Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!

Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!

Published : Jun 18, 2026, 05:16 PM IST

Cine Express: ಮೋಡ ಕವಿದ ವಾತಾವರಣ ಚಿತ್ರದ ಹೀರೋ ಟೀಸರ್ ಬಿಡುಗಡೆ, ಬಾಲನ್ ದಿ ಬಾಯ್ ಚಿತ್ರದ ಕೀಲಿ ಕೈ ಹಾಡು ರಿಲೀಸ್, ಲವ್ ಸೀಸನ್ಸ್ ಸಿನಿಮಾ ಬಿಡುಗಡೆಗೆ ಸಜ್ಜು ಸಂಪೂರ್ಣ ಮಾಹಿತಿ ಇಲ್ಲಿ ಓದಿ.

ಮೋಡ ಕವಿದ ವಾತಾವರಣ ಸಿನಿಮಾದ ಹೀರೋ ಟೀಸರ್ ರಿಲೀಸ್: ಒಂದು ಸರಳ ಪ್ರೇಮಕಥೆ ಸಿನಿಮಾ ಬಳಿಕ ನಿರ್ದೇಶಕ ಸಿಂಪಲ್ ಸುನಿ ಭತ್ತಳಿಕೆಯಿಂದ ಬರ್ತಿರುವ ಮತ್ತೊಂದು  ಪ್ರೇಮ ಕಥೆ ಸಿನಿಮಾ ಮೋಡ ಕವಿದ ವಾತಾವರಣ. ಇದೇ ತಿಂಗಳ 26ಕ್ಕೆ ಬಿಡುಗಡೆಯಾಗುತ್ತಿರುವ ಮೋಡ ಕವಿದ ವಾತಾವರಣ ಚಿತ್ರದ ನಾಯಕನ ಟೀಸರ್​ ಬಿಡುಗಡೆ ಆಗಿದೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಚಿತ್ರತಂಡ ಸಿನಿಮಾದ ಟೀಸರ್ ಅನಾವರಣ ಮಾಡಿದೆ. ಈ ಸಿನಿಮಾದ ಮೂಲಕ ಸಿಂಪಲ್ ಸಿನಿ ಶಿಷ್ಯ ಶೀಲಮ್ ನಾಯಕನಾಗಿ ನಟಿಸುತ್ತಿದ್ದಾರೆ. ಸೈಂಟಿಫಿಕ್‌ ಫಿಕ್ಷನ್‌ ಲವ್ ಸ್ಟೋರಿ ಹೊಂದಿರುವ ಮೋಡ ಕವಿದ ವಾತಾವರಣ ಚಿತ್ರದಲ್ಲಿ ಶೀಲಮ್ ಗೆ ಜೋಡಿಯಾಗಿ ಸಾತ್ವಿಕಾ ಹಾಗೂ ಮೋಕ್ಷಾ ಕುಶಾಲ್ ನಟಿಸಿದ್ದಾರೆ. ಮೈಸೂರು ರಮೇಶ್, ಶ್ರೀರಂಗರಾಜು, ಲೋಕೇಶ್ ಬೆಳವಾಡಿ ಹಾಗೂ ಗೋವಾ ರಮೇಶ್ ನಿರ್ಮಾಣ ಮಾಡಿದ್ದಾರೆ.

ಕೆವಿಎನ್ ನಿರ್ಮಾಣದ 'ಬಾಲನ್ ದಿ ಬಾಯ್' ಸಿನಿಮಾದಿಂದ ಬಂತು ಕೀಲಿ ಕೈ ಹಾಡು: ದಕ್ಷಿಣ ಭಾರತದ ಚಲನಚಿತ್ರ ರಂಗದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ʻಕೆವಿಎನ್‌ ಪ್ರೊಡಕ್ಷನ್ಸ್‌ʼ ಮಲಯಾಳಂ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿರುವುದು ಗೊತ್ತೇ ಇದೆ. ʻಮಂಜುಮ್ಮೆಲ್‌ ಬಾಯ್ಸ್‌ʼ ಚಿತ್ರದ ನಿರ್ದೇಶಕ ಚಿದಂಬರಂ ಸಾರಥ್ಯದಲ್ಲಿ ಮೂಡಿ ಬರ್ತಿರುವ ಬಾಲನ್ ದಿ ಬಾಯ್ ಸಿನಿಮಾಗೆ ಕೆವಿಎನ್ ಹಣ ಹಾಕಿದೆ. ಇದೀಗ ಸಿನಿಮಾದ ಹಾಡು ಬಿಡುಗಡೆ ಆಗಿದೆ. ಈ ಹಾಡಿಗೆ ಸುಶಿನ್ ಶ್ಯಾಮ್ ಸಂಗೀತ, ಅನ್ವರ್ ಅಲಿ ಸಾಹಿತ್ಯ,  ನೀಲಾ ರಾಜ್ ಧ್ವನಿಯಾಗಿದ್ದಾರೆ. ಓರ್ವ ಬಾಲಕನ ಸುತ್ತ ಸಾಗುವ ಕಥೆಗೆ ಸಸ್ಪೆನ್ಸ್, ಥ್ರಿಲ್ ಅಂಶಗಳನ್ನು ಬಾಲನ್ ದಿ ಬಾಯ್ ಸಿನಿಮಾದಲ್ಲಿ ಹೇಳಲಾಗಿದೆ.

