನವರಿ 21ನೇ ತಾರೀಖಿನಂದು ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ದೇಶದಲ್ಲಿ ಒಮಿಕ್ರಾನ್ (Omicron)​ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಆಕ್ಯುಪೆನ್ಸಿಗೆ ಮಾತ್ರ ಅವಕಾಶ ನೀಡಲಾಗಿದೆ. ಇಂಥ ಪರಿಸ್ಥಿತಿಯಲ್ಲಿ ಸಿನಿಮಾ ರಿಲೀಸ್​ ಮಾಡಿದರೆ ಕಲೆಕ್ಷನ್​ ಮೇಲೆ ಹೊಡೆತ ಬೀಳಲಿದೆ. ಹಾಗಾಗಿ 'ಏಕ್​ ಲವ್​ ಯಾ' ಬಿಡುಗಡೆ ದಿನಾಂಕವನ್ನು ಜೋಗಿ ಪ್ರೇಮ್ ಮುಂದೂಡಿದ್ದಾರೆ. 

'ಅಪ್ಪು ನಿಮಗೆಂದೂ ಸಾವಿಲ್ಲ ನೀವಿಲ್ಲದೇ ಏನೇನೂ ಇಲ್ಲ': ನಿರ್ದೇಶಕ ಜೋಗಿ ಪ್ರೇಮ್

ಇನ್ನು 'ಏಕ್ ಲವ್ ಯಾ' ಚಿತ್ರದಲ್ಲಿ ರಕ್ಷಿತಾ ಸಹೋದರ ರಾಣಾ (Raanna) 'ಅಭಿರಾಣಾ' ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಹಾಗೂ ಇನ್ನೊಂದು ಮುಖ್ಯ ಪಾತ್ರದಲ್ಲಿ ಹೊಸ ನಟಿ ಗ್ರೀಷ್ಮಾ ನಾಣಯ್ಯ (Grishma Nanayya) ಅಭಿನಯಿಸಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್, ಲಿರಿಕಲ್ ವಿಡಿಯೋ ಹಾಗೂ ಹೀರೋ, ಹೀರೋಯಿನ್ ಲುಕ್ ರಿವೀಲ್ ಮಾಡಲಾಗಿದ್ದು, ರಚಿತಾ ರಾಮ್ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಸಿಗರೇಟು ಸೇದಿ, ಲಿಪ್‌ ಲಾಕ್‌ ಕೂಡ ಮಾಡಿದ್ದಾರೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾ (Arjun Janya) ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಈಗಾಗಲೇ ಚಿತ್ರದ ಹಾಡುಗಳು (Songs) ಎಲ್ಲರ ಮನಗೆದ್ದಿದ್ದು, ನಿರೀಕ್ಷೆ ಹುಟ್ಟಿಸಿವೆ.
 

 
 
 
 
 
 
 
 
 
 
 
 
 
 
 

A post shared by Prem❣️s (@directorprems)

click me!