ಹೆಣ್ಣುಮಕ್ಕಳಿಗೆ ಕಪ್ಪಾಳಕ್ಕೆ ಹೊಡೆದರೆ ಸೆನ್ಸರ್ ಕಟ್; ಪೋರ್ನ್ ವಿಡಿಯೋ ಬ್ಯಾನ್ ಮಾಡಿ ಎಂದ ರಘು ಶಿವಮೊಗ್ಗ

By Vaishnavi Chandrashekar  |  First Published Dec 15, 2023, 11:38 AM IST

ಕೈವ ಚಿತ್ರಕ್ಕೆ ನೆಗೆಟಿವ್ ಕಾಮೆಂಟ್. ಸೆನ್ಸರ್ ಮಂಡಳಿ ನೀಡುತ್ತಿರುವ ಸರ್ಟಿಫಿಕೇಟ್‌ ಬಗ್ಗೆ ಆಕ್ರೋಶ್ ಹೊರ ಹಾಕಿದ ನಿರ್ದೇಶಕ ರಘು.


ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ರಘು ಶಿವಮೊಗ್ಗ ಸೆನ್ಸರ್ ಮಂಡಳಿ ವಿರುದ್ಧ ಧ್ವನಿ ಎತ್ತಿದ್ದಾರೆ. ಚಿತ್ರಗಳಿಗೆ A ಸರ್ಟಿಫಿಕೇಟ್ ನೀಡುವ ಸೆನ್ಸರ್ ಮಂಡಳಿ ಚೆಕ್‌ ಪೋಸ್ಟ್‌ ರೀತಿ ಇರಬೇಕು ಹೊರತು ಎಲೆಕ್ಟ್ರಿಕ್‌ ಪೋಲ್‌ ರೀತಿ ಇರಬಾರದು. ಸೆನ್ಸರ್ ಮಂಡಳಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಿದ ರಘು ಶಿವಮೊಗ್ಗ.   

'ಚಿತ್ರವೊಂದಕ್ಕೆ ಸೆನ್ಸರ್ ಮಂಡಳಿಯವರು ಲಂಚ ಪಡೆಯಲು ಹೋಗಿ ಸಿಬಿಐ ಆಫೀಸರ್‌ಗೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ. ಸಿನಿಮಾ ಮಾಡ್ಬೇಕು ಅಂದ್ರೆ ನಿರ್ದೇಶಕರು ಮೊದಲು ಹೇಳುವುದು ನಾಯಕನನ್ನು ಒಪ್ಪಿಸಿ ಅಂತಾರೆ ಅದಾದ ಮೇಲೆ ಇಡೀ ತಂಡ ಕಟ್ಟಿಕೊಂಡು ಸಿನಿಮಾ ಮಾಡಿ ಮಹಾ ಜನರ ಮುಂದೆ ಇಡುವಾಗ ಪೂಜಾರಿಗಳು ಅಡ್ಡ ಬರ್ತಾರೆ ಅವರೇ ಸೆನ್ಸರ್ ಮಂಡಳಿ. ಕಥೆ ಬರೆಯುವಾಗ ಹೆಣ್ಣು ಮಕ್ಕಳಿಗೆ ಕಪ್ಪಾಳಕ್ಕೆ ಹೊಡೆಸಿದರೆ ಸೆನ್ಸರ್ ಕಟ್ ಮಾಡುತ್ತಾರಂತೆ. ಅದೇ ಟಿವಿ ಶೋಗಳಿಗೆ ಇರುವ ಸ್ವಾತಂತ್ರ್ಯ ಸಿನಿಮಾಗೆ ಇಲ್ಲ. ಮಿನಿಸ್ಟರ್ ಒಬ್ಬರು ಹೆಣ್ಣುಮಗಳ ಜೊತೆ ರೂಮಿನಲ್ಲಿ ಇರುವ ಸೀನ್ ತೋರಿಸುತ್ತಾರೆ ಒಂದು ಭಾಗಕ್ಕೆ ಬ್ಲರ್ ಮಾಡುತ್ತಾರೆ ಆ ಆಕ್ಷನ್‌ನ ಮಕ್ಕಳ ನೋಡಲ್ವಾ? ಸಿನಿಮಾ ನೋಡಲು 18 ವರ್ಷ ಆಗಿರಬೇಕು ಅಂತಾರೆ. ಸೆನ್ಸರ್ ಮಂಡಳಿ ಈ ರೀತಿ ನಿರ್ಧಾರ ಕೊಡುವುದರ ಬಗ್ಗೆ ಜನರ ಮಾತನಾಡಬೇಕು' ಎಂದು ರಘು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.  

