Ajay Rao: 'ಶೋಕಿವಾಲ' ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫೀಕೆಟ್‌

By Suvarna NewsFirst Published Jan 16, 2022, 10:35 PM IST
Highlights

ಸಿನಿಮಾದ ಆರಂಭದಿಂದ ಇಲ್ಲಿಯವರೆಗೂ ಪ್ರತಿ ಹಂತದಲ್ಲೂ ವಿಭಿನ್ನ ರೀತಿಯಲ್ಲಿ ಸದ್ದು ಮಾಡುತ್ತಿರುವ ಚಿತ್ರ 'ಶೋಕಿವಾಲ'. ಇದೀಗ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣ ಪತ್ರ ಸಿಕ್ಕಿದ್ದು, ಅಜಯ್ ರಾವ್ ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ನ (Sandalwood) ಕೃಷ್ಣ ಖ್ಯಾತಿಯ ಅಜಯ್ ರಾವ್ (Ajay Rao) ಅವರು 'ಶೋಕಿವಾಲ' (Shokiwala) ಸಿನಿಮಾದಲ್ಲಿ ನಟಿಸುತ್ತಿದ್ದು, ಇವರಿಗೆ ಜೊತೆಯಾಗಿ ಸಂಜನಾ ಆನಂದ್ (Sanjana Anand) ಅಭಿನಯಿಸುತ್ತಿದ್ದಾರೆ. ಇದೀಗ ಈ ಸಿನಿಮಾ ತಂಡದಿಂದ ಹೊಸ ನ್ಯೂಸ್ ಬಂದಿದೆ. ಹೌದು! ಸಿನಿಮಾದ ಆರಂಭದಿಂದ ಇಲ್ಲಿಯವರೆಗೂ ಪ್ರತಿ ಹಂತದಲ್ಲೂ ವಿಭಿನ್ನ ರೀತಿಯಲ್ಲಿ ಸದ್ದು ಮಾಡುತ್ತಿರುವ ಚಿತ್ರ 'ಶೋಕಿವಾಲ'. ಇದೀಗ ಈ ಚಿತ್ರಕ್ಕೆ ಸೆನ್ಸಾರ್ (Censor) ಮಂಡಳಿಯಿಂದ ಯು/ಎ ಪ್ರಮಾಣ ಪತ್ರ (U/A Certificate) ಸಿಕ್ಕಿದ್ದು, ಜೊತೆಗೆ ಸೆನ್ಸಾರ್ ಮಂಡಳಿಯಿಂದ ಪ್ರಶಂಸೆಯನ್ನು ಪಡೆದಿದೆ. ಸದ್ಯದಲ್ಲೇ ಚಿತ್ರವು ತೆರೆಮೇಲೆ ಬರಲು ಸಜ್ಜಾಗಿದೆ ಎಂದು ಚಿತ್ರತಂಡದವರು ತಿಳಿಸಿದ್ದಾರೆ.

'ಶೋಕಿವಾಲ' ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿರುವ ಬಗ್ಗೆ ಚಿತ್ರದ ನಿರ್ಮಾಪಕರಾದ ಟಿ.ಆರ್.ಚಂದ್ರಶೇಖರ್ (TR Chandrasekhar) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ 'ನಮ್ಮ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಸಂಸ್ಥೆಯ ಕೃಷ್ಣ ಅಜಯ್ ರಾವ್ ಅಭಿನಯದ ಬಹು ನಿರೀಕ್ಷಿತ 'ಶೋಕಿವಾಲ' ಚಿತ್ರವು ಸೆನ್ಸಾರ್ ಮಂಡಳಿಯಿಂದ 'ಯು/ಎ' ಪ್ರಮಾಣ ಪತ್ರ ಪಡೆದುಕೊಂಡಿದೆ. ಅತೀ ಶೀಘ್ರದಲ್ಲೇ ರಾಜ್ಯಾದ್ಯಂತ ನಿಮ್ಮ ಮುಂದೆ ತೆರೆ ಕಾಣಲಿದೆ. ತಮ್ಮೆಲ್ಲರ ಆಶೀರ್ವಾದ ಇರಲಿ' ಎಂದು ಬರೆದುಕೊಂಡು ಚಿತ್ರದ ಪೋಸ್ಟರನ್ನು (Poster) ಶೇರ್ ಮಾಡಿಕೊಂಡಿದ್ದಾರೆ.

