ಗೋಡಂಬಿ ಫ್ಯಾಕ್ಟರಿಯಲ್ಲಿ Bhoomi Shettyಗೆ ಕೆಲಸ; ಡೀ-ಗ್ಲಾಮ್ ಲುಕ್ಕಲ್ಲಿ ಕಿನ್ನರಿ ನಟಿ!

By Suvarna NewsFirst Published Jan 18, 2022, 4:44 PM IST
Highlights

ಕುಂದಾಪುರದಲ್ಲಿ ನಡೆಯುವ ಕಥೆಗೆ ಕುಂದಾಪುರದ ನಾಯಕಿಯೇ ಆಯ್ಕೆ. ಟ್ರೈಬಲ್‌ ಲುಕ್‌ಗೆ ಭೂಮಿ ಶೆಟ್ಟಿ ರೆಡಿ....

ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿರುವ ಧಾರಾವಾಹಿ ನಟಿ ಕಮ್ ಬಿಗ್ ಬಾಸ್ ಸ್ಪರ್ಧಿ ಭೂಮಿ ಶೆಟ್ಟಿ (Bhoomi Shetty) ತಮ್ಮ ಹೊಸ ಸಿನಿಮಾದ ಪ್ರೇಸ್‌ಮೀಟ್‌ನಲ್ಲಿ ಕಾಣಿಸಿಕೊಂಡು, ಚಿತ್ರದ ಬಗ್ಗೆ ಮತ್ತು ಡೀ-ಗ್ಲಾಮ್ ಪಾತ್ರವನ್ನು ಆಯ್ಕೆ ಮಾಡಿಕೊಂಡಿದ್ದು ಯಾಕೆ ಎಂದು ಹಂಚಿಕೊಂಡಿದ್ದಾರೆ. ಚಿತ್ರಕ್ಕೆ ಇನಾಮ್ದಾರ್ (Inamdaar) ಎಂಬ ಶೀರ್ಷಿಕೆ ನೀಡಲಾಗಿದೆ, ಹೆಸರು ವಿಭಿನ್ನವಾಗಿದೆ. ತಮ್ಮ ಹಾಗೆಯೇ ತಮ್ಮ ಪಾತ್ರ ಎಂದಿದ್ದಾರೆ. 

'ನನಗೆ ನಿರ್ದೇಶಕರು ಕಥೆ ಹೇಳಿದಾಗ ತುಂಬಾನೇ ಇಷ್ಟ ಆಯ್ತು. ಟ್ರೈಬಲ್ ಕಾನ್ಸೆಪ್ಟ್ ಬಂದಾಗ ಯಾರಿಗೇ ಆದರೂ ಅದು ಚಾಲೆಂಜಿಂಗ್ ಅನಿಸುತ್ತದೆ. ಎಲ್ಲಾ ಕಲಾವಿದರೂ ಒಂದು ವಿಭಿನ್ನವಾದ ಪಾತ್ರದಲ್ಲಿ ನಟಿಸಬೇಕೆಂದು ಬಯಸುತ್ತಾರೆ. ನನಗೆ ಆ ಪಾತ್ರ ಸಿಕ್ಕಿದೆ. ಕಥೆ ತುಂಬಾ ಚೆನ್ನಾಗಿದೆ. ಯಾವುದೇ ರೀತಿಯ ರಿಹರ್ಸಲ್ ಮಾಡಿಲ್ಲ. ಪ್ರೆಸ್‌ಮೀಟ್‌ ನಂತರ ಎಲ್ಲಾ ರೀತಿ ವರ್ಕ್‌ಶಾಪ್ ನಡೆಯುತ್ತದೆ,' ಎಂದು ಭೂಮಿ ಶೆಟ್ಟಿ ಮಾತನಾಡಿದ್ದಾರೆ. 

