ಚಿತ್ರರಂಗದಲ್ಲಿ ಕೇಳಿ ಬರುತ್ತಿರುವ ಡ್ರಗ್ಸ್ ಮಾಫಿಯಾ ಬಗ್ಗೆ ನಟಿ ರಚಿತಾ ರಾಮ್ ಮಾತನಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವೈರಲ್ ವಿಡಿಯೋ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಚಂದನವನದ ಗುಳಿ ಕೆನ್ನೆ ಚೆಲುವೆ ರಚಿತಾ ರಾಮ್ ಲಾಕ್‌ಡೌನ್ ಪ್ರಾರಂಭದಿಂದಲೂ ತಾವಾಯ್ತು ತಮ್ಮ ಕೆಲಸವಾಯ್ತು ಎಂದುಕೊಂಡು, ಹೆಚ್ಚು ಸುದ್ದಿಯಲ್ಲಿ ಇಲ್ಲದೇ ಸುಮ್ಮನಿದ್ದಾರೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.
ಸೌಂದರ್ಯದ ರಹಸ್ಯ, ಡ್ರಗ್ಸ್ ದಾಸರಾದ ಸ್ಟಾರ್‌ಗಳಿಗೆ ನೋಟಿಸ್!
ಏನಿದೆ ವಿಡಿಯೋದಲ್ಲಿ?
ಖಾಸಗಿ ವಾಹಿನಿಯ ಪತ್ರಕರ್ತನೊಬ್ಬ ಕೇಳಿದ ಪಶ್ನೆಗೆ ರಚಿತಾ ರಾಮ್ ನಗು ನಗುತ್ತಾ ತಮ್ಮದೇ ಶೈಲಿಯಲ್ಲಿ ಉತ್ತರಿಸುತ್ತಾರೆ. ಅದರೂ ಅಭಿಮಾನಿಗಳಲ್ಲಿ ಅನುಮಾನ ಉಂಟಾಗಿದೆ. 'ನೀವು ಡ್ರಗ್ಸ್ ತೆಗೋತೀರಾ?' ಎಂದು ಪ್ರಶ್ನೆ ಕೇಳಿದ್ದಾರೆ. ತಕ್ಷಣವೇ ರಚ್ಚು 'ಎಂಥ ಕೆಟ್ಟ ಪ್ರಶ್ನೆ ಕೇಳುತ್ತಿದ್ದೀರಾ?' ಎಂದು ಹೇಳಿದ್ದರು. ನಂತರ ವರದಿಗಾರ ಉತ್ತರಿಸುವಂತೆ ಮತ್ತೆ ಮತ್ತೆ ಒತ್ತಡ ಹಾಕಿದಾಗ 'ಇಲ್ಲ' ಎಂದು ಉತ್ತರಿಸಿದ್ದಾರೆ.
ಇನ್ನು ಸ್ಯಾಂಡಲ್‌ವುಡ್‌ನಲ್ಲಿ ಅನೇಕರ ಹೆಸರು ಡ್ರಗ್ಸ್ ಮಾಫಿಯಾದೊಂದಿಗೆ ಥಳಕು ಹಾಕಿಕೊಂಡ ಬಗ್ಗೆ ಅನೇಕ ಊಹಾಪೋಹಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಸೀತಾರಾಮ ಕಲ್ಯಾಣ ನಟಿಯನ್ನು ಮತ್ತೆ ಮತ್ತೆ ಪ್ರಶ್ನಿಸಿದ್ದಾಗ, ' ಅವರವರ ಇಷ್ಟ, ಅವರ ಜೀವನವನ್ನು ಅವರು ಹೇಗೆ ರೂಪಿಸಿಕೊಳ್ಳಬೇಕೋ, ಹಾಗೆ ಮಾಡಿಕೊಂಡಿರುತ್ತಾರೆ. ಇಲ್ಲಿ ಎಲ್ಲರಿಗೂ ಫ್ರೀಡಂ ಇದೆ. ಚೆನ್ನಾಗಿದ್ದಾಗ ಎಲ್ಲರೂ ನಮ್ಮೊಟ್ಟಿಗೆ ಇರುತ್ತಾರೆ. ಚೆನ್ನಾಗಿಲ್ಲ ಅಂದರೆ ಬಿಟ್ಟು ಹೋಗುತ್ತಾರೆ. ಗೊತ್ತೇ ಆಗುವುದಿಲ್ಲ. ಏನಕ್ಕೆ ಹೀಗೆ ಮಾಡುತ್ತಾರೆ ಎಂದು. ನಮ್ಮ ಆರೋಗ್ಯ, ನಮ್ಮ ಲೈಫ್ ಹಾಗೂ ನಮ್ಮ ಫ್ಯಾಮಿಲಿಯನ್ನು ನಾವೇ ನೋಡಿಕೊಳ್ಳಬೇಕು. ಅಲ್ಲದೆ ನಮ್ಮ ದುಡ್ಡನ್ನು ನಾವೇ ಸಂಪಾದಿಸಬೇಕು. ಕರ್ಮ ಅನ್ನೋದು ಎಲ್ಲಿರಿಗೂ ಪಾಠ ಕಲಿಸುತ್ತದೆ. ಇದರ ಬಗ್ಗೆ ನನಗೇನೂ ಗೊತ್ತಿಲ್ಲ. ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಮಾಫಿಯಾ ಬಗ್ಗೆ ನನಗೆ ಅರಿವಿಲ್ಲ. ಇಂಡಸ್ಟ್ರಿಯಲ್ಲಿ ಇದ್ದರೂ ಅದಕ್ಕೆ ನಾನು ತೆಲೆ ಕೆಡಿಸಿಕೊಳ್ಳುವುದಿಲ್ಲ,' ಎಂದು ರಚಿತಾ ಉತ್ತರಿಸಿದ್ದಾರೆ.
