'ರಾಜವೀರ ಮದಕರಿ ನಾಯಕ'ನ ಹಿಂದಿದ್ದಾರೆ ಈ ನಾಲ್ಕು ಪ್ರಬಲ ವ್ಯಕ್ತಿಗಳು!

By Suvarna News  |  First Published Dec 8, 2019, 11:36 AM IST

ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಸಲು ಸಜ್ಜಾಗಿರುವ ದರ್ಶನ್ - ರಾಕ್‌ಲೈನ್‌ ಕಾಂಬಿನೇಷನ್ ಚಿತ್ರದಲ್ಲಿ ಈ ನಾಲ್ವರು ಪ್ರಬಲ  ವ್ಯಕ್ತಿಗಳು ಇರುವುದು ಚಿತ್ರದ ಶಕ್ತಿ ಆಗಿದೆ. ಯಾರು ಆ ನಾಲ್ಕು ವ್ಯಕ್ತಿಗಳು? ಇಲ್ಲಿದೆ. 


ಸ್ಯಾಂಡಲ್‌ವುಡ್ ಬಾಕ್ಸಾಫೀಸ್ ಸುಲ್ತಾನ್ ದರ್ಶನ್‌ರನ್ನು ಸಂಗೊಳ್ಳಿ ರಾಯಣ್ಣ, ದುರ್ಯೋಧನ ಪಾತ್ರದಲ್ಲಿ ನೋಡಿದ್ದೀವಿ. ಈಗ ಡಿ-ಬಾಸ್‌ನ ಮದಕರಿ ನಾಯಕನಾಗಿ ನೋಡುವ ಸರದಿ ಶುರುವಾಗಿದೆ. ವಿ ರಾಜೇಂದ್ರ ಪ್ರಸಾದ್ ಆ್ಯಕ್ಷನ್‌ ಕಟ್‌ ರಾಕ್‌ಲೈನ್‌ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ 'ರಾಜವೀರ ಮದಕರಿ ನಾಯಕ' ಚಿತ್ರ ಈ ನಾಲ್ಕು ವ್ಯಕ್ತಿಗಳಿಂದ ಇನ್ನು ಹೆಚ್ಚು ಶಕ್ತಿ ಪಡೆದುಕೊಂಡಿದೆ.

ಡಿಸೆಂಬರ್ 6 ರಂದು ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮೂಲಕ ಚಿತ್ರದ ಮುಹೂರ್ತ ನೆರೆವೇರಿತ್ತು.  ಚಿತ್ರಕ್ಕೆ ಚಾಲನೆ ನೀಡಿದ ಸಂಸದೆ ಸುಮಲತಾ ಪುತ್ರ ದರ್ಶನ್‌ಗಾಗಿ ರಾಜಮಾತೆ ಪಾತ್ರದಲ್ಲಿ ಕಾಣಿಸಿಕೊಳ್ಳುವೆ ಎಂದು ಹೇಳಿದ್ದಾರೆ.

Latest Videos

undefined

ಗಂಡುಗಲಿ ಮದಕರಿ ನಾಯಕ ಅಲ್ಲ, 'ರಾಜ ವೀರ ಮದಕರಿ ನಾಯಕ'!

ಇನ್ನು ಈ ಚಿತ್ರದ ಆ ನಾಲ್ಕು ಶಕ್ತಿಗಳು ಯಾರು? 

ವಿ.ರಾಜೇಂದ್ರ ಸಿಂಗ್ ಬಾಬು

ಕನ್ನಡ ಚಿತ್ರರಂಗದ ಯಶಸ್ವಿ ನಿರ್ದೇಶಕ ರಾಜೇಂದ್ರ ಸಿಂಗ್ ಮದಕರಿ ನಾಯಕನ ಪಾತ್ರದ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುವ ವ್ಯಕ್ತಿ. ಈ ಹಿಂದೆ ಮದಕರಿ ಚಿತ್ರ ಮಾಡುವ ನಿರ್ಧಾರ ಮಾಡಿದರು. ಆದರೆ ಕಾರಣಾಂತರಗಳಿಂದ ದೂರ ಉಳಿಯುತ್ತಿದ್ದರು. ಆದರೆ ಈಗ ಮತ್ತೊಮ್ಮೆ ಸಿನಿಮಾ ಮಾಡಲು ರಾಕ್‌ಲೈನ್‌ ಜೊತೆ ಕೈ ಜೋಡಿಸಿದ್ದಾರೆ.

ಬಿ ಎಲ್‌ ವೇಣು

'ಗಂಡುಗಲಿ ಮದಕರಿ ನಾಯಕ' ಕಾದಂಬರಿಗೆ ಜೀವ ಕೊಟ್ಟ ವ್ಯಕ್ತಿ ಬಿ ಎಲ್‌ ವೇಣು. ಅದರ ಆಧಾರಿತವಾಗಿಯೇ ಸಿನಿಮಾ ಮಾಡಲಾಗುತ್ತಿದೆ.  ಸ್ಕ್ರಿಪ್ಟ್‌ ಕೆಲಸ ಶುರುವಾಗಿದ್ದರೂ ವೇಣು ಅವರ ಕೊಡುಗೆ ಹೆಚ್ಚಿದೆ ಎನ್ನಲಾಗಿದೆ.

ಶ್ರೀನಿವಾಸ್‌ ಮೂರ್ತಿ

ಬೆಳ್ಳಿ ತೆರೆಯ ಹಿರಿಯ ಕಲಾವಿದ  ಶ್ರೀನಿವಾಸ್ ಮೂರ್ತಿ. ಇತಿಹಾಸ ಕ್ರಿಯೇಟ್ ಮಾಡುವ ಮತ್ತೊಂದು ಐತಿಹಾಸಿಕ ಚಿತ್ರವನ್ನು ಮಾಡಬೇಕು ಎನ್ನುವ ರಾಕ್‌ಲೈನ್ ಅವರ ಯೋಚನೆಗೆ ಸರಿಯಾದ ಉತ್ತರ ನೀಡಿದವರು ಶ್ರೀನಿವಾಸ್‌ ಮೂರ್ತಿ. ಹಾಗೆ ಚಿತ್ರದಲ್ಲೂ ಒಂದು ಪಾತ್ರ ಮಾಡಲಿದ್ದಾರೆ.

ನಟ ದೊಡ್ಡಣ್ಣ

'ಮದಕರಿ ನಾಯಕ'ನ ಚಿತ್ರದಲ್ಲಿ ಪ್ರೊಡಕ್ಷನ್‌ ಹುಡುಗನಾಗಿ ಕೂಡ ಕೆಲಸ ಮಾಡುತ್ತೇನೆ ಎಂದು ಹೇಳಿರುವ ದೊಡ್ಡಣ್ಣ. ಸ್ಕ್ರಿಪ್ಟ್ ಕೆಲಸ  ಮತ್ತು ಸಂಶೋಧನೆಯಲ್ಲಿ ಹಿರಿಯಣ್ಣ ದೊಡ್ಡಣ್ಣ ಪಾತ್ರ ಹೆಚ್ಚಿದೆ.  ಈ ಚಿತ್ರದಲ್ಲಿ ದೊಡ್ಡಣ್ಣ ಅವರು ಅಭಿನಯಿಸುತ್ತಿದ್ದಾರೆ.

ಮೊಟ್ಟ ಮೊದಲ ಬಾರಿ ನಿರ್ಮಾಪಕರನ್ನು ಸಹಾಯ ಕೇಳಿದ ದರ್ಶನ್ ತಾಯಿ!

click me!