'ಸದ್ದು ವಿಚಾರಣೆ ನಡೆಯುತ್ತಿದೆ' ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ Dolly Dhananjay

Suvarna News   | Asianet News
Published : Jan 17, 2022, 11:58 PM IST
'ಸದ್ದು ವಿಚಾರಣೆ ನಡೆಯುತ್ತಿದೆ' ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ Dolly Dhananjay

ಸಾರಾಂಶ

'ಸದ್ದು ವಿಚಾರಣೆ ನಡೆಯುತ್ತಿದೆ' ಹೀಗೊಂದು ಆಕರ್ಷಕ ಶೀರ್ಷಿಕೆಯೊಂದನ್ನು ಇಟ್ಟುಕೊಂಡು ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೇಳೋದಕ್ಕೆ ಉತ್ಸಾಹಿ ಕಲಾವಿದರ ತಂಡ ಸಜ್ಜಾಗಿದ್ದು, ಡಾಲಿ ಧನಂಜಯ್ ಈ ಚಿತ್ರದ ಪೋಸ್ಟರನ್ನು ರಿಲೀಸ್ ಮಾಡಿದ್ದಾರೆ.

ವಿಭಿನ್ನ ಕಾನ್ಸೆಪ್ಟ್ ಇಟ್ಟುಕೊಂಡು ಕನ್ನಡ ಚಿತ್ರರಂಗಕ್ಕೆ ಹೊಸ ಪ್ರತಿಭೆಗಳು ಎಂಟ್ರಿ ಕೊಡುತ್ತಿದ್ದಾರೆ. ಇದೀಗ 'ಸದ್ದು ವಿಚಾರಣೆ ನಡೆಯುತ್ತಿದೆ' (Saddu Vicharane Nadeyuttide) ಹೀಗೊಂದು ಆಕರ್ಷಕ ಶೀರ್ಷಿಕೆಯೊಂದನ್ನು ಇಟ್ಟುಕೊಂಡು ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೇಳೋದಕ್ಕೆ ಉತ್ಸಾಹಿ ಕಲಾವಿದರ ತಂಡ ಸಜ್ಜಾಗಿದೆ. ಕೊರೋನಾ ವೈರಸ್ (Corona Virus) ಹಾವಳಿ‌ ಇಲ್ಲದೇ ಹೋಗಿದ್ದರೆ ಇಷ್ಟರಲ್ಲಾಗಲೇ 'ಸದ್ದು ವಿಚಾರಣೆ ನಡೆಯುತ್ತಿದೆ' ಚಿತ್ರವು ರಾಜ್ಯಾದ್ಯಂತ ಬಿಡುಗಡೆಯಾಗಬೇಕಿತ್ತು. ಸದ್ಯಕ್ಕೀಗ ಚಿತ್ರದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ನಟ ರಾಕ್ಷಸ ಡಾಲಿ ಧನಂಜಯ್ (Dolly Dhananjay) ಅವರಿಂದ ಈ ಚಿತ್ರದ ಪೋಸ್ಟರನ್ನು ರಿಲೀಸ್ ಮಾಡಿಸಿದೆ. 

'ಸದ್ದು ವಿಚಾರಣೆ ನಡೆಯುತ್ತಿದೆ' ಚಿತ್ರಕ್ಕೆ ಹಾಗೂ ಚಿತ್ರತಂಡಕ್ಕೆ ಧನಂಜಯ್ ಶುಭ ಹಾರೈಸಿದ್ದಾರೆ. 'ಮಗಳು ಜಾನಕಿ' (Magalu Janaki) ಸೀರಿಯಲ್ ಮೂಲಕ ಹೆಸರಾಗಿರುವ ರಾಕೇಶ್‌ ಮಯ್ಯ (Rakesh Maiya) ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದು, ರಾಕೇಶ್‌ಗೆ ಜೋಡಿಯಾಗಿ 'ಗೊಂಬೆಗಳ ಲವ್‌' ಸಿನಿಮಾ ಖ್ಯಾತಿಯ ಪಾವನಾ ಗೌಡ (Pavana Gowda) ನಟಿಸಿದ್ದಾರೆ. 'ಶ್ರೀಮಾನ್ ಶ್ರೀಮತಿ' ಸೀರಿಯಲ್ ಹಾಗೂ 'ಲೌಡ್ ಸ್ಪೀಕರ್', 'ಕೃಷ್ಣ ಗಾರ್ಮೆಂಟ್', 'ಫೋರ್ ವಾಲ್ಸ್' ಸಿನಿಮಾಗಳಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಭಾಸ್ಕರ್ ಆರ್ ನೀನಾಸಂ (Bhaskar R Ninasam) 'ಸದ್ದು ವಿಚಾರಣೆ' ಸಿನಿಮಾ ಮೂಲಕ ನಿರ್ದೇಶನದ ಅಖಾಡಕ್ಕೆ ಧುಮುಕಿದ್ದಾರೆ. ಇದು ಇವರ ನಿರ್ದೇಶನದ ಮೊದಲ ಚಿತ್ರವಾಗಿದೆ.

