ನಿಂಗೇನೋ ಬಂದಿರೋದು ದೊಡ್ ರೋಗ?; ಮಿಲನಾ-ಕೃಷ್ಣ ನಡುವೆ ದೊಡ್ಡ ಜಗಳ

Suvarna News   | Asianet News
Published : Jan 28, 2022, 05:14 PM IST
ನಿಂಗೇನೋ ಬಂದಿರೋದು ದೊಡ್ ರೋಗ?; ಮಿಲನಾ-ಕೃಷ್ಣ ನಡುವೆ ದೊಡ್ಡ ಜಗಳ

ಸಾರಾಂಶ

ಲವ್‌ ಮಾಕ್ಟೇಲ್ 2 ಚಿತ್ರದಿಂದ ಮಿಲನಾ ಮತ್ತು ಕೃಷ್ಣ ನಡುವೆ ದೊಡ್ಡ ಜಗಳ ನಡೆದಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. 

ಕೊರೋನಾ ವೈರಸ್ ಮೊದಲನೇ ಅಲೆ ಸಮಯದಲ್ಲಿ ಕನ್ನಡ ಚಿತ್ರರಂಗವನ್ನು ಎತ್ತಿ ಹಿಡಿದ ಸಿನಿಮಾ ಲವ್ ಮಾಕ್ಟೇಲ್ (Love Mocktail). ಮನೆಯಲ್ಲಿ ಕ್ವಾರಂಟೈನ್ (Home quarantine) ಆಗಿರುವವರಿಗೆ ಮಸ್ತ್ ಮನೋರಂಜನೆ ನೀಡಿದೆ, ಒಂದೇ ಮನೆಯಲ್ಲಿ ಲಾಕ್‌ ಆಗಿದ್ದ ಪ್ರೇಮಿಗಳಿಗೆ, ಪ್ರೀತಿ ಏನೆಂದು ತೋರಿಸಿಕೊಟ್ಟಿದೆ, ಅಲ್ಲದೆ ಒಬ್ಬರನ್ನೊಬ್ಬರು ಮಿಸ್ ಮಾಡಿಕೊಳ್ಳುತ್ತಿದ್ದ ಲವ್ ಬರ್ಡ್‌ಗಳಿಗೆ ಟೈಮ್ ಪಾಸ್ ಮಾಡಲು ಹೆಲ್ಪ್ ಮಾಡಿತ್ತು ಈ ಸಿನಿಮಾ.  ಹೀಗಾಗಿ ಚಿತ್ರತಂಡ ಎರಡನೇ ಭಾಗ ಮಾಡುವ ಪ್ಲ್ಯಾನ್ ಮಾಡಿತ್ತು.

ಎರಡನೇ ಭಾಗ ಚಿತ್ರೀಕರಣವೂ ಯಶಸ್ವಿಯಾಗಿ ನಡೆದಿದೆ. ಕೊರೋನಾ ಅಲೆಗಳು ಇಲ್ಲದಿದ್ದರೆ ಬಹುಶಃ ಕಳೆದ ವರ್ಷವೇ ಈ ಸಿನಿಮಾ ಬಿಡುಗಡೆ ಆಗುತ್ತಿತ್ತು. ಎಲ್ಲವೂ ತಡವಾಗುತ್ತಿರುವ ಕಾರಣ, ಸಿನಿಮಾ ರಿಲೀಸ್ ಕೂಡ ತಡವಾಗಿದೆ. ಆದರೆ ಒಂದೆರಡು ಹಾಡುಗಳನ್ನು ರಿಲೀಸ್ ಮಾಡಿ ಸಿನಿ ರಸಿಕರ ಗಮನ ಸೆಳೆದಿದೆ. ಸಿನಿಮಾ ತಡವಾಗುತ್ತಿದ್ದರೂ, ಕೆಲವೊಂದು ಚಿತ್ರ ತಂಡಗಳು ಟ್ರೈಲರ್ ಬಿಡುಗಡೆ ಮಾಡುತ್ತಿದ್ದಾರೆ. ಹೀಗಾಗಿ ನಮ್ಮ ಟ್ರೈಲರ್ ಬಿಡುಗಡೆ ಯಾವಾಗ ಎಂದು ಮಿಲನಾ (Milana Nagaraj) ಪತಿ ಜೊತೆ ಜಗಳ ಮಾಡಿದ್ದಾರೆ. 

ಲವ್ ಮಾಕ್ಟೇಲ್ ಸಿನಿಮಾದಲ್ಲಿ ವೀಕ್ಷಕರ ಗಮನ ಸೆಳೆದ ದೃಶ್ಯವೇ ಬರ್ತಡೇ ಚಿನ್ನಿ. ಹೌದು ನಿಧಿ ಹುಟ್ಟು ಹಬ್ಬವನ್ನು ಆದಿ ಮರೆತಿರುತ್ತಾರೆ ಈ ವೇಳೆ ನಿಧಿ ದೊಡ್ಡ ಜಗಳ ಮಾಡುತ್ತಾಳೆ. ಅದೇ ಸನ್ನಿವೇಶ ಇಟ್ಟಿಕೊಂಡು ಇದೀಗ ಟ್ರೈಲರ್ ಬಿಡುಗಡೆ ಬಗ್ಗೆ ಮಾತನಾಡಿದ್ದಾರೆ. 

Love Mocktail 2: ಮತ್ತೆ ಕಮಾಲ್ ಮಾಡೋಕೆ ನಿಧಿಮಾ-ಆದಿ ರೆಡಿ..!

