ಕಾಟೇರ ಸಿನಿಮಾ ನನಗೆ ಸಹೋದರನನ್ನು ಕೊಟ್ಟಿದೆ ಎಂದು ನಟಿ ಶ್ರುತಿ ಕೃಷ್ಣ. ದರ್ಶನ್ ಸ್ಪಂದಿಸುವ ಗುಣ ಎಲ್ಲರಿಗೂ ಇಷ್ಟ...
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಸಿನಿಮಾ ರಿಲೀಸ್ ಹಂತದಲ್ಲಿದೆ. ಚಿತ್ರದ ಹಾಡುಗಳು ಸಖತ್ ವೈರಲ್ ಆಗಿತ್ತು ವೀಕ್ಷಕರ ನಿರೀಕ್ಷೆ ಹೆಚ್ಚಿಸಿದೆ. ಈ ಚಿತ್ರದಲ್ಲಿ ನಟಿ ಶ್ರುತಿ ಕೃಷ್ಣ ಅಭಿನಯಿಸಿದ್ದಾರೆ. ಶ್ರುತಿ ನಟನೆ ಮೆಚ್ಚು ದರ್ಶನ್ ಕರೆ ಮಾಡಿ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದ ಸಂದರ್ಭಗಳನ್ನು ಶ್ರುತಿ ನೆನಪಿಸಿಕೊಂಡಿದ್ದಾರೆ.
'ಪ್ರತಿ ಸಲ ಎಲ್ಲರು ಕೇಳುತ್ತಾರೆ ದರ್ಶನ್ ಬಗ್ಗೆ ಏನು ಹೇಳುತ್ತೀರಾ ಅಂತ. ತುಂಬಾ ವಿಚಾರಗಳಲ್ಲಿ ದರ್ಶನ್ ಬಗ್ಗೆ ಮಾತನಾಡಬೇಕು ಅನಿಸುತ್ತದೆ ಆದರೆ ಸಿಂಪಲ್ ಅಗಿ ಹೇಗೆ ಹೇಳಬೇಕು ಗೊತ್ತಾಗುತ್ತಿಲ್ಲ. ಕಾಟೇರ ಸಿನಿಮಾ ಒಪ್ಪಿಕೊಳ್ಳುವ ಮುನ್ನ ಸಿನಿಮಾ ತಂಡ ಸೇರುವ ಮುನ್ನ ದರ್ಶನ್ ನನಗೆ ಸೂಪರ್ ಸ್ಟಾರ್ ಆಗಿ ಕಾಣಿಸುತ್ತಿದ್ದರು, ಸೆಟ್ ಒಳಗೆ ಬಂದ್ಮೇಲೆ ಸಹುದ್ಯೋಗಿಯಾಗಿ ಕೋ-ಸ್ಟಾರ್ ಆಗಿ ಕಾಣುತ್ತಿದ್ದರು, ಸಿನಿಮಾ ಮುಗಿಸಿ ಹೊರ ಬಂದ್ಮೇಲೆ ನನ್ನ ಜೀವನಕ್ಕೆ ಒಳ್ಳೆ ಸಹೋದರ ಸಿಕ್ಕಿದ್ದಾರೆ ಅನಿಸುತ್ತದೆ. ಒಂದು ಸಿನಿಮಾ ಎಷ್ಟು ಭಾಂದವ್ಯ ಕ್ರಿಯೇಟ್ ಮಾಡಿಕೊಡುತ್ತದೆ ಎಂದು ಪದಗಳಲ್ಲಿ ಹೇಳಲು ಆಗಲ್ಲ' ಎಂದು ಖಾಸಗಿ ಟಿವಿಯಲ್ಲಿ ಶ್ರುತಿ ಮಾತನಾಡಿದ್ದಾರೆ.
