'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಈಗ ಬಹುಭಾಷಾ ಬೇಡಿಕೆಯ ನಟಿ ಆಗಿದ್ದಾರೆ. ಅಷ್ಟೇ ಅಲ್ಲದೆ ತೆಲುಗು ಚಿತ್ರರಂಗದ ಟಾಪ್ ನಟಿಯಾಗಿದ್ದಾರೆ.
ಕಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿದ 'ಜರ್ಸಿ' ಸಿನಿಮಾವನ್ನು ಹಿಂದಿಯಲ್ಲಿ ರಿಮೇಕ್ ಮಾಡಲು ನಿರ್ಧರಿಸಿದ್ದಾಗ ನಟನಾಗಿ ಶಾಹಿದ್ ಕಪೂರ್ ಹಾಗೂ ನಟಿಯಾಗಿ ರಶ್ಮಿಕಾ ಮಂದಣ್ಣ ಆಯ್ಕೆ ಆಗಿದ್ದರು. ಆದರೆ ಕಾರಣಾಂತರಗಳಿಂದ ಸಿನಿಮಾ ಮಾಡಲಾರೆ ಎಂದು ರಶ್ಮಿಕಾ ಕೈ ಬಿಟ್ಟರು.
ವಿಜಯ್ ದೇವರಕೊಂಡ ಗೃಹಪ್ರವೇಶದಲ್ಲಿ ರಶ್ಮಿಕಾ ಮಂದಣ್ಣ!
undefined
ಸಂಭಾವನೆ ವಿಚಾರಕ್ಕೆ ಬಾಲಿವುಡ್‌ನಲ್ಲಿ ಸಿಕ್ಕ ಅವಕಾಶವನ್ನು ರಶ್ಮಿಕಾ ಮಂದಣ್ಣ ಕೈ ಬಿಟ್ಟಿದ್ದಾರೆ ಎಂದು ಚಿತ್ರರಂಗದಲ್ಲಿ ಮಾತುಗಳು ಕೇಳಿ ಬರುತ್ತಿತ್ತು. ಅದಕ್ಕೆ ರಶ್ಮಿಕಾ ಕ್ಲಾರಿಟಿ ನೀಡಿದ್ದಾರೆ.
'ಅವನೇ ಶ್ರೀಮನ್ನಾರಾಯಣ ನೋಡಿದ್ರಾ' ? ರಶ್ಮಿಕಾ ಕಾಲೆಳೆಯುತ್ತಿದ್ದಾರೆ ನೆಟ್ಟಿಗರು!
'ನಾನು ಸಿನಿಮಾ ಮಾಡಿದ್ರೆ ಅದಕ್ಕೆ ಸಂಪೂರ್ಣ ಸಮಯ ನೀಡಬೇಕು. ಆದರೆ ಕೈಯಲ್ಲಿ ಈಗಾಗಲೇ ಸಿನಿಮಾ ಇರುವ ಕಾರಣ ನಾನು ಜರ್ಸಿಯಲ್ಲಿ ನಟಿಸಲು ಸಾಧ್ಯವಾಗಿಲ್ಲ. ಸಂಭಾವನೆ ವಿಚಾರ ಎಂದು ಹರಿದಾಡುತ್ತಿರುವ ಮಾತು ಸುಳ್ಳು' ಎಂದಿದ್ದಾರೆ.
ಡಿಸೆಂಬರ್ 8ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