ಲವ್ ಸೀಸನ್ಸ್  ಬಿಡುಗಡೆಗೆ ಸಿದ್ಧ: ಕೃತ್ವಿಕ್ ನಿರ್ದೇಶನದ ಲವ್ ಸೀಸನ್ಸ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾದ ಮೂರು ಹಾಡುಗಳು ಬಿಡುಗಡೆ ಆಗಿದ್ದು, ದೊಡ್ಡ ಹಿಟ್ ಆಗಿವೆ. ಈ ಸಂಬಂಧವಾಗಿ ಪತ್ರಿಕಾಗೋಷ್ಠಿಯ ಮೂಲಕ ಹಾಡುಗಳ ಗೆಲುವಿನ ಸಿಹಿಯನ್ನು ಚಿತ್ರತಂಡ ಹಂಚಿಕೊಂಡಿದೆ. ಸಂಗೀತ ನಿರ್ದೇಶಕರು, ಗಾಯಕ, ಗಾಯಕಿಯರು ಹಾಗೂ ಸಾಹಿತ್ಯ ಬರೆದವರ ಮೂಲಕವೇ ಈ ಗೆಲುವನ್ನು ಚಿತ್ರತಂಡ ಸಂಭ್ರಮಿಸಿದೆ. ಚಿತ್ರವನ್ನ ಎನ್.ಆರ್ ಮಂಜುನಾಥ್ ನಿರ್ಮಾಣ ಮಾಡಿದ್ದು,  ಕೃತ್ವಿಕ್ ನಿರ್ದೇಶನ ಇದೆ. ಕೆ.ಕಲ್ಯಾಣ್, ಪ್ರಮೋದ್ ಮರವಂತೆ ಸಾಹಿತ್ಯ, ವೀರ್ ಸಮರ್ಥ್ ಸಂಗೀತ ಚಿತ್ರಕ್ಕಿದ್ದು,  ಮುಕುಂದ ರಾಮಸ್ವಾಮಿ, ಶ್ವೇತಾ ಕೊಗ್ಲೂರ್, ದಿಯಾ ಕೀರ್ತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ನಟಿ ಶರ್ಮಿಳಾ ಮಾಂಡ್ರೆ ಮದುವೆ ಫಿಕ್ಸ್​.. ವರ ಯಾರು ಗೊತ್ತಾ?: ಕನ್ನಡ ನಟಿ ಶರ್ಮಿಳಾ ಮಾಂಡ್ರೆ ಹೊಸ ಬಾಳಿಗೆ ಕಾಲಿಡಲು ಸಜ್ಜಾಗುತ್ತಿದ್ದಾರೆ. ಶರ್ಮಿಳಾ ಮಾಂಡ್ರೆ ತಮಿಳು ನಿರ್ಮಾಪಕನನ್ನ ಕೈ ಹಿಡಿಯುತ್ತಿದ್ದಾರೆ ಅಂತ ವರಧಿ ಅಗಿದೆ. ನಿರ್ಮಾಪಕ ಸುಧನ್ ಸುಂಧರಮ್ ಎಂಬುವವರ ಜೊತೆ ಶರ್ಮಿಳಾ ಮದುವೆ ನಡೆಯಲಿದ್ದು ಎಲ್ಲಾ ತಯಾರಿಗಳು ಆಗಿದೆ. ಜೂನ್ 25ರಂದು ನಿರ್ಮಾಪಕ ಸುಧನ್ ಸುಂಧರಮ್ ಹಾಗೂ ನಟಿ ಶರ್ಮಿಳಾ ಮಾಂಡ್ರೆ ಮದುವೆ ಎಂಗೇಜ್‌ಮೆಂಟ್ ನಡೆಲಿದೆ. ಇದೇ ವರ್ಷ ಮದುವೆ ನೆರವೇರಿಸಲು ಎರಡೂ ಕುಟುಂಬ ಸದಸ್ಯರು ತೀರ್ಮಾನಿಸಿದ್ದಾರೆ.

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more