ಹೆಣ್ಣುಮಕ್ಕಳಿಗೆ ಕಪ್ಪಾಳಕ್ಕೆ ಹೊಡೆದರೆ ಸೆನ್ಸರ್ ಕಟ್; ಪೋರ್ನ್ ವಿಡಿಯೋ ಬ್ಯಾನ್ ಮಾಡಿ ಎಂದ ರಘು ಶಿವಮೊಗ್ಗ
'ದರ್ಶನ ಅನ್ನೋರು ಉದ್ಭವ ಮೂರ್ತಿ ಅಲ್ಲ ಶ್ರಮ ಜೀವಿ. ತುಂಬಾ ಶ್ರಮ ಪಟ್ಟು ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ ಅಂದ್ರೆ ಅವರ ಪರಿಶ್ರಮ ಮತ್ತು ಸಣ್ಣ ಪುಟ್ಟ ಕೆಲಸಗಳನ್ನು ಈ ಚಿತ್ರರಂಗದಲ್ಲಿ ಮಾಡಿಕೊಂಡು ಈ ಮಟ್ಟಕ್ಕೆ ಬಂದಿದ್ದಾರೆ ಅಂದ್ರೆ ಶ್ರಮ ಮತ್ತು ಅವರ ಅಭಿಮಾನಿಗಳು ಸಪೋರ್ಟ್ ಕಾರಣ. ಸುತ್ತ ಮುತ್ತ ಇರುವ ಫೈಟರ್‌ಗಳ ಬಗ್ಗೆ ದರ್ಶನ್ ಸದಾ ಚಿಂತಿಸುತ್ತಾರೆ, ಕಲಾವಿದರಿಗೆ ಏನಾದರೂ ಆದರೆ ಸದಾ ಚಿಂತಿಸುತ್ತಾರೆ. ಕಷ್ಟ ನೋಡಿಕೊಂಡು ಬಂದಿರುವ ವ್ಯಕ್ತಿ ದರ್ಶನ್. ನಮ್ಮ ಸಿನಿಮಾದಲ್ಲೂ ದರ್ಶನ್ ಅವರ ಊಟದ ಬಗ್ಗೆ ಚಿಂತಿಸಿಲ್ಲ ನಮ್ಮ ಊಟದ ಬಗ್ಗೆ ಚಿಂತಿಸುತ್ತಿದ್ದರು. ನನ್ನ ಅಮ್ಮನೂ ಕೇಳುತ್ತಿರಲಿಲ್ಲ ಏನು ಊಟ ಬೇಕು ಅಂತ...ದರ್ಶನ್ ಕೇಳುತ್ತಿದ್ದರು ಇವತ್ತು ಏನು ತಿನ್ನುತ್ತೀರಾ ಎಂದು' ಎಂದು ಶ್ರುತಿ ಹೇಳಿದ್ದಾರೆ.
ಜಗತ್ತೆಲ್ಲ ಸುತ್ತಿ ಮನೆ ಊಟ ಮಾಡೋ ಫೀಲ್ ಆಗ್ತಿದೆ: ರಮೇಶ್ ಅರವಿಂದ್
'ಬಹಳ ಹಿಂದೆ ರಾಜ್‌ಕುಮಾರ್ ಅಪ್ಪಾಜಿ ಕಲಾವಿದರಿಗೆ ಪೋನ್ ಮಾಡಿ ನಟನೆ ಹೊಗಳುತ್ತಿದ್ದರು. ರಾಘಣ್ಣ ಜೊತೆ ಸಿನಿಮಾ ಮಾಡಿದಾಗ ನನ್ನ ವಯಸ್ಸು ಚಿಕ್ಕ ಹುಡುಗಿ ತರ ಇದ್ದ ಕಾರಣ ಡಬ್ಬಿಂಗ್ ಮಾಡಿಸಿರಲಿಲ್ಲ...ಅಪ್ಪಾಜಿ ವಿಶ್ಯೂಯಲ್ ನೋಡಿ...ಆ ಮಗುನ ಕರೆಸಿ ಆಕೆನೇ ಡಬ್ಬಿಂಗ್ ಮಾಡಲಿ ಅರ್ಕತಮ್ಮ ಅವರ ಮೊಮ್ಮಗಳು ಮಾಡಿ ಎಂದರು. ವಿಷ್ಣುವರ್ಧನ್ ಸರ್ ಅವರ ಮನೆಯಲ್ಲಿ ನ್ನ ಸಿನಿಮಾ ಅಥವಾ ಯಾವುದೋ ವಿಡಿಯೋ ನೋಡಿದಾಗ ಫೋನ್ ಮಾಡಿ ಹೇಳುತ್ತಿದ್ದರು. ಈಗ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ದರ್ಶನ್ ಅವರ ಜೊತೆ ಕೆಲಸ ಮಾಡಿದಾಗ ಫಸ್ಟ್ ಹಾಫ್ ನೋಡಿ ಡಬ್ಬಿಂಗ್ ಮಾಡದೆ ಇರೋ ದೃಶ್ಯ ನೋಡಿ ಅದ್ಭುತವಾಗಿ ನಟಿಸಿದ್ದೀರಾ ಅಂತ ಹೇಳಲು ರಾತ್ರಿ ಫೋನ್ ಮಾಡಿದಾಗ ಖುಷಿಯಾಗುತ್ತದೆ' ಎಂದಿದ್ದಾರೆ ಶ್ರುತಿ.