'ಟ್ರೈಬಲ್ ಅಂತ ಹೇಳಿದ್ದರೆ ನಮ್ಮ ಕುಂದಾಪುರದ ಕಡೆ ನಮ್ಮ ಭಾಷೆಯೇ ಮಾತನಾಡುವುದು.ಮೈಸೂರು ಕಡೆ ಹೋದರೆ ಅಲ್ಲಿನ ಗ್ರಾಮೀಣ ಭಾಷೆ ಬರುತ್ತದೆ. ಅವರು ಕುಂದಾಪುರ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುವ ಕಾರಣ ಭೂಮಿ ಅವರನ್ನು ಆಯ್ಕೆ ಮಾಡಿಕೊಂಡಿರುವುದು. ಕುಂದಾಪುರದ ಹಳೆ ಕನ್ನಡ ಇದು,' ಎಂದು ನಿರ್ದೇಶಕರು ಮಾತನಾಡಿದ್ದಾರೆ. 

'ಟ್ರೈಬಲ್ ಕಮ್ಯೂನಿಟಿಗೆ ಸೇರುವ ಹುಡುಗಿ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳುವೆ. ಇದೊಂದು ಡೀ-ಗ್ಲಾಮ್ ಪಾತ್ರವಾಗಿದ್ದು, ನಾನು ಈ ಹಿಂದೆ ಮಾಡಿರದ ಪಾತ್ರವಿದು. ಇದರಲ್ಲಿ ನಾನು ಸೀರೆ ಧರಿಸುತ್ತೀನಿ ಆದರೆ ಬ್ಲೌಸ್ ಇರುವುದಿಲ್ಲ. ಪಾತ್ರಕ್ಕೆ ಪಕ್ಕಾ ಟ್ರೈಬಲ್ ಟಚ್ ಇರಲಿದೆ. ಆದಿವಾಸಿಗಳಲ್ಲಿ ಇದು ತುಂಬಾನೇ ಕಾಮನ್. ನನ್ನ ಬಟ್ಟೆ, ನನ್ನ ಹಾವಭಾವ ಮತ್ತು ಭಾಷೆ ಪಾತ್ರಕ್ಕೆ ತಕ್ಕಂತೆ ಇರಲಿದೆ. ತುಂಬಾ ಶ್ರಮಜೀವಿ ಹುಡುಗಿ ಕುಂದಾಪುರದ ಗೋಡಂಬಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಾಳೆ. ತಂದೆ ಹೆಚ್ಚಾಗಿ ಮಧ್ಯಪಾನ ಸೇವಿಸುವ ಕಾರಣ ಆಕೆ ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾಳೆ? ಹಾಗೆ ತನ್ನ ತಮ್ಮಂದಿರಿಗೆ ವಿದ್ಯಾಭ್ಯಾಸ ಕೊಡಿಸುತ್ತಾಳೆ. ಸದಾ ಪರ್ಫಾರ್ಮೆನ್ಸ್‌ ಇರುವ ಕ್ಯಾರೆಕ್ಟರ್ ಮಾಡಬೇಕು ಎಂದ ಆಸೆ ಇತ್ತು. ಅದು ಸಿಕ್ಕಿದೆ,' ಎಂದು ಭೂಮಿ ಹೇಳಿದ್ದಾರೆ.

Ladakh ಬೈಕ್‌ ಟ್ರಿಪ್‌, ಕಿರುತೆರೆಯಿಂದ ಬ್ರೇಕ್; ನಟಿ ಭೂಮಿ ಶೆಟ್ಟಿ ಲೈಫಲ್ಲಿ ಏನಾಗುತ್ತಿದೆ!