ಗಾಂಧಿನಗರಕ್ಕೆ ಡ್ರಗ್ಸ್ ಅಮಲು ಆರೋಪ; ಎಲ್ಲರನ್ನು ಅನುಮಾನಿಸದಿರಿ ನೋಯಿಸದಿರಿ!
ಸೋಷಿಯಲ್ ಮೀಡಿಯಾದಲ್ಲಿ ರಚಿತಾ ರಾಮ್ ಮಾತನಾಡಿರುವ ವಿಡಿಯೋ ತುಣಕೊಂದು ಟ್ರಾಲ್ ಆಗಿ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ರಿಪೋರ್ಟರ್ ಕೇಳಿರುವ ಪ್ರಶ್ನೆಗೆ ರಚ್ಚು ಯಾಕೆ ಇಷ್ಟೊಂದು ಸುತ್ತಿ ಬಳಸಿ ಮಾತನಾಡಿದ್ದಾರೆ? ಯಾಕೆ ಇಷ್ಟೊಂದು ಅರ್ಥ ಕೊಟ್ಟಿದ್ದಾರೆ ಎಂದು ಕಾಮೆಂಟ್‌ಗಳಲ್ಲಿ ಚರ್ಚಿಸಲಾಗುತ್ತಿದೆ. ಒಟ್ಟಿನಲ್ಲಿ ನಮ್ಮ ಕನ್ನಡ ಚಿತ್ರರಂಗದ ಡ್ರಗ್ಸ್ ಮಾಫಿಯಾದಲ್ಲಿ ಸಿಕ್ಕಿ ಹಾಕಿ ಕೊಂಡಿದೆ ಎಂದರೆ ಸ್ವೀಕರಿಸುವುದೇ ಕಷ್ಟ. ಯಾರೂ ಇಂಥದ್ದೊಂದು ಜಾಲಕ್ಕೆ ಬೀಳದಿರಲಿ.
ಸ್ಯಾಂಡಲ್‌ವುಡ್‌ಗೆ ಡಗ್ಸ್ ಸರಬರಾಜು ಮಾಡ್ತಿದ್ದ ಅನಿಕಾ ಯಾವ ಸೀರಿಯಲ್‌ನಲ್ಲಿದ್ದಳು?
ಅತ್ತ ಬಾಲಿವುಡ್‌ನಲ್ಲು ಎಂ.ಎಸ್.ಧೋನಿ, ದಿ ಅನ್‌ಟೋಲ್ಡ್ ಸ್ಟೋರಿ ಹೀರೋ ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಶರಣಾದ ಹಿನ್ನೆಲೆಯಲ್ಲಿ ಡ್ರಗ್ಸ್ ಮಾಫಿಯಾದ ಸುಳಿವು ಸಿಗುತ್ತಿದೆ. ಈ ಬೆನ್ನಲ್ಲೇ ತನಿಖೆ ಶುರು ಮಾಡಿದಾಗ, ಬೆಂಗಳೂರು ಹಾಗೂ ಸ್ಯಾಂಡಲ್‌ನವುಡ್‌ಗೆ ಈ ಜಾಲ ಹರಡಿರುವುದು ಪತ್ತೆಯಾಗಿದ್ದು, ಅನಿಕಾ ಎಂಬ ಕಿರುತೆರೆ ನಟಿ ಸೇರಿ ಹಲವರನ್ನು ಬೆಂಗಳೂರೂ ಸಿಸಿಬಿ ಬಂಧಿಸಿದೆ. ಈ ಬೆನ್ನಲ್ಲೇ ಇಂದ್ರಜಿತ್ ಲಂಕೇಶ್ ಸ್ಯಾಂಡಲ್‌ವುಡ್ ಡ್ರಗ್ಸ್ ಜಾಲದ ಬಗ್ಗೆ ಮಾಹಿತಿ ಇರುವುದಾಗಿ ಹೇಳಿದ್ದು, ಸರಕಾರ ಸೂಕ್ತ ರಕ್ಷಣೆ ಒದಗಿಸಿದರೆ ಮತ್ತಷ್ಟು ವಿವರ ನೀಡುವುದಾಗಿಯೂ ಹೇಳಿದ್ದಾರೆ. ಹಲವು ನಟ, ನಟಿಯರು, ಸಂಗೀತ ನಿರ್ದೇಶಕರು ಈ ಜಾಲದಲ್ಲಿ ಭಾಗಿಯಾಗಿರುವುದಾಗಿ ಹೇಳುತ್ತಿದ್ದು, ಹಲವರ ಹೆಸರನ್ನು ಅನಿಕಾ ಬಹಿರಂಗಗೊಳಿಸಿದ್ದಾಳೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಈ ಪ್ರಕರಣದ ವಿಚಾರಣೆ ಸೂಕ್ತ ರೀತಿಯಲ್ಲಿ ನಡೆಯುವ ಅಗತ್ಯವಿದ್ದು, ಕರುನಾಡು ಹಾಗೂ ನಮ್ಮ ಗಾಂಧಿನಗರ ದೋಷ ಮುಕ್ತವಾಗಲಿ ಎಂಬುವುದೇ ನಮ್ಮೆಲ್ಲರ ಆಶಯ.