
ಕನ್ನಡ ಚಿತ್ರರಂಗ ಹಿರಿಯ ನಟಿ ಲೀಲಾವತಿ ವಯೋಸಹಜ ಕಾಯಿಲೆಯಿಂದ ಡಿಸೆಂಬರ್ 8ರಂದು ಇಹಲೋಕ ತ್ಯಜಿಸಿದ್ದರು. ಕೆಲವು ತಿಂಗಳುಗಳ ಹಿಂದೆ ಲೀಲಾವತಿ ಅವರ ಫ್ಯಾಮಿಲಿ ಫೋಟೋ ಮತ್ತು ಮೊಮ್ಮಗನ ಮಾರ್ಕ್ಸ್ ಕಾರ್ಡ್ ವೈರಲ್ ಆಗಿತ್ತು. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡು ವಿನೋದ್ ರಾಜ್‌ಗೆ ಮದುವೆಯಾಗಿ, ಆಗಿದ್ದರೂ ಆಗಿಲ್ಲ ಎಂದು ಹೇಳುವುದು ಅಥವಾ ಮುಚ್ಚಿಟ್ಟಿರಲು ಕಾರಣ ಏನು ಎಂದು ಅಭಿಮಾನಿಗಳು ಮತ್ತು ನೆಟ್ಟಿಗರು ಪ್ರಶ್ನೆ ಮಾಡಿದ್ದರು. ಆ ಹಳೆ ವಿಡಿಯೋಗಳು ಈಗ ಮತ್ತೊಮ್ಮೆ ವೈರಲ್ ಆಗುತ್ತಿದೆ.
ಈಗ ಯಾಕೆ ವೈರಲ್ ಆಗುತ್ತಿದೆ?
ಲೀಲಾವತಿ ಅಗಲಿದಾಗ ಅವರ ಅಂತಿಮ ದರ್ಶನ ಪಡೆಯಲು ಸೊಸೆ ಅನು ಮತ್ತು ಮೊಮ್ಮಗ ಆಗಮಿಸಿದ್ದರು. ಚೆನ್ನೈನಲ್ಲಿ ವಾಸವಿರುವ ತಾಯಿ ಮಗ ಮಾಧ್ಯಮಗಳಲ್ಲಿ ಜೊತೆ ಕನ್ನಡದಲ್ಲಿ ಸ್ಪಷ್ಟವಾಗಿ ಮಾತನಾಡಿದರು. ಅವರ ಕನ್ನಡ ಪ್ರೇಮ ನೋಡಿ ಅಭಿಮಾನಿಗಳು ಖುಷಿ ಪಟ್ಟರು. ಹೀಗಾಗಿ ವಿನೋದ್ ರಾಜ್ ಮದುವೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹುಡುಕಿದಾಗ ಹರಿದಾಡುತ್ತಿರುವ ಸುದ್ದಿಗಳ ನಡುವೆ ನಿರ್ದೇಶಕ ಪ್ರಕಾಶ್ ರಾಜ್ ಮೇಹು ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದೆ.
ವಿನೋದ್ ರಾಜ್ ಹೀರೋಯಿನ್ ಹಿಂದೆ ಹೋಗ್ತಾನೆ ಅನ್ನೋ ಸ್ವಾರ್ಥ ಲೀಲಮ್ಮನಿಗೆ ಇತ್ತು: ಬ್ರಹ್ಮಾಂಡ ಗುರೂಜೀ
'ವಿನೋದ್ ರಾಜ್ ಮತ್ತು ಅನು ಅವರು ಮದುವೆಯಾಗಿರುವ ವಿಚಾರ 20 ವರ್ಷಗಳ ಹಿಂದೆ ಗೊತ್ತಿತ್ತು. 2001ರಲ್ಲಿ ವಿನೋದ್ ಮಗ ಹುಟ್ಟಿರುವುದು ಲೆಕ್ಕಾಚಾರ ಮಾಡಿ ಮೂರ್ನಾಲ್ಕು ವರ್ಷ ಹಿಂದೆ ಮುಂದೆ ಮಾಡಿದರೆ 1998-99ರಲ್ಲಿ ಇವರ ಮದುವೆ ನಡೆದಿರಬಹುದು. ವಿನೋದ್ ಪತ್ನಿ ಅವರೇ ಅಂತ ಯಾರೋ ಹೇಳಿದರು. ವಿನೋದ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿ ಅನು..ಅವರನ್ನು ಮದುವೆ ಮಾಡಿಕೊಂಡಿದ್ದಾರೆ ಅಂತ ಯಾರೋ ಹೇಳಿದ್ದರು. ಆ ಕಾರಣಕ್ಕೆ ಪಬ್ಲಿಕ್‌ನಲ್ಲಿ ಹೇಳಿಕೊಳ್ಳುತ್ತಿಲ್ವೋ ಏನೋ ಗೊತ್ತಿಲ್ಲ. ಅದು ನಿಜವೇ ಆಗಿದ್ರೆ ವಿನೋದ್ ರಾಜ್ ಹೆಮ್ಮೆಯಿಂದ ಹೇಳಿಕೊಳ್ಳಬೇಕು ಏಕೆಂದರೆ ಇದರಲ್ಲಿ ಯಾವುದೇ ತಪ್ಪು ಕೆಲಸವಿಲ್ಲ. ಕೆಲಸ ಮಾಡುತ್ತಿರುವ ಹೆಂಗಸಿಗೆ ಬಾಳು ಕೊಟ್ಟಿದ್ದಾರೆ ಹೆಮ್ಮೆಯಿಂದ ಹೇಳಿಕೊಳ್ಳಬೇಕಾದ ವಿಚಾರ. ಯಾವ ಕಾರಣಕ್ಕೆ ಮುಚ್ಚಿಟ್ಟಿದ್ದಾರೆ ಅದರಲ್ಲಿ ಯಾವ ನಿಗೂಢತೆ ಇದೆ ನನಗೆ ಗೊತ್ತಿಲ್ಲ. ಅವರಿಗೆ ಹೆಂಡತಿ ಮಗ ಇರುವುದು ನಿಜ ನನಗೆ ಅಷ್ಟ ಮಾತ್ರ ಗೊತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.