Tap to resize

Latest Videos

ಧನ್ವೀರ್ ಗೌಡ ಹಣ ಕೊಟ್ಟು ಜನ ಕರೆಸುತ್ತಾರೆ; ನೆಟ್ಟಿಗರಿಗೆ ಖಡಕ್ ಟಾಂಗ್ ಕೊಟ್ಟ ಜಾನ್ವಿ ರಾಯಲಾ

'ಪ್ರಾಣಿಗಳು ಇರುವ ದೃಶವನ್ನು ಸೆನ್ಸರ್ ಅಧಿಕಾರಿಗಳ ಎದುರು ಚಿತ್ರೀಕರಣ ಮಾಡಬೇಕು. ಯಾವಗ್ಲೋ ಚಿತ್ರೀಕರಣ ನಡೆದಿರುತ್ತಾರೆ ಅಧಿಕಾರಿಗಳ ಮುಂದೆ ಡಮ್ಮಿ ಶೂಟಿಂಗ್ ಮಾಡುತ್ತಾರೆ. ಎಲ್ಲರಿಗೂ ನ್ಯಾಯ ಒಂದೇ ಇರಬೇಕು. ಅಂಬೇಡ್ಕರ್ ವಿಚಾರವನ್ನು ತೋರಿಸಿದಕ್ಕೆ ಸೆನ್ಸರ್‌ ಆಕ್ಷೇಪ ವ್ಯಕ್ತ ಪಡಿಸುತ್ತಿದೆ ಆದರೆ ಅಂಬೇಡ್ಕರ್ ಬರೆದಿರುವ ಸಂವಿದಾವನ್ನು ಓದಿಕೊಂಡು ಕೆಲಸ ಪಡೆದವರಿಗೆ ಆ ವಿಚಾರಗಳನ್ನು ಸಿನಿಮಾದಲ್ಲಿ ತೋರಿಸಿದರೆ ತಪ್ಪುಂತೆ. ಜನರ ಮುಂದೆ ಸಿನಿಮಾ ತರುವುದು ತುಂಬಾ ಕಷ್ಟವಾಗುತ್ತದೆ ಅದರ ನಡುವೆ ಸೆನ್ಸರ್‌ನರೆವು ಕಟ್ ಮಾಡಿದರೆ ಪ್ರಚಾರಕ್ಕೆ ಮಾಡುತ್ತಿರುವ ಗಿಮಿಕ್ ಅಂದುಕೊಳ್ಳುತ್ತಾರೆ' ಎಂದು ರಘು ಶಿವಮೊಗ್ಗ ಹೇಳಿದ್ದಾರೆ.

ಡಿ-ಬಾಸ್‌ ಫೋಟೋ ಬಳಸಿ ನೆಗೆಟಿವ್ ಕಾಮೆಂಟ್; ಕರ್ಮದ ಏಟು ತಪ್ಪಿಲ್ಲ ಎಂದು ಟಾಂಗ್ ಕೊಟ್ಟ ಧನ್ವೀರ್! 

'ಸಿನಿಮಾ ಇಂಡಸ್ಟ್ರಿ ಕೂಡ ದೊಡ್ಡ ಉದ್ಯಮ ನಾವು ಟ್ಯಾಕ್ಸ್ ಕಟ್ಟುತ್ತಿದ್ದೀವಿ. ಸೆನ್ಸರ್ ಮಂಡಳಿ ಉಪಕಾರ ಮಾಡಿಲ್ಲ ಅಂದ್ರೂ ಪರ್ವಾಗಿಲ್ಲ ತೊಂದರೆ ಮಾಡ್ಬೇಡಿ. ಓಟಿಟಿ ಯಾವ ಸೆನ್ಸರ್ ಇಲ್ಲ. ಪೋರ್ನ್ ವಿಡಿಯೋ ಅಂತ ಮೊಬೈಕ್‌ನಲ್ಲಿ ಹುಡುಕಿದರೆ ಎಷ್ಟು ಬರುತ್ತೆ...ಅದನ್ನು ಮೊದಲು ಭಾರತ ಸೆನ್ಸರ್ ಮಾಡಬೇಕು' ಎಂದಿದ್ದಾರೆ ರಘು. 

click me!