Gajanana and Gang Song: 'ನಾನ್ ಒಳ್ಳೆಯವ್ನೇ' ಹಾಡಿಗೆ ದನಿಯಾದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್

ಎಂ.ಎಂ.ಸಿನಿಮಾಸ್ ಬ್ಯಾನರ್‌ನಡಿ ಸುರಭಿ ಲಕ್ಷ್ಮಣ್ (Surabhi Lakshman) 'ಸದ್ದು ವಿಚಾರಣೆ ನಡೆಯುತ್ತಿದೆ' ಚಿತ್ರಕ್ಕೆ ಬಂಡವಾಳ ಹೂಡಿದ್ದು, ಅಶ್ವಿನಿ.ಕೆ.ಎನ್ ಕಥೆ, ದಕ್ಷಿಣ ಮೂರ್ತಿ ಸಂಭಾಷಣೆ , ರಾಜ್ ಕಾಂತ ಕ್ಯಾಮೆರಾ ಕೈಚಳಕ, ಸಚಿನ್ ಬಸ್ರೂರ್ ಸಂಗೀತ ಸಂಯೋಜನೆ, ಶಶಿಧರ್.ಪಿ ಸಂಕಲನ, ಗಂಗಮ್ ರಾಜ್ ಕೊರಿಯೋಗ್ರಾಫಿ, ಅರ್ಜುನ್ ರಾಜ್ ಸಾಹಸ, ಅಶ್ವಿನಿ ಕೆ ಎನ್, ಪ್ರಮೋದ್ ಮರವಂತೆ ಸಾಹಿತ್ಯ ಹಾಗೂ ರವಿ ಬಸ್ರೂರ್, ಸಚಿನ್ ಬಸ್ರೂರ್ ಗಾಯನ ಈ ಚಿತ್ರಕ್ಕಿದೆ. ಅಚ್ಯುತ ಕುಮಾರ್, ಕೃಷ್ಣ ಹೆಬ್ಬಾಳೆ, ಮಧು ನಂದನ್, ಜಹಾಂಗೀರ್, ರಾಘು ಶಿವಮೊಗ್ಗ ,ರೋಹಿಣಿ ರಘುನಂದನ್ ಸೇರಿದಂತೆ ಮುಂತಾದವರ ತಾರಾಬಳಗ ಚಿತ್ರಕ್ಕಿದೆ. 

ಈ ಚಿತ್ರದ ನಾಯಕ ರಾಕೇಶ್ ಮಯ್ಯ 'ಮಗಳು ಜಾನಕಿ' ಧಾರಾವಾಹಿಯಲ್ಲಿ ನಟಿಸಿದ ನಂತರದಲ್ಲಿ ಒಂದಾದ ಮೇಲೆ ಒಂದರಂತೆ ಸಿನಿಮಾ ಅವಕಾಶಗಳು ಬರುತ್ತಿವೆ. ರಾಕೇಶ್ ಮಯ್ಯ ಅವರು ಈಗಾಗಲೇ 'ಶುಭಮಂಗಳ', 'ಟೆನಂಟ್' ಎಂಬ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ರಮೇಶ್​ ಅರವಿಂದ್ (Ramesh Aravind) ಅಭಿನಯದ 'ಶಿವಾಜಿ ಸುರತ್ಕಲ್ 2' (Shivaji Surathkal 2) ಚಿತ್ರದಲ್ಲಿ ಟ್ರೇನಿಂಗ್ ಮುಗಿಸಿ ಕೆಲಸಕ್ಕೆ ಸೇರಿರುವ ಪೋಲೀಸ್ ಇನ್‌ಸ್ಪೆಕ್ಟರ್ ಪಾತ್ರದಲ್ಲಿ ರಾಕೇಶ್ ಮಯ್ಯ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರಕ್ಕೆ ಹಲವು ಶೇಡ್‌ಗಳಿದ್ದು ಚಿತ್ರದುದ್ದಕ್ಕೂ ಪ್ರಾಮುಖ್ಯತೆ ವಹಿಸುವ ಪಾತ್ರವಾಗಿದೆ. 

Garuda Gamana Vrishabha Vahana: ಓಟಿಟಿಯಲ್ಲಿ ಧೂಳೆಬ್ಬಿಸಿದ ರಾಜ್‌ ಬಿ. ಶೆಟ್ಟಿ ಚಿತ್ರ

ಇನ್ನು 'ಸದ್ದು ವಿಚಾರಣೆ ನಡೆಯುತ್ತಿದೆ' ಚಿತ್ರದ ನಾಯಕಿ ಪಾವನಾ ಗೌಡ ಶಿವರಾಜ್‌ಕುಮಾರ್‌ (Shivarajkumar) ಅಭಿನಯದ 125ನೇ ಸಿನಿಮಾ 'ವೇದ' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಪಾವನಾ ಪಾತ್ರ ಹೇಗಿರಲಿದೆ? ಪಾತ್ರದ ಹೆಸರು ಏನು ಎಂಬುದರ ಬಗ್ಗೆ ಮಾಹಿತಿ ರಿವೀಲ್ ಆಗಿಲ್ಲವಾದರೂ ಶಿವಣ್ಣ ಎದರಿಗೆ ನಾಯಕಿ ಆಗಿರುವುದನ್ನು ಮಾತ್ರ ಖಚಿತ ಪಡಿಸಿದ್ದಾರೆ. ಈ ಹಿಂದೆ ಕ್ರೇಜಿಸ್ಟಾರ್​ ವಿ.ರವಿಚಂದ್ರನ್ (V.Ravichandran)​ ಅಭಿನಯದ 'ಕನ್ನಡಿಗ' (Kannadiga) ಚಿತ್ರದಲ್ಲಿ ಸಂಕಮ್ಮಬ್ಬೆ ಪಾತ್ರದಲ್ಲಿ ಪಾವನಾ ಗೌಡ ನಟಿಸಿದ್ದರು.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್