
ಸ್ಯಾಂಡಲ್‌ವುಡ್ ಕ್ರೇಜಿ ಸ್ಟಾರ್ ಪುತ್ರ ಮನೋರಂಜನ್ ರವಿಚಂದ್ರನ್ ದುಬಾರಿ ಬೈಕ್, ಕಾರ್ ಅಥವಾ ಸಿನಿಮಾ ಮೂಲಕ ಒಂದಲ್ಲಾ ಒಂದು ರೀತಿಯಲ್ಲಿ ಸುದ್ದಿಯಲ್ಲಿ ಇರುತ್ತಾರೆ. ಆದರೆ ಇದೇ ಮೊದಲ ಬಾರಿ ಮದುವೆ ಬಗ್ಗೆ ಮಾತನಾಡಿರುವುದು.
ಕ್ರೇಜಿ ಸ್ಟಾರ್ ಮನೆ ಸೇರಿತು ದುಬಾರಿ ಕಾರ್!
'ಚೀಲಂ' ಮತ್ತು 'ಪ್ರಾರಂಭ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮನುರಂಜನ ಕೆಲ ದಿನಗಳ ಹಿಂದೆ ತಮ್ಮ ಹೆಸರನ್ನು ಮನು ರಂಜನ್ ರವಿಚಂದ್ರನ್ ಎಂದು ಬದಲಾಯಿಸಿಕೊಂಡಿದ್ದರು. ಆ ನಂತರ 16 ಲಕ್ಷ ಮೊತ್ತದ ಮೋರಿಸ್ ಗ್ಯಾರೇಜು ಮಾಡಲ್‌ನ ಬರ್ಗ್ಯಾಂಡಿ ಬಣ್ಣದ ಕಾರನ್ನು ಖರೀದಿಸಿದ್ದರು. ಖಾಸಗಿ ವಾಹಿನಿ ಸಂದರ್ಶನದಲ್ಲಿ ಮನು ರಂಜನ್ ಮದುವೆ ಯಾವಾಗ ಅಂತ ಕೇಳಿದ್ದಕ್ಕೆ 'ನನಗೆ ಲವ್ ಆಗಿಲ್ಲ, ಕಾಲೇಜಲ್ಲೂ ಆಗಿಲ್ಲ. ಇಂಡಸ್ಟ್ರಿಯಲ್ಲೂ ಆಗಿಲ್ಲ . ಪಕ್ಕಾ ಅರೇಂಜ್ ಮ್ಯಾರೇಜ್ ಆಗ್ತೀನಿ. ಇನ್ನು ಕೆಲ ತಿಂಗಳುಗಳಲ್ಲಿ ನನ್ನ ತಾಯಿ ಹುಡುಗಿ ಹುಡುಕ್ತಾರೆ' ಎಂದಿದ್ದಾರೆ.
'ತ್ರಿವಿಕ್ರಮ' ಚಿತ್ರದಲ್ಲಿ ವಿಕ್ರಮ್ ರವಿಚಂದ್ರನ್‌ಗೆ ಬಾಲಿವುಡ್ ನಟ ರೋಹಿತ್ ರಾಯ್ ವಿಲನ್!
ಯಾವುದಾದರೂ ಕಮರ್ಷಿಯಲ್ ಚಿತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂದು ಯೋಚಿಸುತ್ತಿರುವಾಗ 'ಮುಗಿಲು ಪೇಟೆ' ಚಿತ್ರದ ಸ್ಕ್ರಿಪ್ಟ್ ಇವರು ಕೈ ಸೇರಿತು. 'ಪ್ರಾರಂಭ' ಚಿತ್ರವನ್ನು ಜನವರಿಯಲ್ಲಿ ರಿಲೀಸ್ ಮಾಡುವುದಾಗಿ ತೀರ್ಮಾನ ಮಾಡಿಕೊಂಡಿದ್ದಾರೆ.
ಡಿಸೆಂಬರ್ 8ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.