ಜಗಳದ ಮಾತುಕತೆ ಹೀಗಿದೆ:

ಕೃಷ್ಣ: ಯಾಕ್ ಚಿನ್ನಿ?

ಮಿಲನಾ: ಏನು ಚಿನ್ನಿನಾ? ಯಾವಳೋ ಚಿನ್ನಿ? ಅವ್ರು ಯಾರು ಯಾರೋ ಟ್ರೈಲರ್ ರಿಲೀಸ್ ಮಾಡಕೊಂಡು ಓಡಾಡ್ತಾ ಇದ್ದಾರೆ. ನಿಂಗೇನೋ ಬಂದಿರೋದು ದೊಡ್ ರೋಗ? ಟ್ರೈಲರ್ ರೆಡಿ ಆಗಿ ಒಂದು ತಿಂಗಳಾಯ್ತು ತಾನೆ? ಇವತ್ತು ರಿಲೀಸ್ ಆಗುತ್ತೆ, ನಾಳೆ ರಿಲೀಸ್ ಆಗುತ್ತೆ ಅಂತ ನಾನೂ ಕಾಯ್ತಾನೇ ಇದ್ದೀನಿ. ನೀವು ಬೇರೆ ಶೂಟಿಂಗ್‌ನಲ್ಲಿ ಮಜಾ ಮಾಡ್ಕೊಂಡು ಓಡಾಡ್ತಾ ಇದ್ದೀರಾ?

ಕೃಷ್ಣ (Darling Krishna): ನಾನು ಶೂಟಿಂಗ್‌ಗೆ ಹೋಗೋದು ಶೂಟಿಂಗ್ ಮಾಡುವುದಕ್ಕೆ. ಮಜಾ ಮಾಡುವುದಕ್ಕಲ್ಲ.

ಮಿಲನಾ: ಆಹಾಹಾ ನೋಡಿದೀನಿ ನಿಮ್ಮ ರೀಸೆಂಟ್ ಫೋಟೋಶೂಟ್‌ನಾ

ಕೃಷ್ಣ: ಅಲ್ಲಾ ಅದು ಏನಾಯ್ತು ಅಂದ್ರೆ....

ಮಿಲನಾ: ಮನೆಗೆ ಬಂದರಿಗೆ ಟ್ರೈಕರ್‌ ನೀಡಿ ಟ್ರೈಲರ್ ನೋಡಿ ಅಂತ ಹಲ್ಲು ಕಿಸ್ಕೊಂಡು ತೋರ್ಸೋಕೆ ಆಗುತ್ತೆ. ಟ್ರೈಲರ್ ಮಾಡಿರೋದು ಜನರಿಗೆ ತೋರಿಸೋಕಾ ಅಥವಾ ಮನೆಗೆ ಬಂದವರಿಗೆ ತೋರಿಸೋಕಾ?

ಕೃಷ್ಣ: ಯಾಕೆ ತೋರಿಸ್ತೀನಿ ಅಂದ್ರೆ ಅವರ ಒಪೀನಿಯನ್ ಬೇಕಾಗುತ್ತಲ್ವಾ ಅದಕ್ಕೆ.

ಮಿಲನಾ: ಆಹಾಹಾ ಒಪೀನಿಯನ್‌ ನಾ?ನೀವು ಒಪಿನಿಯನ್‌ ತಗೋಳೋದು? ಶೂಟಿಂಗ್‌ನನಲ್ಲಿ ನಾನು ಏನಾದರೂ ಒಪೀನಿಯನ್ ಕೊಡೋಕೆ ಬಂದ್ರೆ ಡೈರೆಕ್ಟರ್ ನಾನಾ? ನೀನಾ? ಅಂತ ಕಿಂಡಲ್ ಮಾಡೋಕೆ ಆಗುತ್ತೆ. ದುಡ್ಡು ಹಾಕಿ ಕೂತಿರುವ ಪ್ರೊಡ್ಯೂಸರ್‌ಗೆ ಏನ್ ಬೆಲೆ ಇಲ್ವಾ?

ಕೃಷ್ಣ: ಅಮ್ಮ ಈಗೇನು ಟ್ರೈಲರ್ ತಾನೇ? ರಿಲೀಸ್ ಮಾಡ್ತೀನಿ

ಮಿಲನಾ: ಹೇ ಫಸ್ಟ್‌ ಪಾರ್ಟ್‌ನಲ್ಲಿ ನಾನು ಸತ್ತು ಹೋಗಾಯ್ತು. ಸೆಕೆಂಟ್ ಪಾರ್ಟಲ್ಲಿ ನೀನು ಏನ್ ಮಾಡಿದರೂ ನಂಗೇನು ಆಗಬೇಕಿದೆ ಹೋಗಲೋ' 

ಈ ಡಿಫರೆಂಟ್ ಆಗಿರುವ ವಿಡಿಯೋ ಮೂಲಕ ಮಿಲನಾ ಮತ್ತು ಕೃಷ್ಣ ಶೀಘ್ರದಲ್ಲಿಯೇ ಟ್ರೈಲರ್ ರಿಲೀಸ್ ಆಗಲಿದೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆಂಧ್ರಪ್ರದೇಶದ X MLA Gummadi Narsaiah ಮನೆಗೆ ಹೋದಾಗ ನನ್ನ ತಂದೆ ಬಳಿಗೆ ಹೋದಂತಾಯ್ತು: Shiva Rajkumar
ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್