'ಇನಾಮ್ದಾರ್ ಅನ್ನೋದು ಉತ್ತರ ಕರ್ನಾಟಕದ ಕೋಸ್ಟಲ್ ಟ್ರೈಬಲ್‌ (Tribal) ಬೆಲ್ಟ್‌ನಲ್ಲಿ ನಡೆಯುವ ಕಥೆ. ನಾನು ಈ ಚಿತ್ರದಲ್ಲಿ ಟ್ರೈಬಲ್‌ ನಾಯಕಿ. ಈ ಪಾತ್ರ ತುಂಬಾನೇ ಚಾಲೆಂಜಿಂಗ್, ಕಪ್ಪು ಇರುವುದಕ್ಕೆ ಪಾತ್ರ ಆಯ್ಕೆ ಆಗಿದೆ ಅಂತಾರೆ. ನಾನು ಕಪ್ಪು ಬಿಳುಪು ಬಗ್ಗೆ ಮಾತನಾಡುವುದಕ್ಕೆ ಹೋಗಲ್ಲ. ಏಕೆಂದರೆ ಕಪ್ಪು ಅನ್ನೋ ಒಂದೇ ಕಾರಣ ಅಂದ್ರೆ ತಪ್ಪಾಗುತ್ತೆ. ಪಾತ್ರಕ್ಕೆ ನ್ಯಾಯ ಕೊಡ್ತೀನಿ, ಅನ್ನೋ ಕಾರಣಕ್ಕೆ ಸಂದೇಶ್ ಶೆಟ್ಟಿ ಆಯ್ಕೆ ಮಾಡಿರುವುದು' ಎಂದು ಹೇಳಿದ್ದಾರೆ.

ಹುಟ್ಟೂರಲ್ಲಿ ಕೃಷಿ ಕೆಲಸ; ಕಿರುತೆರೆ ನಟಿ ಭೂಮಿ ಶೆಟ್ಟಿ ಲಾಕ್‌ಡೌನ್‌ ದಿನಗಳು!

ಸಮಾಜದಲ್ಲಿ ಕಪ್ಪಗಿರುವ ವ್ಯಕ್ತಿಗಳ ಬಗ್ಗೆ ವ್ಯಂಗ್ಯ ಮಾಡುತ್ತಾರೆ. ಈ ಅನುಭವ ನಿಮಗೆ ಆಗಿದ್ಯಾ ಎಂದು ಪ್ರಶ್ನೆ ಮಾಡಿದಾಗ, ಭೂಮಿ ಕೊಟ್ಟ ಉತ್ತರಿವಿದು. 'Discrimination ಎಲ್ಲೂ ಇಲ್ಲ ನಾನು ನೋಡಿಲ್ಲ. ಆದರೆ ನೀವು ಜನರು ಅದನ್ನು ಮಾಡುತ್ತಿರುವುದು. ಇಲ್ಲ ಅಂತಲ್ಲ ಎಲ್ಲಾ ಕಡೆ ಅದನ್ನು ನೋಡಬಹುದು. ಎಲ್ಲಾ ಬಣ್ಣ ಚೆಂದ. ಕಾಮನಬಿಲ್ಲಿನಲ್ಲಿ ಎಲ್ಲಾ ಬಣ್ಣ ಇದೆ. ಎಲ್ಲಾನೂ ಇಷ್ಟ ಪಡ್ತೀವಿ. ಎಷ್ಟೋ ಜನಕ್ಕೆ ಕಪ್ಪು ಅವರು ಫೇವರೆಟ್ ಬಣ್ಣ ಆಗಿರುತ್ತದೆ. ಒಬ್ಬರ ಬಗ್ಗೆ ಹಾಗೆ ಮಾತನಾಡಬೇಕು ಅನ್ನೋದು ನಮ್ಮ ಬುದ್ಧಿವಂತಿಕೆಗೆ ಬಿಟ್ಟಿದ್ದು. ಕಪ್ಪಿದ್ದಾರೆ, ಮಾತನಾಡಿಸಬಾರದು. ಬೆಳ್ಳಗಿದ್ದಾರೆ ಹೀಗೆ ಹೇಳಬೇಕು ಅನ್ನೋದು ನನಗಿಲ್ಲ. ಎಲ್ಲರೂ ಒಂದೇ ಅನ್ನ ನೋಡೋಲು ನಾನು ನೀವು ಕೂಡ ಹಾಗೇ ಇರಿ,' ಎಂದಿದ್ದಾರೆ.

click me!