Dolly Dhananjay: ಧನಂಜಯ 25ನೇ ಚಿತ್ರ 'ಹೊಯ್ಸಳ': ಪೊಲೀಸ್ ಪಾತ್ರದಲ್ಲಿ ಡಾಲಿ

'ಶೋಕಿವಾಲ' ಪಕ್ಕಾ ಹಳ್ಳಿ ಸೊಗಡಿನ ಚಿತ್ರವಾಗಿದ್ದು, ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಲಾಂಛನದಲ್ಲಿ ಟಿ.ಆರ್.ಚಂದ್ರಶೇಖರ್ ಅವರು ನಿರ್ಮಿಸುತ್ತಿದ್ದಾರೆ. ಲಕ್ಕಿ, ಸಂತು ಸ್ಟ್ರೇಟ್ ಫಾರ್ವಡ್, ಕೆಜಿಎಫ್ ಸಿನಿಮಾಗಳಿಗೆ ಸಹ ನಿರ್ದೇಶಕರಾಗಿದ್ದ ಜಾಕಿ (Jocky) ಮೊದಲ ಬಾರಿಗೆ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಕಂಪ್ಲಿಟ್ ಆಗಿ ಡಬ್ಬಿಂಗ್ ಸಹ ಮುಕ್ತಾಯವಾಗಿದೆ. ಡಬ್ಬಿಂಗ್ (Dubbing) ಸಮಯದಲ್ಲಿ ಚಿತ್ರವನ್ನು ವೀಕ್ಷಿಸಿದ ಚಿತ್ರದ ಕಲಾವಿದರು 'ಚಿತ್ರ ಉತ್ತಮವಾಗಿ ಮೂಡಿಬಂದಿದೆ' ಎಂದು ತಿಳಿಸಿದ್ದಾರೆ. ಚನ್ನಪಟ್ಟಣ, ಹೊಂಗನೂರು, ವಿರೂಪಾಕ್ಷಪುರ, ಶ್ರೀರಂಗಪಟ್ಟಣ, ಮಂಡ್ಯ, ಮೈಸೂರು, ತುಮಕೂರು, ಮಾಗಡಿ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.

'ನಿರ್ಮಾಪಕರಿಗೆ ನಾನು 50 ದಿನದಲ್ಲಿ ಚಿತ್ರದ ಚಿತ್ರೀಕರಣ ಮಾಡಿ ಮುಗಿಸುತ್ತೇನೆ ಎಂದು ಹೇಳಿದ್ದೆ, ತೊಂದರೆ ಇಲ್ಲ ನಿಮ್ಮ ಮೇಲೆ ತುಂಬ ನಂಬಿಕೆ ಇದೆ ಮಾಡಿ ಎಂದು ನಿರ್ಮಾಪಕರು ಹೇಳಿದರು. 45 ದಿನಕ್ಕೆ ಸಿನಿಮಾ ಶೂಟಿಂಗ್ ಮುಗಿಸಿದ್ದೇನೆ, ನಿರ್ಮಾಪಕರಿಗೆ ಖುಷಿಯಾಗಿದೆ. ನಿರ್ಮಾಪಕರ ನಿರ್ದೇಶಕ ನೀನು ಅಂತ ಟಿ.ಆರ್.ಚಂದ್ರಶೇಖರ್ ಅವರು ನನಗೆ ಹೇಳಿದ್ದಾರೆ' ಎಂದು ಚಿತ್ರದ ನಿರ್ದೇಶಕ ಜಾಕಿ ಈ ಹಿಂದೆ ತಿಳಿಸಿದ್ದಾರೆ. ಮೊದಲ ಬಾರಿಗೆ ಅಜಯ್ ರಾವ್ ಹಳ್ಳಿ ಹುಡುಗನಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಸಂಜನಾ ಆನಂದ್ ಅವರೂ ಕೂಡ ಹಳ್ಳಿ ಹುಡುಗಿಯಾಗಿ ಮಿಂಚಿದ್ದಾರೆ.

RajaMarthanda Song Release: 'ಸಂಭಾಳಿಸು ಗುಟ್ಟಾಗಿ ನೀ' ಎಂದು ಹಾಡಿದ ಚಿರಂಜೀವಿ ಸರ್ಜಾ!

ಇನ್ನು ಜಯಂತ್ ಕಾಯ್ಕಿಣಿ, ನಾಗೇಂದ್ರಪ್ರಸಾದ್, ಚೇತನ್ ಕುಮಾರ್ ಅವರ ಸಾಹಿತ್ಯ 'ಶೋಕಿವಾಲ' ಚಿತ್ರಕ್ಕಿದ್ದು, ನವೀನ್ ಕುಮಾರ್.ಎಸ್ ಕ್ಯಾಮರಾ ಕೈಚಳಕ, ಕೆ.ಎಂ. ಪ್ರಕಾಶ್ ಸಂಕಲನ , ಪ್ರಶಾಂತ್ ರಾಜಪ್ಪ ಸಂಭಾಷಣೆ, ಮೋಹನ್ ನೃತ್ಯ, ವಿಕ್ರಮ್ ಮೋರ್ ಸಾಹಸ ನಿರ್ದೇಶನ, ಮೈಸೂರು ರಘು ಅವರ ಕಲಾ ನಿರ್ದೇಶನ ಹಾಗೂ ಬಾಲು ಕುಮಟ ಅವರ ನಿರ್ಮಾಣ ಮೇಲ್ವಿಚಾರಣೆ‌ ಈ‌ ಚಿತ್ರಕ್ಕಿದೆ. ಶರತ್ ಲೋಹಿತಾಶ್ವ, ಗಿರೀಶ್ ಶಿವಣ್ಣ, ತಬಲಾ ನಾಣಿ, ಮುನಿರಾಜ್, ಪ್ರಮೋದ್ ಶೆಟ್ಟಿ, ಅರುಣ ಬಾಲರಾಜ್, ವಾಣಿ , ಚಂದನಾ , ಲಾಸ್ಯಾ, ನಾಗರಾಜ ಮೂರ್ತಿ ಸೇರಿದಂತೆ ಹಲವರು ಈ ಚಿತ್ರದ ತಾರಾಗಣದಲ್ಲಿದ್ದಾರೆ. 
 

click me!